ನೆರೂದನ ಒಂದು ಕವಿತೆ…


ಪ್ಯಾಬ್ಲೋ ನೆರೂದ…
ಬಹಳ ಹಿಂದೆ ನನಗೆ ಇಂಗ್ಲಿಶ್ ಕವಿತೆಗಳ ಗುಚ್ಛ ಸಿಕ್ಕ ಹೊತ್ತಿನಲ್ಲಿ ಈತ ಅದೆಷ್ಟು ಜನಪ್ರಿಯ ಮತ್ತು ಅದೆಷ್ಟು ಮುಖ್ಯ ಅನ್ನುವ ಅರಿವು ಇರಲಿಲ್ಲ. ಆಗೆಲ್ಲ ನನಗೆ ಅನುವಾದ ಮಾಡಿಟ್ಟುಕೊಳ್ಳುವ ಹುಚ್ಚು. ಹಾಗೆಂದೇ ಆ ಪುಸ್ತಕದ ಕೆಲವು ಕವಿತೆಗಳನ್ನ ಅನುವಾದ ಮಾಡುವ ಸಾಹಸಕ್ಕೆ ಕೈಹಾಕಿದೆ. ಅದರಲ್ಲಿ ನನಗೆ  ನೆರೂದನ ಕವಿತೆ ಬಹಳ ಬಹಳ ಇಷ್ಟವಾಗಿಬಿಟ್ಟಿತ್ತು. ಮನಸಿಗೆ ತೋಚಿದ ಹಾಗೆ, ನನ್ನ ಖುಷಿಗೆ ಅನುವಾದ ಮಾಡಿಟ್ಟುಕೊಂಡೆ.
ಇದು, ಆರೇಳು ವರ್ಷದ ಹಿಂದಿನ ಮಾತಿರಬಹುದು.

ಕಳೆದ ವರ್ಷ ಒಂದು ಮಜಾ ಆಯ್ತು. ಗೆಳತಿ ಟೀನಾ ಬ್ಲಾಗಲ್ಲಿ ‘ಪ್ಯಾಬ್ಲೋ ನೆರೂದಾ- ಒಂದು ವಿರಹ ಕವಿತೆ’ ಪೋಸ್ಟ್ ಮಾಡಿದ್ದಳು. ಅರೆರೆ! ಇದು ಅದೇ ಕವಿತೆ!! ನನಗಿಷ್ಟವಾದ ಕವಿತೆ!
ತುಂಬಾ ಎಂಜಾಯ್ ಮಾಡಿದೆ ಅದನ್ನ.
ಆಮೇಲೆ ಗೊತ್ತಾಯ್ತು. ದೊಡ್ದದೊಡ್ಡವರೆಲ್ಲ ಈ ಕವಿತೆಯನ್ನ ಅನುವಾದ ಮಾಡಿದ್ದಾರೆಂದು. ಆಗಂತೂ ನನ್ನದನ್ನ ಹೊರತೆಗೆಯುವ ಗೋಜಿಗೆ ಕೈಹಾಕದೆ ಸುಮ್ಮನಾಗಿಬಿಟ್ಟೆ.

ಈಗ ಮತ್ತೊಂದು ಸರ್ಪ್ರೈಸು. ಕಲ್ಲರೆ ಮನೆ ಮಹೇಶ್ ತಾನೂ ಅದೇ ಕವಿತೆಯನ್ನ ಅನುವಾದ ಮಾಡಿ ಬ್ಲಾಗಲ್ಲಿ ಹಾಕಿದ್ದಾನೆ. ಬಹಳ ಸೊಗಸಾಗಿದೆ ಅನುವಾದ. ಅವನಿಗೂ ಅದು ಅಷ್ಟೆಲ್ಲ ಫೇಮಸ್ ಕವಿತೆ ಅಂತ ಗೊತ್ತಿಲ್ಲದೇ ಮಾಡಿದ್ದಂತೆ! ಈ ಅನುವಾದವನ್ನು ನೀವೂ ಒಮ್ಮೆ ಓದಬೇಕು. ಓದಿ ನೋಡಿ, ಹೇಗನಿಸಿತು, ಹೇಳಿ.

6 thoughts on “ನೆರೂದನ ಒಂದು ಕವಿತೆ…

Add yours

  1. ಅದು ನೀನು ಹೇಳಿದಿಯಲ್ಲ, ನಾನೂ ಅನುವಾದ ಮಾಡಿದ್ದೆ ಅಂತ, ಅದ್ನ ಹಾಕು ಮೊದ್ಲು!! ಆಮೇಲೆ ಮುಂದಿನ ಮಾತು. ಮಹೇಶನ ಅನುವಾದ ಓದಿದೆ. ಚೆನ್ನಾಗಿದೆ.

  2. ಚೇತನಾರವರೆ,

    ಈ ಪ್ರಯತ್ನ ನಾನು ಸಹ ಮಾಡಿದ್ದೇನೆ, ನನ್ನ ಬ್ಲಾಗ್ http://www.koogu.blogspot.com ನಲ್ಲಿ ಪೋಸ್ಟಿಸಿದ್ದೇನೆ.

    ಇದರ ಅನುವಾದ ಇಷ್ಟೊಂದು ಕಾವ್ಯಾಸಕ್ತರು ಈಗಾಗಲೇ ಮಾಡಿದ್ದಾರೆಂದು ತಿಳಿದಿದ್ದರೆ ಭವಿಷ್ಯ ನಾನು ಪ್ರಯತ್ನಿಸುತ್ತಿರಲಿಲ್ಲ.

    – ಚಂದಿನ

  3. ಚೇತನ ಅವರೇ, ನಿಮ್ಮ ಬರಹ ಓದಿ ನಾನೂ ಸಹ ಅನುವಾದಕ್ಕೆ ಕೈ ಹಾಕಿದೆ. ಇಲ್ಲಿದೆ ಕೊಂಡಿ. http://gshashidhara.blogspot.com/2009/02/haage-summane-time-pass.html ದಯವಿಟ್ಟು ಹೇಗಿದೆ ಅಂತ ಹೇಳಿ. ಕವನದ ವಿಷಯದಲ್ಲಿ ಮೊದಲ ಪ್ರಯತ್ನ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Blog at WordPress.com.

Up ↑

%d bloggers like this: