ಜನವರಿ ೧೪- ೨೦೦೮ರ ಕವಿತೆ


ನೀ ಹೇಗೆ ಒಂಟಿಯಾಗಿರುವೆ ಅಲ್ಲಿ!?

ನೀ ಹೇಗೆ ಒಂಟಿಯಾಗಿರುವೆ ಅಲ್ಲಿ?
ಇಲ್ಲಿ
,
ಒಂದೆ ಸಮನೆ ಇಬ್ಬನಿ

ಸುರಿಯುತ್ತಿದೆ ನನ್ನೆದೆಗೆ
ಭಗ್ಗೆನ್ನಲು ವಿರಹದುರಿ

ನೀನಿಲ್ಲದೆ ಬಾರಿ
ವಿಪರೀತ ಚಳಿ
ರಗ್ಗುರಝಾಯಿಗಳ
ಕೊಡವುತ್ತಿದ್ದೇನೆ,
ಬಿಸಿಯುಸಿರನಷ್ಟು ಕಳಿಸಿಕೊಡು ಬೇಗ!

ಹೊರಗೆ ಯಾರೋ ಇಬ್ಬರು
ಪ್ರೇಮಿಗಳ ಜಗಳ.
ಹೌದು ಬಿಡು
,
ಹುಡುಗಿಯರ ಕೂಗಾಟವೆ ಹೆಚ್ಚು
!
ನೀ ಛೇಡಿಸಿದ ನೆನಪು.

ಊಟದ ಟೇಬಲ್ಲಿನ ಮೇಲೆ
ಅರ್ಧ ಬರೆದಿಟ್ಟ ಕವಿತೆ,
ಮಂಚದ ಮೇಲೆ ಕುಂತು

ಕುಡಿದಿಟ್ಟ ಕಾಫಿ ಬಟ್ಟಲು
ಹಾಗೇ ಇವೆ

ಮನೆಯಲ್ಲಿ ನೀನಿಲ್ಲ,
ಕೆಲಸಕ್ಕೆ ಮೂಡಿಲ್ಲ.

ಹಾ! ಪಕ್ಕದ ಫ್ಲಾಟಿಗೆ
ಹೊಸ ಹುಡುಗ ಬಂದಿದಾನೆ.
ಹೆದರಬೇಡ

ನನಗಿಷ್ಟವಾಗಿಲ್ಲ,
ಅವಗೆ ಮೀಸೆಯೇ ಇಲ್ಲ!

ಪ್ರೇಮಿಗಳು ಜಗಳವಾಡ್ತಿದ್ದರು
ಅಂದೆನಲ್ಲ,
ಅವಗೆ ಕನ್ನಡ ಪಿಚ್ಚರಿಷ್ಟ
,
ಅವಳಿಗೆ ಹಿಂದಿ
.
ಇಬ್ಬರೂ ಈಗ

ಇಂಗ್ಲೀಶು ಪಿಚ್ಚರಿಗೆ ಹೋದರು!

ನಿನಗಿಷ್ಟವಾಗುವ ಪಿಂಕ್ ನೈಟಿ
ನಾನು ತೊಟ್ಟಿಲ್ಲ
ನನಗೂ ಇಷ್ಟ,
ನೀ ಬರುವವರೆಗೂ

ನಾನದನ್ನ ಮುಟ್ಟೋಲ್ಲ!

ಸರಿ.
ಅಲ್ಲಿನದೇನು ಸುದ್ದಿ
?
ಬಿಡು
.
ಎಷ್ಟು ಮಾತು ಮರೆಸಿದರೂ

ಇಲ್ಲಿ,
ಒಂದೆ ಸಮನೆ ಇಬ್ಬನಿ

ಸುರಿಯುತ್ತಿದೆ ನನ್ನೆದೆಗೆ
ಭಗ್ಗೆನ್ನಲು ವಿರಹದುರಿ.

ಹೇಳು,
ನೀ ಹೇಗೆ ಒಂಟಿಯಾಗಿರುವೆ ಅಲ್ಲಿ!?

( ಶಿರೋನಾಮೆಯಲ್ಲಿ ಹಾಕಿರುವಂತೆ, ಇದು ಒಂದು ವರ್ಷ ಹಳತು. ಡಿಲೀಟ್ ಮಾಡುವ ಮುಂಚೆ ಬ್ಲಾಗಲ್ಲಿ ಹಾಕಿದ್ದು)

14 thoughts on “ಜನವರಿ ೧೪- ೨೦೦೮ರ ಕವಿತೆ

Add yours

 1. ಚೇತನಾರವರೇ,
  ನವಿರು ಭಾವನೆಗಳಿಂದ ಮುದವೆನಿಸುತ್ತಿದೆ ನಿಮ್ಮ ಕವನ, ನಿಮ್ಮ ಕವನಕ್ಕೆ ಮುಂಗಡವಾಗಿ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು.
  -ರಾಜೇಶ್ ಮಂಜುನಾಥ್

 2. ಒಂದು ವರ್ಷ ಹಳೆಯದಾದರೂ ನಿರೀಕ್ಷೆಯ ಭಾವನೆಗಳು ಹಚ್ಚ ಹಸುರಾಗಿವೆ. ಇಷ್ಟು ಮುದನೀಡಿ ಮನದ ಕದವ ತಟ್ಟುವ ಕವನವನ್ನು ಡಿಲೀಟ್ ಮಾಡುವುದೇ? ಉಫ್… ನೀವು ಡಿಲೀಟ್ ಮಾಡೋ ಮುಂಚೆ ನಾನಂತೂ ಓದಿ ಬಿಟ್ತೀನಿ… ಸ್ವಲ್ಪ ತಡೀರಿ…

 3. hai chetana,
  ಕವನದ ನಿರೂಪಣೆ ತು೦ಬ ಇಷ್ಟ ಆಯ್ತು,
  ಇದು ಒ೦ದು ವರ್ಷ ಹಳತಾಗಿರಬಹುದು ನನಗ೦ತು ತು೦ಬ ತಾಜಾ ಅನ್ನಿಸಿತು.
  ನಿಮ್ಮ ಕವನದ ಶಕ್ತಿ ಈ ರೀತಿಯ ನಿರೂಪಣೆಯಲ್ಲಿದೆ ಅ೦ತ ನನಗನ್ನಿಸುತ್ತೆ.

 4. ಹ್ಹೆ ಹ್ಹೇ.. ಇವತ್ತಿಗೆ ಒಂದು ವರ್ಷ!
  ಕವಿತೆ.. ಅಂ.. ಮ್ಮ್…. ಚೆನಾ ಗಿಲಾ… 😉 🙂
  .
  .
  .
  .
  @ಸಂದೀಪ್: ನಿಮಗೆ ಕವಿತೆ ಅರ್ಥ ಆಗಲ್ಲ ಅಲ್ವಾ..
  ಅರ್ಥ ಆಗೋಕೆ ಶುರು ಆಗಿದೆ ಅಂದ್ರೆ….
  .
  .
  .
  ನೀವೇ ಹೇಳ್ಬೇಕು. 🙂

 5. ರಾಜೇಶ್, ವೇಣು, ಪ್ರಸಾದ್… ಎಲ್ರಿಗೂ ಥ್ಯಾಂಕ್ಸ್

  ಸಂದೀಪ್,
  ಇಲ್ಲ. ಉಪ್ಪಿನ್ ಕಾಯಿ ಜಾಡೀಲಿ ಹಾಕಿ ಭದ್ರ ಮಾಡಿದ್ದೆ!

  ಅನ್ವೇಷಿಗಳೇ,
  ಈ ವರ್ಷ ಡಿಲೀಟ್ ಗಿಲೀಟ್ ಮಾಡೋ ಸೀನ್ ಇಲ್ಲ ಅಂತ ಪ್ರಮಾಣ ಮಾಡಿದೀನಿ 🙂

  ನಿರಂಜನ, ಸುಧನ್ವ,
  ಧನ್ಯವಾದ.

  ರಮೇಶ್,
  ಚೆನಾಗಿಲ್ವಾ…? 😦

  ಪ್ರೀತಿಯಿಂದ,
  ಚೇತನಾ

 6. “ಮಂಚದ ಮೇಲೆ ಕುಂತು
  ಕುಡಿದಿಟ್ಟ ಕಾಫಿ ಬಟ್ಟಲು
  ಹಾಗೇ ಇವೆ, ಕೆಲಸಕ್ಕೆ ಮೂಡಿಲ್ಲ,

  ನಾನದನ್ನ ಮುಟ್ಟೋಲ್ಲ!,

  ನೀನಿಲ್ಲದೆ ಈ ಬಾರಿ
  ವಿಪರೀತ ಚಳಿ
  ರಗ್ಗು- ರಝಾಯಿಗಳ
  ಕೊಡವುತ್ತಿದ್ದೇನೆ,
  ಬಿಸಿಯುಸಿರನಷ್ಟು ಕಳಿಸಿಕೊಡು ಬೇಗ!”.

  ಬೈತಾ ಇದೀರಾ……… ಬೈಕೋ ಬೇಡಿ ಕವಿತೆಯನ್ನು ಹಾಳು ಮಾಡಿದೆ, ಅಥವಾ ತಿರುಚಿದೆ ಎಂದು .. ಮೇಲಿನ ಸಾಲುಗಳು ನನಗೆ ಇಷ್ಟವಾದವು ಅಂತ ತಿಳಿಸೋಕೆ ಒಂದೊಂದು ಸಾಲು ಬರೆದೆ,
  ಅಲ್ಲಾ ಕವಿತೆ ಎಷ್ಟೇ ಹಳೆಯದಾದರು ತಂಗಳಾಗೋದಿಲ್ಲ… ಹಳೆಯದಾದರು(ನೀವೆ ತಿಳಿಸಿದ್ದರಿಂದ)ಹಳೆಯ ಕವಿತೆಯಲ್ಲಿಯೇ ಹೊಸತನವಿದೆ. ಬೇಗ ವಿರಹ ವೇದನೆ ಕೊನೆಗೊಳ್ಳಲಿ, ಕೇಳಿದ ಪ್ರಶ್ನೆಗಳಿಗೆಲ್ಲಾ ಉತ್ತರ ದೊರೆಯಲಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Create a free website or blog at WordPress.com.

Up ↑

%d bloggers like this: