ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ನಾಲ್ಕು ಮಾತು


ನಮಸ್ತೇ…

ನಿಮ್ಮೆಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಿಶಗಳು.

ನಾನಂತೂ ಈ ತಿಂಗಳು, ಇವತ್ತು ಮಾತ್ರವಲ್ಲದೆ ನಮ್ಮ ಹಿಂದಿನವರು ಸ್ವಾತಂತ್ರ್ಯ ಪ್ರಾಪ್ತಿಗಾಗಿ ಪಟ್ಟ ಬವಣೆಗಳನ್ನ ನೆನೀತಾ ಇರ್ತೇನೆ, ಮಾತಾಡ್ತಾ ಇರ್ತೇನೆ. ಅದೆಲ್ಲ ನನಗೆ ಸಿಕ್ಕ ಸಹವಾಸದ ಫಲವೆಂದೇ ತಿಳಿಯಿರಿ. ಆದರೆ ಇದರಿಂದ ನನಗೆ ವೈಯಕ್ತಿಕವಾಗಿಯೂ ಬಹಳಷ್ಟು ಲಾಭವಾಗಿದೆ. ನಾನು ನಾಡಿನ ಸ್ವಾತಂತ್ರ್ಯದ ಬಗ್ಗೆ ಯೋಚಿಸ್ತ ಯೋಚಿಸ್ತಲೇ ವ್ಯಕ್ತಿಯೊಬ್ಬನ ವೈಯಕ್ತಿಕ ಸ್ವಾತಂತ್ರ್ಯ- ಸ್ವೇಚ್ಚೆಗಳ ಬಗ್ಗೆಯೂ ಯೋಚಿಸಲು ಪ್ರೇರೇಪಣೆ ದೊರೆತಿದ್ದು ಇದರಿಂದಲೇ. ವ್ಯಕ್ತಿಯೊಬ್ಬನ ಸ್ವೇಚ್ಛೆಯನ್ನ ಅಮೆರಿಕಕ್ಕೆ ಹೋಲಿಸಬಹುದು ಅಂತ ಆಗಾಗ ನನಗನಿಸೋದಿದೆ.

~
ಅಂದ ಹಾಗೆ, ಈ ಬಾರಿಯ ಸಂಡೇ ಇಂಡಿಯನ್ ನೋಡಿರುವಿರಾ? ಸಂಪೂರ್ಣ ಸೇನಾ ವಿಶೇಷಾಂಕವಾಗಿ ಹೊರಹೊಮ್ಮಿದೆ ಅದು. ನನಗಂತೂ ಅದೆಷ್ಟು ಖುಷಿಯಾಯ್ತೆಂದರೆ, ಅದನ್ನ ಹೇಳಿಕೊಳ್ಳಲು ಪದಗಳು ಸೋಲುತ್ತಿವೆ.
ಸೇನೆ… ಅವತ್ತು, ೧೮೫೭ರಲ್ಲಿ ಬಿಳಿಯರ ಬೆವರಿಳಿಸಿತಲ್ಲ- ಅದೇ ಸೇನೆ, ೧೯೪೦ರ ದಶಕದಲ್ಲಿ ಐ ಎನ್ ಎ  ಹೆಸರಲ್ಲಿ ಅವರನ್ನು ಪತರಗುಟ್ಟುವಂತೆ ಮಾಡಿತಲ್ಲ, ಅದೇ ನಮ್ಮ ಹೆಮ್ಮೆಯ ಸೇನೆ… ಪಾಕಿಸ್ತನದ ಪ್ರತಿ ಬಾರಿಯ ವಂಚನೆಗೆ, ದುರಾಕ್ರಮಣಕ್ಕೆ ತಕ್ಕ ಉತ್ತರ ನೀಡಿ ನಮ್ಮ ಮಾನ ಕಾಪಾಡಿತಲ್ಲ- ಅದೆ ಅದೇ ನಮ್ಮ ಸೇನೆಯ ಬಗ್ಗೆ ಅವರು ಸೊಗಸಾದ ಸಂಚಿಕೆ ಹೊರತಂದಿದಾರೆ. ನೀವೂ ಅದನ್ನು ಕೊಂಡು ಓದಲು ಮರೆಯಬೇಡಿ. ಇದು ಈ ಬಾರಿಯ ಸ್ವಾತಂತ್ರ್ಯೋತ್ಸವಕ್ಕೆ ಸಂಡೇ ಇಂಡಿಯನ್ ನೀಡಿರುವ ಉಡುಗೊರೆ ಎಂದೇ ತಿಳಿಯಿರಿ.

~

ನಾನು ಸ್ವಾತಂತ್ರ್ಯ- ಸ್ವೇಚ್ಚೆಯ ಬಗ್ಗೆ ಹೇಳ್ತಿದ್ದೆನಲ್ಲ, ಅದರ ಬಗ್ಗೆ ಮತ್ತೊಮ್ಮೆ ಖಂಡಿತ ಸುದೀರ್ಘ ಚರ್ಚೆ ಮಾಡಬೇಕಿದೆ.  ಸದ್ಯಕ್ಕೆ ಅಭಿಮಾನ, ಅಹಂಕಾರಗಳ ಬಗ್ಗೆ ಒಂದೇ ಒಂದು ಉದಾಹರಣೆ ಕೊಡೋಣವೆಂದುಕೊಂಡೆ. ಅದಕ್ಕೆ ಹೊಂದುವಂತೆ ಈ ಬ್ಲಾಗಿನಲ್ಲಿ ಒಂದಷ್ಟು ಚಿತ್ರಗಳಿವೆ ನೋಡಿ. ದೇಶದ ಬಗ್ಗೆ ಅಭಿಮಾನವಿರುವ ವ್ಯಕ್ತಿ ರಚಿಸಿದ ಚಿತ್ರಕ್ಕೂ ತನ್ನ ಕಲಾಕಾರಿಕೆಯ ಬಗ್ಗೆ ದುರಭಿಮಾನವಿರುವ ವ್ಯಕ್ತಿ ರಚಿಸಿರುವ ಚಿತ್ರಕ್ಕೂ ಎಷ್ಟೊಂದು ವ್ಯತ್ಯಾಸ!!

~
ಇವರು ಐ ಟಿ ಹುಡುಗರಲ್ಲ!

ಮೇಲೆ ಲಿಂಕ್ ಕೊಟ್ಟಿದೇನಲ್ಲ, ಆ ಬ್ಲಾಗ್ ನೋಡಿದಿರಾ?
ಪರವಾಗಿಲ್ಲ. ಮತ್ತೊಮ್ಮೆ ಯಾವಾಗಲಾದರೂ ಪುರುಸೊತ್ತು ಮಾಡಿಕೊಂಡು ನೋಡಿ. ಅಲ್ಲಿ ಉಲ್ಲೇಖಿಸಿರುವ ಸಂಘಟನೆ ನಡೆಸುತ್ತಿರುವ ಹುಡುಗರು ಭರಪೂರ ದುಡಿದು ಬಿಡುವಿನ ಸಮಯದಲ್ಲಿ ಸದ್ವಿನಿಯೋಗ ಮಾಡಹೊರಟ ಐಟಿ ಉದ್ಯೋಗಿಗಳಲ್ಲ. ಅವರೆಲ್ಲರೂ  ಸಾಧಾರಣ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುತ್ತಿರುವವರು. ( ದೊಡ್ಡ ಸಂಬಳದ ಮಂದಿ ಇತ್ತೀಚೆಗೆ ಸಮಾಜಪರ ಕಾರ್ಯಗಳಲ್ಲಿ ತೊಡಗಿರುವುದು ಸಂತಸದ ಸಂಗತಿ. ಹೆಚ್ಚಾದ ಹಣವನ್ನು ಮೋಜು ಮಸ್ತಿಯಲ್ಲಿ ಹಾಳುಮಾಡದೆ ಇಂತಹ ಕೆಲಸಗಳಲ್ಲಿ ತೊಡಗಿಸುತ್ತಿರುವ ಅವರೆಲ್ಲರ ಬಗ್ಗೆ ನನಗೆ ಮೆಚ್ಚುಗೆಯಿದೆ). ತಮ್ಮ ತಮ್ಮ ಖರ್ಚುಗಳನ್ನು ಸ್ವಲ್ಪ ಮಿತಗೊಳಿಸಿಕೊಂಡು ಅದನ್ನು ಶಾಲಾ ಹುಡುಗರ ತರಬೇತಿ ಶಿಬಿರಗಳನ್ನು ನಡೆಸಲು ವಿನಿಯೋಗಿಸುತ್ತಿರುವವರು. ಅವರಲ್ಲೊಬ್ಬರಂತೂ ಬಿಡುವಿನ ವೆಳೆಯಲ್ಲಿ ಆಟೋ ಓಡಿಸಿ ಹಣ ಉಳಿಸಿ, ಸತ್ಕಾರ್ಯಗಳಿಗೆ ವಿನಿಯೋಗಿಸುತ್ತಿರುವರು!
ಈ ಹುಡುಗರದೊಂದೇ ಬಯಕೆ, ನಮ್ಮ ಮುಂದಿನ ಪೀಳಿಗೆ ಸ್ವಾಭಿಮಾನೀ- ಸದೃಢ ಪೀಳಿಗೆಯಾಗಿ ಹೊರಹೊಮ್ಮಬೇಕು. ರಾಷ್ಟ್ರದ ಪತಾಕೆಯನ್ನ ಮುಗಿಲೆತ್ತರಕ್ಕೆ ಹಾರಿಸುವಂತಾಗಬೇಕು! ಕನಸುಗಣ್ಣಿನ ಈ ಹುಡುಗರಿಗೆ ಸ್ವಾಮಿ ವಿವೇಕಾನಂದರೇ ಸ್ಫೂರ್ತಿ. ಅವರ ಅದರ್ಶದಲ್ಲಿ ಇವರೆಲ್ಲರ ಹೆಜ್ಜೆ.
ಸಾಮಾಜಿಕ ಕಾರ್ಯಕರ್ತ ಚಕ್ರವರ್ತಿ ಈ ಸಂಘಟನೆಯನ್ನು ಹುಟ್ಟುಹಾಕಿದ್ದು ಇಂತಹ ‘ಏನಾದರೂ ಮಾಡಬೇಕು ಸಾರ್’ ಅಂತ ಬೆನ್ನು ಬಿದ್ದಿದ್ದ ಹುಡುಗರಿಗಾಗಿಯೇ. ಅದಿಂದು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತ ನಡೆದಿದೆ.
ರಾಷ್ಟ್ರ ಹಬ್ಬದ ಸಂದರ್ಭದಲ್ಲಿ ರಾಷ್ಟ್ರ ಕಟ್ಟುವ ಕಾಯಕ ಮಾಡುತ್ತಿರುವ ಅವರಿಗೊಂದು ಶಹಬ್ಬಾಸ್ ಹೇಳಬೇಕಾದುದು ನಮ್ಮ ಕರ್ತವ್ಯವಲ್ಲವೆ?

~
ಮತ್ತೊಮ್ಮೆ,
ಸ್ವಾತಂತ್ರ್ಯೋತ್ಸವದ ಶುಭ ಹಾರೈಕೆಗಳು…

5 thoughts on “ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ನಾಲ್ಕು ಮಾತು

Add yours

 1. Chetana I’m just wondering if the bug to categorize people with an IT tag has caught on you too!
  Philanthropy is nothing to do with what profession one is in. MOST people on this earth help fellow human beings. People with more money might be able to share more and everybody else does so within their capacity. So can’t understand the relevance of saying “ಇವರು ಐ ಟಿ ಹುಡುಗರಲ್ಲ ”. IT people are very much human and sensitive to fellow people too.

 2. Radhika, Prasad,
  IT huDugru samAjakkAgi haNa kharchu mADOdu doDDa vishayavAguLidilla eega. aa vargada haNa- dundugArikeyinda nAvella anubhavistirO nashTakke avaru compansate mADabEkAgiddu nyAyavE…
  Adare DELPHI yantha factory yalli pALi- dinagUliya lekkadalli duDiyO huDugaru samAjakkAgi kharchu mADtAralla, adu viShEsha. heegAgi ee comparisannu!

 3. Chetana,

  You are simply putting IT flock down. Didn’t like it. People spend according to their earning. How can you label it “dundugaarike”. How can you link your loss with somebody else’s spending power? You’re targetting IT people unnecessarily. I think yuvashakti did not need an introduction like this.

 4. Chetana,

  I just traversed through the blog that you had linked in the article. Good that people are doing social service and its one’s ability and the attitude towards life and others. As you said, its a good vedike for youngsters who say ‘enaadru maadbeku’

  Probably, sometimes the sentences like ‘ivaru IT hudugaralla’ proves costlier, and the highlight of that word made it more conspicious. Compare, Compromise and Compitation are three C’s which drives oneself crazy 🙂

  Not necessary that if one earns more, they will(have to) share it or spend it more. In which ever profession one is, the thought process remains the same, because I have seen people who are filthy rich and think so much to share their money with others or spend it for their own needs.

  As you said, community initiatives are many these days and the sangaTane with such rich cause is appreciable. One such one is
  http://jointhehands.blogspot.com

  Now a days, many sangaTanes are giving rise to political parties, idu eshTara maTTige oLLeya beLavanige gottilla.

  My 2 paise

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Blog at WordPress.com.

Up ↑

%d bloggers like this: