ಚೇತನಕ್ಕೆ ಒಂದು ವರ್ಷ!?


ಒಂದು ವರ್ಷ!
ಅದೆನೂ ಹೆಚ್ಚಲ್ಲ ಬಿಡಿ. ಕಳೆದ ಎರಡು- ಮೂರು ವರ್ಷಗಳಿಂದ ಬ್ಲಾಗಿಂಗ್ ಮಾಡಿಕೊಂಡು ಒಮ್ಮೆಯೂ ಬೋರು ಎಂದು ಕೈ ಚೆಲ್ಲದೆ, ಮುನಿದುಕೊಳ್ಳದೆ ಕ್ರಿಯಾಶೀಲರಾಗಿರೋರು ಸಾಕಷ್ಟಿದ್ದಾರೆ.

ಆದರೂ…
ನನ್ನ ‘…. ಚೇತನ’ಕ್ಕೆ ಒಂದು ತುಂಬಿದ್ದೊಂದು ವಿಶೇಷ ಸಂಗತಿಯೇ!
ಯಾಕೆ ಗೊತ್ತಾ? ನಾನು ಬ್ಲಾಗು ಶುರು ಮಾಡಿದ್ದು ಇವತ್ತಿಗೆ (೨೮ ಜುಲೈ) ಸರಿಯಾಗಿ ಒಂದು ವರ್ಷದ ಹಿಂದೆ.
ಆದರೆ ರೆಗ್ಯುಲರ್ರಾಗಿ ಬರೀಲಿಕ್ಕೆ ಶುರು ಮಾಡಿದ್ದು ಅಕ್ಟೋಬರಿನಲ್ಲಿ. ಇನ್ನೂ ಮಜದ ವಿಷಯವೆಂದರೆ, ಮೊದಲ ಬಾರಿಗೆ ‘ಮುಚ್ಚುವೆ ಬ್ಲಾಗಿಲ’ ಅಂದಿದ್ದು ಎರಡೇ ತಿಂಗಳ ಅಂತರ- ಡಿಸೆಂಬರಿನಲ್ಲಿ!!
ಮತ್ತೂ ಮಜ….
ಡಿಲೀಟ್ ಬಟನ್ ಒತ್ತಿದ್ದು ಜೂನ್ ಮೊದಲ ವಾರದಲ್ಲಿ!!!
ಇದಲ್ಲವೆ ನನ್ನ ಸ್ಪೆಶಾಲಿಟಿ?

ನಾನು ಹಾಗೆಲ್ಲ ಯಾಕೆ ಮಾಡ್ತೀನಿ?
ಅಂತ ಬಹಳ ಯೋಚಿಸ್ತೀನಿ. ಏನೂ ಗೊತ್ತಾಗದೆ ಗಲಿಬಿಲಿಯಾಗ್ತೀನಿ. ನನ್ನ ಏಕಾಂತವನ್ನ ಕಳೆಗಟ್ಟಿಸೋದು ಈ ಬರಹ ಅನ್ನುವ ಸಂಗತಿ. ಹಾಗಂತ ಇಷ್ಟೂ ದಿನ ನಾನು ಸುಮ್ಮನೆ ಕುಂತಿದ್ದೆ ಅಂತಲ್ಲ, ಅದರೆ ಇಷ್ಟೂ ದಿನ ಇಲ್ಲಿ ಬರೆದದ್ದಕ್ಕೂ ಈಗ ನಾನು ಓದಲು ಶುರು ಹಚ್ಚಿರುವ ಸಂಗತಿಗೂ ಹದಿನಾರಾಣೆ ಸಂಬಂಧವೂ ಇಲ್ಲ. ಹಾಗಾಗಿ ಬ್ಲಾಗ್ ನಲ್ಲಿ ಬರೆಯುವ ಮೂಡ್ ಹೊರಟು ಹೋಗಿತ್ತು ಅಂದ್ಕೊಳ್ತೀನಿ.

ಈ ನಡುವೆ ನಾನು ಟೀನಾ ಕೊಟ್ಟ ‘ಬ್ಲಾಸ್ಪೆಮಿ’ ನಾವೆಲ್ ಓದಿದೆ. ಆ ಬಗ್ಗೆ ನಾವು ಚರ್ಚಿಸಲೇಬೇಕು. ನೀವು ರೆಡಿ ಅಂದರೆ ಆದಷ್ಟು ಬೇಗ ಅದೊಂದು ಪೋಸ್ಟ್ ಹಾಕುವೆ.
ಹಾಳು ರಾಜ್ಯ ರಾಜಕೀಯದ ಕುದುರೆಯಾಟ, ಕೇಂದ್ರದ ಎಡವಟ್ಟುಗಳು, ರಾಜ್ಯದ ಮೇಲೆ ಅದರ ಪ್ರತೀಕಾರಗಳು, ಸಾಲದ್ದಕ್ಕೆ ಸರಣಿ ಸ್ಫೋಟ, ಅಹಮದಾಬಾದಿನಲ್ಲಿ ನಲವತ್ತೊಂಭತ್ತು ಜನರ ಸಾಲು ಮರಣ, ಅಂವ ಹೇಳಿದ ಚಿಕ್ಕದೊಂದು ಸುಳ್ಳು… ಇವೆಲ್ಲ ನನ್ನ ಈ ದಿನಗಳಲ್ಲಿ ಬಹಳವಾಗಿ ಕಾಡಿದ ಸಂಗತಿಗಳು.
ಓಹ್! ನಿಮ್ಮ ಜತೆ ಹಂಚಿಕೊಳ್ಳಲು ಸಕಷ್ಟು ಸಮಾಚಾರ ಒಟ್ಟು ಮಾಡಿಕೊಂಡಿದ್ದೇನೆ ನಾನು. ‘ಪೋಟ್ಲೀ ಬಾಬಾ’ ನ ಹಾಗೆ ನನನ್ ಪೋಟಲಿಯಿಂದ ಒಂದೊಂದೇ ಕಥೆ ತೆಗೆಯುವೆ. ಸದ್ಯದಲ್ಲೇ ಊರಿಗೆ ಹೋಗ್ತೇನೆ. ಅಲ್ಲಿ ಸಖತ್ ಮಳೆಯಂತೆ! ಜೀವ ಎಳೀತಿದೆ ಗೊತ್ತಾ?

ಈ ಇವತ್ತಿನ ಪೋಸ್ಟು ‘ಅನೌಪಚಾರಿಕ.’ ಒಂದು ವರ್ಷ ಪೂರೈಸಿದ ‘ಮಹಾ(!?)’ ಸಾಧನೆಯ ಸೆಲೆಬ್ರೇಶನ್ನಿಗೆ!! ಇನ್ನಿದು ಎಷ್ಟು ದಿನ ನಡಿಯುತ್ತೋ… ಆ ಬ್ಲಾಗೇಶ್ವರನೇ ಬಲ್ಲ!

27 thoughts on “ಚೇತನಕ್ಕೆ ಒಂದು ವರ್ಷ!?

Add yours

 1. ಏನಕ್ಕ ನಿಮ್ದು ಹದಿನಾರರ ಹುಡುಗಿಯ ತರಹದ ತಳಮಳ.?!
  ನಿಮ್ಗೆ ಡಿಲೀಟ್ ಬಟನ್ ಸಿಗದೇ ಇರುವ ಹಾಗೆ ಏನಾರೂ ಮಾಡ್ಬೇಕಾಯ್ತಲ್ಲ 🙂

  ವರ್ಷ ಪೂರೈಸಿದ್ದಕ್ಕೆ ಅಭಿನಂದನೆಗಳು.
  Wish you happy blogging 🙂

 2. ಪ್ರೀತಿಯ ಚೇತನಾ…
  ವರುಷ ತುಂಬಿದ ಬ್ಲಾಗಿಗೆ ಶುಭಾಶಯಗಳು.
  ಮರಳಿ ಬಂದ ನಿಮಗೆ ಒಂದಷ್ಟು ಪ್ರೀತಿ.
  “ಇನ್ನಿದು ಎಷ್ಟು ದಿನ ನಡಿಯುತ್ತೋ… ಆ ಬ್ಲಾಗೇಶ್ವರನೇ ಬಲ್ಲ!” 🙂
  ನಿಮಗೆ ಖುಷಿಯಾದ್ರೂ, ಬೇಜಾರಾದ್ರೂ ನೀವು ಮಾತಾಡೋ ರೀತಿಯಿಂದನೆ ನಮ್ಮನ್ನ ಸೆಳಕೊಂಡುಬಿಡ್ತೀರ.
  ಏನಾದ್ರೂ ಸರಿ, ನಿಮ್ಮಿಷ್ಟದ ಬರಹಗಳನ್ನ ಬರೀರಿ, ನಮಗಿಷ್ಟ.

 3. ಅಭಿನಂದನೆಗಳು….
  ನಿಮ್ಮ ಬ್ಲಾಗ್ ಮತ್ತೆ ನೋಡಿ ತುಂಬಾ ಖುಷಿ ಆಯ್ತು…
  ಬರದ ಮಳೆ ಬಾರದೆ ಬರಗೆಟ್ಟು ಹೋಗಿದ್ದ ರಾಜ್ಯಡಲ್ಲಿ ಮತ್ತೆ ಮಳೆ ಬಂದಿದೆ…ಸಂತೋಷ
  ಹಾಗೆಯೇ ನಿಮ್ಮ ಬ್ಲಾಗೂ ಮರಳಿ ಬಂದಿದೆ…ಇನ್ನೂ ಸಂತೋಷ
  ಮಳೆ ನಿಂತರೂ ನಿಮ್ಮ ಬರಹಗಳ ಮಳೆ ನಿಲ್ಲದಿರಲಿ…
  ನಿಮ್ಮ ಪುಸ್ತಕದ ಬಗ್ಗೆ ಜೋಗಿ ಹಾಯ್ ಬೆಂಗಳೂರಲ್ಲಿ ಬರೆದ ಲೇಖನ ಓದಿದೆ.
  ಯಾವಾಗ ಬರುತ್ತೆ ಭಾಮಿನಿ ಷಟ್ಪದಿ ಪುಸ್ತಕ?

 4. ವಿಕಾಸ್, ಶಾಂತಲಾ, ವಿಜಯ್, ಸುಪ್ರೀ, ಸುಶ್ರುತ, ಶೆಟ್ಟರು, ಶ್ರೀನಿಧಿ, ರಾಧಿಕಾ, ನೀಲಾಂಜನ… ಎಲ್ಲರಿಗೂ ನಮಸ್ತೇ.
  ನಿಮ್ಮೆಲ್ಲರ ಪ್ರೀತಿಗೆ, ಆದರಕ್ಕೆ ಧನ್ಯವಾದ.
  🙂

  ವಂದೇ,
  ಚೇತನಾ

 5. Nice to see you back. Infact had stopped checking this URL since alomst a month as I always got the “Blog deleted Message”..
  Today Radhika sent me an email like its a celebration!
  Ella sari, Blog Hiatus anno concept ide, aadre alli ellaru ondu blogpost baredu hogthaare vinaha ommele ‘Delete’ button ottibiDolla.. ! Anyway bandralla bidi. Congrats for completing one year and many more such years!!

 6. belated wishes to your blog anniversary! 🙂

  ಚೇತನಾ ಮೇಡಂ, ಅವಗವಾಗ ಅಜ್ಞಾತವಾಸ ಮಾಡಿ ಬಂದ್ರೆ, ಪ್ರತಿ ಸಾರಿಯೂ ಈ ವೆಬ್ ಜಗತ್ತು ಹೊಸದಾಗಿ ಕಾಣಿಸುತ್ತೆ ಅಲ್ವೇ..

  ಡಪ್ ಗಾಯಬ್!

 7. Chetana,
  First of all, welcome back, then Congrats 🙂
  ಮತ್ತೆ ವಾಪಸ್, ಹೋಗಬೇಡಿಪ್ಪ. ನನಗಂತು, ನೀವು ವಾಪಸ್ಸು ಬಂದ್ರ, ಅಂತ ಪ್ರತಿದಿನ ನೋಡಿ ನೋಡಿ ಸಾಕಾಗಿತ್ತು.

  -ಪ್ರಸಾದ್.

 8. ಶ್ರೀ, 🙂

  ವೀಣಾ… ನಾನೂ ಕಟ್- ಪೇಸ್ಟ್ ಮಾಡಿಟ್ಕೊಂಡಿದೀನಿ 😉 ಡಿಲೀಟ್ ಬಟನ್ ಒತ್ಲಿಲ್ಲ! 🙂

  ವಿನಾಯಕ.. ನಿನ್ನಣ್ಣನ ಅಪ್ಪಣೆಯಾದ ಮೇಲೆ ಅದ್ನ ನಡೆಸದೇ ಇರೋಕಾಗುತ್ತೇನೋ!?

  ರಮೇಶ್, ಗಾಯಬ್ ಆಯಾ!! (ಯಾವ್ದೋ ಹಳೇ ಕಾರ್ಟೂನ್/ ಸೀರಿಯಲ್ಲಿನ ಹೆಸರು ಅಂತ ನೆನಪು!)

  ನೀಲಾಂಜನ, ಎರಡನೇ ಸಾರ್ತಿ ಥ್ಯಂಕ್ಸ್ 🙂

  ಸುನಾಥರೇ, Blasphemy ಗೆ ರೆಡೀನಾ!? 😉

  ಪ್ರಸಾದ್…
  ಎಲ್ಲೂ ಹೋಗೋಲ್ಲ… ಪ್ರಾಮಿಸ್, ಎಲ್ಲೂ ಹೋಗೋಲ್ಲ…! (ಗಂಧದ ಗುಡಿ ಹಾಡಿನ ಕಾಪಿ… ರಾಗವಾಗಿ ಓದ್ಕೊಳಿ!)

  ~ನಲ್ಮೆ,
  ಚೇತನಾ

 9. ಓ ಚೇತನಾ│
  ಒಂದು ವರುಷ
  ಸಾಕಿ ಸಲಹುವಿದ್ದಕ್ಕೆ
  ಬ್ಲಾಗ್ ಎಂಬ ಮಗೂನ│
  ನಿಮಗೆ ನನ್ನ ನಮನ│

  ಹೀಗೆ ಸಾಗಲಿ
  ನಿಮ್ಮ ಬರವಣಿಗೆಯ ಗಮನ│

  ನೀವ್ ಬರೆವ ನುಡಿ ಮುತ್ತುಗಳು
  ನಿತ್ಯ ತುಂಬಿಸಲಿ ನಮ್ಮ ತನುಮನ│

  – ನಿಮ್ಮ ಸುನಿಲ್ ಮಲ್ಲೇನಹಳ್ಳಿ

 10. ಅಕ್ಕೋರೆ, ನೀಲಾಂಜನಗೆ ಎಲ್ಡನೇ ಸಾರ್ತಿ ಟ್ಯಾಂಕ್ಸ್ ಯಾಕೆ? ಮೊದ್ಲು ಬರ್ದಿದ್ದು ನೀಲಾಂಜ’ಲ’. ಎಲ್ಡನೇ ಸಾರ್ತಿ ಬರ್ದಿದ್ದು ’ನೀಲಾಂಜ’ನ’. ನಿಮ್ ಅಬಿಮಾನಿ ನೀಲಾಂಜ’ಲ’ ಇಲ್ಲವ್ರೆ ನೋಡಿ – http://neelanjala.wordpress.com/

  ಏನೋ ನಿಮ್ ಇತೈಸಿ ಅಂತಾ ಬರೀತಾ ಇವ್ನಿ. ನಮ್ಮಂತಾ ಜನಗೋಳ್ ಇರಾದ್ರಿಂದಾನೆ ಟೇಮ್-ಟು-ಟೇಮ್ ಮಳೆ ಬೆಳೆ ಎಲ್ಲಾನೂವೇ. ಏನ್ ಯೋಳ್ತೀರಾ?

 11. “chetana aniketana agodu yavaga?”

  paapa avru hosa mane huDktaa idre neevu aniketana aagu aMtiddeeralla….

  “..ಟೇಮ್-ಟು-ಟೇಮ್ ಮಳೆ ಬೆಳೆ ಎಲ್ಲಾನೂವೇ..”

  osi tamma paadaanaa karnatakadalli maDagi dore…..illi maLenu illa beLenu illa…jotege load sheddingu…

 12. ಸುನಿಲ್, ಥ್ಯಾಂಕ್ಸ್.

  ಭಾವನಾ, ಅನಿಕೇತನ ಯಾವ ಅರ್ಥದಲ್ಲಿ ಆಗ್ಬೇಕು ನಾನು!? ಅತ್ತ ಆಧ್ಯಾತ್ಮಿಕವಾಗಿಯೂ ಸಾಧ್ಯವಿಲ್ಲ 😦 ಲೌಕಿಕವಾಗಿ ಮನೆಯಿಲ್ಲದೆ ಬೀದೀಲ್ ನಿಲ್ಲೋಕೂ ಆಗೋಲ್ಲ 😦 😦

  ಭಾಗ್ವತ್ರೆ, ಭಾಳ ಒಳ್ಳೆ ಕೆಲ್ಸ ಮಾಡಿದ್ರಿ ನೋಡಿ ನಂಗೆ ಈ ಸಂಗ್ತಿ ತಿಳ್ಸ್ ಕೊಟ್ಟು. ತುಂಬಾ ತುಂಬಾ ಥ್ಯಾಂಕ್ಸ್ ನಿಮ್ಗೆ. ನಿಮ್ಮ ಕಮೆಂಟಿನ ನೆಕ್ಸ್ಟ್ ಇರೋ ಮಾಯಗಾತಿ (ಯಾವಿ!?) ಸಿಂಗಾರಿಯ ಕಮೆಂಟಲ್ಲಿರೋ ಅರಿಕೆ ನಂದೂ ಆಗಿದೆ ಅಂದ್ಕೊಂಡು ಕರುಣಿಸಿ 🙂

  ಸಿಂಗಾರಿ…
  ಹೊಸ ಮನೆ ಕ್ಯಾನ್ಸೆಲ್ ಕಣೇ. ಈ ಜಿರಳೆ, ಇಲಿ, ಮೇಲ್ಗಡೆ ಮನೆ ರುಬ್ಬೋ ಕಲ್ಲಿನ್ ಸದ್ದು… ಇವೆಲ್ಲ ಇಲ್ದೆ ನನ್ನಿಂದ ಬದ್ಕೋಕಾಗೋಲ್ಲ!

  ~ ಚೇತನಾ

 13. @ಬಿಂಕದ ಸಿಂಗಾರಿ,
  ನಾನು ಕಾಲು ಮಡಗಿದಲ್ಲಿ ಟೇಮ್-ಟು-ಟೇಮ್ ಮಳೆಯಾಗುತ್ತೆ ಅಂದ್ನಾ? ಅಂದಂಗೆ ನಿಮ್ಮೆಸ್ರು ಬೋ ಸಂದಾಕೈತೆ.

  @ಚೇತನಾ,
  ಬರೀ ಥ್ಯಾಂಕ್ಸ್ ಮಾತ್ರಾನ? ಮಸಾಲೆ ದೋಸೆ ಇಲ್ವಾ?

 14. ಬಾಗ್ವತ್ರೆ,
  ಅದೇನ್ ಮಸಾಲೆದೋಸೆ ಮಸಾಲೆದೋಸೆ ಮಸಾಲೆದೋಸೆ ಅಂತ ನಮ್ಮ ಬ್ಲಾಗರು ಹೆಣ್ಣುಮಕ್ಕಳ ಹಿಂದೆ ಬಿದ್ದು ಕಾಟ ಕೊಡ್ತೀರಿ? ಒಂದ್ಸಾರಿ ಸಿಗ್ರಿ. ನಂ ಮೈಸೂರ್ಕಡೆ ಹಿಂಗೆ ತಿಂಡಿಭೂತ ಹತ್ತಿದೋರ್ಗೆ ಒಂದು ರೀತಿ ಉಪಚಾರ ಮಾಡ್ತರೆ. ಹಂಗೆ ನಿಮ್ನ ಕೂರ್ಸಿ ನಿಮಗೆ ತಲೆಕೆಟ್ಟೋಗಿ “ಆಂ!! ಮಸಾಲೆದೋಸೆಯೆ? ಹಾಗೆಂದರೇನು?” ಅನ್ನೊತನಕ ಮಸಾಲೆದೋಸೆ ತಿನ್ನಿಸ್ತೀವಿ, ನೋಡ್ತಾ ಇರಿ!!

 15. @ಟೀನಾ,
  ಔದೇನ್ರಿ? ನೀವು ಈ ಪಾಟಿ ’ನಿಮ್ಮ’ ಬ್ಲಾಗರು ಎಣ್ಣುಮಕ್ಕಳ ಬ್ಲಾಗ್ನಲ್ಲೆಲ್ಲ ನನ್ ಮ್ಯಾಕೆ ಒಂದ್ ಕಣ್ಣಿಟ್ಟೀರಿ ಅಂದ್ರೆ, ನಾನೂ ಇನ್ ಮ್ಯಾಕೆ ವಸಿ ಉಸಾರಾಗಿರ್ತೀನಿ 🙂

  ಅಂದಂಗೆ, ನೀವು “ನಿಮ್ಮ” ಬ್ಲಾಗರು ಎಣ್ಣುಮಕ್ಕಳ ಸಂಗದ ಸ್ವಗೋಸಿತ ಕೇರ್ ಟೇಕರ್ರಾ? 🙂

  ***********
  ಇವತ್ತು ನಮ್ಮ ಜನರೇಷನ್ನಿಗೆ ಮಸಾಲೆ ದೋಸೆ ಅಂದರೆ ಎಲ್ಲಿಲ್ಲದ ಅವ’ಜ್ನೆ’. ಎಲ್ಲ ಪಿಜ್ಜಾ, ಬರ್ಗರು ಅಂತ ಫಾಸ್ಟ್ ಫುಡ್ಡಿನ ರುಚಿಗೆ ಮೊರೆ ಹೋಗುವವರೆ……

 16. :);):p
  ಸ್ವಗೋಸಿತ ಕೇರ್ ಟೇಕರೇನೂ ಅಲ್ಲ.ಅಗೋಸಿತ ಅನ್ನಬೋದು.:) ಇತ್ತೀಚೆಗೆ ಸ್ಟಾಕರುಗಳು, ಸೀರಿಯಲ್ ಕಿಲ್ಲರುಗಳು ಜಾಸ್ತಿಯಾಗಿರೋದರಿಂದ ‘ನಮ್ಮ’ ಗೆಳತಿಯರ ಬಗ್ಗೇನೂ ಯೇಸ್ನೆ ಮಾಡ್ಬೇಕಾಗಿದೆ. ಅವ’ಜ್ನೆ’ ಬಗ್ಗೆ ಪನ್!!ಅದೂ ಡಬಲ್ ಪನ್!! (ಮೇರಾ ಗಧಾ ಮುಝೇ ಹೀ ಒಯಿಂಕ್ ಒಯಿಂಕ್?) Grrrrrrrr…….ಸಿಗ್ರಿ ನೀವು ಮೊದ್ಲು!!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Create a free website or blog at WordPress.com.

Up ↑

%d bloggers like this: