ಪೊರಕೆ ಎಲ್ಲಿದೆ!? – ಮತ್ತೊಂದು ಚರ್ಚೆ


‘ಬಸ್ಸಿನ ಹೆಂಗಸು ಮತ್ತು ಬಿಳಿಬಿಳೀ ಸೀರೆಯ ಹುಡುಗಿಯರು’ ಲೇಖನದ ವಸ್ತು ನಿಜ ಘಟನೆಯನ್ನ ಆಧರಿಸಿದ್ದು. ಇಲ್ಲಿರುವ ಕೊನೆಯ ಪ್ರಶ್ನೆ, ಪ್ರಾಮಾಣಿಕವಾಗಿ ನನ್ನ ಅಂತರಾಳದ್ದು. ಇದು ನನ್ನನ್ನ ಕಾಡುತ್ತಿರುವುದಕ್ಕೆ ಕಾರಣ ಬಹಳವಿದೆ. ಭಾಷಣ, ಬರಹ ಅಂತೆಲ್ಲ ಶುಚಿಶುಚಿಯ ಚಟುವಟಿಕೆಯಲ್ಲಿ ಮುಳುಗಿಹೋಗುವ ನನಗೆ ಏನೂ ಮಡಲಾರದವಳಾಗಿರುವೆನಲ್ಲ ಎಂಬ ನಾಚಿಕೆ ಕಾಡಿ ಅದನ್ನ ಹೇಳಿಕೊಂಡಾದರೂ ಹಗುರಾಗುವ ಎಂದಿದನ್ನ ಬರೆದೆ. ಇದನ್ನ ಬರೆದಿದ್ದು ಮೇ ತಿಂಗಳಿನಲ್ಲಿ.

ಈ ಲೇಖನ ಕೆಂಡ ಸಂಪಿಗೆಯಲ್ಲಿ ಬಂದು, ಇದೀಗ ನಿಮ್ಮೊಡನೆ ಚರ್ಚಿಸುವ ಸಲುವಾಗಿಯೆ ನನ್ನ ಬ್ಲಾಗಿಗೆ ಹಾಕಿಕೊಂಡೆ. ನೀವು ಕೂಡ ಪ್ರತಿಕ್ರಿಯಿಸುತ್ತಿರುವಿರಿ. ರಾಧಿಕ, ವಿಕಾಸ್, ಸಂದೀಪ್- ಎಲ್ಲರೂ ಚೆನ್ನಾಗಿ ಹೇಳಿದ್ದೀರಿ. ಒಳ್ಳೆಯ ಪ್ರಶ್ನೆ- ಉತ್ತರ ನೀಡಿದ್ದಿರಿ. ಅದಕ್ಕೇ, ಅವು ಕಮೆಂಟು ಬಾಕ್ಸಲ್ಲಿ ಮುಚ್ಚಿಹೋಗಬಾರದೆಂದು ಸಪರೇಟು ಪೋಸ್ಟ್ ಮಾಡಿ ಹಾಕುತ್ತಿರುವೆ. ಸಲಹೆ- ಸೂಚನೆ- ಆಕ್ಷೇಪ ಏನಾದರೂ ಇದ್ದರೆ, ಚರ್ಚೆ ಮುಂದುವರೆಸಿ.

– ಪ್ರೀತಿಯಿಂದ,

ಚೇತನಾ ತೀರ್ಥಹಳ್ಳಿ

Whatever we may talk, write FOR WOMEN when it comes to reality, we would rather be spectators! Your experience (if it’s real) reflects the society in general.

– ರಾಧಿಕಾ 

ರಾಧಿಕಾ,
ಇದು ನಿಜವಾಗಿ ನಡೆದಿದ್ದು. ಖಂಡಿತ ಇದು ಒಟ್ಟು ಸಮಾಜದ ಅಸಾಹಯಕತೆ.
ನನ್ನ ಮಟ್ಟಿಗೆ ಕ್ಲಾರಿಫಿಕೇಶನ್ನು ಕೊಡಬಹುದಾದರೆ,ಅಲ್ಲಿ ನನ್ನ ಮಾತಿಗೆ ಬೆಂಬಲ ಕೊಡುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ. ಸ್ವತಃ ಆ ಹೆಂಗಸು ಕೂಡ! ಆದರೆ ಇಂತಹ ಮಾತುಗಳು ಎಲ್ಲೋ ಕೇವಲ ಸಮಜಾಯಿಶಿಯಾಗಿ ಉಳಿದುಬಿಡುತ್ತದೆ.
ಅದರೂ,
ಬಸ್ಸಲ್ಲಿ ಯಾವನದೋ ಕೈ ಸೋಕಿ ದಿನವಿಡೀ ಮೈಮೇಲೆ ಚೇಳು ಹರಿದಂತೆ ಹೀಕರಿಸಿಕೊಳ್ಳುವ ನಮಗೆ, ಬಸ್ಸಲ್ಲಿ ಅಂಥದೊಂದು ಕಿರುಕುಳಕ್ಕೆ ಒಳಗಾಗಿಯೂ ಕೊನೆಯಲ್ಲಿ, ‘ದುಡ್ ಮಡಗಿ ಹೋಗೋ’ ಎಂದು ಅರಚಿಕೊಳ್ಳುವ ಆ ಹೆಂಗಸಿನಂಥವರ ಅಸಹಾಯಕತೆ, ಅಥವಾ ಅವರ ಮನಸ್ಥಿತಿ ಅರಗಿಸಿಕೊಳ್ಳಲು ಬರುವುದೇ ಇಲ್ಲ.
ಪರಿಸ್ಥಿತಿ ಹೀಗಿರುವುದರಿಂದಲೇ ನನ್ನ ‘ಪೊರಕೆ’ಯ ಹುಡುಕಾಟ ಹಾಗೇ ನಿಂತುಬಿಟ್ಟಿದೆ.
ಈ ಬಗ್ಗೆ ನೀವು ನಿಮ್ಮ ಸಲಹೆ ಕೊಡುವುದಿದ್ದರೆ ಬಹಳ ಒಳ್ಳೆಯದು.

– ಚೇತನಾ 

Chetana, I wonder demanding money was her way of protesting against the misbehavior OR her consent for it.
I for one believe every girl should be taught from young age to resist misbehavior by men even if it’s from a family member. My daughter is all of 2.5 years – wouldn’t allow anybody(sometimes including us parents!) to kiss her or pinch her cheeks – as I’ve taught her it’s not good. We need to be equipped to face the world and fight as we cannot eliminate men who are beasts but we can keep them away for sure.

– ರಾಧಿಕಾ

 

  • ಕೊನೆಯಲ್ಲಿ ದುಡ್ ಮಡಗಿ ಹೋಗೋ ಎಂಬುದು ’ಅಸಹಾಯಕತೆ’ಯನ್ನು encash ಮಾಡಿಕೊಳ್ಳುವ ಬುದ್ದಿವಂತನಿಕೆಯೋ!! ಭೇಷ್.ನಿಜ, ನಮ್ಮ ಕೋಟೆಯೊಳಗೇ ನಾವಿದ್ದಾಗ ಹೊರಗೆ ಏನು ನೆಡೆಯುತ್ತಿದೆ ಎಂಬುದು ಸರಿಯಾಗಿ ಕಾಣುವುದೇ ಇಲ್ಲ, ಕಂಡರೂ ಸರಿಯಾಗಿ ಗೊತ್ತಾಗುವುದೇ ಇಲ್ಲ! ಕಿಂಡಿಯಲ್ಲೇ ಕಂಡದ್ದನ್ನು ಇಡೀ ಜಗತ್ತಿಗೆ ಅನ್ವಯಿಸಿ ಜೆನೆರಲೈಸ್ ಮಾಡಿಬಿಡುತ್ತೇವೆ.
  • ವಿಕಾಸ್ 

  • ದುಡ್ ಮಡಗಿ ಹೋಗೋ’ ಅನ್ನೋದು ಯಾವ ದೃಷ್ಟಿಯಿಂದಲೂ ಅಸಾಹಯಕತೆ ಅಲ್ಲ!
    ಇಂಥ ಗಂಡಸರ ಬಗ್ಗೆ ನನಗೂ ಸಿಟ್ಟು ಇದೆ .
    ನಂಗೆ ನೀವು ಹುಡುಗಿಯರ ಕಷ್ಟ ಖಂಡಿತ ಅರ್ಥ ಆಗುತ್ತೆ!
    ಯಾಕಂದ್ರೆ ನಾವು ’ಗಂಡಸರೂ’ ಇಂಥ ಕಷ್ಟ ಬಸ್ ನಲ್ಲಿ ಅನುಭವಿಸ್ತೀವಿ.ಅದು ’ಗೇ ’ಗಳಿಂದ!
    .ನಿಮಗೆ ಇದು ಮಹಾ ಸಮಸ್ಯೆ ಅನ್ನಿಸದಿರಬಹುದು .ಆದ್ರೆ ನಮಗೆ ಇದು ದೊಡ್ಡ ಸಮಸ್ಯೆ .ಯಾಕಂದ್ರೆ ನೀವು ಸ್ವಲ್ಪ ಧೈರ್ಯ ಪಟ್ಟು ಧ್ವನಿ ಎತ್ತಿದ್ರೆ ಅಲ್ಲೇ ಇರೋ ಕೆಲವು ಗಂಡಸರಾದ್ರೂ ಧರ್ಮದೇಟು ನೀಡದೆ ಇರುವುದಿಲ್ಲ ಅಂಥ ಕಾಮುಕರಿಗೆ.ಆದ್ರೆ ನಾವು ಧ್ವನಿ ಎತ್ತಿದ್ರೆ ಯಾರೂ ನಂಬಲ್ಲ ನಮ್ಮನ್ನ ( ಇಷ್ಟವಿಲ್ಲದ ಸ್ಪರ್ಷ ಯಾವತ್ತಿದ್ರೂ ಅಸಹ್ಯ ಅಲ್ವ??  (ಅಂದ ಹಾಗೆ ಗೇ ಗಳು ಯಾವ ರೀತಿ ಕಾಟ ಕೊಡುತ್ತಾರೆ ಅನ್ನೋದನ್ನು ಇಲ್ಲಿ ಬರೆಯಲು ಅಸಾಧ್ಯ ! ಅದರ ಕಷ್ಟ ಅನುಭವಿರೋರಿಗೆ ಗೊತ್ತು) ರಾಧಿಕಾ ರವರ ಸಲಹೆ ತುಂಬಾ ಚೆನ್ನಾಗಿದೆ.ಹುಡುಗಿಯರು ಚಿಕ್ಕವರಿರುವಾಗ್ಲೇ ಇಂಥ ಕಿರುಕಳದ ಬಗ್ಗೆ ಸರಿಯಾದ ಮಾಹಿತಿ ನೀಡ್ಬೇಕು .ಬೇಸರದ ಸಂಗತಿ ಅಂದ್ರೆ ಇಂಥ ಕೆಲಸ ಪರಿಚಿತರಿಂದ್ಲೇ ಆಗೋದು !
    ಇಲ್ಲಿ ಇನ್ನೊಂದು ವಿಷಯನ್ನು ಗಮನಿಸಬೇಕು ! ಈ ರೀತಿ ಪುಟ್ಟ ಹುಡಿಗಿಯರಿಗೆ ತಿಳುವಳಿಕೆ ನೀಡೋದೇನೋ ಸರಿ ,ಆದ್ರೆ ಇದನ್ನೆ ’ಅಸಹ್ಯ ’ ,ತಪ್ಪು ಅಂತ ಪದೇ ಪದೇ ಹೇಳ್ತಾ ಇದ್ರೆ ಹುಡುಗಿಯರು ಅದನ್ನೇ ಮನಸ್ಸಲ್ಲಿ ಅಚ್ಚೊತ್ತಿ ಬಿಡ್ತಾರೆ ! ಆಮೇಲೆ ಕಷ್ಟ ಪಡೋದು ಗಂಡ ! ಗಂಡನನ್ನು ಕೂಡಾ ಅವರು ಹತ್ತಿರ ಬಿಟ್ಟು ಕೊಡಲ್ಲ !

    – ಸಂದೀಪ್ ಕಾಮತ್ 

    @Sandeep, your concern about child developing aversion to ALL people may be true to some extent. BUT the need of the hour is educate the child what is good or bad at that age. Otherwise we may be just mute spectators to violence happening within the family many times.

    – ರಾಧಿಕಾ

  • ವಿಕಾಸ್ ಗೆ ಉತ್ತರ ಕೊಡೋದು ನಂಗೆ ಸ್ವಲ್ಪ ಕಷ್ಟ. ಅವರು ಯಾವುದೆಲ್ಲವನ್ನು ಯಾವೆಲ್ಲ ರೀತಿ ಗ್ರಹಿಸುತ್ತ ಬಂದಿದಾರೆ ಅನ್ನೋದನ್ನ ಕಳೆದ ಕೆಲವು ದಿನಗಳಿಂದ ಗಮನಿಸ್ತ ಬಂದಿದೇನೆ. (ಅವರ ಬ್ಲಾಗಲ್ಲಿ ಕೂಡ ಅದಕ್ಕೆ ಪುರಾವೆ ಇದೆ) ಹೀಗಾಗಿ ‘ಅಸಹಾಯಕತೆಯನ್ನು ಎನ್ ಕ್ಯಾಶ್’ ಮಾಡಿಕೊಳ್ಳುವುದಕ್ಕೆ ಅವರಿತ್ತ ವ್ಯಂಗ್ಯಕ್ಕೆ ಉತ್ತರವಿದ್ದರೂ,ಇಲ್ಲಿ ಅದನ್ನು ಪ್ರಸ್ತಾಪಿಸುವುದಿಲ್ಲ.
    ಆದರೆ ವಿಕಾಸ್,
    ಎಲ್ಲರೂ ಎಲ್ಲಾ ಕಾಲದಲ್ಲೂ ಎಲ್ಲದರ ಬಗ್ಗೆಯೂ ಮಾತಾಡಲು ಸಾಧ್ಯವಿಲ್ಲ ಎನ್ನುವುದು ನಿಮಗೆ ತಿಳಿದಿದೆ ಎಂದುಕೊಳ್ಳುತ್ತೇನೆ. ಇಷ್ಟಕ್ಕೂ ‘ಜನರಲೈಸ್’ ಮಾಡುವುದು ಅಂದರೆ ಏನು? ಭಾರತದಲ್ಲಿ ಕುಂತ ರಿಪೋರ್ಟರು ‘ಜಪಾನಲ್ಲಿ ಭಾರೀ ಭೂಕಂಪ’ ಅಂತ ಹೆಡ್ಡಿಂಗ್ ಕೊಟ್ಟರೆ, ಅದನ್ನ ನೀವು ‘ಇಡಿಯ ಜಪಾನ್ ಗಡಗಡ ನಡುಗಿತು’ ಅಂದುಕೊಳ್ತೀರೇನು? ಸಾವಧಾನದಿಂದ ಓದಿದಾಗ ಎಲ್ಲೆಲ್ಲಿ? ಏನು ಸಂಗತಿ? ಎಲ್ಲ ಅರ್ಥವಾಗುವುದು. ಹಾಗೇ ‘ಗಂಡಸು’ ಅಂದಾಗ ಆ ಕಾನ್ಸೆಪ್ಟಿನಲ್ಲಿ, ಆ ಕಥೆ-ಸಂದರ್ಭದಲ್ಲಿ ಬರುವ ‘ಅವನಂಥವರು’ ಎಂದು ಮಾತ್ರ ಅರ್ಥ.
    ನಾನು ನಿಮ್ಮನ್ನೊಮ್ಮೆ ಖಂಡಿತ ಭೇಟಿಯಾಗಲೇಬೇಕು. ನೀವು ಸ್ತ್ರೀಪರ ದನಿಯನ್ನು ಅನುಮಾನ ಮತ್ತು ವ್ಯಂಗ್ಯದಿಂದ ನೋಡುತ್ತಿರುವಿರಿ ಎಂದು ನನಗನಿಸುತ್ತಿದೆ. ಪರಸ್ಪರ ಚರ್ಚೆಯಿಂದ ಪೂರ್ವಗ್ರಹಗಳನ್ನು ಸರಿಪಡಿಸಿಕೊಳ್ಳಬಹುದು.
    ರಾಧಿಕಾ,
    ನಿಮ್ಮ ಸಲಹೆ ಸರಿಯಾಗಿಯೇನೋ ಇದೆ. ಆದರೆ, ಮಗುವಿಗೆ ‘ಸ್ಪರ್ಷ’ದ ಬಗ್ಗೆ ತಿಳುವಳಿಕೆ ನೀಡಲು ಹೋಗಿ ಸಂದೀಪ್ ಹೇಳಿದ ಹಾಗೆ ದ್ವೇಷ ಹುಟ್ಟುವಂತೆ ಆಗದಿರಲಿ ಅನ್ನುವುದಕ್ಕೆ ನನ್ನದೂ ಸಹಮತವಿದೆ.ಮತ್ತೊಂದು ಸಂಗತಿ,ನನ್ನ ಈ ಲೇಖನದ ಚಿಂತನೆ ಬಸ್ಸಿನ ಹೆಂಗಸಿನ ಕುರಿತಾದದ್ದು ಅನ್ನುವುದು ಎಂದು ಸ್ಪಷ್ಟ ಪಡಿಸಬಯಸುತ್ತೇನೆ. ಆಕೆಯಂಥ, ಅಂತಹ ಹಿನ್ನೆಲೆಯ (ಅವರು ಸದಾ ಊರೂರು ಅಲೆಯುತ್ತ ಕೆಲಸ ಮಾಡುವ ಜನ) ಹೆಣ್ಣುಮಕ್ಕಳನ್ನ ಯಾರು, ಹೇಗೆ ಎಜುಕೇಟ್ ಮಾಡಬಹುದು? ದಿಕ್ಕು ದೆಸೆ ಇಲ್ಲದವಳಾದರೂ ಸಹ ಅಕೆಗೆ ತನ್ನತನ ಇದ್ದೇ ಇರುತ್ತದೆ. ಯಾವನದೋ ಮುಟ್ಟುವಿಕೆ ಅಸಹ್ಯ ತರಿಸಿದರೂ ಅವಳು ತನ್ನ ‘ಅಂತರಂಗ’ದ ಭಾವ ಸರಿಯಾಗಿ ವ್ಯಕ್ತಪಡಿಸಲಾರದವಳಾಗಿರು ತ್ತಾಳೆ. ಇಲ್ಲಿ ನನಗೆ ಆಕೆಯ ಸ್ಥಿತಿಯ ಬಗ್ಗೆ ಮರುಕವಿದೆ. ಆದರೆ, ಅದಕ್ಕೊಂದು ಪರಿಹಾರ ಹುಡುಕುವ ದಾರಿ ಗೊತ್ತಿಲ್ಲ. ಇಂತಹ ನನ್ನ ಸೋಲಿನ ಬಗ್ಗೆಯೂ ನನಗೆ ಮರುಕವಿದೆ.
    ನಾನು ಬಿಳಿ ಸೀರೆಯ (ಅಂದರೆ ಇಲ್ಲಿ ಸೂಚ್ಯವಾಗಿ ನಾಗರಿಕ ಅಥವಾ ವೈಟ್ ಕಾಲರ್ ಅರ್ಥದ) ಹುಡುಗಿಯರಿಗೆ ಭಾಷಣ ಮಾಡಿ ನಮ್ಮ ಸಂಸ್ಕೃತಿಯ ಬಗ್ಗೆ ಹೇಳಬಲ್ಲೆ. ಆತ್ಮ ರಕ್ಷಣೆ, ಆತ್ಮಾಭಿಮಾನದ ಬಗ್ಗೆ ಭಾಷಣ ಬಿಗಿಯಬಲ್ಲೆ. ಲೇಖನದ ಕೊನೆಯಲ್ಲಿನ ಅಮ್ಮನ ಮಾತಿನಂತೆ ಹಾಲುಕರೆಯುವ ಕೆಲಸ ನನ್ನದು. ಯಾವುದೇ ರಿಸ್ಕಿಲ್ಲದ, ಶ್ರಮವಿಲ್ಲದ ಕೆಲಸ! ಆದರೆ ಕೊಟ್ಟಿಗೆ ಗುಡಿಸುವುದು? ತಾನು- ತನ್ನ ಪಾಡಿನ, ಅನಕ್ಷರಸ್ತ ಕೂಲಿ ಹೆಂಗಸಿನ- ಅಂತಹವರ ದನಿಯಾಗಬೇಕೆನ್ನುವ ಹಂಬಲವಿದ್ದರೂ ದಾರಿ ತಿಳಿಯದೆ ಹೋಗಿದೆ ಅನ್ನುವುದೇ ನನ್ನ ಕೊರಗು.

    – ಚೇತನಾ 

  • Chetana, I think the problem is the other way round. The people whom we think are uneducated (rather illiterate) have voice in them to raise against atrocities than the literate community. In a similar situation a college going girl OR any other woman from the privileged class would go away (in most cases) from the man than try shouting and create a scene.
  •                                                                                                          – ರಾಧಿಕಾ

  • ರಾಧಿಕಾರ ಈ ಮಾತಿಗೆ ನನ್ನ ಸಹಮತ ಇದೆ. ಆದರೂ ಎರಡೂ ವಿಭಾಗಗಳಲ್ಲಿ ಅಪವಾದಗಳಿವೆ. ಕೆಲವೊಮ್ಮೆ ಬಡತನ, ಅನಾಥ ಪ್ರಜ್ಞೆ ಕೂಡ ಹೆಂಗಸರನ್ನ ಮೂಕವಾಗಿಸತ್ತೆ. ಹಾಗೆಯೇ ಶ್ರೀಮಂತಿಕೆಯ ಮರ್ಯಾದೆ, ಕೂಗಾಡಿದರೆ ಎಲ್ಲಿ ಡಿಸಿಪ್ಲಿನ್ನಿಗೆ ತೊಂದರೆಯೋ ಎನ್ನುವ ಹುಸಿ ಬಿನ್ನಾಣಗಳು ಕೂಡ, ಕೆಲವೊಮ್ಮೆ ಜೀವ ಭಯ ಕೂಡ ಮೌನಕ್ಕೆ ಕಾರಣವಾಗುತ್ತದೆ. ಜೊತೆಗೆ, ಅದೇ ಆ ಕುಡುಕನ ಬದಲು ನೀಟಾದ ಹುಡುಗನೋ ಇನ್ಯಾರೋ ಹಾಗೆಲ್ಲ ಮಾಡಿದ್ದರೆ ಆಕೆಯ ರೆಸ್ಪಾನ್ಸ್ ಹೇಗಿರುತ್ತಿತ್ತು ಅನ್ನುವ ಪ್ರಶ್ನೆ ಕೂಡ ನನ್ನ ಕಾಡಿದೆ. ಇಲ್ಲಿ, ಸಂದೀಪರ ‘ಇಷ್ಟವಾಗಬಲ್ಲ/ ಆಗದ ಸ್ಪರ್ಶ’ ಅನ್ನುವ ಕಾನ್ಸೆಪ್ಟು ಏನಾದರೂ ಪರಿಹಾರ ಒದಗಿಸಿಕೊಡಬಲ್ಲದೇ?  ಇದು ‘ಆಕೆ’ಗೆ ಮಾತ್ರ ಸೀಮಿತಗೊಳಿಸಬಹುದಾದ ಪ್ರಶ್ನೆಯೋ ಅಥವಾ ಜನರಲೈಸ್ ಮಾಡಬಹುದೋ? ತಿಳಿಯುತ್ತಿಲ್ಲ…
  •                                                                                                                      – ಚೇತನಾ 
  • ಇಷ್ಟ ಇದ್ರೆ ಕುಡುಕ ಮುಟ್ಟಿದ್ರೂ ಮೈಯೆಲ್ಲ ರೋಮಾಂಚನ
    ಇಷ್ಟ ಇಲ್ಲ ಅಂದ್ರೆ ಶಾರೂಕ್ ಖಾನ್ ಮುಟ್ಟಿದ್ರೂ ಅಷ್ಟೆ ಸಲ್ಮಾನ್ ಖಾನ್ ಮುಟ್ಟಿದ್ರೂ ಅಷ್ಟೆ!

                                                                                                            ಸಂದೀಪ್

    ಅಕ್ಕಾ,
    ಕೊಂಚ ತಡವಾಗಿ ನಿಮ್ಮ ಬ್ಲಾಗನ್ನು ತಾಕಿದೆ.
    ಚರ್ಚೆ ಶುರು ಮಾಡಿ ಸಾವಕಾಶವಾಗಿ, ಸರಿಯಾದ ದಿಕ್ಕಿನಲ್ಲಿ ನಡೆಸಿಕೊಂಡು ಹೋಗುವ ನಿಮ್ಮ ಕೌಶಲ್ಯ ಮೆಚ್ಚುಗೆಯಾಗುತ್ತದೆ.
    ಹಿಂದೆಲ್ಲಾ ಹೆಣ್ಣಿನ ಬಗ್ಗೆ ಚರ್ಚೆ ನಡೆಸುವಾಗ, ಹೆಣ್ಣಿನ ಹಕ್ಕು, ಹೆಣ್ಣಿನ ಸ್ಥಾನಮಾನ, ಸಮಾನತೆಯ ಬಗ್ಗೆ ಚರ್ಚೆ ನಡೆಯುವಾಗ ನಾನು ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದೆ ಎಂಬುದನ್ನು ಹೇಳುತ್ತೇನೆ. ಇದಕ್ಕೆ ನನಗೆ ಸರಿಯಾದ ಉದಾಹರಣೆಯಾಗಿ ಇನ್ನೊಂದು ಬಗೆಯ ಚರ್ಚೆ ಸಹಾಯಕ್ಕೆ ಬರಬಹುದು ಎಂದು ಭಾವಿಸುತ್ತೇನೆ. ಈಗ ಎರಡು ಕೋಮುಗಳ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದುಕೊಳ್ಳಿ. ನಾನು ಹಿಂದೂ, ಚರ್ಚೆಯಲ್ಲಿನ ಇನ್ನೊಂದು ಕೋಮು ಮುಸ್ಲೀಮರದು ಎಂದುಕೊಳ್ಳೋಣ. ನಾನು ಎಷ್ಟೇ ಪ್ರಾಮಾಣಿಕನಾಗಿದ್ದರೂ, ಇನ್ನೊಬ್ಬನ ವಾದದಲ್ಲಿನ ಸತ್ವವನ್ನು ಗುರುತಿಸುವ ಎಚ್ಚರವನ್ನು ಹೊಂದಿದ್ದರೂ ಸಹ ನಾನು ‘ನನ್ನ ಧರ್ಮ ಆತನದ್ದಕ್ಕಿಂತ ಉದಾತ್ತವಾದದ್ದು, ಶ್ರೇಷ್ಠವಾದದ್ದೆ, ಆರ್ಷೇಯವಾದದ್ದು, ಪುರಾತನವಾದದ್ದು, ಜಗತ್ತಿನ ನನ್ನ ಧರ್ಮದಿಂದ ಸಿಕ್ಕ ಕೊಡುಗೆ ದೊಡ್ಡದು’ ಎಂಬ ಭಾವದಿಂದ ಹೊರಬಂದು ಚರ್ಚಿಸಲು ಸಾಧ್ಯವಾಗದು.

    ಇದು ಒಂದು ಸಮಸ್ಯೆ. ಮತ್ತೊಂದು ಸಮಸ್ಯೆಯೆಂದರೆ, ಕೆಲವೊಮ್ಮೆ ನನ್ನ ಧರ್ಮದ ಬಗೆಗಿನ ಹೆಮ್ಮೆಯ ಭಾವವನ್ನು ತಗ್ಗಿಸಿಕೊಂಡು, ನಾನು ಕೊಂಚ ಇನ್ ಫೀರಿಯರ್ ಆಗಿ, ನನ್ನಿಂದಲೇ ತೊಂದರೆ ನಡೆಯುತ್ತಿದೆ ಎಂದು ಒಪ್ಪಿಕೊಂಡು ಚರ್ಚೆಗೆ ಅನುವಾದರೆ ನನ್ನೊಂದಿಗೆ ವಾದಿಸುವ ಮುಸ್ಲೀಮನು ತನ್ನ ಧರ್ಮವೇ ಶ್ರೇಷ್ಠ, ತನ್ನ ದೇವರೊಬ್ಬನೇ ಸತ್ಯ, ತನ್ನ ಧಾರ್ಮಿಕ ಗ್ರಂಥವೊಂದೇ ದೇವರಿಂದ ಬಂದದ್ದು, ಉಳಿದವರೆಲ್ಲಾ ಅಪವಿತ್ರರು ಎಂಬ ಭಾವದಿಂದ ಬಿಡುಗಡೆ ಪಡೆದು ಮಾತನಾಡುತ್ತಿದ್ದಾನೋ ಇಲ್ಲವೋ ಎಂಬ ಸಂಶಯ ಬರುತ್ತದೆ. ಒಮ್ಮೆ ಆ ಅನುಮಾನ ಬಂದಾಗ ನಾನು ನನ್ನೆಲ್ಲಾ ಅಭಿಮಾನ, ಹೆಮ್ಮೆಯನ್ನು ಬಿಟ್ಟು, ತಪ್ಪು ನನ್ನಲ್ಲೇ ಇರಬಹುದು ಎಂದು ಪ್ರಾಮಾಣಿಕನಾಗಿ ವಾದಕ್ಕೆ ಬಂದದ್ದು ನನ್ನ ಅಸಹಾಯಕತೆಯಾಗಿವಿಡುತ್ತದೆ. ಯುದ್ಧದಲ್ಲಿ ಎಲ್ಲಾ ಶಸ್ತ್ರಾಸ್ತ್ರ ಬಿಟ್ಟು ಬರಿಗೈಲಿ ನಾನು ಹೋರಾಟಕ್ಕೆ ಹೋದಾಗ ಎದುರಾಳಿ ನನಗೆ ತಿಳಿಯದೆ ಬೆನ್ನ ಹಿಂದೆ ಕತ್ತಿ ಅಡಗಿಸಿಕೊಂಡಿರಬಹುದಾ ಎಂಬ ಸಂಶಯದಂತೇ ಇದು. ಆಗ ನಾನು ನನ್ನ ರಕ್ಷಣೆಗೆ ನನ್ನ ಧರ್ಮದ ಅಭಿಮಾನ, ಹೆಮ್ಮೆ, ಪ್ರತಿಷ್ಠೆ ಎಂಬ ಕವಚವನ್ನಿಟ್ಟುಕೊಂಡೆ ಮುಂದುವರೆಯುತ್ತೇನೆ. ನಾನು ಹೀಗೆ ಎಚ್ಚರನಾಗಿರುವುದಕ್ಕೆ ಎದುರಾಳಿಯಲ್ಲಿನ ಹುಳುಕುಗಳೇ ಕಾರಣ ಎಂದು ವಾದಿಸುತ್ತೇನೆ.

    ಬಹುಶಃ ಇದೇ ಅನಿಸಿಕೆ ಹೆಣ್ಣಿನ ಬಗ್ಗೆ ಹೆಣ್ಣು ಹಾಗೂ ಗಂಡಿನ ನಡುವೆ ನಡೆಯುವ ಚರ್ಚೆಗಳಲ್ಲಿ ಆವರಿಸಿರುತ್ತದೆ ಅನ್ನಿಸುತ್ತದೆ. ನನ್ನ ನಿಲುವಿನ ಬಗ್ಗೆ, ನನ್ನ ನಿಲುವಿನಲ್ಲಿನ ಪ್ರಾಮಾಣಿಕತೆಯ ಬಗ್ಗೆ ಸ್ಪಷ್ಟತೆ ಪಡೆಯದೆ ಯಾವ ಚರ್ಚೆಯನ್ನೂ ಮಾಡಬಾರದು ಎಂಬ ಕಾರಣದಿಂದ ಇಷ್ಟು ಹೇಳಿದೆ.

    ಇನ್ನು ನೀವು ಪ್ರಸ್ತಾಪಿಸಿರುವ ಘಟನೆಯನ್ನು ಅವಲೋಕಿಸಿದರೆ ನನಗೆ ಒಂದು ಸಂಗತಿಯ ಬಗ್ಗೆ ಆಶ್ಚರ್ಯವಾಯ್ತು. ಅಭಿವ್ಯಕ್ತಿಯನ್ನು ಆಯ್ದುಕೊಂಡವರು, ಅಂದರೆ ಬರಹಗಾರರು, ಮಾತುಗಾರರು, ಚಿಂತಕರು, ಪತ್ರಕರ್ತರು, ಹೋರಾಟಗಾರರು ಇಡೀ ಸಮಾಜದ ಧ್ವನಿಯಾಗಲು ಹವಣಿಸುವುದು ಏತಕ್ಕೆ? ಧ್ವನಿಯಿಲ್ಲದವರಿಗೆ ಧ್ವನಿಯಾಗುವುದು ಎಂಬುದರಲ್ಲೇ ‘ನಮ್ಮ ಗಂಟಲಿನ’ ಅಹಂಕಾರ ಬೆರೆತಿರುತ್ತದಾ ಎಂಬ ಸಂಶಯ ನನ್ನದು. ಹಲವು ಸಂದರ್ಭದಲ್ಲಿ ನನಗೆ ಇಂಥ ಅನುಭವವಾದದ್ದಿದೆ. ಟ್ರೈನಿನಲ್ಲಿ ಕೂತು ಒಬ್ಬ ಸಿಗರೇಟು ಹೊತ್ತಿಸಿರುತ್ತಾನೆ. ಟ್ರೇನಿನಲ್ಲಿ ಸಿಗರೇಟು ಸೇದುವುದು ಅಪರಾಧ, ಅದಕ್ಕೆ ದಂಡವಿದೆ ಎಂಬ ಮಾಹಿತಿ ನನಗಿದೆ. ನಾನು ಆತನಿಗೆ ಅದನ್ನು ಆರಿಸುವಂತೆ ಹೇಳಬೇಕು. ಹಾಗೆ ಹೇಳಿದರೆ ಆತ ಏನು ಹೇಳಬಹುದು, ಉಳಿದವರು ನನ್ನ ನೆರವಿಗೆ ಬರುತ್ತಾರಾ? ನಾನು ಒಬ್ಬಂಟಿಯಾದರೆ ಹೇಗೆ? ಎನ್ನಿಸತೊಡಗುತ್ತದೆ. ಇದಕ್ಕೆ ಕಾರಣ ನಾನು ಅಲ್ಲಿ ರೇಲ್ವೆ ಬೋಗಿಯಲ್ಲಿದ್ದವರೆಲ್ಲರ ಪರವಾಗಿ ಮಾತನಾಡಬೇಕು ಎಂದು, ಅವರೆಲ್ಲರ ನೈತಿಕ ಪ್ರಜ್ಞೆಯಾಗಬೇಕು ಎಂದು ಭಾವಿಸುವುದು. ಸುಮ್ಮನೆ ನಾನು ಒಬ್ಬ ಸಾಮಾನ್ಯ ಮನುಷ್ಯನಾಗಿ ಆತನಿಗೆ ‘ಆರಿಸಯ್ಯಾ ಸಿಗರೇಟು, ಕಾಣಲ್ವಾ ಕೂತಿರೋದು’ ಎಂದು ಹೇಳುವುದಕ್ಕೆ, ಅದನ್ನು ವೈಯಕ್ತಿಕ ನೆಲೆಯಲ್ಲಿ ನಿಭಾಯಿಸುವುದಕ್ಕೆ ಏಕೆ ಸಾಧ್ಯವಾಗದು ಎಂದು ಯೋಚಿಸಿದ್ದೇನೆ. ಅಲ್ಲೇ ಪಕ್ಕದಲ್ಲಿ ಕೂತಿದ್ದ ಕೂಲಿ ಹೆಂಗಸೊಬ್ಬಳು ದಬಾಯಿಸಿ ಸಿಗರೇಟು ಬಂದ್ ಮಾಡಿಸಿದಾಗ ನಾನು ಆಕೆಯ ವ್ಯಕ್ತಿತ್ವದಲ್ಲಿ ಹೇಗೆ ಅಂಥ ಗಟ್ಟಿತನ ಬಂತು, ನಾಯಕನಾಗುವನಿಗೆ ಇಂಥ ಗಟ್ಟಿತನ ಎಷ್ಟು ಆವಶ್ಯಕ ಎಂದು ಯೋಚಿಸುತ್ತಾ ಕೂತುಬಿಡುತ್ತೇನೆ.

    ಪ್ರತಿಕ್ರಿಯೆ ದೀರ್ಘವಾಯ್ತು, ಅಪ್ರಸ್ತುತ ಅನ್ನಿಸಿದರೆ ಕಟ್ ಮಾಡಿಬಿಡಿ!

    -ಸುಪ್ರೀತ್

    Bottom line is most of the times, we are paper tigers being mute spectators to what happens around us ) – ರಾಧಿಕಾ

    ಮೊದಲಿಗೆ, ಸಂದೀಪರ ಮಾತಿಗೆ ಸಹಮತ. ನಂಗೆ ಅಮೃತ ಮತಿ ನೆನಪಾಯ್ತು. ಆದ್ರೆ, ಆ ಕಥೆಯ ಹಿಂದಿನ ಸೈಕಾಲಜಿಯೇ ಬೇರೆ ಅಲ್ವಾ?

    ಸುಪ್ರೀ,
    ನೀನು ಹೇಳಿದೆಯಲ್ಲ, ರೈಲುಬೋಗಿಯ ಎಕ್ಸಾಂಪಲ್ಲು, ನನ್ನದೂ ಅದೇ ಹಣೆಬರಹ. ಮತ್ತು ಮೊದಲಲ್ಲಿ ನೀ ಹೇಳಿದ ಹಾಗೆ “ಎಲ್ಲರೂ ಎಲ್ಲವನ್ನೂ ಯಾಕೆ ಹೇಳಲೇಬೇಕು?”ಅನ್ನುವ ಪ್ರಶ್ನೆ ನಂದೂ ಕೂಡ. ಆದ್ರೂ ಕೆಲವೊಂದ್ ಸಾರ್ತಿ ನಮ್ಮ ಅಸಹಾಯಕತೆ, ಸೀಮಿತತೆಗಳು ಒಳಗೊಳಗೆ ಪೀಡಿಸಲು ಶುರುವಿಡುತ್ತವೆ. ಈ ಘಟನೆ ಖುದ್ದು ಆ ಹೆಂಗಸಿಗೇ ನೆನಪಿದೆಯೋ ಇಲ್ಲವೋ? ಅಥವಾ ಇಂಥದನ್ನು ಅವಳೆಷ್ಟು ನುಂಗಿ ನೊಣೆದಿರುವಳೋ? ನಾನು ಮಾತ್ರ ಅದನ್ನು ನೆವವಾಗಿಟ್ಟುಕೊಂಡು ಪಾಠ ಕಲಿಯುತ್ತಿರುವೆ. ಎಲ್ಲವನ್ನೂ ಮಾಡಿಬಿಡಬೇಕೆನ್ನುವ, ಮಾಡುವೆನೆನ್ನುವ ಭ್ರಮೆ ನನಗಿಲ್ಲವಾದರೂ ಹಾಗೆ ನೋಡಿಕೊಂಡು ಸುಮ್ಮನುಳಿಯುವ ನಿರ್ಲಿಪ್ತತೆಯೂ ಇಲ್ಲದಿರುವುದೇ ಸದ್ಯದ ಸಮಸ್ಯೆ. ನನಗೆ ಗೊತ್ತು, ಮನಸ್ಸು ಇನ್ನೂ ಸಾಕಷ್ಟು ಪ್ರೌಢವಾಗದ ಕಾರಣ ಇಂಥದೆಲ್ಲ ಆಲೋಚನೆಗಳು ಹುಟ್ಟಿ ನಮ್ಮ ತಲೆ ಮೇಲೇ ಬೀಳುತ್ತಿದೆಯೇನೋ ಎಂಬ ಚಿಂತನೆಗೆ ನಮ್ಮನ್ನು ದೂಡುತ್ತವೆಯೆಂದು!

    ನೀನು ಶುರುವಲ್ಲಿ ಹಾಕಿದ ಪೀಠಿಕೆ ಸರಿಯಾಗಿದೆ. ಅದನ್ನು ನಾನು ಸ್ವಲ್ಪ ತಿರುಚಿ ಔಟ್ ಆಫ್ ದ ಸಬ್ಜೆಕ್ಟ್ ಮಾಡಬಹುದಾದರೆ, ‘ಮುಸ್ಲಿಮರೆಲ್ಲರೂ ಭಯೋತ್ಪಾದಕರಲ್ಲ, ಭಯೋತ್ಪಾದಕರಲ್ಲಿ ಬಹುತೇಕರು ಮುಸ್ಲಿಮರೇ’ ಎನ್ನುವ ಮಾತು ಹೇಳುವಾಗ ನಡೆಯುವ ಕೋಲಾಹಲವನ್ನು ಗಮನಿಸಬೇಕು. ಈ ಮಾತನ್ನು ಅದು ಯಾರೇ ಹೇಳಿದರೂ (ಒಬ್ಬ ಹಿಂದೂ ಹೇಳಿದರೆ ಆತ ‘ಕೋಮುವಾದಿ’ ಎಂದು ಗುರುತಿಸಲ್ಪಡುವನು, ಮುಸ್ಲಿಮನೆ ಹೇಳಿದರೆ ‘ಕಾಫಿರ’ನಾಗುವನು) ಪಾರ್ಥ ತಪ್ಪಿದ್ದಲ್ಲ.
    ಹಾಗೆಯೇ,
    ಹೆಂಗಸರ ಬಗ್ಗೆ ಯಾರೇ ಮಾತಾಡಲಿ, ಅವರನ್ನು ‘ಸ್ತ್ರೀವಾದಿ’ ಎಂದು ಕರೆದು ‘ಸ್ತ್ರೀವ್ಯಾಧಿ’ ಎಂದು ಕುಹಕವಾಡುವುದು; ಗಂಡಸರು ಮಾತಾಡಿದರೆ ‘ಮಹಿಳಾಪರ ಕಾಳಜಿ’ ಎಂದು ದ್ವಂದ್ವಾರ್ಥ ಹೊರಡಿಸುವುದು ಸಾಮಾನ್ಯ.
    ಆದರೆ, ಈ ಲೇಖನದಲ್ಲಿ ನಾನು ಹೆಂಗಸಿನ ಮೇಲೆ ನಡೆದ ಲೈಂಗಿಕ ದೌರ್ಜನ್ಯಕ್ಕಿಂತ ಹೆಚ್ಚಾಗಿ ಆಕೆಯನ್ನು ಒಂದು ವರ್ಗದ ಪ್ರತಿನಿಧಿಯಾಗಿ ತೆಗೆದುಕೊಂಡು ಅದರ ಹಿಂದಿನ ಕಷ್ಟ ಸುಖಗಳ ಬಗ್ಗೆ ಯೋಚಿಸಲು ಹೊರಟಿದ್ದೆ. ಅದಕ್ಕೇ, ಬಿಳಿ ಸೀರೆ/ಪಂಚೆಯ ಹುಡುಗ- ಹುಡುಗಿಯರು ಮತ್ತು ಬಸ್ಸಿನ ಹುಳ್ಳಗಿನ ಜನರು ನನಗೆ ಬೇರೆ ಬೇರೆ ಲೋಕದವರಾಗಿ ಕಂಡರು. ಜೊತೆಗೇ, ನನ್ನ ಜಗತ್ತು ನಾನು ಕಂಡಷ್ಟು ಮಾತ್ರವಾಗಿಬಿಟ್ಟಿತ್ತಲ್ಲ! ಎಂದು ಸೋಜಿಗವೂ ಆಯಿತು.
    ಹೌದಲ್ವಾ? ನಮ್ಮ ಜಗತ್ತು, ಅನುಭವ ಅದೆಷ್ಟು ಸೀಮಿತ!

    (ಕ್ಷಮೆಯಿರಲಿ. ಸುಪ್ರೀತ್ ಮಾತಿಗೆ ಸಿಕ್ಕುಬಿಟ್ಟರೆ ನಾನಂತೂ ಸದ ಔಟ್ ಆಫ್ ಟಾಪಿಕ್ ಹೊರಟುಬಿಡ್ತೀನಿ. ಇದ್ರಲ್ಲಿ ನನ್ ತಪ್ಪೇನೂ ಇಲ್ಲ!)

     

    Advertisements

    15 thoughts on “ಪೊರಕೆ ಎಲ್ಲಿದೆ!? – ಮತ್ತೊಂದು ಚರ್ಚೆ

    1. ‘ನೀವು ಸ್ತ್ರೀಪರ ದನಿಯನ್ನು ಅನುಮಾನ ಮತ್ತು ವ್ಯಂಗ್ಯದಿಂದ ನೋಡುತ್ತಿರುವಿರಿ ಎಂದು ನನಗನಿಸುತ್ತಿದೆ’ ಅನ್ನೋ ಆರೋಪ ವಿಕಾಸ್ ಮೇಲೆ ಹಾಕಿದ್ದು ಸರಿ ಅನ್ನಿಸಿಲ್ಲ.
      ಒಂದು ಮಾತು ನಾವು ಮನದಟ್ಟು ಮಾಡಿಕೊಳ್ಳಲೇ ಬೇಕು – ಸ್ತ್ರೀ ಸಂವೇದನೆಗಳು ಯಾವತ್ತಿದ್ರೂನೀವು ಸ್ತ್ರೀಯರಿಗೇ ಅರ್ಥ ಆಗ್ಬೇಕು .ನಾವು ಗಂಡಸರು ಎಷ್ಟು ಜನ್ಮ ಎತ್ತಿದರೂ ನಮಗೆ ಅದು ಅರ್ಥ ಆಗಲ್ಲ.
      ಹೆರಿಗೆ ನೋವಿನ ಬಗ್ಗೆ ನೀವು ನೂರು ಪುಟಗಳಷ್ಟು ಪ್ರಭಂದ ಬರೆದರೂ ನಾವು ಪುರುಷರು ಅದನ್ನು ಅರ್ಥ ಮಾಡಿಕೊಳ್ಳೋದು ಅಸಾಧ್ಯ ;ಅಷ್ಟೇ ಯಾಕೆ ಹೆರಿಗೆ ನೋವು ಏನೆಂದು ಕಾಲೇಜು ಹುಡುಗಿ ಅರ್ಥ ಮಾಡಿಕೊಳ್ಳಲು ಸಾಧ್ಯ ನಾ?
      We can only sympathise not empathise!
      ಋತುಚಕ್ರ ,ಋತುಭಂದಗಳನ್ನು ನಾವು ಕಷ್ಟ ಪಟ್ಟು ಅರ್ಥ ಮಾಡಿಕೊಳ್ಳಬಹುದಷ್ಟೆ ,ಅನುಭವಿಸೋದು ಸಾಧ್ಯ ಇಲ್ಲ.(ಗಂಡು ಗೈನೊಕಾಲಜಿಸ್ಟ್ ಆಗಿದ್ರೂ!).
      ಸ್ತ್ರೀ ಸಂವೇದನೆಗಳು ಚೆನ್ನಾಗಿ ಅರ್ಥ ಆಗುತ್ತೆ ಅಂತ ಯಾರಾದ್ರೂ ಗಂಡಸು ನಿಮ್ಮ ಹತ್ರ ಹೇಳಿದ್ರೆ ಅವರಿಂದ ಹುಷಾರಾಗಿರಿ -ನಿಮ್ಮನ್ನು ಯಾಮಾರಿಸ್ತಿರಬಹುದು ಅವರು!
      ಸ್ತ್ರೀ ಸಂವೇದನೆಗಳ ಬಗ್ಗೆ ಬರೆದು Phd ಪಡೆದವರು,ಅದರ ಬಗ್ಗೆ ಕಥೆ ,ಕಾದಂಬರಿ ಬರೆದವ್ರಿಗೂ ನಿಜವಾಗಿಯೂ ಅಂಥ ಕಾಳಜಿ ಇರೋದು ಸಂಶಯ.
      ನನ್ನ ಪ್ರಕಾರ ಅನ್ಯಾಯ ಯಾರಿಗೇ ನಡೆದರೂ ಅದು ಅನ್ಯಾಯ -ಅದನ್ನು ’ಸಾಧ್ಯವಾದಲ್ಲಿ’ ಪ್ರತಿಭಟಿಸಲೇ ಬೇಕು.ಇದಕ್ಕೆ ಜಾತಿ,ಮತ,ಲಿಂಗ ಭೇದ ಇರಲೇ ಕೂಡದು.
      ನನಗಂತೂ ಸ್ತ್ರೀ ಸಂವೇದನೆಗಳು ಅರ್ಥ ಆಗೋದೇ ಇಲ್ಲ! ನನ್ಗೆ ಅರ್ಥ ಆಗೋದು ಒಂದೇ ಭಾಷೆ ಅದು ಮಾನವೀಯತೆ! ಅದಕ್ಕೆ ಜಾತಿ,ಲಿಂಗಗಳ ಭೇದವಿಲ್ಲ.
      ಹೆಂಗಸರಿಗಾಗುವ ಅನ್ಯಾಯಗಳ ಬಗ್ಗೆ ದನಿ ಎತ್ತುವವರನ್ನು ಕಂಡ್ರೆ ನಾನು ಯಾವತ್ತೂ ನಗಲ್ಲ .ಆದ್ರೆ ’ಬರೀ ಹೆಂಗಸ’ರ ಪರವಷ್ಟೇ ಅವನು ದನಿ ಎತ್ತುತ್ತಾ ಇದ್ರೆ ಅನುಮಾನ ಪಡಬೇಕಷ್ಟೆ.
      ಬಸ್ಸಿನಲ್ಲಿ ಆ ಹೆಣ್ಣಿಗಾದ ಕಿರುಕಳದ ಬಗ್ಗೆ ನನಗೂ ಕಾಳಜಿ ಇದೆ .ಆದ್ರೆ ದುಡ್ಡು ಮಡಗಿ ಹೋಗ್ಲಾ ಅನ್ನೋದು ಅಸಹಾಯಕತೆ ಖಂಡಿತ ಅಲ್ಲ .ಅದು ನಿಮ್ಮ ’ಮುಗ್ಧತೆ’ ! ಆ ಹೆಂಗಸು ಅಷ್ಟೆಲ್ಲಾ ಕಿರುಕುಳ ಸಹಿಸಿಕೊಂಡು ಇಳಿದು ಹೋಗಿದ್ರೆ ಅದು ಇತಿಹಾಸದಲ್ಲಿ ’ಇನ್ನೊಂದು ಲೈಂಗಿಕ ಕಿರುಕುಳದ ಸಾಲಿಗೆ ಸೇರಿ ಹೋಗ್ತಾ ಇತ್ತು .ಆದ್ರೆ ಆ ಕುಡುಕ ಏನಾದ್ರೂ ಹಣ ನೀಡಿ ಹೋಗಿದ್ರೆ ಅದರ ಪರಿಣಾಮ ಏನಾಗ್ತಾ ಇತ್ತು??ನಾಳೆ ಇನ್ನೊಂದಿಷ್ಟು ಕುಡುಕರು ಜೋಬಲ್ಲಿ ಪುಡಿ ಕಾಸಿಟ್ಟು ಬರ್ತಾ ಇದ್ರು ಅದೇ ಬಸ್ಸಿಗೆ.
      ನೀವು ಸ್ತ್ರೀ ಪರ ಕಾಳಜಿ ವಹಿಸಿ .ನನ್ನದೇನೂ ಅಭ್ಯಂತರ ಇಲ್ಲ ಆದ್ರೆ ’ಬರೀ’ ಸ್ತ್ರೀ ಪರ ಕಾಳಜಿ ವಹಿಸಬೇಡಿ ಪ್ಲೀಸ್.

    2. ಸಂದೀಪ್,
      ನೀವು ನನ್ನ ‘ಬೇರೆ ಥರದ ಬರಹಗಳಿಗೆ’ ನಾನು ಬರೆದ ‘ಸಾವರ್ಕರ್’ (ಕಿರು ಹೊತ್ತಿಗೆ), ತಂತ್ರ ಸಾಧನೆ, ಹೇಡಿಯಲ್ಲ ಹಿಂದೂ ಪುಸ್ತಕಗಳನ್ನು ನೋಡಬಹುದು. ಈ ನನ್ನ ಬ್ಲಾಗ್ ಯಾವುದರ ಚರ್ಚೆಗೆ, ಯಾವ ಉದ್ದೇಶಕ್ಕೆ ಮುಡಿಪಾಗಿದೆಯೋ ಅದನ್ನೇ ನಾನಿಲ್ಲಿ ಮಾಡ್ತಿದೇನೆ. ನನ್ನನ್ನ ನೀವು ಯಾವ ಸಾಲಿಗೆ ಸೇರಿಸ್ತಿದೀರಿ ಅನ್ನುವ ಎಚ್ಚರ ಮತ್ತು ಎಂಥವರಿಂದ ನಾನು ದೂರವಿರಬೇಕನ್ನುವ ಎಚ್ಚರ ಎರಡೂ ನನಗಿದೆ. ನನಗೆ ಇವತ್ತಿಗೂ ಅಪ್ರತಿಮ ಸ್ತ್ರೀವಾದಿ ಆದರ್ಶಗಳೆನಿಸೋದು ಶಾರದಾ ಮಾತೆ (ಪರಮಹಂಸರ ಪತ್ನಿ), ಸೋದರಿ ನಿವೇದಿತ, ಅಕ್ಕ ಮಹಾದೇವಿ,ವಿವೇಕಾನಂದ, ಅರವಿಂದೋ, ಬಸವಣ್ಣ, ರಾಜಾರಾಮ ಮೋಹನ ರಾಯ್ ಇಂಥವರೇ. ಸ್ತ್ರೀಗೆ ಗೌರವ, ಆಕೆಯ ರೂಪಕ್ಕಿಂತ (ಕ್ಕಿಂತ ಏನು ಬಂತು? ಅದು ಅವರ ಪಾಲಿಗೆ ಪೂರ್ಣ ಗೌಣ) ಗುಣಕ್ಕೆ ಮನ್ನಣೆ ಕೊಟ್ಟವರು, ಆಕೆಯ ಸರ್ವಾಂಗೀಣ ಏಳ್ಗೆಗೆ ದುಡಿದವರು, ಮಾತನಾಡಿದವರು ಅವರು.
      ಈ ಹಿನ್ನೆಲೆಯಲ್ಲಿಯೇ ನನ್ನ ಮಾತು ಕಥೆಗಳೆಲ್ಲವೂ. ‘ಹಿಂದಿನವರು ಹೇಳಿದ್ದೆಲ್ಲಾ ನೂರಕ್ಕೆ ನೂರು ಸರಿಯೆಂದು ಒಪ್ಪುವ ಅಗತ್ಯವಿಲಲ್ಲ’ ಎಂದು ಸ್ವಾಮೀಜಿ ಹೆಳಿದ್ದನ್ನೇ ಕೆಲವೊಮ್ಮೆ ನಾನೂ ಪಾಲಿಸುತ್ತ, ಸರಿ ಅನಿಸದ್ದರ ಬಗ್ಗೆ ಪ್ರಶ್ನೆ ಎತ್ತುತ್ತೇನೆ. ನನಗೆ ಸಮಾಧಾನವೆನಿಸುವ ಉತ್ತರ ದೊರೆತಾಗ ಗರ್ವವಿಲ್ಲದೆ ಒಪ್ಪಿಕೊಳ್ತೇನೆ.
      ಮತ್ತೊಂದು ಮಾತು,
      ಯಾವಾಗ ಪ್ರತಿಕ್ರಿಯೆ ಲೇಖನದ ವ್ಯಾಪ್ತಿ ಮೀರಿ, ವೈಯಕ್ತಿಕ ಪ್ರಶ್ನೆಗಳನ್ನು ಎಡ ತಾಕುತ್ತದೆಯೋ ಆಗ ನಾನು ಕೂಡ ಹಾಗೆಯೇ ಪ್ರತಿಕ್ರಿಯಿಸುವುದು ಅನಿವಾರ್ಯ. ವೈಯಕ್ತಿಕ ಪ್ರಶ್ನೆಗಳೆತ್ತಿ (ಪ್ರತ್ಯಕ್ಷ- ಪರೋಕ್ಷ) ಹೇಳಿಕೆ ನೀಡುವ ಮುನ್ನ, ಅದನ್ನು ಆರಂಭಿಸುವವರು, ಆಯಾ ವ್ಯಕ್ತಿಯ ಬಗ್ಗೆ ಸ್ವಲ್ಪವಾದರೂ ತಿಳಿದಿರುವುದು ಒಳ್ಳೆಯದಲ್ಲವೆ?
      ನನಗೆ, ನಾನಲ್ಲದ ಬೇರೇನೋ ಆಗಲು ಇಷ್ಟವಿಲ್ಲವಾದ್ದರಿಂದ, ನನ್ನ ಬಗ್ಗೆ ತಪ್ಪು ತಿಳುವಳಿಕೆಗಳು ವ್ಯಕ್ತವಾದಾಗಲೆಲ್ಲ ತಿದ್ದಲು ಯತ್ನಿಸ್ತೇನೆ.

      ‘ಸ್ತ್ರೀ’ಯಲ್ಲದವರ ಪರ, ಅಂದರೆ ಗಂಡಸರ ಪರ ಕಾಳಜಿ ವಹಿಸಿ ನಾನು ಗರ್ವ (ಅದೀಗ ಮೂಲ ರೂಪದಲ್ಲಿ ಬರ್ತಿಲ್ಲ) ಪತ್ರಿಕೆಯಲ್ಲಿ ಬರೆಯುತ್ತಿದ್ದ ‘ಬಿಳಿ ನೆರಳು’ ಅಂಕಣವನ್ನು ನೀವು ನೋದಬಹುದು. ಅದರ ಪ್ರತಿಗಳು ನನಗೇನಾದರೂ ಸಿಕ್ಕರೆ ಸ್ಕ್ಯಾನ್ ಮಾಡಿ ನಿಮಗೆ ಮೇಲ್ ಮಾಡುವೆ.

      ಇಷ್ಟಕ್ಕೂ ವಿಕಾಸ್ ಮೇಲೆ ನನನ್ದು ಆರೋಪವಲ್ಲ. ಅವರಲ್ಲಿ ಆ ಅನುಮಾನ ಅವರ ಬರಹದ ಮೂಲಕ ವ್ಯಕ್ತವಾಗಿದ್ದರಿಂದಲೆ ಹಾಗೆ ಬರೆದೆ. ಇಲ್ಲಿ ಯಾರನ್ನೂ ದೂಷಿಸುವ ಇರಾದೆ ನನ್ನದಲ್ಲ.
      ವಿಕಾಸ್ ಗೆ ಬೇಸರವಾಗಿರಲಿಕ್ಕಿಲ್ಲ ಎಂದೇ ತಿಳಿಯುವೆ.

      – ಚೇತನಾ

    3. ಚೇತನಾ ,
      ದಯವಿಟ್ಟು ಕ್ಷಮಿಸಿ ನಾನು ಬ್ಲಾಗ್ ಲೋಕಕ್ಕೆ ಹೊಸಬನಾದ್ದರಿಂದ ನಿಮ್ಮ ಬಗ್ಗೆ ಜಾಸ್ತಿ ಗೊತ್ತಿರಲಿಲ್ಲ.ನೀವು ಎಲ್ಲಾ ಬಗೆಯ ಲೇಖನಗಳನ್ನು ಬರೀತೀರಾ ಅಂತ ತಿಳಿದು ತುಂಬಾ ಸಂತೋಷವಾಯ್ತು.
      ಹೀಗೆ ಬರೀತಾ ಇರಿ.
      ಶುಭವಾಗಲಿ 🙂
      -ಸಂದೀಪ್ ಕಾಮತ್

    4. ಚೇತನಾ,

      ಇಲ್ಲಿ ಚೇತನಾ ಯಾರು, ಏನು ಬರೆದಿದ್ದಾರೆ/ಬರೆದಿಲ್ಲ/ಬರೆಯಬಲ್ಲರು ಎಂಬಂಥ ವಿಷಯಗಳು ಯಾಕೆ ಪದೇ ಪದೆ ಬರುತ್ತವೊ ಅರ್ಥವಾಗುತ್ತಿಲ್ಲ. ಯಾವುದೇ ಚರ್ಚೆ ಅದರ ವಿಷಯಕ್ಕೇ ಸೀಮಿತವಾಗದೆ ವೈಯಕ್ತಿಕ ನೆಲೆಯತ್ತ ಹೊರಳಿಬಿಟ್ಟರೆ ಅಲ್ಲಿಗದು ಪಡ್ಚ! ಇರಲಿ.
      ಮಹಿಳೆಯರಿಗೆ ಸಂಬಂಧಿಸಿದ ಯಾವುದೇ ವಿಷಯ ಚರ್ಚೆಗೆ ಬಂದಾಗ `ಅಂಥದ್ಯಾವ ಸಮಸ್ಯೆಗಳೂ ಇಲ್ಲ. ಎಲ್ಲವೂ ಕಲ್ಪಿತ’ ಎಂಬ ಪ್ರತಿಕ್ರಿಯೆಯನ್ನು ಹಲವರಿಂದ ಕೇಳಿದ್ದೇನೆ. ನಮ್ಮ ಕಣ್ಣಿಗೆ ಸಮಸ್ಯೆ ಬಿದ್ದಿಲ್ಲ ಅಥವಾ ನಮ್ಮನುಭವಕ್ಕೆ ಬಂದಿಲ್ಲ ಎಂದ ಮಾತ್ರಕ್ಕೆ ಅಲ್ಲಿ ಸಮಸ್ಯೆಯಿಲ್ಲ ಎನ್ನಬಹುದೇ? ನಮ್ಮ ಹಿಂದಿನ ತಲೆಮಾರಿನ ಬಹಳಷ್ಟು ಜನ ವಾರಾನ್ನ ಮಾಡಿಕೊಂಡು ವ್ಯಾಸಂಗ ಮಾಡಿದ್ದರಂತೆ. ನಾವದನ್ನು ನೋಡಿಲ್ಲ, ನಮಗೀಗ ಆ ಸ್ಥಿತಿ ಇಲ್ಲ/ನಮ್ಮನುಭವಕ್ಕೆ ಬಂದಿಲ್ಲ ಎಂದಾಕ್ಷಣ ಅವರು ಕಷ್ಟಪಟ್ಟದ್ದು ಸುಳ್ಳಾಗಿ ಹೋಯಿತೆ? ಒಂದೊಮ್ಮೆ ಅವು ನಮ್ಮ ಅನುಭವದ ಪರಿಧಿಯನ್ನು ಮೀರಿದ ಸಮಸ್ಯೆಗಳಾಗಿದ್ದರೆ, ಅವುಗಳ ಬಗ್ಗೆ ಕೊಂಚ ತೆರೆದ ಮನಸ್ಸು ಹೊಂದಲು ಏನು ಅಡ್ಡಿ?
      ಮಹಿಳಾಪರ ಸಂವೇದನೆಗಳಿಗೆ ಯಾವೆಲ್ಲ ಪ್ರತಿಕ್ರಿಯೆಗಳು ಬರುತ್ತವೆ ಎಂಬುದನ್ನು ಈಗಾಗಲೇ ಚೇತನಾ ಹೇಳಿದ್ದಾರೆ. ಇಂಥ ಕುಹಕಗಳನ್ನು ನಾನೂ ಸಾಕಷ್ಟು ಬಾರಿ ಕೇಳಿದ್ದೇನೆ. ಇಷ್ಟೇ ಅಲ್ಲ, ಮಹಿಳೆಯರ ಸಮಸ್ಯೆಗಳು ನಮಗೆ ಅರ್ಥವಾಗುವುದಿಲ್ಲ ಎಂಬ ನಿರ್ಲಿಪ್ತತೆ ಬಗ್ಗೆಯೂ ಬೇಸರವಾಗುತ್ತದೆ. ತೀರಾ ಖಾಸಗಿಯಾದ ನೋವು-ನಲಿವುಗಳು ಅರ್ಥವಾಗದಿದ್ದರೆ ಬೇಡ, ಆದರೆ ನಮ್ಮದೇ ಸಮಾಜದಲ್ಲಿನ ಸಹಜೀವಿಗಳ ಸಾಮಾಜಿಕ ಕಷ್ಟ-ಸುಖಗಳೂ ಗ್ರಹಿಕೆಗೆ ಬರುವುದಿಲ್ಲ ಎಂದರೆ ಹೇಗೆ? `ಸ್ತ್ರೀವಾದ’ ಎಂದರೆ ಕೆಲವರಿಗಷ್ಟೇ ಸೀಮಿತವಾದ, ಹೆಚ್ಚಿನವರಿಗೆ ಅರ್ಥವಾಗದ, ಉಳಿದವರಿಗೆ ಸಂಬಂಧಪಡದ ವಿಷಯವಲ್ಲ. ನಮ್ಮೊಡನೆ ಬದುಕುವವರ ಬಗ್ಗೆ ಗೌರವ, ತಾಳ್ಮೆ, ಕಾಳಜಿ ಹೊಂದುವ ವಿಷಯವಷ್ಟೆ.
      -ಶ್ರೀಪ್ರಿಯೆ

    5. ಪ್ರಿಯೆ,
      ನಿಮ್ಮ ಮಾತೇ ನನ್ನದೂ ಆಗಿದೆ. ಯಾವಯಾವ ಸಂದರ್ಬದಲ್ಲಿ ಹೆಣ್ಣು ಮಕ್ಕಳ ಬಗ್ಗೆ ಬರೆಯಲಾಗುವುದೋ ಆಗೆಲ್ಲ ಇಂಥ ‘ಹೊರಳುವಿಕೆ’ಗಳು, ವೈಯಕ್ತಿಕ ‘ತಾಗುವಿಕೆ’ಗಳು ನಡೆದಿವೆ. ಅದೇ ನನಗೆ ಬೇಸರ. ಹೀಗಾದಾಗಲೆಲ್ಲ ಅಸಲು ವಿಷಯ ಕಳೆದುಹೋಗಿಬಿಡುತ್ತದೆ.

      ಸಂದೀಪ್,
      ನಿಮಗೆ ಬೇಸರವಾಗಿಲ್ಲವೆಂದುಕೊಳ್ಳುವೆ. ನಾನು ‘ಬರೀ ಹೆಂಗಸರ ಕಾರ್ಪಣ್ಯವನ್ನೇ’ ಬರೆಯುವೆನೆಂಬ ನಿಮ್ಮ ಅಪಾದನೆಗೆ ಪ್ರತಿಯಾಗಿ ನನ್ನ ಇತರ ಬರಹಗಳ ಬಗ್ಗೆ ಹೇಳಿಕೊಂಡೆನಷ್ಟೆ.

      ಇನ್ನು ನಾನು ಈ ಸಂಗತಿಯನ್ನು ಚರ್ಚಿಸುವುದಿಲ್ಲ.

    6. ಶ್ರೀಪ್ರಿಯೆ,
      ನಾನು ಯಾರದೇ ವೈಯುಕ್ತಿಕ ಬದುಕಿನ ಬಗ್ಗೆ ಮಾತಾಡಿಲ್ಲ.ನನಗೇ ಅರಿವಿಲ್ಲದೆ ಆ ಬಗ್ಗೆ ಎಲ್ಲಾದರೂ ಪ್ರಸ್ತಾವವಾಗಿದ್ದಲ್ಲಿ ದಯವಿಟ್ಟು ಕ್ಷಮಿಸಿ.
      ನನ್ನ ಉದ್ದೇಶ ಒಂದೇ ,ಅದೇನಂದರೆ ಸಂವೇದನೆಗಳು ಇರಬೇಕು .ಅದು ಮಹಿಳಾಪರ, ಮಕ್ಕಳ ಪರ ,ವಿಕಲ ಚೇತನರ ಪರ ಹುಡುಗಿಯರ ಪರ ,ಅಂತ ವಿಂಗಡಿಸೋದು ಬೇಡ . ಅನ್ಯಾಯ ಯಾರಿಗೇ ಆದರೂ ಅದು ಅನ್ಯಾಯ .
      ನಾನು ಹುಟ್ಟಿ ಬೆಳೆದದ್ದು ಮಂಗಳೂರು(ನಿಮ್ಮ ಪಡ್ಚ ಶಬ್ದ ಕೇಳಿ ನೀವೂ ಅಲ್ಲಿಯವರೇ ಅನ್ನೋ ಅನುಮಾನ ನಂಗೆ) ,ಅಲ್ಲಿ ನನಗೆ ಗಮನಾರ್ಹ ಸ್ತ್ರೀ ಪರ ಸಮಸ್ಯೆಗಳು ಯಾವತ್ತೂ ಕಂಡು ಬಂದಿಲ್ಲ. ಮಂಗಳೂರಿನಲ್ಲೇನಾದ್ರೂ ಆ ರೀತಿ ಕುಡುಕ ಮೈ ಕೈ ಮುಟ್ಟಿ ಮಾತಾಡಿದ್ರೆ ಅವನ ಗ್ರಹಚಾರ ಬಿಡಿಸ್ತಿದ್ರು ಜನ.ನಾನು ಹುಟ್ಟಿ ಬೆಳೆದ ಪರಿಸರದಲ್ಲಿ ಅನ್ಯಾಯ ಆಗ್ತಾ ಇತ್ತು ಆದ್ರೆ ಅದಕ್ಕೆ ಲಿಂಗ ಭೇದ ಇರಲಿಲ್ಲ .ಹಾಗಾಗಿ ನನಗೆ ಸ್ತ್ರೀ ಪರ – ಪುರುಷ ಪರ ಸಂವೇದನೆಗಳು ಅಂತ ಪ್ರತ್ಯೇಕತೆಯ ಅಗತ್ಯ ಕಂಡು ಬರಲಿಲ್ಲ.ಮಂಗಳೂರಿನಲ್ಲಿ ಸ್ತ್ರೀಯರಿಗಿದ್ದ ಸ್ವಾತಂತ್ರ್ಯ ಬಿಹಾರದ ಸ್ತ್ರೀಯರಿಗೂ ದೊರೆತಿದೆಯೋ ನನಗೆ ಗೊತ್ತಿಲ್ಲ.ಹಾಗಗಿ ಸ್ತ್ರೀ ಪರ ಕಾಳಜಿ ನನ್ನಂಥವರಿಗೆ ಅರ್ಥವಾಗಿರದೇ ಇರಬಹುದು.
      ಹಾಗಾಗಿ ನಮ್ಮಂತವರನ್ನು ಪರಿಗಣಿಸದೇ ,ಸ್ತ್ರೀಯರ ಪರ ದನಿ ಎತ್ತುವವರೊಡನೆ ನಿಮ್ಮ ಕೆಲಸವನ್ನು ಮುಂದುವರೆಸಲಿ ಅನ್ನೋದೆ ನನ್ನ ಆಶಯ.
      ನಾನು ಬರೆದಿರೋದು Responsible comment ಹೌದೋ ಅಲ್ವೋ ಗೊತ್ತಿಲ್ಲ ನಂಗೆ.
      ಇದೇ ರೀತಿಯ ಕಮೆಂಟುಗಳಿಂದ ಬೇಸರಗೊಂಡು ನರೇಂದ್ರ ಪೈ ತಮ್ಮ ಬ್ಲಾಗನ್ನೇ ಮುಚ್ಚಿ ಬಿಟ್ರು ಅಂತ ಗೊತ್ತಾಯ್ತು.
      ಹಾಗಾಗ್ಬಾರ್ದು ಅನ್ನೋದೆ ನನ್ನ ಉದ್ದೇಶ.
      ಕೇವಲ ಚರ್ಚೆಗೋಸ್ಕರ ಚರ್ಚೆ ಅಂತ ಆಗ್ಬಾರ್ದು.ನಾವು ಸಾಮಾಜಿಕ ಕಳಕಳಿಯ ಬಗ್ಗೆ ಪುಟ ಗಟ್ಟಲೆ ಬರೆದು ಚರ್ಚೆ ಮಾಡಿದ್ರೆ ಏನೂ ಉಪಯೋಗವಿಲ್ಲ.ಅದರ ಬದಲು ನಮ್ಮ ಕಾಳಜಿಯನ್ನು ಕಾರ್ಯರೂಪದಲ್ಲಿ ತೋರಿಸಿದ್ರೆ ಅದರಿಂದ ನಾಲ್ಕು ಜನರಿಗೆ ಉಪಯೊಗವಾಗುತ್ತೆ.ಆದ್ರೆ ಕಾರ್ಯರೂಪದಲ್ಲಿ ತೋರಿಸೋ ಸ್ಥಿತಿಯಲ್ಲಿ ಸಧ್ಯಕ್ಕೆ ನಾನಿಲ್ಲ.ನನ್ನ ಬ್ಲಾಗನ್ನು ಮೆಚ್ಚಿ ವೀಣಾ ಅನ್ನೋರು ಪ್ರತಿಕ್ರಿಯಿಸಿದ್ರು .ನಾನು ಅವರ ಬ್ಲಾಗ್ ನೋಡಿದೆ ಅದರಲ್ಲಿ ಬರೀ ಕಾರ್ಯರೂಪಕ್ಕೆ ತಂದಿರೋ ಕೆಲಸಗಳೇ ಇವೆ(http://jointhehands.blogspot.com/) .ನನ್ನ ಹಾಗೆ ಅವರು ಬರೀ ಬೊಗಳೆ ಬರೆಯೋದರಲ್ಲೆ ಸಮಯ ಕಳೆದಿಲ್ಲ.
      once again ಇಂಥ ಕೆಲಸಗಳನ್ನು ನೀವೂ ಮಾಡಿರಬಹುದು ಚೇತನಾ ,ನಿಮ್ಮ ಬಗ್ಗೆ ನನಗೆ ಏನೂ ಗೊತ್ತಿಲ್ಲವಾದ್ದರಿಂದ ಅದರ ಬಗ್ಗೆ ಬರೆಯಲಾರೆ.

      ಪೊರಕೆ ನಮ್ಮಲ್ಲೇ ಇದೆ – ಕಸ ಗುಡಿಸುವವರು ಬೇಕಷ್ಟೆ.

    7. ಸಂದೀಪ್,
      ಮನಸ್ಸು ಚಿಕ್ಕದಾಗಿಸುಕೊಳ್ಳುವಂಥದೇನೂ ನಡೆದಿಲ್ಲ. ಮತ್ತೆ ಮತ್ತೆ sorry ಕೇಳುವುದು ಬೇಡ. ಹೀಗೆ ಭಿನ್ನಾಭಿಪ್ರಾಯಗಳಿರುವಾಗಲೇ ಚರ್ಚೆ ಸಾಧ್ಯವಾಗುವುದಲ್ಲವೇ? ದಯವಿಟ್ಟು ಮತ್ತೊಮ್ಮೆ ಹೀಗೆ ಬೇಸರದಿಂದ ಕಮೆಂಟಿಸಬೇಡಿ.
      ಹೌದು. ಕೇವಲ ಬರಹದ ಬಾಯಿಬಡುಕತನದಿಂದ ನಾನು ಕೂಡ ದೂರವೇ. ನಮ್ಮ ‘ರಾಷ್ಟ್ರ ಶಕ್ತಿ ಕೇಂದ್ರ’ ( http://www.yuvashakti.wordpress.com ಸಂಪರ್ಕಿಸಿ)ದ ಒಳಗಿದ್ದುಕೊಂಡು ನನ್ನಮಟ್ಟಿನ ಕೆಲಸ ಮಾಡ್ತಿದೇನೆ. ಇಚ್ಚಿಸಿದಲ್ಲಿ ನೀವೂ, ನಿಮ್ಮಂತಹ ಯುವಕರೂ ಜೊತೆಯಾಗಬಹುದು.

      ( ನೀವೇನ್ ಬೇಕಿದ್ರೂ ಕಮೆಂಟ್ ಮಾಡಿ. ನಾನಂತೂ ಬ್ಲಾಗ್ ಮುಚ್ಚೋದಿಲ್ಲಪ್ಪ!)

    8. Sandeep avare,

      Thanks for writing good lines about Jointhehands team, its not just the individual but a group
      of people contributing our bit to the society. I am one of the contributors of the blog too.

      Well, about the ‘stree para vaada’ which Chetana and other ladies are talking, it may be true in
      lot many places and she was infact trying to emphathise the case instead of sympathising is what I presume and as she herself mentioned somewhere she writes about females and their issues in Bhaamini shatpadhi on avadhi blog too.

      ondu heNNaagi avaru bahushaha haNNina samvedhaneyannu chennagi grahisaballaru
      annabahudu. avaru express maaduva reethi(pada punja) adakke emotional touch koduttade which adds to the depth.

      And Radhika heLida haage, bari paper tigers aadare enu upayogavilla, enaadru maadbeku annodu.
      I am not sure if people know about blacknoise project(http://blog.blanknoise.org/) which is against eye teasing and I really
      appreciate the grit in the team abolishing this one.

      ondantu sathya, hennige tanna astitvada bagge hemme irabeku adanna tanna strength aagiTTu koLLuva taaLme irabeku. adannu bittu gaNdasina bagge sampoorna dwesha beLasikoLLuvudaadare namma saamajika abivruddige kundallave?

      nanna eraDu paise.
      –Veena

      ps- Baraha fonts illa, so english nalli type maadideeni..

    9. ಚೇತನಾ,
      ನಿಮ್ಮ ಬರಹ ತುಂಬಾ ಚೆನ್ನಾಗಿದೆ.

      ಸ್ತ್ರೀಯರಿಗೆ ಮಾತ್ರ ಅನ್ವಯವಾಗುವ ಸಮಸ್ಯೆಗಳೆಂದು ಪರಿಗಣಿತವಾಗುವ ಸಾಮಾಜಿಕ ಪಿಡುಗುಗಳಲ್ಲಿ ಇದೂ ಒಂದು. ಇದನ್ನು ’eve-teasing’ ಎಂದು ಕರೆಯುವುದು ತಪ್ಪು ಎಂದು ನನ್ನ ಭಾವನೆ, ಇದನ್ನು ’sexual assault’ ಎಂದು ಕರೆಯಬೇಕು. ಇದು ಗಂಭೀರವಾಗಿ ಪರಿಗಣಿಸಬೇಕಾದ ಅಪರಾಧ.

      ಇಂಥ ಪಿಡುಗುಗಳನ್ನು ನಿವಾರಿಸಲು ಸುಲಭವಾದ ಮಾರ್ಗವಿಲ್ಲ. ಆ ದಿನ ನೀವು ನಿಮ್ಮ ದನಿಯೆತ್ತಿದ್ದರೂ ಆ ಗಂಡಸು ಮುಂದೆ ಇದೇ ಅಪರಾಧವನ್ನು ಮತ್ತೆ ಮಾಡದೇ ಇರುತ್ತಿರಲಿಲ್ಲ. ಹಾಗೇ, ಆ ಹೆಣ್ಣುಮಗಳು ದುಡ್ಡು ಕೇಳುವ ಮೂಲಕ ತನಗಾದ ದೌರ್ಜನ್ಯದ ವಿರುದ್ಧ ತನ್ನದೇ ಆದ ಒಂದು ಸಣ್ಣ ದನಿಯೆತ್ತಿದಳು. ಇದೂ ಕೂಡ ಕೇವಲ ತಾತ್ಕಾಲಿಕ reaction, ಇಂಥ ಅಪರಾಧದ ನಿರ್ಮೂಲನೆಗೆ ಸಹಾಯಕವಾಗುವ ಪರಿಹಾರ ಅಲ್ಲ.

      ಹಾಗಾದರೆ ಪರಿಹಾರ ಹೇಗೆ??? ಪರಿಹಾರ ಅನೇಕ ಸ್ತರಗಳಲ್ಲಿ ಆಗಬೇಕಾಗಿದೆ.
      ಒಂದು, ಇದನ್ನು ಗಂಭೀರವಾದ ಅಪರಾಧ ಎಂದು ಪರಿಗಣಿಸಿ, ಕಾನೂನು ರೀತ್ಯಾ ಅಪರಾಧಿಗಳಿಗೆ ಸ್ಥಳದಲ್ಲೇ ಅರೆಸ್ಟ್ ಮಾಡಬೇಕು, ಅದೇ ದಿನ ಶಿಕ್ಷೆ ವಿಧಿಸಬೇಕು. ಈ ಸಮಸ್ಯೆಗೆಂದೇ ಪೋಲೀಸರ ಒಂದು squad ಮಾಡಬೇಕು. ಬಸ್ಸುಗಳಲ್ಲಿ ಕನಿಷ್ಠ ಇಬ್ಬರು ಪೋಲೀಸು ಸಿಬ್ಬಂದಿ (ಇವರೊಲ್ಲಬ್ಬರು ಮಹಿಳೆ) ಇರಬೇಕು. ಪೋಲೀಸು ಇಲ್ಲದಿರುವ ಬಸ್ಸುಗಳಲ್ಲಿ video camera ಇರಬೇಕು, cameraದಲ್ಲಿ recordಆದ ವಿವರಗಳನ್ನು ಆಗಾಗ ನೋಡುವುದಕ್ಕೆ (ಪ್ರತಿ ಗಂಟೆಗೂ) ಸೌಲಭ್ಯ ಕಲ್ಪಿಸಬೇಕು. ಇದರಿಂದ ಅಪರಾಧಿಗಳ ಚಿತ್ರಗಳು ಲಭ್ಯವಾಗುವುದರಿಂದ ಅವರು ತಪ್ಪಿಸಿಕೊಳ್ಳಲು ಕಷ್ಟವಾಗುತ್ತದೆ. ಹಾಗೇ, plainclothesನಲ್ಲಿರುವ ಮಹಿಳಾ ಪೋಲೀಸರು ಆಗಾಗ ಬಸ್ಸಿನಲ್ಲಿ ಪ್ರಯಾಣ ಮಾಡಬೇಕು, ಅವರ ಮೇಲೆ ಕೈ ಮಾಡುವ ಗಂಡಸರನ್ನು ತಕ್ಷಣ ಸೆರೆಹಿಡಿಯಬೇಕು.

      ಎರಡು, ಬಸ್ಸಿನಲ್ಲಿ ಓಡಾಡುವ/ಓಡಾಡದಿರುವ ಗಂಡಸರು ಮತ್ತು ಹೆಂಗಸರಿಗೆ ಈ ಪಿಡುಗಿನ ಬಗ್ಗೆ, ಇದರ ವಿರುದ್ಧ ಇರುವ ಕಾನೂನಿನ ಬಗ್ಗೆ ಸತತವಾಗಿ ಮಾಹಿತಿ ಕೊಡುತ್ತಿರಬೇಕು – ಟಿವಿ, ನ್ಯೂಸ್ ಪೇಪರ್, ಶಾಲಾಕಾಲೇಜುಗಳಲ್ಲಿ ವಿಡಿಯೋ ಹಾಗೂ lectureಗಳ ಮೂಲಕ.

      ಮೂರು, ರಾಧಿಕಅವರು ಮಾಡುವಂತೆ ಚಿಕ್ಕ ಮಕ್ಕಳಿಗೆ, ಗಂಡು ಹಾಗು ಹೆಣ್ಣುಮಕ್ಕಳಿಬ್ಬರಿಗೂ, ಬೇರೆಯವರು ತಮ್ಮನ್ನು ಮುಟ್ಟುವುದರ ಬಗ್ಗೆ ಹಾಗು ಅವರು ಬೇರೆಯವರನ್ನು ಮುಟ್ಟುವುದರ ಬಗ್ಗೆ ತಿಳುವಳಿಕೆ ಹೇಳಿಕೊಡಬೇಕು. ಇದನ್ನು ಮನೆಯಲ್ಲಿ ತಂದೆ-ತಾಯಂದಿರು, ಶಾಲೆಯಲ್ಲಿ ಟೀಚರ್ ಗಳೂ, ಕಾಲೇಜಿನಲ್ಲಿ ಕೂಡ ಮತ್ತೆ ಮತ್ತೆ, ಅಂದರೆ, ಎಲ್ಲಾ ವಯಸ್ಸಿನ ಮಕ್ಕಳಿಗೂ ಹೇಳಿಕೊಡಬೇಕು. ಬಸ್ಸಿನಲ್ಲಿ ಈ ಸಮಸ್ಯೆ ಬಂದಾಗ, ಇದು ತಮಗೇ ಆಗಲಿ, ಬೇರೆಯವರಿಗೇ ಆಗಲಿ, ಇದರ ವಿರುದ್ಢ ತಕ್ಷಣ ದನಿಯೆತ್ತುವುದು ಹೇಗೆ, ಸ್ಪಷ್ಟವಾಗಿ ಏನೆಂದು ಹೇಳಬೇಕು ಎಂದು ತಿಳಿಸಿಕೊಡಬೇಕು.

      ನಾಲ್ಕು, ಸಿನಿಮಾ, ಟಿವಿ, ಕಥೆ, ಕಾದಂಬರಿಗಳಲ್ಲಿ ಈ ರೀತಿಯ ಅಪರಾಧಿಗಳ ಪಾತ್ರಗಳನ್ನು ಸೃಷ್ಟಿಸಿ, ಅವರು ಮಾಡುವ ಕೃತ್ಯಗಳು ಎಷ್ಟು ಹೇಯಕರ ಎಂದು ತೋರಿಸಬೇಕು. ಹಾಗೇ ಇದರ ವಿರುದ್ಧ ದನಿಯೆತ್ತುವ ಪಾತ್ರಗಳ ಬಗ್ಗೆ ಸದಭಿಪ್ರಾಯ ಬರುವಂತೆ ಚಿತ್ರಿಸಬೇಕು. ಈ ಪಿಡುಗಿನ ಬಗ್ಗೆ ಬರೆಯುವ, ಹೋರಾಡುವ ಜನರ ಬಗ್ಗೆ ವರದಿಗಳು, documentaries ಹೊರಬರಬೇಕು.

      ಐದು, ಈ ಅಪರಾಧಗಳನ್ನು ಮಾಡುವ ಗಂಡಸರ ಸಾಮಾಜಿಕ, ಆರ್ಥಿಕ, ಮಾನಸಿಕ ಹಿನ್ನೆಲೆಗಳ ಬಗ್ಗೆ ಅಧ್ಯಯನ ಮಾಡಬೇಕು. ಈ ಅಧ್ಯಯನಗಳಿಂದ ಅವರು ಈ ರೀತಿ ನಡೆದುಕೊಳ್ಳುವುದಕ್ಕೆ ಕಾರಣಗಳನ್ನು ಗುರುತಿಸಿ, ಆ ಕಾರಣಗಳಿಗೆ ತಕ್ಕಂತೆ ಪರಿಹಾರಗಳನ್ನು ಗುರುತಿಸಬೇಕು.

      ಸಾಮಾಜಿಕ ಪಿಡುಗುಗಳ ಪರಿಹಾರಕ್ಕೆ ಕಾನೂನು ಹಾಗು ಸಾರ್ವಜನಿಕರ co-operation ಬೇಕು. ಇದಕ್ಕಾಗಿ ಸರ್ಕಾರದಲ್ಲಿರುವ ಗಂಡಸರೂ ಹೆಂಗಸರೂ ಹಾಗೂ ಗಂಡು ಮತ್ತು ಹೆಣ್ಣು ಪ್ರಜೆಗಳೂ ಶ್ರಮಿಸಬೇಕು.

      ಕಾನೂನುಗಳನ್ನು ಪೋಲೀಸರನ್ನು ಸಬಲಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಲು ಸಂಘಟಿತ ಪ್ರಯತ್ನಗಳು ಬೇಕು. ಸಾರ್ವಜನಿಕರಲ್ಲಿ awareness ಮೂಡಿಸಲು ಸಮೂಹ ಮಾಧ್ಯಮಗಳು, ಸಾಮಾನ್ಯ ಜನರೂ ಪ್ರಯತ್ನಮಾಡಬೇಕು.

      ಎಲ್ಲರಿಗೂ ಎಲ್ಲ ಸ್ತರಗಳಲ್ಲೂ ಕೆಲಸ ಮಾಡಲು ಸಾಧ್ಯವಿಲ್ಲ. ಬರಹಗಾರ್ತಿಯಾದ ನೀವು ಈ ದೌರ್ಜನ್ಯದ ಬಗ್ಗೆ ಬರೆದಿದ್ದೀರ. ತಾಯಿಯಾಗಿ ರಾಧಿಕ ತಮ್ಮ ಮಗಳಿಗೆ ತಿಳುವಳಿಕೆ ನೀಡುತ್ತಿದ್ದಾರೆ. ಕಾನೂನಿನಲ್ಲಿ ತರಬೇತಿ ಇರುವವರು ಈ ಪಿಡುಗಿಗೆ ಸಂಬಂಧಿಸಿದಂತೆ ಇರುವ, ಜಾರಿಗೊಳಿಸಬೇಕಾದ ಕಾನೂನುಗಳ ಬಗ್ಗೆ ಚರ್ಚಿಸಬೇಕು. ಪೋಲೀಸು ತರಬೇತಿ ಇರುವವರು ಅಪರಾಧಿಗಳನ್ನು ಗುರುತಿಸಲು, ಬಂಧಿಸಲು ಬೇಕಾಗುವ ತರಬೇತಿ, ಸಿಬ್ಬಂದಿ, ಸಮಯ, ಇಂಥ ವಿಷಯಗಳ ಬಗ್ಗೆ ಚರ್ಚಿಸಲು ಮುಂದೆ ಬರಬೇಕು. ಓದು ಬರದವರಿಗೆ, ಶಾಲೆಗೇ ಹೋಗದವರಿಗೆ ತಿಳುವಳಿಕೆ ನೀಡಲು ಸಂತೆ, ಜಾತ್ರೆಗಳಂಥ ಜನ ಸೇರುವಂಥ ಜಾಗಗಳಲ್ಲಿ ಬೀದಿ ನಾಟಕ/ಭಾಷಣ/ಹಾಸ್ಯದ ಮೂಲಕ ಜನರನ್ನು ತಟ್ಟಬೇಕು, ಇದಕ್ಕೆ ಕಲಾವಿದರ ಸಹಕಾರ ಬೇಕು.

      ನಾನು list ಮಾಡಿರುವ ಪರಿಹಾರ ಮಾರ್ಗಗಳು ಹೊಸವೇನಲ್ಲ, ಬೇರೆ ಸಮಸ್ಯೆಗಳಿಗೆ ಈಗಾಗಲೇ ಇಂಥ ಪ್ರಯತ್ನಗಳು ಆಗಾಗ ನಡೆಯುತ್ತಿರುತ್ತವೆ.

      ’ಬರಹಗಳಿಂದ ಚರ್ಚೆಗಳಿಂದ ಯಾವ ಉಪಯೋಗವೂ ಇಲ್ಲ’ ಎಂಬ ವಾದವನ್ನು ನಾನು ಒಪ್ಪುವುದಿಲ್ಲ. ಈ ರೀತಿಯ ಬರಹಗಳಿಂದ ಚರ್ಚೆಗಳಿಂದ ಸರ್ಕಾರದ, ಸಾರ್ವಜನಿಕ ಸಂಘಟನೆಗಳ ಗಮನ ಸೆಳೆದು, ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿದೆ.

      ಹಾಗೇ ’ಹೆಣ್ಣಿಗೆ ತನ್ನ ಅಸ್ತಿತ್ವದ ಬಗ್ಗೆ ಇರುವ ಹೆಮ್ಮೆ’ ಮಾತ್ರದಿಂದ ಇಂಥ ಪಿಡುಗುಗಳು ನಾಶವಾಗುವುದಿಲ್ಲ. ಗಂಡಸರ ಬಗ್ಗೆ ’ಸಂಪೂರ್ಣ ದ್ವೇಷ’ ಇರುವವರು ಯಾರೋ, ಅವರೊಂದಿಗೆ ಆ ಚರ್ಚೆ ನಡೆಸಿ, ಇಲ್ಲಿ ನಡೆಯುತ್ತಿರುವ ಚರ್ಚೆಯಲ್ಲಿ ಇದು ಅಸಂಬದ್ಧ comment. ಈ ಪಿಡುಗಿನ perpetrator ಗಂಡಸಾಗಿರುವ ಕಾರಣ, ಇದು ಕೇವಲ ಸ್ತ್ರೀಯರ ಸಮಸ್ಯೆಯಲ್ಲ.

      ಋತುಚಕ್ರ/ಹೆರಿಗೆ ನೋವುಗಳು ಸಾಮಾಜಿಕ ಪಿಡುಗುಗಳಲ್ಲ! ಇತರರಿಗೆ ಆಗುವ ದೈಹಿಕ ನೋವುಗಳಿಗೆ ’ಪುರುಷ’ ಯಾ ’ಸ್ತ್ರೀ’ ಸಂವೇದನೆಗಳ ಅವಶ್ಯಕತೆ ಇಲ್ಲ.

      ಸ್ತ್ರೀಯರ ಮೇಲೆ ಗಂಡಸರು ಮಾಡುವ ದೌರ್ಜನ್ಯವನ್ನು ನೋಡುತ್ತಾ ಅದಕ್ಕೆ ಪರಿಹಾರದ ಮಾರ್ಗಗಳನ್ನು ಗುರುತಿಸುವ ಬದಲು ’ಅದು ನನಗೆ ಅರ್ಥವಾಗುವ ಸಮಸ್ಯೆಗಳಲ್ಲ’ ಎಂಬ ನೆಪವೊಡ್ಡುವ, ’ಬರೀ ಹೆಂಗಸರ ಸಮಸ್ಯೆಗಳ ಬಗ್ಗೆ ಯಾಕೆ ದನಿಯೆತ್ತುತ್ತೀರಿ’ ಎಂಬ ವಿತಂಡವಾದ ಎತ್ತುವ ’ಸುಶಿಕ್ಷಿತ’ ಗಂಡಸರ, ಹೆಂಗಸರ ಬಗ್ಗೆ ನನಗೆ ಬಹಳ ಖೇದವಿದೆ. ಯಾಕೆಂದರೆ, ಹೆಂಗಸರನ್ನು ಕಾಡುವ ಸಾಮಾಜಿಕ ಸಮಸ್ಯೆಗಳು ಬರೀ ಹೆಂಗಸರದಲ್ಲ.

      -ವಿಕೆ

    10. ಚೇತನಾ ಅವ್ರೇ ,
      ವಿಷಯದ ಚರ್ಚೆ ಎಲ್ಲೆಲ್ಲೋ ಹೋಗಿ ಮತ್ತೆ ನಾವು, ಸ್ತ್ರೀವಾದ-ಪುರುಷ ದ್ವೇಷಿ ಎನ್ನೋ ವಾದಗಳೊಳಗೇ ಗಿರಕಿಯಾಡುತ್ತಾ ಇದ್ದೇವೆ. ಅಲ್ವಾ!

      ಸಂದೀಪ್ ಹೇಳಿದ ಹಾಗೆ, ಮಂಗಳೂರಲ್ಲಿ ಏನಾದ್ರೂ ಈ ಥರಾ ಆಗಿದ್ರೆ … ಅಂತ. ಕ್ಷಮಿಸಿ,ಸಂದೀಪ್ ಅವರೆ, ನಾನು ಕೂಡ ಮಂಗಳೂರಿನವಳೇ. ಆದ್ರೆ, ಅಲ್ಲಿಯ ಜನ ಖಂಡಿತವಾಗಿಯೂ ಏನೂ ಬೇರೆ ಅಲ್ಲ. ನಾನು college ಒದುತ್ತಿದ್ದಾಗ ಸ್ತ್ರೀವಾದಿ ಹೋರಾಟ,ಚಿಂತನೆ,ವಿಮರ್ಶೆ ಅಂತ ಸಾಕಷ್ಟು ಮಾಡಿದ್ದೆ. ಆಮೇಲೆ ನಿಧಾನವಾಗಿ ಅರಿವಾಯ್ತು. ಯಾವುದೇ ideology,ಇಸಂಗಳು ಇರಬಹುದು,ಅದು ವೈಯಕ್ತಿಕ – ಅಥವಾ practical ಆಗದೆ ಹೋದಾಗ, there is no value to it at all.
      this is my personal opinion. i do appreciate and consider people who do all pro-women, pro-children related works. but, ಸಮಾಜವನ್ನು ಯಾರೇ ಒಬ್ಬರು ಬದಲಾಯಿಸಲು ಸಾಧ್ಯವೇ ಇಲ್ಲ. ನಾನು ಅರಿತ ಸತ್ಯಗಳನ್ನು ನನ್ನ ಬದುಕಿನಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾದಲ್ಲಿ ಮಾತ್ರ ನಾನು ಅರಿತ ಸತ್ಯಕ್ಕೆ ಬೆಲೆ. otherwise it is good for nothing.

      ಚೇತನಾ ಬರೆಯುವುದು,its a part of the evolution (revolution). ಅವರಂತೆ ಹಲವರು ಬರೆಯುತ್ತಾರೆ, ಕೆಲವರು ಹೋರಾಟ ಮಾಡುತ್ತಾರೆ. ಇನ್ನೂ ಕೆಲವರು ತಮ್ಮ ತಮ್ಮ ಮಿತಿಯೊಳಗೇ human oriented ಕೆಲಸ ಮಾಡುತ್ತಾರೆ. ನಾನು, ನೀವು , ಇಲ್ಲಿ ಬರೆಯುವ ಎಲ್ಲರೂ ಚರ್ಚೆ ಮಾಡುವುದೂ ಸಹ ಬದಲಾವಣೆಯ ಒಂದು ಭಾಗ ಅಲ್ವೇ.

      ಖಂಡಿತವಾಗಿಯೂ ಸಂವೇದನೆ ಇರಲೇಬೇಕು.
      ಆದ್ರೆ, ಮಹಿಳಾ ಪರ, ಮಕ್ಕಳ ಪರ ಅಂತ ವಿಭಾಗಿಸಬೇಡಿ ಅನ್ನೋದು ಅಷ್ಟು ಸಮಂಜಸ ಅನ್ಸೋದಿಲ್ಲ. ಪ್ರತಿಯೊಂದು ಕ್ರಿಯೆ – ಪ್ರಕ್ರಿಯೆಗೂ ಒಂದು ಹಿನ್ನೆಲೆ, background , ಅನುಭವ ಇದ್ದೇ ಇರುತ್ತದೆ. ವೈಯಕ್ತಿಕ ಮತ್ತು ಸಾಮಾಜಿಕವಾಗಿಯೂ ಸಹ. ಎಲ್ಲವನ್ನೂ ಒಂದೇ ತಕ್ಕಡಿಯಲ್ಲಿ ತೂಗುವುದು ಹೇಗೆ ಸಾಧ್ಯ? we play with different psyches . isn’t it ?

      ಅನ್ಯಾಯದ ವಿರುಧ್ಧ ಹೋರಾಟ ಅಗತ್ಯ. ಹಾಗಂತ,ಹೆಂಗಸರು ತೋರಿಸುವ ಸ್ತ್ರೀಪರ ಕಾಳಜಿ ಸರಿಯಾದದ್ದು , ಗಂಡಸರು ತೋರಿಸುವ sympathy ತೋರಿಕೆಗೆ ಅಂತ ಭಾವಿಸುವುದು ಯಾಕೆ.
      ಎಷ್ಟೋ ಗಂಡಸರು, ನಾನು ತಿಳಿದ ಮಟ್ಟಿಗೆ, ಈ ಗೊಂದಲದಲ್ಲಿ ಇನ್ನೂ ಸಿಲುಕಿದ್ದಾರೆ.ಅಥವಾ ನಾವೂ ಹೆಂಗಸರೂ ಸಹ, ನಮ್ಮಲ್ಲೆ ದ್ವಂದ್ವ ಇನ್ನೂ ಇದೆಯಾ? ಹಲವು ಮಹಿಳೆಯರೂ ತೋರಿಕೆಯ ಸ್ತ್ರೀವಾದಿಗಳಾಗಿರುವುದೂ ನಾವು ನೋಡುತ್ತೇವಲ್ಲಾ.
      ಎಷ್ಟೇ ದೊಡ್ಡ ವ್ಯಕ್ತಿ ಯಾಗಿರಲಿ, ಆತ ತನ್ನ ವೈಯಕ್ತಿಕ ಜೀವನದಲ್ಲಿ ಹೆಣ್ಣಿನ ಬಗ್ಗೆ ಹೇಗೆ ನಡೆದುಕೊಳ್ಳುತ್ತಾನೆ ಎನ್ನುವ ಆಧಾರದ ಮೇಲೆ ಆತ ಸ್ತ್ರೀಪರ ಕಾಳಜಿಯುಳ್ಳವನೇ ಅಂತ ಗೊತ್ತಾಗೋದು. ಹಾಗೆಯೇ, ಎಲ್ಲಾ ಗಂಡಸರು ಹೀಗೇ ಅನ್ನೋ prejudice ಇಟ್ಟುಕೊಳ್ಳೋದು ತಪ್ಪಲ್ವಾ.

      ನನಗಿಂತ ನನ್ನ partner ಹೆಚ್ಚು ಸ್ತ್ರೀಪರ,ಮಾನವ ಪರ ಕಾಳಜಿಯುಳ್ಳ ವ್ಯಕ್ತಿ. ಹಾಗಂತ ಅವ್ನಿಗೇನಾದ್ರೂ ಹೇಳಿದ್ರೆ ವಾದ ವಿವಾದ ಆಗುತ್ತೆ. he says,why do u tag me. i am just being a sensitive human being.
      ಅವನು feminist ಅನ್ನೋದ್ರಲ್ಲಿ ನನ್ನ ಗೆಲುವು ಅಹಂಕಾರ ಅಡಗಿದೆ ಅನ್ಸುತ್ತೆ ಅಲ್ವಾ. ಆದ್ರೆ ಅವ್ನೂ ಸಹ ಸೋಲು ಬಯಸೋದಿಲ್ಲ. ಇಬ್ಬರಿಗೂ ಇರುವ ಮಾನವ ಸಹಜ IGO.
      ಗಂಡ-ಹೆಂಡತಿ, ಗಂಡು-ಹೆಣ್ಣು ಅನ್ನೋ stereotype roleplay ಗಳನ್ನು ಬಿಟ್ಟು ಮನುಷ್ಯ ಸಹಜವಾಗಿ ನಾವು ಬದುಕಬೇಕಲ್ಲ. ನಮ್ಮ ನಮ್ಮ IGO ಗಳ ಜತೆ.
      ಜತೆಗೇ ಸಾಮಾಜಿಕ ವಸ್ತುಸ್ಥಿತಿಯ ಅರಿವು ಬೇಕಲ್ಲ. ರಾಧಿಕಾ ಈ ಹಿಂದೆ ಬರೆದ ಹಾಗೆ, ನಮ್ಮ ಮಕ್ಕಳಿಗೆ ನಾವು ಇದರ ತಿಳುವಳಿಕೆ ನೀಡಲೇಬೇಕು.
      ನನ್ನ friend ಮನೆಯಲ್ಲಿ ಆದ ಘಟನೆ ಇಲ್ಲಿ ಹೇಳ್ತೇನೆ. ಆತನ ಪುಟ್ಟ ಎರಡು ವರ್ಷದ ಮಗನ birthday ಗೆಂದು ನಾವು ಒಂದು DOLLS SET gift ಕೊಟ್ಟೆವು. ಅದರಲ್ಲಿ ಒಂದು ಗಂಡು ಒಂದು ಹೆಣ್ಣು – ಹೀಗೆ ಹಲವು pair-couples ಗಳಿವೆ. ಒಂದು ಮನೆಯ ವಿನ್ಯಾಸ. ಮನೆಯ ಅಡಿಗೆ ಕೋಣೆಯಲ್ಲಿ ಒಂದು couple,ಜತೆಗೆ ಕೆಲಸ ಮಾಡುತ್ತಿದ್ದಾರೆ.ಇನ್ನೊಂದು couple,ಗಂಡು, studyರೂಮ್ ನಲ್ಲಿ laptop ಹಿಡಿದು ಕೂತಿದ್ದಾನೆ. ಹೆಣ್ಣು, computer table ಹತ್ತಿರ ಕೂತು ಕೆಲಸ ಮಾಡುತ್ತಿದ್ದಾಳೆ. ಮತ್ತೊಂದು couple, livingರೂಮ್ ನಲ್ಲಿ ಹೆಣ್ಣು TV ನೋಡುತ್ತಿದ್ದಾಳೆ. ಗಂಡು ಕಿವಿಗೆ walkman ಹಾಕಿಕೊಂಡು ಏನೋ ಬರೆಯುತ್ತಿದ್ದಾನೆ. ಇನ್ನೊಂದು couple, balconyಯಲ್ಲಿ ಜತೆಯಾಗಿ coffee ಕುಡಿತಾ ಇದ್ದಾರೆ. bedroomನಲ್ಲಿ ಇನ್ನೊಂದು couple ನಿದ್ದೆ ಮಾಡ್ತಾ ಇದೆ.
      ನನಗಂತೂ ಈ DOLL SET ನೋಡಿ ಅದ್ಭುತ ಅನ್ನಿಸ್ತು. but , surprisingly my friend got offended.
      because. firstly, it was a dolls set.(dolls belong to the girls.!!!)secondly, the concept on which the DOLL SET was done.
      I was shocked to see their response. he said, how can i explain this to my son.
      come on, now, i was offended. because,i thought he was a progressive person.
      ಎರಡು ವರ್ಷದ ಮಗುವಿಗೆ ಈ concept ಈಗಲೇ ಅರ್ಥ ಆಗದೆ ಇರಬಹುದು. ಆದ್ರೆ, ನಮ್ಮ responsibility ???
      we have to be gender sensitive and along with that we need to be gender conscious also. ಆಗ ಮಾತ್ರ ಪರಸ್ಪರ ಗೌರವ,ಸಹನೆ,ಪ್ರೀತಿ,ಸಹಕಾರ ಬೆಳೆಯೋದಕ್ಕೆ ಸಾಧ್ಯ.ಅಲ್ವಾ.

    11. ಸಂದೀಪ್,

      ಸಂವೇದನೆಗಳು ಅವರಿವರ ಪರ ಅಲ್ಲದೆ ಮಾನವತೆಯ ಪರ ಇರಬೇಕು ಎನ್ನುವ ನಿಮ್ಮ ಮಾತಿನ ಬಗ್ಗೆ ಅಪಾರ ಗೌರವವಿದೆ. ನಿಜ, ಸ್ವಸ್ಥ ಸಮಾಜ ನೀವು ಹೇಳಿದಂತೆ ಇದ್ದರೇ ಚೆನ್ನ. ಆದರೆ ಹಾಗಿಲ್ಲವಲ್ಲ ಎಂಬುದೇ ಖೇದ. ಅದರ ಹೊರತಾಗಿ ನಿಮಗೆ ಬೇಸರವಾಗಲಿ ಎಂಬ ಉದ್ದೇಶದಿಂದ ಹೇಳಿದ್ದಲ್ಲ.
      ಮಂಗಳೂರಿನ ಬಗ್ಗೆ ನಾನು ಹೆಚ್ಚು ಬಲ್ಲವಳಲ್ಲ. ಆದರೆ ಅಲ್ಲಿನ ರೀತಿ-ನೀತಿಯ ಬಗ್ಗೆ ನಿಮ್ಮ ಮಾತು ಕೇಳಿದರೆ ಎಲ್ಲಾ ಊರುಗಳೂ ಮಂಗಳೂರಿನಂತೇ ಇರಬಾರದೆ ಎನಿಸುತ್ತಿದೆ 🙂
      -ಶ್ರೀಪ್ರಿಯೆ

    12. ಶ್ರೀಪ್ರಿಯೆ ,
      ಮಂಗಳೂರಿನಲ್ಲಿ ಕಾಮುಕರಿಲ್ಲ ಅಂತ ನಾನು ಹೇಳಿಲ್ಲ !ಹೇಮಶ್ರೀ ಅವರೇ ಹೇಳಿದ್ದಾರಲ್ಲ ’ಅಲ್ಲಿಯ ಜನ ಖಂಡಿತವಾಗಿಯೂ ಏನೂ ಬೇರೆ ಅಲ್ಲ’ ಅಂತ!
      ಆದ್ರೆ ಒಂದು ಮಾತಂತೂ ನಿಜ ಹೀಗೇನಾದ್ರೂ ಆಗ್ತಾ ಇದ್ದಾಗ ಆ ಹುಡುಗಿ/ಹೆಂಗಸು ಚಿಕ್ಕದೊಂದು ದನಿ ಎತ್ತಿದರೂ ಸಾಕು ನಮ್ಮೂರ ಜನ ಅವ್ರ ಗ್ರಹಾಚಾರ ಬಿಡಿಸ್ತಾರೆ .ಇದು ನನ್ನ ಅನುಭವದ ಮಾತು .
      ಆ ಚಿಕ್ಕ ದನಿ ಎತ್ತೋಕೂ ಸಾಧ್ಯವಾಗದ ಹುಡುಗಿಯರಿರ್ತಾರೆ ,ಅದಕ್ಕೆ ಏನೂ ಮಾಡೋಕಾಗಲ್ಲ ! God only can help them.

      ಇನ್ನು ವಿಕೆಯವರು ಹೇಳಿದ ಸಲಹೆಗಳೆಲ್ಲ ತುಂಬಾ ಹೈಟೆಕ್ ಆಗಿದೆ .ಕಾನೂನು ಪಾಲನೆ ಅಷ್ಟೆಲ್ಲ ಸುಲಭದ ಕೆಲಸವಾಗಿದ್ರೆ ನಮ್ಮ ಭಾರತ ಇಷ್ಟರಲ್ಲಿ ಎಲ್ಲೋ ಇರ್ತಿತ್ತು!
      ಇಷ್ಟೆಲ್ಲ ಗೊಂದಲ ,ಅಧ್ವಾನಗಳಿದ್ದೂ ನಮ್ಮ ಭಾರತ ಪ್ರಕಾಶಿಸುತ್ತಿದೆಯಲ್ಲ ಅದಕ್ಕೆ Hats Off !

    ನಿಮ್ಮದೊಂದು ಉತ್ತರ

    Fill in your details below or click an icon to log in:

    WordPress.com Logo

    You are commenting using your WordPress.com account. Log Out /  ಬದಲಿಸಿ )

    Google photo

    You are commenting using your Google account. Log Out /  ಬದಲಿಸಿ )

    Twitter picture

    You are commenting using your Twitter account. Log Out /  ಬದಲಿಸಿ )

    Facebook photo

    You are commenting using your Facebook account. Log Out /  ಬದಲಿಸಿ )

    Connecting to %s