ಮತೀಯ ದುರಂತಗಳ ಬಗ್ಗೆ – ನನ್ನದೊಂದು ಸತ್ತ ದನಿ


ಇತ್ತೀಚೆಗೆ ಕೆಲವು ದಿನಗಳಿಂದ ಯಾಕೋ ಚಿಪ್ಪಿನೊಳಗೆ ಹುದುಗಿಹೋಗಬೆಕೆನ್ನುವ ಹಂಬಲ ಮತ್ತೆ ತಲೆ ಎತ್ತುತ್ತಿದೆ. ಥೇಟು ಆಮೆಯ ಹಾಗೆ. ಈ ‘ಸುಮ್ಮನಿದ್ದುಬಿಡಬೇಕು’ ಅನ್ನಿಸುವ ಕಾಯಿಲೆ ಕಾಡಬಾರದು ನೋಡಿ ಯಾರಿಗೂ.
ಇತ್ತೀಚೆಗೆ ದೆಹಲಿ ಸ್ಫೋಟವಾಯ್ತಲ್ಲ, ಎದೆ ಉರಿದುಹೋಗಿತ್ತು ಅವತ್ತು. ಹಾಗೆ ಉರಿದಿದ್ದನ್ನ ಬರೆದು ಬಿಸಾಡಬೇಕು ಅಂದ್ಕೊಂಡೆ. ಯಾಕೋ ಸಾಧ್ಯವೇ ಆಗಲಿಲ್ಲ. ಆಮೇಲೆ ಮತಾಂತರದ ಅವಾಂತರವಾಯ್ತಲ್ಲ, ಪ್ರಚೋದನೆ- ಪ್ರತಿಕ್ರಿಯೆಗಳಾದುವಲ್ಲ, ಆಗಲೂ ವಿಪರೀತ ಕಸಿವಿಸಿಯಾಯ್ತು. ಬರೀಬೇಕಂದುಕೊಂಡೆ. ಊಹೂಂ… ಆಗಲಿಲ್ಲ. ಒಳಗೊಳಗೆ ಎದ್ದ ಕೂಗು ಹಾಗೆಹಾಗೇ ಸತ್ತು ಹೋಗುತ್ತಿತ್ತು. ನಾನು ಮತ್ತೆ ಉರುಟುರುಟಿ ಸುತ್ತಿಕೊಳ್ಳುತ್ತ, ಚೆಂಡಿನಂತೆ…

ಇಷ್ಟಕ್ಕೂ ಧರ್ಮವನ್ನು ಮುಂದಿಟ್ಟುಕೊಂಡು ಜಗದಾದ್ಯಂತ ನಡೆಯುತ್ತಿರುವ ಅನಾಚಾರಗಳ ಬಗ್ಗೆ ಎಷ್ಟೂಂತ ಬರೀಬಹುದು ಹೇಳಿ? ಓದಿಯೇ ಸಾಕಾಗಿಹೋಗಿದೆ. ಇವತ್ತು ಒಬ್ಬ ಸಾಮಾನ್ಯ ಹಿಂದೂ ಕೂಡ ಸಿಡಿಮಿಡಿಗುಟ್ಟುವ ಹಾಗಾಗಿರುವುದರ ಹಿಂದಿನ ಕಾರಣವನ್ನ ಯಾರಾದರೂ ಯೋಚಿಸಿದ್ದೀರಾ? ಖಂಡಿತ ಯೋಚಿಸಿಯೇ ಇರುತ್ತೀರಿ. ನಾನೂ ಯೋಚಿಸಿದ್ದೇನೆ. ಜಾತಿ ಗೀತಿಗಳ ತಂಟೆಗೇ ಹೋಗದ, ತೀರಾ ಅಮ್ಮ ಬಯ್ತಾಳೆ ಅಂತ ಊರಿಗೆ ಹೋಗುವಾಗ ಎರೆಡೆಳೆ ಜನಿವಾರ ಹಾಕ್ಕೊಳ್ಳುವ ತಮ್ಮ ಕೂಡ ‘ಬಡೀಬೇಕು ನನ್ ಮಕ್ಳಿಗೆ… ನಮ್ ಪಾಡಿಗೆ ನಮ್ಮನ್ನ ಇರೋಕೇ ಬಿಡಲ್ಲ ಅವ್ರು….” ಅಂದಾಗ ಹೌಹಾರಿಹೋಗಿದ್ದೆ.  ಕ್ರಿಸ್ ಮಸ್ಸಿಗೆ ಕೇಕು ತಂದು ಹಂಚುವ, ರಂಜಾನಿಗೆ ಶಾವಿಗೆ ಪಾಯಸ ಮಾಡುವ, ಕತ್ತೆ ನಿಂತರೂ ಕಾಂಗ್ರೆಸ್ಸಿಗೇ ಓಟು ಹಾಕುವ ಅಮ್ಮ ಕೂಡ ‘ಅತಿ ಆಯ್ತು ಕಣೇ ಇವ್ರದ್ದು, ಆ ಬೊಬ್ಬಿ ಹುಡುಗನ್ನ ಕೊಂದೇ ಬಿಟ್ರಲ್ಲ, ಅವ್ರ ಹುಡುಗೀನ ಲವ್ ಮಾಡ್ತಿದ್ದ ಅನ್ನೋ ಒಂದೇ ಕಾರಣಕ್ಕೆ… ಎಷ್ಟ್ ದಿನ ಸಹಿಸ್ಬೇಕೋ ಇವ್ರ ಕರ್ಮಾನ ನಾವಿನ್ನೂ! ಬೇರೆ ದೇಶ ಕೊಟ್ಟಾಗ ಬಾಯ್ಮುಚ್ಕೊಂಡ್ ತೊಲಗ್ ಬೇಕಿತ್ತು’ ಅನ್ನುತ್ತ ಅವಡುಗಚ್ಚಿದಳು.
ಬೇರೆ ಯಾರೋ ದೂರದವರನ್ನ ಎಳೆದು ತರೋದು ಬೇಡ ಅಂತಲೇ ನಾನು ನನ್ನ ಹತ್ತಿರದ ಉದಾಹರಣೆಗಳನ್ನ ಕೊಟ್ಟಿದೇನೆ. ಇಂತಹ ಹಲವಾರು ಜನರ ಒಳಗುದಿಯನ್ನು ನೋಡುತ್ತ ನೋಡುತ್ತ ಮಧ್ಯಮವರ್ಗದ ಹಿಂದೂ ಮಾನಸಿಕತೆಯನ್ನ ಅರಗಿಸ್ಕೊಳ್ಳುವ ಯತ್ನ ಮಾಡ್ತಿದೇನೆ.

ಈಶಾನ್ಯ ರಾಜ್ಯಗಳಲ್ಲಿ ಸ್ವಯಂಸೇವಾ ಕಾರ್ಯಕರ್ತರೊಂದಷ್ಟು ಜನ ಕೆಲಸ ಮಾಡ್ತಿದಾರೆ. ಸಾವರ್ಕರ್, ‘ಮತಾಂತರದಿಂದ ರಾಷ್ಟ್ರ್‍ಆಂತರವಾಗತ್ತೆ’ ಎಂದು ಮುನ್ನುಡಿದಿದ್ದು ಅಲ್ಲಿ ನಿಜವಾಗ್ತಿದೆ. ನಾಗಾಲ್ಯಾಂಡಿನಲ್ಲಿ ‘ಇಂಡಿಯನ್ ಡಾಗ್ಸ್ ನಾಟ್ ಅಲೋವ್ಡ್’ ಅಂತ ಬೋರ್ಡು ಹಾಕ್ಕೊಂಡಿದಾರೆ. ನಮ್ಮ ನಾಡು ಕ್ರಿಸ್ತನಿಗೆ ಸೇರಿದ್ದು ಅಂತಿದಾರೆ.
ನಮ್ಮ ಪರಿಚಿತರೊಬ್ಬರು ಅಲ್ಲಿ ಕೆಲಸ ಮಾಡಿ ವಾಪಸು ಬಂದರು. ಜೊತೆಗಿಬ್ಬರು ಹುಡುಗರನ್ನ ಕರೆತಂದರು. ಒಬ್ಬನ ಹೆಸರು ‘ಚಿ ಮುಂಗ್’ ಅಂತ ನೆನಪು. ಅವರನ್ನಿಲ್ಲಿ ಕಾಲೇಜಿಗೂ ಸೇರಿಸಿದರು. ಒಬ್ಬ ಹೇಗೋ ಅಡ್ಜಸ್ಟ್ ಆದ. ಮತ್ತೊಬ್ಬ ಮಾತ್ರ, ‘ನಾನು ವಾಪಸು ಹೋಗಿ ಮತಾಂತರವಾಗ್ತೇನೆ. ಇಲ್ಲಿ ಓದೋಲ್ಲ’ ಅಂತ ಹಟ ಹಿಡಿದ. ಕಾರಣ ಕೇಳಿದರೆ, ‘ಹಿಂದೂಗಳಲ್ಲಿ ಒಗ್ಗಟ್ಟಿಲ್ಲ, ಜಾತೀಯತೆ ಇದೆ, ಮೇಲು ಕೀಳಿದೆ, ಈ ಧರ್ಮದ ದೇವತೆಗಳೆಲ್ಲ ಕ್ರೂರಿಗಳು, ಲಂಪಟರು…’ ಇತ್ಯಾದಿ ಪಾಠ ಒಪ್ಪಿಸಿದ.
ಖಂಡಿತ ಅಂವ ಹಿಂದೂ ಶಾಸ್ತ್ರ ಗ್ರಂಥಗಳನ್ನ ಓದಿರಲಿಲ್ಲ. ಅದಕ್ಕಿಂತ ಮುಖ್ಯವಾಗಿ ಬೈಬಲ್ ಪರಿಚಯವೇ ಅವನಿಗಿರಲಿಲ್ಲ ಅನ್ನೋದು ಸ್ಪಷ್ಟವಾಯ್ತು. ಇದನ್ನ ವಿವರವಾಗಿ ಹೇಳುವ ಅಗತ್ಯವಿಲ್ಲ ಅಲ್ಲವೆ?

ಮಾತೆತ್ತಿದರೆ ಭಜರಂಗಿಗಳು (ಸಮಜಾಯಿಷಿ- ಐ ಹೇಟ್ ದೆಮ್), ವಿಹಿಂಪ, ಸಂಘ ಪರಿವಾರವನ್ನು ದೂರುವ ಮಂದಿಗೆ ಒರಿಸ್ಸಾ ಘಟನೆ ಪಾಠ ಕಲಿಸಿರಬೇಕು(ಈ ಸಂದರ್ಭದಲ್ಲಿ ಮಡಿದವರ ಬಗ್ಗೆ ತೀವ್ರ ಸಂತಾಪವಿದೆ). ಅಲ್ಲಂತೂ ಸಂಘಿಗಳ ಗಂಧ ಗಾಳಿಯೂ ಇಲ್ಲ. ಅಲ್ಲಿ ಕ್ರೈಸ್ತರ ವಿರುದ್ಧ ಸೆಟೆದು ನಿಂತಿದ್ದು ಬುಡಕಟ್ಟು ಜನಂಗದ, ಗುಡ್ಡಗಾಡು ಪ್ರದೇಶದ ಜನ ಸಾಮಾನ್ಯರು! ಅವರ ಪಾಲಿಗೆ ಹಿಂದುತ್ವ ಒಂದು ಅಮಲಲ್ಲ. ಅದು ಶ್ರದ್ಧೆ, ನಂಬಿಕೆ.

ಅನಂತ ಮೂರ್ತಿಯವರ ಅರ್ಟಿಕಲ್ ಗಳನ್ನ ನೋಡಿದೆ. ಕೆಂಡಸಂಪಿಗೆಯಲ್ಲಿ, ಸಂಪದದಲ್ಲಿ, ಋಜುವಾತುವಿನಲ್ಲಿ. ದೊಡ್ಡವರು. ಅವರಿಗೆ ನಾವೇನೂ ಕಮೆಂಟ್ ಮಾಡಬಾರದು. ಪಾಪ. ಅವರಿನ್ನೂ ಗುಜರಾತ್ ಕನವರಿಕೆಯನ್ನೇ ಬಿಟ್ಟಿಲ್ಲ. ಅವರಿಗೆ (ಬಹುಶಃ) ಗ್ರೀನ್ ಕಾರಿಡರ್ ಸಂಗತಿ ಗೊತ್ತಿಲ್ಲ. ಯಾವುದೇ ವ್ಯಕ್ತಿ ಕ್ಷಣಿಕ ಆಮಿಷಕ್ಕೆ ಬಿದ್ದು ಮತಾಂತರಗೊಂಡರೆ ಅದರಿಂದಾಗುವ ವೈಯಕ್ತಿಕ- ಸಾಮಾಜಿಕ ನಷ್ಟದ ಬಗ್ಗೆ ಅರಿವಿಲ್ಲ. ಇವತ್ತು ನೆನ್ನೆ ಕಣ್ ಬಿಡುತ್ತಿರುವ ನಾವು ಹಾಗೆ ಅಪವಾದ ಮಾಡಿದರೆ ದೊಡ್ಡವರೆಲ್ಲ ಏನನ್ನುತ್ತಾರೋ?

ಅದಕ್ಕೇ,
ಏನೂ ಬರೆಯೋದು ಬೇಡವೆಂದು ಸುಮ್ಮನಾಗ್ತಿದೇನೆ. ಯಾರೇನು ಅಂದುಕೊಳ್ತಾರೋ ಅಂತ ಹಿಂಜರಿದು ಮುಖವಾಡ ಹಾಕ್ಕೊಳ್ತಿದೇನೆ.  ಬಚಾವಾಗಲು ಹೆಣಗುವ ಮತ್ತದೇ ಆಮೆಯಂತೆ.

16 thoughts on “ಮತೀಯ ದುರಂತಗಳ ಬಗ್ಗೆ – ನನ್ನದೊಂದು ಸತ್ತ ದನಿ

Add yours

 1. I agree your viewpoints.
  I also read Vikas’s article on this.

  But by counter attacking on church and prayer hall, can we expect this conversion to stop? If one wants to prevent this, can catch the culprit red-handed and punish him.

  if one tries to take revenge on the community for few poeple’s mistakes, is he doing right…irrespective of what community he belongs to…?

  If all start thinking like this ..will there be an end to this? Yes we should protest, but not the way we did in Mangalore and Udupi….

  Vijayraj

 2. Chetana,

  Very apt article. You should have gone ahead and called a spade and spade, by exposing what the Evangelical groups are doing in Mangalore/Orissa.

  The Pope who was a state guest gave a call to harvest the souls for the new millenium in India. I do not think he can do this in a Muslim country.But our government (in fact NDA was in power at the center then) did not do a thing about it.

  Regarding the “Gnanapeethis”, the less said the better. I am still waiting the other Gnanapeethi Girish Karnad, to issue a press statement.

  Regards,

  Mayura

 3. chetana, i was almost tempted to write about the recent happenings.
  was also surprised very few bloggers wrote about it.
  what i feel from my personal experiences is that – the RELIGIOUS CONSCIOUSNESS what we have is mistaken. it is almost similar to the general false discussions we have on gender issues. like, being a muslim, is anti-hindu. or being a hindu, is anti-christian. or whatsoever.
  how does a group of people can hijack the mindsets in the name of religion. which ever religion may be it is.
  if you take a public opinion, i am sure, no muslim is an anti-hindu or no hindu is an anti-muslim.
  are we foolish enough to know that religion is a politicized weapon in India, since ages. hindu fundamentalists are as dangerous as the muslim and christian fundamentalists.

  after writing a comment here, i feel i should write on this in my blog too. and i will write.
  see my blog : http://www.smilingcolours.blogspot.com
  – Hemashree

 4. If we need to see world as one place to live in, incidents, rather accidents of this magnitude should be avoided. Though the part of compelling to convert to one’s own religion is not acceptable, at the same time disagreeing to that in a way harmful to humankind is also unacceptable. State’s national poet Kuvempu’s vision of “vishva manava” is shattered with accidents as such. Bhaskar

 5. ಪ್ರತಿಕ್ರಿಯೆಗಳಿಗೆ ಧನ್ಯವಾದ. ಇದು ಚರ್ಚಿಸಬೇಕಾದ ಸಂಗತಿಗಳಲ್ಲೊಂದು ಎಂಬುದು ನನ್ನ ಅನಿಸಿಕೆ.
  ಕುವೆಂಪು ಅವರ ವಿಶ್ವ ಮಾನವ ಸಿದ್ಧಾಂತ ಖಂಡಿತ ನಮಗೆ ಆದರ್ಶವಾಗಬೇಕು. ಆದರೆ, ಇದೇ ಕುವೆಂಪು ಅವರು ತಮ್ಮ ಕೃತಿಗಳಲ್ಲಿ (ಮಲೆಗಳಲ್ಲಿ ಮದುಮಗಳು, ಕ್ರಿಸ್ತ ಅಲ್ಲ- ಪಾದ್ರಿಯ ಮಗಳು ಮೊದಲಾದ…) ಮತಾಂತರವನ್ನು, ಕ್ರಿಶ್ಚಿಯನ್ನರ ಮತಾಂತರದ ಚಟವನ್ನು ಬಹಳ ಚೆನ್ನಾಗಿ ಝಾಡಿಸಿದ್ದಾರೆ.
  ಹಿಂಸೆ ಯಾರಿಗೆ ಇಷ್ಟವಾದೀತು ಹೇಳಿ? ಹಿಂದೂಗಳು, ಭಾರತೀಯರು (ಸಾಮೂಹಿಕ ಪ್ರಕ್ರಿಯೆ ಕುರಿತು ಹೇಳುತ್ತಿರುವ ಮಾತಿದು) ತಾವಾಗಿಯೇ ಯಾರ ಮೇಲಾದರೂ ಏರಿ ಹೋದ ಉದಾಹರಣೆ ಇದ್ದರೆ ದಯವಿಟ್ಟು ತಿಳಿಸಿ.
  ನನ್ನ ಅನಿಸಿಕೆ ಇಷ್ಟೆ. ಕೋಮು ದ್ವೇಷವನ್ನು ಹೊತ್ತುರಿಸುತ್ತಿರುವ ರಾಜಕರಣಿಗಳನ್ನು ದೂರವಿಡಬೇಕು. ಸುಮ್ಮನೆ ಹಿಂದೂಗಳನ್ನು ದೂರುವ ಬದಲು ಮೂಲ ಸಮಸ್ಯೆಗೆ ಪರಿಹಾರ ದೊರಕಿಸಿಕೊಳ್ಳಬೇಕು. ಅಂದರೆ- ಮೇಲೆ ಒಸರುವ ಕೀವನ್ನು ನೋಡುತ್ತ ಮುಖ ಸಿಂಡರಿಸುವುದಕ್ಕಿಂತ, ಒಳಗಿನ ವೃಣವನ್ನು ಗುಣಪಡಿಸಬೇಕು ಇಲ್ಲವೇ ಕಿತ್ತು ಹಾಕಬೇಕು.
  ವೃಣ ಬಲಿತಾಗ ಕೀವು ಸೋರುವುದು ಸಹಜವಲ್ಲವೆ?

 6. nimmadhe kathe nannadhoo.sathyavannu saayisi adhara samaadhiya mele ivaththina pollu ghatanegalu nadeethaa ive.”sarvepi sukhinah santhu” annodhu namma parampare. Dharmavannu raajakeeyakke balasikollluththiruvudharindha samasyegalu ulabana vaaguththidhe.bhayothpaadhane maththu mathaanthara iveradoo dheshakke kantaka.praanjala manassinindha samasyeyannu pariharisalu yaaroo sidhdharilla. Dharma samsthaapanaathaaya sambhavaami yuge yuge anthaa krishna heLidhdhaane alvaa? Dharmadha raxane aagiye aaguththe. ivellaa thaathkalika. thumbaa dhukhadha sangathi endhare hindhu virodhi heLike needi anekaru prachaara padeethaare.
  Hariharapurasridhar..

 7. ಮತಾಂತರ ಕುರಿತು ನಿಮ್ಮೆಲ್ಲರ ವಾದ-ಪ್ರತಿವಾದಕ್ಕೆ ನನ್ನದೊಂದು ಮಾತು ಸೇರಿಸುತ್ತಿದ್ದೇನೆ.

  ‘ಮತಾಂತರ ಅನ್ನೋದು ಬೆಂಕಿಯಿಂದ ಬಾಣಲೆಗೆ ಬಿದ್ದಂತೆ ಅಷ್ಟೆ. ಬೌದ್ಧ ದರ್ಮಿಯನಾಗದೆಯೇ ಬುದ್ಧನ ತತ್ವಗಳನ್ನು ಒಪ್ಪಿ ನಡೆಯುವುದು. ಕ್ರೈಸ್ತನಾಗದೆಯೂ ಕ್ರಿಸ್ತನನ್ನು ಮೆಚ್ಚಿಕೊಂಡು ಪಾಲಿಸುವುದು… ಇವೆಲ್ಲ ನಮ್ಮ ಜನರಿಗೆ ಆದರ್ಶವಾಗಬೇಕು’
  ಹೀಗೊಂದು ಪ್ರತಿಕ್ರಿಯೆಯನ್ನ ಕಳೆದ ಅನೇಕ ವರ್ಷಗಳ ಹಿಂದೆ ಪತ್ರಿಕೆಯೊಂದರಲ್ಲಿ ಓದಿದ ನೆನಪು (ಹಾಗೇ ಬರೆದವರು ಸಿಪಿಕೆ ಅಥವಾ ಎಚ್ ಎಸ್ ಕೆ ಇರಬೇಕು’ )
  ನನ್ನದೂ ಅದೇ ಅಭಿಮತ.

  ಹೀಗಂದುಕೊಂಡರೆ ಮತಾಂತರ ಎಂಬುದಕ್ಕೆಲ್ಲ ಅರ್ಥವಿಲ್ಲ.ಆಸ್ಪದವೂ ಇಲ್ಲ
  -ಜಿತೇಂದ್ರ

 8. ಮತಾಂತರದ ರಾಜಕೀಯ ಈಗಿನದಲ್ಲ. ಅರಬರು, ಇರಾಣಿಗಳು, ಪರ್ಶಿಯನ್ನರು, ತುರುಕರು ಇವರೆಲ್ಲ ಭಾರತದ ಮೇಲೆ ದಾಳಿ ಮಾಡಿದಾಗ, ಸೆರೆಸಿಕ್ಕ ಸೈನಿಕರಿಗೆ ಒಂದು condition ಹಾಕುತ್ತಿದ್ದರು: ಮುಸ್ಲಿಮ್ ಧರ್ಮಕ್ಕೆ ಮತಾಂತರವಾದರೆ ಜೀವಸಹಿತ ಬಿಡುವದಾಗಿ.
  ಇದರರ್ಥ, ಈ ದಾಳಿಕೋರರಿಗೆ ತಮ್ಮ ಧರ್ಮದ ಮೆಲೆ ಬಹಳ ಪ್ರೀತಿ ಇತ್ತಂತಲ್ಲ; ಆದರೆ ಮತಾಂತರದಿಂದಾಗಿ, ಸೋತವರ ನಿಷ್ಠೆ ಬದಲಾಗುವದೆಂದು.
  ಇದೇ ಕಾರಣಕ್ಕಾಗಿ, ಪೋರ್ತುಗೀಜರು ಕನ್ನಡ ಕರಾವಳಿಯಲ್ಲಿ ನೆಲೆಸಲು ಅನುಮತಿ ಕೇಳಿದಾಗ, ಅಲ್ಲಿಯ ನಿವಾಸಿಗಳನ್ನು ಮತಾಂತರಿಸಕೂಡದೆಂದು ವಿಜಯನಗರದ ರಾಜರು ಶರತ್ತು ಹಾಕಿದ್ದರು. ಆದರೂ ಮತಾಂತರಗೊಂಡವರು ಪೋರ್ತುಗೀಜರ ಪರವಾಗಿಯೇ ಹೋರಾಡಿದರು. ಇದೇ ಕಾರಣಕ್ಕಾಗಿ ಟೀಪು ಸುಲ್ತಾನನು ಮಂಗಳೂರಿನಲ್ಲಿ ಕ್ರಿಶ್ಚನ್ ಧರ್ಮಕ್ಕೆ ಮತಾಂತರಗೊಂಡ ನಿವಾಸಿಗಳನ್ನು ದಸ್ತುಗಿರಿ ಮಾಡಿ ಕೊಡಗಿಗೆ ಸೆರೆಯಾಳುಗಳನ್ನಾಗಿ ಒಯ್ದದ್ದು.
  ಈಗಿನ ರಾಜಕಾರಣದಲ್ಲಿ, ಮತಾಂತರಿತರ ಮತಗಳೇ ಆಯುಧಗಳಾಗಿವೆ.

 9. “ಹಿಂದೂಗಳು, ಭಾರತೀಯರು (ಸಾಮೂಹಿಕ ಪ್ರಕ್ರಿಯೆ ಕುರಿತು ಹೇಳುತ್ತಿರುವ ಮಾತಿದು) ತಾವಾಗಿಯೇ ಯಾರ ಮೇಲಾದರೂ ಏರಿ ಹೋದ ಉದಾಹರಣೆ ಇದ್ದರೆ ದಯವಿಟ್ಟು ತಿಳಿಸಿ”
  very smart. Just by adding ಭಾರತೀಯರು tag you hide your Hindu communal face. Doesn’t your sentence clearly implies that whatever happened in Mangalore is right? and Hindus are always right?
  We dont want these kind of differentiating minds. Blaming one side and supporting another side of devil.
  So, as per your thinking, if any person is wrong then can a common person should take Law in to his hand and punish him? Certainly you will justify it as right thing to be done. Then why the hell Law & Order is there? If anything wrong then it has to be handled in proper way. By the approach which you are justifying will only leads to more hatredness & riots.
  Think like a ‘Vishwamanava’.
  Terrorism is WRONG!
  Conversion is WRONG!!
  Taking Law & Order in to hand is also WRONG!!!

 10. Mr Vishwanava,
  I couldn’t see a single word where Chetana supported taking law in hand !!
  You are always welcome to think like a vishwamanava.You can also follow Gandhiji’s principle where he tells ‘if someone slap one side show him other side of your face!
  Vishwamanava is a ‘expectation’ not ‘reality’.Even if you want someone to be vishwamanava ,change your context to ‘Bharata manava’ because vishwa is not only India.It’s’ whole world ‘(including Pakistan)and i know how rest of the WORLD behave when it comes to self esteem .
  if you have any hopes about Pakistan ,then continue your preaching about Vishwamanava concept.
  Else you know what to do!

 11. sandeep,please get your facts right !!!
  – You can also follow Gandhiji’s principle where he tells ‘if someone slaps one side show him other side of your face!-
  In fact, this is a quote of Christ. Google it out please. Gandhi just emulated this.

  Its sad, that ‘vishwa manava’ concept has got diluted in today’s world. I guess we have understood it wrongly.
  religion has never made, world a better place to live. Mankind, since centuries has witnessed wars, conflicts over the religion.
  religion is apolitical but, Personal.
  Sadly, in today’s context, it has become political and apersonal.
  no religion can claim the supremacy by just outnumbering the other.
  religion is a solace, a self-defence and extremely related to one’s way of living. By force, no one has a right to covert any person. if any person or a group does so, then above all there is a LAW. it has to dealt in a legal way. But unfortunately, in India, we are such a corrupt system that we do not learn lessons from our past mistakes.

 12. ಮತೀಯ ದುರಂತಗಳ ಬಗ್ಗೆ – ನನ್ನದೊಂದು ಸತ್ತ ದನಿ ಕುರಿತು….

  ನಾನು ಹಿಂದೂ ಎಂಬ ಹೆಮ್ಮೆಯಿದೆ ನನಗೆ
  ಭಯೋತ್ಪಾದಕರು, ಮತಾಂತರಿಗಳು, ಭ್ರಷ್ಟರು, ಸ್ವಾಥರ್ಿಗಳು, ದೇಶದ್ರೋಹಿಗಳು ಇಂದು ಮುಕ್ತವಾಗಿ ಓಡಾಡಿಕೊಂಡಿದ್ದಾರೆ.
  ಸತ್ಯವನ್ನು ಹೇಳುವುದಕ್ಕೆ ಇಲ್ಲಿ ಅವಕಾಶವೇ ಇಲ್ಲ. ಇಂದು ಸರಕಾರ, ಬುದ್ದಿಜೀವಿಗಳು, ಸಂಘಟನೆಗಳು, ಬಲಶಾಲಿಗಳು ಅನ್ಯಾಯ ಮಾಡುವವರ ಪರವಾಗಿ ನಿಂತು ಕೊಂಡಿದ್ದಾರೆ.
  ಸಾವಿರ ವರ್ಷಗಳ ಹಿಂದೆ ಬ್ರಾಹ್ಮಣರು ದಲಿತರ ಕಿವಿಗೆ ಸೀಸ ಸುರಿದರು, ಮಲ ತಿನ್ನಿಸಿದರು ಎಂಬುದನ್ನು ಇಂದಿಗೂ ಅಶ್ತ್ರವಾಗಿ ಬಳಸಲಾಗುತ್ತಿದೆ.
  ನಾನು ಬ್ರಾಹ್ಮಣನಲ್ಲ. ದಲಿತನೂ ಅಲ್ಲ. ಬ್ರಾಹ್ಮಣರ ಮೇಲೆ ವಿಶೇಷ ಗೌರವವಾಗಲೀ, ದಲಿತರ ಕುರಿತು ಕೀಳರಿಮೆಯಾಗಲೀ ನನಗಿಲ್ಲ.
  ನಾನೂ ಹಿಂದೂ ಆಗಿರುವುದೇ ಅಪರಾಧವೆನ್ನಲಾಗುತ್ತಿದೆ. ಬ್ರಾಹ್ಮಣರು ನನ್ನನ್ನು ಹತ್ತಿರ ಕರೆಯುವುದಿಲ್ಲ. ದಲಿತರು ನಾನು ಹಿಂದೂ ಆಗಿರುವುದನ್ನು, ಬೌದ್ಧನಾಗದೇ ಇರುವುದನ್ನು ಸಹಿಸುವುದಿಲ್ಲ.
  ಕಾಲ ಬದಲಾಗಿ, ಬ್ರಾಹ್ಮಣರು ಬಲಿಷ್ಠರಾದರೆ ನನ್ನನ್ನು ಕರೆದು ಅಪ್ಪಿಕೊಳ್ಳುತ್ತಾರೆಂಬ ನಂಬಿಕೆ ನನಗಿಲ್ಲ. ನನಗದು ಬೇಕಾಗಿಯೂ ಇಲ್ಲ.
  ದಲಿತರದೇ ಮೇಲುಗೈಯಾದರೆ ನನ್ನನ್ನು ಈಗಿರುವಂತೆಯೇ ಒಪ್ಪಿಕೊಳ್ಳುತ್ತಾರೆಂಬ ಭರವಸೆಯಿಲ್ಲ.
  ಈಗ ನಾನಿರುವ ಹಿಂದೂಧರ್ಮದಿಂದಲೂ ನನಗೇನೂ ಆಗಬೇಕಿಲ್ಲ. ಕ್ರೈಸ್ತರ ಸಹಾಯ, ಭಿಕ್ಷೆಗೆ ನಾನು ಕೈ ಚಾಚುವವನಲ್ಲ. ಇಸ್ಲಾಮಿಗೆ ಹೆದರಿ ಧಮರ್ಾಂತರಗೊಳ್ಳುವವನೂ ಅಲ್ಲ.
  ನನಗೆ ಬೌದ್ಧ, ಜೈನ, ಸಿಖ್ ಇತ್ಯಾದಿ ಯಾವುದೇ ಮತಗಳ ಕುರಿತು ದ್ವೇಷವಿಲ್ಲ. ವಿಶೇಷ ಪ್ರೀತಿಯೂ ಇಲ್ಲ.
  ನನ್ನ ಇರುವಿಕೆಯನ್ನು ಪ್ರಶ್ನಿಸುವವರ, ನನ್ನ ಜೀವನವನ್ನು ತಮ್ಮ ಮೂಗಿನ ನೇರಕ್ಕೆ ನಿಯಂತ್ರಸಲು ಮುಂದಾಗುವವರ ಕುರಿತು ನನ್ನ ಆಕ್ಷೇಪವಿದೆ.
  ಇಸ್ಲಾಂ ಶ್ರೇಷ್ಠವಾದರೆ ಆಗಲಿ. ಆದರೆ ನನ್ನ ಮೂತರ್ಿಪೂಜೆಯ ಕುರಿತು ಮಾತಾಡಲು ಅವರ್ಯಾರು ? ಏಸು ಸ್ವರ್ಗಕ್ಕೆ ಕರೆದೊಯ್ದರೆ ಒಯ್ಯಲಿ. ಅದು ನನ್ನ ಸಮಸ್ಯೆಯಲ್ಲ. ಆದರೆ ನನ್ನ ಜನ ಸಾವಿರಾರು ವರ್ಷಗಳಿಂದ ನಂಬಿಕೊಂಡು ಬಂದಿರುವ ದೇವರು-ಧರ್ಮವನ್ನು ಅವಹೇಳನ ಮಾಡುವುದರ ಕುರಿತು ನನ್ನ ವಿರೋಧವಿದೆ.
  ನನ್ನದೊಂದು ನೇರ, ಸರಳ ಪ್ರಶ್ನೆಯಿದೆ.
  ದಯವಿಟ್ಟು ಉತ್ತರ ಕೊಡಿ.
  ಮೂರು ಗನ್ನುಗಳಿವೆ ಅಂದುಕೊಳ್ಳಿ. ಮೂರೂ ಗನ್ನುಗಳಲ್ಲಿ ಬುಲೆಟ್ಟುಗಳಿವೆ-ಎಂಬುದು ಆವುಗಳ ಒಡೆಯರ ಪ್ರತಿಪಾದನೆ. ಜೊತೆಗೇ ಅವರಲ್ಲಿಬ್ಬರದು ತಮ್ಮ ಗನ್ನಲ್ಲಿ ಮಾತ್ರ ಬುಲೆಟ್ಟಿದೆಯೆಂಬ ವಾದ. ಮೂರನೆಯವನದು ನನ್ನ ಗನ್ನಲ್ಲಿ ಬುಲೆಟ್ಟಿದೆ. ಅವರ ಗನ್ನಲ್ಲಿ ಇದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಇದ್ದರೂ ಅದು ನನ್ನದೇ ಬುಲೆಟ್ಟು. ಆಕಾರ ಬೇರೆಯಿರಬಹುದು ಅನ್ನುತ್ತಾನೆ.
  ಈ ಕೊನೆಯವನಿಗೆ ಇನ್ನಿಬ್ಬರ ಗನ್ನುಗಳಲ್ಲಿ ಬುಲೆಟ್ಟಿದ್ದರೂ, ತನ್ನ ಗನ್ನಲ್ಲಿ ಇಲ್ಲದಿದ್ದರೂ ಏನೂ ವ್ಯತ್ಯಾಸವಾಗದು. ಹೆಚ್ಚೆಂದರೆ ಕೇವಲ ತನ್ನ ನಂಬಿಕೆಗೆ ಮೋಸವಾಗುವುದು. ಗನ್ನು ತುಂಬಿದೆ ಎಂಬುವುದು ಭ್ರಮನಿರಸನವಾಗಬಹುದು. ಆದರೆ, ಇನ್ನಿಬ್ಬರ ಸಮಸ್ಯೆ ಸರಳವಲ್ಲ. ಅವರು ತಮ್ಮ ಗನ್ನಲ್ಲಿ ಬುಲೆಟ್ಟಿವೆ ಎಂಬುದಕ್ಕಿಂತ ಇನ್ನಿಬ್ಬರ ಗನ್ನು ಖಾಲಿ ಎಂಬುದನ್ನು ಸಾಬೀತುಪಡಿಸುವ ಜರೂರತ್ತಿದೆ.
  ಈಗ ಸರಳ ಲಾಜಿಕ್ಕಿಗೆ ಬರೋಣ.
  ಕ್ರೈಸ್ತರಿಗೆ ಏಸು ಒಬ್ಬನೆ. ಮುಸ್ಲೀಮರಿಗೆ ಅಲ್ಲಾಹ ಒಬ್ಬನೇ. ಮೊದಲು ಅವರಿಬ್ಬರಲ್ಲಿ ಯಾರು ‘ಸರಿ’ ಎಂಬುದು ತೀಮರ್ಾನವಾಗಲಿ. ‘ಏಕದೇವ’ ವಿಚಾರವೇ ಸತ್ಯವೆಂಬ ನಿರ್ಣಯಕ್ಕೆ ಇಬ್ಬರೂ ಬರುವುದಾದರೆ, ಆವರಿಬ್ಬರಲ್ಲೊಬ್ಬರು ತಮ್ಮ ತಪ್ಪು ಒಪ್ಪಿಕೊಳ್ಳಬೇಕು. ಇಲ್ಲವಾದರೆ, ಕೋಟ್ಯಾಂತರ ದೇವರನ್ನು ನಂಬಿರುವ ಹಿಂದೂ ಆ ಇಬ್ಬರಲ್ಲಿ ಯಾರನ್ನೂ ಒಪ್ಪಬಾರದು.
  ಯಾರಿಗೆ ಇಸ್ಲಾಮ್ ಮತ್ತು ಕ್ರೈಸ್ತ ಮತಗಳೇ ಹಿಂದೂಧರ್ಮಕ್ಕಿಂತ ಶ್ರೇಷ್ಠ, ಉತ್ತಮ ಎನಿಸುತ್ತವೋ ಅವರು ಅವನ್ನು ಗೌರವಿಸಲಿ. ಆದರೆ, ನಾನು ಹಿಂದುತ್ವಕ್ಕಂಟಿಕೊಂಡಿರುವುದನ್ನು ಪ್ರಶ್ನಿಸುವ ಅರ್ಹತೆ ಅವರಿಗಿಲ್ಲ.
  ನಿತ್ಯ ಬಾಂಬೆಸೆದು ಕೊಲ್ಲುವ, ಆಮಿಷವೊಡ್ಡಿ ಮತಾಂತರಿಸುವ ಕುಕೃತ್ಯಗಳನ್ನು ಬೆಂಬಲಿಸಲು ನನ್ನಲ್ಲಿ ಯಾವುದೇ ಕಾರಣವಿಲ್ಲ. ಆದರೆ, ಇಂದಿನ ದಿನಗಳಲ್ಲಿ ನನ್ನ ಇಷ್ಟಬಂದಂತೆ, ನನ್ನ ಮಿತಿಯಲ್ಲಿ ಬದುಕಲು ಆಸ್ಪದವಿರುವ ಹಿಂದೂಧರ್ಮವನ್ನು ಬಿಟ್ಟು ಹೋಗುವ ಅವಶ್ಯಕತೆ, ಅನಿವಾರ್ಯತೆಗಳೂ ನನಗಿಲ್ಲ.
  ಈಗ ಹೇಳಿ, ಎಂದಾದರೊಂದು ದಿನ ಬೌದ್ಧನಾಗದೇ ಬೇರೆ ದಾರಿಯಿಲ್ಲ ಎನ್ನುವವರನ್ನು, ಕ್ರೈಸ್ತರಾದರೇ ಸ್ವರ್ಗ ಎನ್ನುವವರನ್ನು, ಅಲ್ಲಾನನ್ನು ಮಾತ್ರ ಆರಾಧಿಸಬೇಕೆನ್ನುವವರನ್ನು ಪ್ರೀತಿಯಿಂದ ಕಾಣಬೇಕೆಂದು, ಗೌರವಿಸಬೇಕೆಂದು, ದ್ವೇಷಿಸಬಾರದೆಂದು, ಕೊಂದು ಹಾಕಬಾರದೆಂದು ನನ್ನ ಸಂತಾನಕ್ಕೆ, ನನ್ನ ಪೀಳಿಗೆಗೆ ನಾನು ಯಾವ ಬಾಯಿಂದ ಹೇಳಲೀ ?

  ಸಂಗು ಹುಂಡೇಕಾರ
  ಶ್ರೀರಾಮ ಸೇನಾ – ಪ್ರಚಾರ ಪ್ರಮುಖ
  ಹುಬ್ಬಳ್ಳಿ
  ಮೊಬೈಲ್ : 934 229097

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Create a free website or blog at WordPress.com.

Up ↑

%d bloggers like this: