ಖುಶಿಪಡಲೆರಡು ಸಂಗತಿಗಳು!


 ನನಗಂತೂ ಖುಷಿಯಾಗಿದೆ. ಅಂತೂ ನನ್ನ ಬ್ಲಾಗ್ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ‘ಮೊದಲು ಎಲ್ಲವೂ ಸರಿಯಿದ್ದ’ ಬ್ಲಾಗ್ ದುನಿಯಾದಲ್ಲಿ ‘ನನ್ನ ಆಗಮನದ ನಂತರ’ ಸಾಕಷ್ಟು ತೊಂದರೆಯಾಗಿದೆ. ನಿಜ! ನನ್ನ ಕೆಪಾಸಿಟಿ ಇಷ್ಟರ ಮಟ್ಟಿಗೆ ಇದೆ ಅನ್ನೋದು ಖಂಡಿತ ನನಗೆ ಗೊತ್ತಿರ್ಲಿಲ್ಲ. ಗೊತ್ತು ಮಾಡಿಕೊಟ್ಟ ಮಹಾಶಯರಿಗೆ ಅನಂತಾನಂತ ಧನ್ಯವಾದಗಳು.

 

ನೆನ್ನೆ ತಾನೆ ಗೆಳತಿಯೊಟ್ಟಿಗೆ ಮಾತನಾಡಿದ್ದೆ. ಈ ಪೂರ್ವಗ್ರಹ ಪೀಡಿತ ಮಂದಿಯೆದುರು ಮಾತಾಡಿ ಉಪಯೋಗವಿಲ್ಲ, ಸದ್ಯಕ್ಕೆ ನನ್ನ ಪಾಡಿಗೆ ನಾನು ಕಥೆ ಕವನದ ಥರದ್ದೇನಾದರೂ ಬರೆದ್ಕೊಂಡು ಇದ್ದುಬಿಡ್ತೇನೆ ಅಂತ. ಬಹುಶಃ ನನ್ನ ವಿಧಿಗೆ ಅದು ಸೈರಣೆಯಗಲಿಲ್ಲವೇನೋ? ಸದಾ ಒಳಗೊಳಗೆ ಕುದಿಯುತ್ತಿರುವ ನನಗೆ ಭಗ್ಗೆನ್ನಲು ಅನಾಯಾಸವಾಗಿ ಮತ್ತೊಂದು ಲೀಟರ್ ತುಪ್ಪ (ಸೀಮೆ ಎಣ್ಣೆ ಅಂದರೇ ಸರಿಯೇನೋ!?) ಸುರಿಯಿತು. ಇನ್ನು, ಸುಮ್ಮನಿರುವುದು ಹೇಗೆ, ನೀವೇ ಹೇಳಿ?

ನನ್ನ ಈ ತಲೆ ಬುಡವಿಲ್ಲದ ಮಾತಿನ ಅರ್ಥ ನೀವು ಮಾಡಿಕೊಳ್ಳಬೇಕೆಂದರೆ, ಇತ್ತೀಚೆಗೆ ಕನ್ನಡ ಅಂತರ್ಜಾಲ ಪತ್ರಿಕೆಯೊಂದರಲ್ಲಿ ನಡೆದ- ನಡೆಯುತ್ತಿರುವ ಒಂದು ಚರ್ಚೆಯನ್ನು ಓದಬೇಕು. ನಿಮ್ಮಲ್ಲಿ ಬಹುತೇಕರು ಓದಿಯೇ ಇರುತ್ತೀರಿ ಬಿಡಿ. ಇಲ್ಲಾ, ಕೇಳಿಯಾದರೂ ಇರುತ್ತೀರಿ.

ವಿಷಯ, ಅದಕ್ಕೆ ಸಂಬಂಧ ಪಟ್ಟಿದ್ದೇ.
ಆ ಚರ್ಚೆಯ ಪ್ರತಿಕ್ರಿಯೆಗಳ ಸರಪಳಿಗೆ ನನ್ನದೊಂದು ಕೊಂಡಿ ಸೇರಿಸಿದ್ದೆ. ಯಾರೋ ಉತ್ತರ ಅಂದುಕೊಂಡು ಬರೆಯುತ್ತಾ ಪ್ರಶ್ನೆಗಳನ್ನು ಕೇಳಿದರು. ನನ್ನ ಉತ್ತರಗಳಿಗೆ ಪ್ರತಿವಾದ ಹೂಡುತ್ತಾ….. ಥೋ… ಬಿಡಿ.
ಆದರೂ, ಮಜವಾಗಿತ್ತು. ಎಂಥೆಂಥ ಆರೋಪಗಳು ಅಂತೀರಾ? ಈಗ ನನಗೆ ಸಮಾಧಾನವಾಯಿತು. ಅಸಲಿಗೆ ನಾನು ಬ್ಲಾಗ್ ತೆಗೆದದ್ದೇ ಮೇಲ್ವರ್ಗದವರನ್ನ ಒಟ್ಟುಗೂಡಿಸಿ ಗುಂಪುಗಾರಿಕೆ ನಡೆಸಲಿಕ್ಕಲ್ಲವೆ? ಅದೀಗ ಯಶಸ್ವಿಯಾಗಿದೆ ಅನ್ನೋದನ್ನ ಮಹಾಶಯರೊಬ್ಬರು ಘೋಷಿಸಿದ್ದಾರೆ. ಸೆಲೆಬ್ರೇಟ್ ಮಾಡಲೊಂದು ಪಾಯಿಂಟು. ಎರಡನೇ ಪಾಯಿಂಟು, ಬ್ಲಾಗ್ ದುನಿಯಾದಲ್ಲಿ ಬಿರುಕು ತಂದು ಹೊಸ ಬಣ ಕಟ್ಟಿದ್ದು!! ನಿಮಗೆ ಗೊತ್ತಾ? ಅದರ ಕ್ರೆಡಿಟ್ಟೂ ನನಗೇ ಸಿಕ್ಕಿದೆ!! ಪಾರ್ಟಿ ಕೊಡಿಸಲಿಕ್ಕೆ ಮತ್ತೊಂದು ಪಾಯಿಂಟು!!

                                                       

ನನಗಂತೂ ಖುಷಿಯಾಗಿದೆ. ಅಂತೂ ನನ್ನ ಬ್ಲಾಗ್ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ‘ಮೊದಲು ಎಲ್ಲವೂ ಸರಿಯಿದ್ದ’ ಬ್ಲಾಗ್ ದುನಿಯಾದಲ್ಲಿ ‘ನನ್ನ ಆಗಮನದ ನಂತರ’ ಸಾಕಷ್ಟು ತೊಂದರೆಯಾಗಿದೆ. ನಿಜ! ನನ್ನ ಕೆಪಾಸಿಟಿ ಇಷ್ಟರ ಮಟ್ಟಿಗೆ ಇದೆ ಅನ್ನೋದು ಖಂಡಿತ ನನಗೆ ಗೊತ್ತಿರ್ಲಿಲ್ಲ. ಗೊತ್ತು ಮಾಡಿಕೊಟ್ಟ ಮಹಾಶಯರಿಗೆ ಅನಂತಾನಂತ ಧನ್ಯವಾದಗಳು.

ಒಂದೇ ಒಂದು ಗಮ್ಮತ್ತಿನ ಸಂಗತಿ ಹೇಳ್ಬೇಕು ನಿಮಗೆ. ಹಾಗೆ ಆ ಚರ್ಚೆ ನಡೀತಿದೆಯಲ್ಲ, ಅಲ್ಲಿ ಲೇಖನದ ಪರ ಮಾತಾಡುವ, ಮೇಲ್ಜಾತಿಯವರನ್ನು (?) ಬಯ್ಯುತ್ತಿರುವ ಬಹುತೇಕರಿಗೆ ಹೆಸರೇ ಇಲ್ಲ. ಲೇಖನದ ವಿರೋಧ ಮಾತಾಡ್ತಿರೋರ ಸೊಕ್ಕು(!?) ಎಷ್ಟು ಗೊತ್ತಾ? ಅವ್ರಲ್ಲಿ ಹೆಚ್ಚಿನ ಪಾಲು ಜನ ತಮ್ಮ ಹೆಸರು ಹಾಕ್ಕೊಂಡೇ ವಾದ ಮಾಡಿದಾರೆ. ಎಷ್ಟು ಗರ್ವ ಇರಬಹುದಲ್ವಾ? ಅದನ್ಯಾರೋ ತಾಖತ್ತು ಅಂತಿದ್ರಪ್ಪ… ನಂಗೊತ್ತಿಲ್ಲ.

ಮತ್ತೊಂದು ಗಮ್ಮತ್ತು…
ಶತಮಾನದ ಹಿಂದೆ ನಡೆದ ಆಕ್ರಮಣ, ಮತಾಂತರಗಳನೆಲ್ಲ ಹಿಡ್ಕೊಂಡು (ಈಗಲೂ ಅವೆಲ್ಲ ಸುಸೂತ್ರವಾಗಿ ನಡೀತಲೇ ಇವೆ ಅನ್ನೋದು ಬೇರೆ ವಿಷಯ) ಈಗ ಕಾರಿಕೊಳ್ಳೋದು ಅಮಾನವೀಯ ಅಂತ ಅರಚಾಡ್ತಿರೋರೇ ಆ ಮಹರಾಯ ಮನು ಬರೆದಿಟ್ಟು ಹೋಗಿದ್ದನ್ನ ಈಗ ನೆನೆಸ್ಕೊಳ್ತಾನೂ ಇಲ್ಲದ ಸೋ ಕಾಲ್ಡ್ ಮೇಲ್ವರ್ಗದವ್ರನ್ನ ‘ಮನುವಾದಿಗಳು’, ದಲಿತರನ್ನ ತುಳಿದವರು ಅಂತೆಲ್ಲ ಕಾರಿಕೊಳ್ತಲೇ ಇದಾರೆ! ಎಷ್ಟು ಮಜವಾಗಿದೆ ನೋಡಿ!!
( ಇದನ್ನೂ ಮೀರಿ ಅಸ್ಪೃಶ್ಯತೆ ಆಚರಿಸುವವರು ಪಶುಗಳಿಗಿಂತ ಕಡೆ ಎಂದು ನಾನಂತೂ ಭಾವಿಸ್ತೇನೆ)

ಇಲ್ಲಿ ಒಂದೆರಡು ಎಕ್ಸಾಂಪಲ್ಲು ಕೊಟ್ಟಿದೀನಷ್ಟೇ. ಈ ಥರದ ಸಂಗತಿಗಳು ಸಾಕಷ್ಟಿವೆ ಅಲ್ಲಿ. ಎಲ್ಲ ಗಿಳಿಪಾಠ. ಅಷ್ಟನ್ನ ಬಿಟ್ಟು ಬೇರೆ ಮಾತಾಡಿದರೆ ಉತ್ತರಿಸಲು ಗೊತ್ತಾಗದೆ ವೈಯಕ್ತಿಕ ದಾಳಿಗಿಳಿಯುವುದು. ಹ್ಹ್! ಹಣೆ ಬರಹವೇ ಅಷ್ಟಾಯಿತಲ್ಲ!

ಏನು ಮಾಡ್ಲೀ ಈಗ? ನನ್ ಬ್ಲಾಗ್ ನನ್ನ ಸ್ವಂತದ ಕನವರಿಕೆಗೆ ಸೀಮಿತವಾಗಿತ್ತು ಇಷ್ಟು ದಿನ. ಈಗ ನನ್ನ ಮೇಲೆ, ಮೇಲ್ವರ್ಗದವರನ್ನು ಕಟ್ಟಿಕೊಂಡು ಗುಂಪುಗಾರಿಕೆ ಸೃಷ್ಟಿಸಬೇಕೆನ್ನುವ ಹೊಸ ಜವಾಬ್ದಾರಿ ಹೊರಿಸಲಾಗಿದೆ. ಯೋಚಿಸ್ತಿದೀನಿ ನಾನೂ…
ಹೀಗೆ ಮಾಡಿದ್ರೆ ಹೇಗೆ?
ಹಿಂದುಳಿದ ಗ್ರಾಮಗಳಲ್ಲಿ, ಕೊಳಚೆ ಪ್ರದೇಶಗಳಲ್ಲಿ, ಎಲ್ಲೆಲ್ಲಿ ‘ಮಾತಾಡುವ ಮಂದಿ’ ಹೋಗೋದಿಲ್ವೋ ಅಲ್ಲೆಲ್ಲಾ ಕೆಲವು ‘ಕೆಲಸವಿಲ್ಲದವರು’ ಹೋಗಿ ಜೀವ- ಜೀವನಗಳನ್ನ ಮುಡಿಪಾಗಿಟ್ಟು ಸೇವೆ ಅಂದ್ಕೊಂಡು ಮಾಡ್ತಿರ್ತಾರಲ್ಲ, ಆ ಪ್ರದೇಶಗಳಲ್ಲಿ ನಡೆಸ್ತಿರೋ ಕೆಲಸಗಳ ಬಗ್ಗೆ ಮಾಹಿತಿ ಕೊಡೋಕೇ ಅಂತಲೇ ಒಂದು ಪೇಜ್ ಕ್ರಿಯೇಟ್ ಮಾಡಿದ್ರೆ ಹೇಗಿರತ್ತೆ?

ಸಿಮಿ ಉಗ್ರರ ಬಯೋಡೇಟಾ, ನಕ್ಸಲರ ಚರಿತ್ರೆ, ಮತಾಂತರದ ಜಾಲ- ಪರಿಣಾಮ, ಹಿಂದೆ ಮುನ್ನುಡಿದಿದ್ದ ಸಂಗತಿಗಳಲ್ಲಿ ನಿಜವಾದುದರ, ಆಗುತ್ತಿರುವುದರ ಮಾಹಿತಿ… ಇವೆಲ್ಲವನ್ನೂ ಕೊಡುತ್ತಾ ಹೋದರೆ…?

ರಾಷ್ಟ್ರೀಯ ವಿಚಾರ ಧಾರೆಗಳ ವೆಬ್ ಸೈಟ್ ಗಳ ಲಿಂಕು? ಸೋ ಕಾಲ್ಡ್ ಬುದ್ಧಿ ಜೀವಿಗಳ ಅಜೆಂಡಾಗಳ ಅನಾವರಣ? ಸೌಹಾರ್ದದ ಹೆಸರಲ್ಲಿ ಮನಸುಗಳನ್ನು ಒಡೆಯುತ್ತಿರುವವರ, ಜಾತಿ ಜಾತಿ ಅನ್ನುತ್ತಾ ಕ್ರಾಂತಿಯ ಭ್ರಾಂತಿಯಲ್ಲಿ ಮುಳುಗಿ ಹೋದವರ ಬಗ್ಗೆ ಬರೆದರೆ…?

ಅಯ್ಯೋ! ಅಷ್ಟು ಸುಲಭಾನಾ ಅದೆಲ್ಲಾ? ಎಷ್ಟು ಅಧ್ಯಯನ ಮಾಡಬೇಕೂ, ಏನು ಕಥೇ? ನಂಗಂತೂ ಹಾಗೆಲ್ಲ ‘ಯಾರೋ ಹೇಳಿದ ವೇದ ವಾಕ್ಯವನ್ನೇ’ ನಂಬಿ ಹೆಳುತ್ತ ಹೋಗಲು ಬರೋದಿಲ್ಲ. ನಾನೇ ಅಧ್ಯಯನ ಮಾಡ್ಬೇಕು, ಸರಿ- ತಪ್ಪು ಗ್ರಹಿಸ್ಬೇಕು, ಆಮೇಲೇ ನಿಮಗೆ ಹೇಳ್ಬೇಕು. ನನ್ ತಪ್ಪಿದ್ರೆ, ಸಾರಿ ಕೇಳಿ ತಿದ್ಕೊಳ್ಬೇಕು, ಅಷ್ಟೇ.

ಸಿಕ್ಕಾ ಪಟ್ಟೆ ಹರಟಿಬಿಟ್ಟೆ ಅಲ್ವಾ?
ಏನು ಮಾಡ್ತೀರಿ? ನನಗೆ ಅನಾಯಾಸವಾಗಿ ದಕ್ಕಿದ ಯಶಸ್ಸನ್ನ ಅರಗಿಸ್ಕೊಳೋಕೆ ಇಷ್ಟೆಲ್ಲಾ ಮಾಡಬೇಕಾಯ್ತು. ಇನ್ನು ಬಾಕಿ ಉಳಿದಿರೋದು, ಮೇಲೆ ಹೇಳಿದ ಸಂಗತಿಗಳನ್ನ ಕಲೆ ಹಾಕಿ, ಕನ್ನಡಕ್ಕೆ ಅನುವಾದಿಸಿ… ಸಾಕಷ್ಟು ಕೆಲಸವಿದೆ.
ಬೈ.

ವಂದೇ,
ಚೇತನಾ ತೀರ್ಥಹಳ್ಳಿ

16 thoughts on “ಖುಶಿಪಡಲೆರಡು ಸಂಗತಿಗಳು!

Add yours

 1. ಚೇತನಾ,

  ನಾನು ಈಗಷ್ಟೆ ಆ ಲೇಖನವನ್ನು ಮತ್ತು ಅದಕ್ಕೆ ಬಂದಿರುವ ಕಮೇಂಟುಗಳನ್ನು ಒದಿದೆ (ಕಾರ್ಯದೊತ್ತಡದ ನಡುವೆ ಬ್ಲಾಗಗಳನ್ನು ಒದಲಾಗಿರಲಿಲ್ಲ), ಯೋಗಾಯೋಗವೆಂದರೆ ಈಗ ಸಧ್ಯಕ್ಕೆ ನಾನು ಓದುತ್ತಿರುವ ಪುಸ್ತಕ “ಭೈರಪ್ಪನವರ ತಂತು” ಇದು ನಾನು ಓದುತ್ತಿರುವ ಭೈರಪ್ಪನವರ ಎರಡನೆಯ ಕೃತಿ (ಮೊದಲನೆಯದು ‘ಮಂದ್ರ’).

  ಆ ಲೇಖನ ಮತ್ತು ಅದಕ್ಕೆ ಬಂದಿರುವ ಕಮೇಂಟುಗಳನ್ನು ಓದಿದ ಮೇಲೆ…ಛೇ..ಛೇ.. ಎಂದು ಕೈ ಹಿಸುಕಿಕೊಂಡೆ ಮತ್ತು ನನಗೆ “ಛೇ… ಎಂಥ ಚಾನ್ಸ ಮಿಸ್ಸ ಮಾಡ್ಕೊಂಡೆ, ಕನ್ನಡ ಸಾಹಿತ್ಯ ಲೋಕದಲ್ಲಿ ಗಮನ ಸೇಳೆಯಬಹುದಿತ್ತಲ್ಲ, ಬಲವೋ..ಎಡವೋ… ಆಗಬಹುದಿತ್ತಲ್ಲ” ಎಂದನಿಸಿದ್ದು ಸುಳ್ಳಲ್ಲ.

  ಅಲ್ಲಿ ಸಂಪಾದಕರು ಚರ್ಚೆ ಮುಗಿದಿದೆ ಎಂದು ಅನೌನ್ಸ ಮಾಡಿರುವುದರಿಂದ ಮತ್ತು ನೀವೇ ಈ ಲೇಖನ ಬರೆದುರುವುದರಿಂದ ಅಲ್ಲಿ ಅಪೂರ್ಣವಾದ ಚರ್ಚೆ ಇಲ್ಲಿ ಮುಂದುವರೆಯುತ್ತದೆ ಮತ್ತು ನಾನಿಗ “ದೀಪಾವಳಿಗಾಗಿ ಊರಿಗೆ ಬರುತ್ತಿರುವುದರಿಂದ ಮತ್ತೆ ಸ್ವಲ್ಪ ದಿನ ಬ್ಲಾಗಲೋಕದಿಂದ ದೂರವಾಗುತ್ತಿದ್ದೆನೆ, ಹೀಗಾಗಿ ನಾನು ಊರಿಂದ ಬಂದ ಮೇಲೆ ಆದ ಚರ್ಚೆಗಳನ್ನು ಓದಿದ ಮೇಲೆ ನಾನು ಬಲವೋ..ಎಡವೋ… ಎಂದು ನಿರ್ಧರಿಸಿ ಅನೌನ್ಸಿಸಲು ತಾವು ಅನುಮತಿ ನೀಡಬೇಕು (ಅವಕಾಶವಾದಿ ಎಂದರೂ ಪರವಾಗಿಲ್ಲ 😉 ).

  ಎಕೆಂದರೆ ನಾನೊಬ್ಬ ಬರಿ ಓದುಗ, ಅತ್ಯುತ್ತಮವಾದದ್ದು ಭೈರಪ್ಪನವರೆ ಬರೆಯಲಿ ಇಲ್ಲವೇ ಮೂರ್ತಿಯವರೆ ಬರೆಯಲಿ ಅಥವಾ ಜೋಗಿ or ಚೇತನಾ ಬರೆಯಲಿ ಓದುತ್ತೆನೆ ಮತ್ತು ಮೆಚ್ಚುತ್ತೆನೆ, “ಬರೆಯುವುದು ನಿಮ್ಮ ನಿಮ್ಮ ಕರ್ಮ ನಾವು ಎನು ಓದುವುದು ಎಂದು ನಿರ್ಧರಿಸುವುದು ನಿಮ್ಮ ಧರ್ಮವಲ್ಲ” ಇದೂ ನಿಮ್ಮೆಲ್ಲರಿಗೂ ಮತ್ತು ಆವಗವಾಗ ಬ್ಲಾಗ ಬರೆದು ಕನ್ನಡಕ್ಕೆ ನೋಬಲ ತರಲೆ ಬೇಕೆಂದು ಅಂದುಕೊಂದಿರುವ ನನ್ನನ್ನು ಸೇರಿಸಿದ ಹುಂಬ ಬ್ಲಾಗರಗಳಿಗೂ ಅರ್ಥವಾದರೆ ಸಾಕು.

  ನಾನಿವತ್ತು ಊರಿಗೆ ಹೋರಟಿದ್ದೇನೆ, ನಾಳೆ ನಮ್ಮೂರ ಬಸ್ ಸ್ಟಾಂದಿನ್ನಲ್ಲಿ ನಾನಿಳಿದಾಗ ಕಪ್ಪು ಬಾವುಟ ಪ್ರದರ್ಶನವಾಗಲಿ, ಧಿಕ್ಕಾರಗಳಾಗಲಿ ಬೇಕಿಲ್ಲ, ಹೀಗಾಗಿ ಎಡಕ್ಕೂ, ಬಲಕ್ಕೂ ಎರಡಕ್ಕು ಸೇರದಿರುವ ನನ್ನಂಥ ಎಡಬಿಡಂಗಿಗಳಿಗೂ ಈಗಲೇ “ಕ್ಷಮೆ ಕೇಳಿದ್ದೆನೆ”

  ಎಲ್ಲರಿಗೂ ಶುಭ ದೀಪಾವಳಿ

  -ಶೆಟ್ಟರು, ಮಂಬಯಿ

 2. Oh ಅದಾ!!
  ಆದ್ರೆ ಅಲ್ಲಿ ನಿಮ್ಮ ಬಗ್ಗೆ ಕಮೆಂಟ್ ನೋಡಿಲ್ವಲ್ಲ!!

  ಇರ್ಲಿ ಬಿಡಿ ಅಷ್ಟೆಲ್ಲಾ ಓದೋಕೆ ನಂಗೂ ಟೈಮ್ ಇಲ್ಲ….
  ಯಾರಾದ್ರೂ ಡೈರೆಕ್ಟ್ ಲಿಂಕ್ ಕೊಟ್ರಷ್ಟೇ ನೋಡ್ಬಹುದು:)

 3. ಅಕ್ಕಾ ನೀವು ತುಂಬಾ ಡಿಸ್ಟರ್ಬ್ ಆಗಿರುವಂತಿದೆ. ಚರ್ಚೆಗಳು ನಮ್ಮಲ್ಲಿ ಕೇವಲ ವೈಮನಸ್ಸು, ಆವೇಶ ಹುಟ್ಟಿಸುತ್ತವೆ ನಮ್ಮನ್ನು ಡಿಸ್ಟರ್ಬ್ ಮಾಡುತ್ತವೆ ಎಂದರೆ ಅವುಗಳಲ್ಲಿ ಪಾಲ್ಗೊಳ್ಳದಿರುವುದೇ ಲೇಸು.
  ಅಂದ ಹಾಗೆ ನೀವು ಹಾಕಿಕೊಂಡಿರುವ ಹೊಸ ಯೋಜನೆಯ ಅಗತ್ಯವಿಲ್ಲ ಅನ್ನಿಸುತ್ತದೆ. ನೀವು ಯಾರಿಗೂ ಏನನ್ನೂ ಸಾಬೀತು ಮಾಡಬೇಕಿಲ್ಲ.
  ಬ್ಲಾಗಿನಲ್ಲಿ ಗುಂಪುಗಾರಿಕೆ, ಕೋಮುವಾದ ಎಂದೆಲ್ಲಾ ಹೇಳುವವರಿಗೆ ಕಣ್ಣ ಮುಂದಿನ ಗಾಜನ್ನು ಸರಿಸಿ ನೋಡಲು ಸಲಹೆ ನೀಡಬಹುದಷ್ಟೇ.

  ಉಳಿದಂತೆ ಹ್ಯಾಪಿ ಬ್ಲಾಗಿಂಗ್!

 4. ನಾನೂ ಒಂದು ಪ್ರತಿಕ್ರಿಯೆ ಹಾಕಿದ್ದೆ ಆದ್ರೆ ಬ್ಲಾಗ್ ನಲ್ಲಿ ತಾನೇ ತಾನಾಗಿ ಹೆಸರು ಬಂದು ಬಿಡುತ್ತಲ್ಲ ಅದೇ ಗುಂಗಿನಲ್ಲಿ submit ಒತ್ತಿಬಿಟ್ಟೆ !! ಹಾಗಾಗಿ ನಾನೂ ಹೆಸರಿಲ್ಲದೆ ಕಮೆಂಟ್ ಹಾಕೋರ ಜಾತಿಗೆ ಸೇರಿಬಿಟ್ಟೆ!! ಛೇ!!

  ಅಂದ ಹಾಗೆ ನಾನು ಬರೆದದ್ದು
  “ಮತಾಂತರದ ಬಗ್ಗೆ ಚರ್ಚೆ ಮಾಡಲು ವಿ,ಕ ವೇದಿಕೆಯೊದಗಿಸಿದರೆ ಅದು ಭೈರಪ್ಪ ಪರ ವಿರೋಧ ಚರ್ಚೆಯಾಗಿ ಬೆಳೀತಾ ಇರೋದು ನಿಜಕ್ಕೂ ಶೋಚನೀಯ ! ಭೈರಪ್ಪನವರೆನಾದ್ರೂ ಮತಾಂತರದ ಪರವಾಗೇನಾದ್ರೂ ಬರೆದಿದ್ರೆ ಇದೇ ಜನ ಆಗಲೂ ಭೈರಪ್ಪನವರನ್ನು ವಿರೋಧಿಸಿಯೇ ಬರೀತಾ ಇದ್ರೇನೊ? ಆಡಳಿತ ಪಕ್ಶ ಎಷ್ಟೆ ಒಳ್ಳೆಯ ಯೋಜನೆ ತಂದ್ರೂ ವಿರೋಧ ಪಕ್ಷದವರು ಅದನ್ನು ವಿರೋಧಿಸಿಯೇ ಸಿದ್ಧ ಅನ್ನೋ ಹಾಗೆ! ಸಾಹಿತಿಗಳಿಗೆ ಅಗತ್ಯಕ್ಕಿಂತ ಹೆಚ್ಚು ಗೌರವ ಸಿಕ್ತಾ ಇದೆ.ಅದಿಕ್ಕೆ ಈ ಪರಿ ನಾನು ಹೇಳಿದ್ದೆ ಸರಿ ಅನ್ನೋ ಭಾವನೆ ಸಾಹಿತಿಗಳಿಗೆ. ಬೂಕರ್ ಪ್ರಶಸ್ತಿ ದೊರೆತ ಅರವಿಂದ ಅಡಿಗ ಎಲ್ಲರಿಗೂ ಗೊತ್ತು ,ಆದ್ರೆ ವರ್ಷಾನುಗಟ್ಟಲೆ ’ಚಂದ್ರಯಾನ’ಕ್ಕೆ ಶ್ರಮ ಪಟ್ಟ ಒಬ್ಬ ವಿಜ್ಞಾನಿಯ ಹೆಸರೂ ನಮಗೆ ಗೊತ್ತಿಲ್ಲ! ನಾಳೆ ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ’ನಿಮ್ಮ ಅಭಿಪ್ರಾಯ ಏನು ?’ ಅಂತ ಕೇಳೋದು ಇದೇ ಸಾಹಿತಿಗಳನ್ನು .ಆ ವಿಜ್ಞಾನಿ ಪಾಪ ’ಚಂದ್ರಯಾನ -೨ ’ ಹೇಗೆ ಯಶಸ್ವಿಗೊಳಿಸೋದು ಅಂತ ಲೆ ಕೆಡಿಸಿಕೊಂಡಿರ್ತಾನೆ!!!! ಜನರು ಸಾಹಿತಿಗಳಿಗೆ ಅಗತ್ಯಕ್ಕಿಂತ ಹೆಚ್ಚೇ ಗೌರವ ನೀಡಿದ್ದಾರೆ.ಅದನ್ನು ಉಳಿಸಿಕೊಳ್ಳೋದು ಬಿಟ್ಟು ಈ ರೀತಿ ಕೆಸರೆರಚಾಟ ಮಾಡೋದು ಸರಿಯಲ್ಲ. ನಾಳೆ ಒಂದು ಕಾಲ ಬರುತ್ತೆ ಪುಸ್ತಕ ಅನ್ನೋದು ಒಂದು ಸರಕು-ಲೇಖಕ ಅನ್ನೋದು ಒಬ್ಬ contractor ಅಷ್ಟೆ! ಆಗ ಯಾರೂ ಸಾಹಿತಿಗಳ ಅಭಿಪ್ರಾಯ ಕೇಳೊದಿಕ್ಕೇ ಹೋಗಲ್ಲ!!!…”

 5. ಮೇಡಂ, ಏನೂ ಅಷ್ಟೊಂದ್ ಅರ್ಥ ಆಗಲಿಲ್ಲಾ 😦 .. ಆದ್ರೆ ಬುಸ್ಸುಗುಡುತ್ತಾ ಇದ್ದೀರಿ.. ಕೇಳ್ಸ್ತಿದೆ.
  ಏನೇನೋ ಐಡಿಯಾಗಳು.. ಪ್ಲಾನ್ ಗಳು ಟ್ರಿಗರ್ ಆಗಿದಾವೆ..
  ರಭಸದಲ್ಲಿ ಹೊರಟಿದ್ದೀರಿ..Take it easy.. ಖುಷಿಯಿಂದ ಹಿಂತಿರುಗಿ..
  ಜೈ.

  ಸಂದೀಪ್, “Oh ಅದಾ” ದ ಲಿಂಕ್ ಹೇಳ್ರೀ .. ನಾನೂ ಸೀಕ್ರೆಟ್ ಆಗಿ ಓಡಾಡಿಕೊಂಡ್ ಇರ್ತೀನಿ…ಪ್ಲೀಸ್..

  -rameshabv @Gmail

  Adಉ:
  ಕನ್ನಡ ಟೈಪಿಸಲು http://www.googlekannada.com ಬಳಸಿ, ಇನ್ನೊಂದ್ ಸ್ವಲ್ಪ ಉದ್ಧಾರ ಆಗಿ.

 6. ಯಾರು ಎಡವೋ ಯಾರು ಬಲವೋ …ಯಾರು ಯಾವ ಬಣವೋ…. ದೇವ್ರೇ….
  ಸುಮ್ನೆ ಲೇಖಕರ ಹೆಸರೇ ಇಲ್ಲದೆ ಬರೀ ಸಾಹಿತ್ಯವಷ್ಟೇ ನಮ್ಮ ಮುಂದಿರೋ ಹಂಗಿದ್ರೆ ಎಷ್ಟು ಚಂದ ಇರ್ತಿತ್ತಪ್ಪಾ! ಎಲ್ಲಾನೂ ಬರ್ಕೊಂಡು, ಎಲ್ಲಾನೂ ಓದ್ಕೊಂಡು ಹಾಯಾಗಿರಬಹುದಿತ್ತು!
  ಕಾಳಿದಾಸನ ಕಾಲದವರ ಹಂಗೆ ಒಳ್ಳೊಳ್ಳೆ ಕೃತಿಗಳನ್ನು ಕೊಟ್ಟು ಅನಾಮಧೇಯರಾಗಿ ಉಳಿದುಹೊದವ್ರ ಬುದ್ದಿ ನಮ್ಗೂ ಇದ್ದಿದ್ರೆ ಇಷ್ಟೆಲ್ಲಾ ರಗಳೇನೆ ಇರ್ತಿರ್ಲಿಲ್ಲ ನೋಡಿ!
  ಹೋಗ್ಲಿ ಬಿಡಿ ಚೇತನಾ ಮೇಡಂ, keep goingu……. 🙂

  ಪ್ರೀತಿಯಿಂದ
  -ವೈಶಾಲಿ

 7. ಬಿಡುವು ಮಾಡ್ಕೊಂಡು ನೋಡಿದೆ ಚರ್ಚೆ.
  ಛೇ ನಂಗೆ ಗೊತ್ತೇ ಇರ್ಲಿಲ್ಲ ಮಾರಯ್ರೇ ನಮ್ಮ ಕನ್ನಡ ಸಾಹಿತಿಗಳು ಈ ರೀತಿ ಕಚ್ಚಾಡ್ತಾರೆ ಅಂತ.
  ಚಾಮರಾಜ ಸವಡಿಯವರು ಹೇಳಿದ್ರು ಬೇರೆ ಭಾಷೆಯ ಸಾಹಿತಿಗಳೂ ಇಂಗೇ ಯಾ ಅಂತ. ಆದ್ರೆ ಅವ್ರು ಹಾಳಗಿ ಹೋಗ್ಲಿ ನಂಗೆನಾಗ್ಬೇಕು.

  ತುಂಬಾ ಬೇಜಾರಾಯ್ತ್ರಿ .ಬ್ಲಾಗ್ ಮುಚ್ಚಿ ನನ್ ಪಾಡಿಗೆ technical ಕೆಲ್ಸ ಮಾಡ್ಕೊಂಡಿರೋದೆ ಒಳ್ಳೇದು ಅಂತ ಕಾಣ್ಸುತ್ತೆ.
  ಯಾವುದಕ್ಕೂ ದೀಪಾವಳಿ ಆಗ್ಲಿ ಆಮೇಲೆ ನೋಡಣ.
  ದೀಪಾವಳಿ ಹಬ್ಬದ ಶುಭಾಶಯಗಳು ಎಲ್ರಿಗೂ.

 8. ಸಂದೀಪ್ ಕಾಮತ್, (ಇತ್ತೀಚೆಗೆ ನಿಮ್ಮ ಬ್ಲಾಗಲ್ಲಿ ನೀವು ಹೆಸರುಗಳ ಬಗ್ಗೆ ಬರೆದಿದ್ದನ್ನ ಓದಿದೆ. ಅದ್ಕೇ, ಪೂರ್ತಿ ಹೆಸ್ರು!)
  ನಾನು ಆ ಚರ್ಚೆ ಏನಾಯ್ತು ಅಂತ ಆಮೇಲೆ ನೋಡೋಕೆ ಹೋಗಲೇ ಇಲ್ಲ. ಮೊನ್ನೆಯೇ ಡಿಸೈಡ್ ಮಾಡಿಯಾಗಿತ್ತು. ಬೇಡ ಬೇಡ ಅಂದ್ರೂ ಗೆಳೆಯನೊಬ್ಬ ನನ್ನ ಪ್ರತಿಕ್ರಿಯೆಗೆ ಬಂದ ಉತ್ತರಗಳನ್ನ ಕಾಪಿ ಮಾಡಿ mail ಮಾಡಿದ. ಓದಿದ್ ಮೇಲೆ ಕಿರಿಕಿರಿ ಅನಿಸಿಬಿಡ್ತು. ನಂಗಂತೂ ಬೇಡಪ್ಪಾ ಈ ಸಾಹಿತಿಗಳ ಸಾವಾಸ…
  ಬ್ಲಾಗ್ ಮುಚ್ತೀನಿ ಅಂದ್ರಾ? ಸುಮ್ನಿರ್ರೀ… ಚೆನಾಗ್ ಬರೀತೀರಿ ನೀವು. ಬರ್ಕೊಂಡಿರಿ ನಿಮ್ಮ ಪಾಡಿಗೆ.

  ಸುಪ್ರೀತ್,
  ಇಲ್ವೋ, ಡಿಸ್ಟರ್ಬ್ ಏನೂ ಆಗಿಲ್ಲ. ಆದ್ರೆ, ವಸ್ತು ಸ್ಥಿತಿ ತಿಳೀದೆ ಅಪ್ರಬುದ್ಧವಾಗಿ ಮತಾಡುವ, ವೈಯಕ್ತಿಕ ನಿಂದನೆಯಲ್ಲೆ ಚರ್ಚೆ ಮುಗಿಸೋರನ್ನ ಕಂಡು ಬೇಸರವಾಯ್ತು ಅಷ್ಟೇ.
  ಇನ್ನು ನನ್ನ ಪ್ಲ್ಯಾನು… ಅದು ಇವತ್ತಿನ ಯೋಜನೆಯೇನಲ್ಲ. ಬಹಳ ಹಿಂದೆಯೇ ನಾನು ಕೆಲವು ಸಂಘಟನೆಗಳನ್ನ ಪರಿಚಯಿಸ್ಬೇಕು ಅಂತ ಅಂದುಕೊಂಡಿದ್ದೆ. ಅರುಣ ಚೇತನ, ಯೂತ್ ಫಾರ್ ಸೇವಾ, ಶಾರದಾ ದೇವಿ ಯೂಥ್ ಫಾರಮ್, ರಾಷ್ಟ್ರ ಶಕ್ತಿ ಕೇಂದ್ರ… ಹೀಗೆ. ಅವು ಮಾಡ್ತಿರೋ ಕೆಲಸ, ಅದರಲ್ಲಿ ತೊಡಗಿಕೊಂಡಿರೋ ಜನರು- ಎಲ್ರನ್ನೂ ಪರಿಚಯಿಸ್ಬೇಕೂ ಅಂತ. ಅವರೆಲ್ಲ ಜಾಹೀರಾತಿಲ್ಲದೆ ಕೆಲಸ ಮಾಡೋರು. ಆದ್ರೆ, ಮಾಡೋದನ್ನ ಹೇಳಿಕೊಳ್ಳದೆ ಹೋದ್ರೆ , ಜನಕ್ಕೆ ಅದು ತಿಳೀದೆ ತಾವು ಕೇಳಿದ್ದನ್ನ, ಎಲ್ಲೋ ಓದಿದ್ದನ್ನೇ ಸತ್ಯ ಅಂದ್ಕೊಂಡು ತಪ್ಪು ಕಲ್ಪನೆಗಳಲ್ಲಿ ಉಳಿದುಬಿಡ್ತಾರೆ. ನಾನಿಲ್ಲಿ ಸಾಹಿತಿಗಳಲ್ಲದ, ಎಡ- ಬಲವಲ್ಲದ ಜನ ಸಾಮಾನ್ಯರ ಬಗ್ಗೆ ಹೇಳ್ತಿದೀನಿ. ಹಾಗೆ ಜನರ ಬಳಿ ಇಲ್ಲ ಸಲ್ಲದ್ದನ್ನ ಮಾತಡ್ತಾ ಅವ್ರನ್ನ ಫೂಲ್ ಮಾಡ್ತಲೇ ಇರೋದ್ನ ನೋಡಿಕೊಂಡು ಸುಮ್ಮನಿರೋದು ಹೇಗೆ?
  ಇನ್ನು, ಅಂಕಿ- ಅಂಶಗಳ ವಿಷಯ… ತೆಲುಗು, ಬಂಗಾಳಿ, ಹಿಂದಿ,ಇಂಗ್ಲಿಶ್ ಬ್ಲಾಗ್ ಗಳಲ್ಲಿ ನಾನು ಹೇಳಿದ ಸಂಗತಿಗಳ ಅಂಕಿ ಅಂಶಗಳು ಆಧಾರ ಸಹಿತವಾಗಿ ಹೇರಳವಾಗಿ ಸಿಗುತ್ತವೆ. ಕನ್ನಡದಲ್ಲಿ ಮಾತ್ರ ಇಲ್ಲ. ಇದು ಕೂಡ ಮಾಹಿತಿಗಾಗಿ ಅಷ್ಟೆ.

  ನನಗೆ ಈ ಎಡ- ಬಲಗಳ್ಯಾವುದರಲ್ಲೂ ಆಸಕ್ತಿ ಇಲ್ಲ. ಆದರೆ, ನಾನು ಎರಡನ್ನೂ ಹತ್ತಿರದಿಂದ ನೋಡಿದ್ದೀನಿ. ಅದಕ್ಕೇ, ಮಾತಾಡುವಾಗ ಒಬ್ಬರ ಮೇಲೊಬ್ಬರು ಸುಳ್ಳು ಆರೋಪ ಹೊರಿಸಿದಾಗ ಪ್ರತಿಕ್ರಿಯಿಸೋ ಉಮ್ಮೇದು ಬಂದ್ಬಿಡತ್ತೆ 😦

  ರಮೇಶ್,
  ಬಿಲ್ಲಿಂದ ಹೊರಟ ಬಾಣ, ಬಂದೂಕಿಂದ ಹೊರಟ ಗುಂಡು ಯಾವತ್ತೂ ಬರೋದಿಲ್ಲ ಗೊತ್ತಾ?
  ಹಳೇ ಡೈಲಾಗು ಕಣ್ರೀ… ಸುಪ್ರೀತ್ ಗೆ ಕೊಟ್ಟಿರೋ ಉತ್ತರಗಳನ್ನೇ ನೀವೂ ಓದ್ಕೊಂಡ್ ಬಿಡಿ ಪ್ಲೀಸ್ 🙂

  ವೈಶಾಲಿ, ಮಜಾ ಗೊತ್ತಾ? ಬಲದವ್ರು ನನ್ನ ‘ಎಡ’ ಅಂತಾರೆ. ಎಡದವ್ರು ‘ಬಲ’ ಅಂತ!! ಹಾಳು ಬೀಳಲಿ ಇವರ ಲೆಫ್ಟ್ ರೈಟ್ ಕಸರತ್ತಿಗೆ!!
  ಥ್ಯಾಂಕ್ ಯೂ 🙂

  ಚೇತನಾ

 9. Hi Chetana,

  Even I had commented on the article you have mentioned. I felt that entire article was lopsided and was written with the single intention of defaming SLB. I had asked a few pointed questions to the author for which he never replied and will never reply.

  Good luck with your new endeavour. We do need a blog like that.

  Regards,

  Mayura

 10. ಚೇತನಾ ಅವರೆ, ಸುಮ್ನೆ ಅವ್ರಿವ್ರು ಏನೋ ಹೇಳ್ತಾರೇಂತ ತಲೆ ಕೆಡಿಸ್ಕೋಬೇಡಿ. ಅದಕ್ಕೆಲ್ಲ ಸ್ಪಂದಿಸುತ್ತಾ ಹೋದರೆ ನಿಮ್ಮ ಸೃಜನಶೀಲತೆ ಕಡಿಮೆಯಾಗತ್ತೆ. ಬಿಟ್ಟಾಕಿ, ನಿಮ್ಮ “ವ್ಯವಸ್ಥೆಯ ತಲೆ ಕಡಿದರೆ ಆದರ್ಶ ಚಿಗುರುವುದಂತೆ!” ಅಂತಾ ಲೇಖನಗಳು ಇನ್ನಷ್ಟು ಹರಿದು ಬರಲಿ.

 11. ಹೂವಿನ ಚೆಂದವನ್ನೂ, ಬಣ್ಣವನ್ನೂ, ವಿವಿಧ ಪಕಳೆಗಳನ್ನೂ ಈಗ ತಾನೇ ನೋಡಿದೆ 😦 ನೀವು ಹೇಳಿದ ಹಾಗೇ ಬಗೆ-ಬಗೆ ಬಣ್ಣದ ಕಿರೀಟಗಳನ್ನ ತೊಡಿಸಿದ್ದಾರೆ,

  ಎಡವೋ ಬಲವೋ – ನಮಗೆ ಕಂಡ ಹಾಗೇ ಒಳ್ಳೇದನ್ನ ನಾವು ಮಾಡ್ಕೊಂಡು ಹೋಗೋದು ಸರಿ ಅಷ್ಟೇ. ಹೌದು – ಎಲ್ಲರಿಗೂ ಎಲ್ಲ ಅನುಭವಗಳೂ ಆಗಿರೋದೂ ಇಲ್ಲ, ಪ್ರತಿ ನಿತ್ಯ ಅನ್ನ-ಸಾರು ತಿನ್ನೋವ್ರಿಗೆ ಮುದ್ದೇ ಊಟದ ರುಚಿ, ಜುಣಕಾ ಭಾಕರಿ ರುಚಿ ಗೊತ್ತಿಲ್ಲದಿರಬಹುದು. ಹಾಗಂತ ಅನ್ನ ಸಾರು ತಿನ್ನೋದೇ ತಪ್ಪು ಅಂದ್ರೆ ಯಾರೇನು ಮಾಡೋಕಾಗತ್ತೆ? ಹಾಗೇ ಪ್ರತಿಯೊಬ್ಬರಿಗೂ ಒಂದೇ ವಿಷಯದ ಬಗ್ಗೆ ಕಾಳಜಿಯೂ ಇರಬೇಕಿಲ್ಲ – ಅಥವಾ ಇರೋಕೆ ಸಾಧ್ಯವಿಲ್ಲ. ಅಲ್ವಾ?

  ಇದನ್ನೆಲ್ಲ ಮರೆತು ನಿಮ್ಮ ಪಾಡಿಗೆ ನೀವು ಬರ್ಕೋತಾ ಇರಿ. ಓದಿ ಅಂತ ಯಾರೂ ಯಾರನ್ನೂ ಜುಲುಮೆ ಮಾಡೋದಿಲ್ವಲ್ಲ? ಬೇಕಾದವರು ಓದ್ತಾರೆ – ಬೇಡ್ದಿದ್ದವರು ಬಿಡ್ತಾರೆ.

  -ನೀಲಾಂಜನ

 12. ಚೇತನಕ್ಕಾ,
  ನಾನು ಬ್ಲಾಗ್ ಗೆ ಹೊಸಬ. ಆದ್ರೂ ಬಹಳ ಜನ ನಿಮ್ಮನ್ನ ಹಾಗಂತಾರೆ ಅಂತ ನಂಗೂ ನಿಮ್ಮನ್ನ ಅಕ್ಕ ಅನ್ನೋಕ್ಕೆ ಆನಂದವಾಗತ್ತೆ. ನೀವು ದೊಡ್ಡವರೋ, ಸಣ್ಣವರೋ ಗೊತ್ತಿಲ್ಲ. ನಿಮ್ಮ ಬರಹಗಳು ನಮ್ಮ ಮನಸ್ಸನ್ನ ಕಲಕಿ ಚಿಂತನೆಗೆ ಹಚ್ಚುತ್ತವೆ ಅನ್ನೋದು ಸತ್ಯ. ಅದಕ್ಕೇ ನೀವು ನಮಗೆ ಆಪ್ತರಾಗಿಬಿಟ್ಟಿದ್ದೀರಿ.
  ನಿಮ್ಮ ಕೆಲಸ ನೀವು ಮುಂದುವರೆಸಿ. ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಿ. ಹಾಗೆಲ್ಲಾ ಅವರ ಮಾತಿಗೆ ಬೇಜಾರಾಗಬೇಡಿ. ನಾವಿದ್ದೇವೆ ನಿಮ್ಮ ಜೊತೆ.

  ರಘು ನಂದನ

 13. ಚೇತನಾ, ನಾನೂ ನೋಡ್ತಾನೆ ಬಂದಿದೀನಿ, ವಿವಾದ ನಿಮ್ಮನ್ನು ಸುತ್ತಿಕೊಳ್ಳುತ್ತದೋ, ನೀವು ವಿವಾದವನ್ನು ಸುತ್ತಿಕೊಳ್ಳುತ್ತೀರೋ ಅರ್ಥವಾಗುವುದಿಲ್ಲ!

  ಅದೇನೇ ಇರಲಿ, ನಿಮ್ಮ ಬರಹಗಳು ಮಾತ್ರ ಚಿಂತನಾರ್ಹವಾಗಿರುತ್ತವೆಂಬುದೇನೋ ನಿಜ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Create a free website or blog at WordPress.com.

Up ↑

%d bloggers like this: