‘ಶ್ರೀ ರಾಮ ಸೇನೆಯ ಕಪಿ ಚೇಷ್ಟೆ’- ಮುಂದುವರಿದ ಚರ್ಚೆ…


    

 ಶ್ರೀ ರಾಮ ಸೇನೆಯಕಪಿ ಚೇಷ್ಟೆಕುರಿತ ಚರ್ಚೆಯನ್ನು ಗೆಳೆಯರು ಮುಂದುವರೆಸಿದ್ದಾರೆ. ಇಂಥ ಸಂಗತಿಗಳನ್ನು ಹೊತ್ತಲ್ಲೇ ವಿರೋಧಿಸದೆ ಉಳಿದರೆ ಪರಿಸ್ಥಿತಿ ಕೈ ಮೀರಿದ ನಂತರ ಏನೂ ಮಾಡಲು ಸಾಧ್ಯವಾಗುವುದಿಲ್ಲ. ಆಗ ಸುಮ್ಮನೆ ಉಳಿದ ದೋಷ ನಮ್ಮದೇ ಆಗುವುದು.
ಮಂಗಳೂರಿನಲ್ಲಿ ಬಂದ್ ಗೆ ಕರೆ ನೀಡಲಾಗಿದೆ ಎಂದು ಕೇಳಿಪಟ್ಟೆ. ಹಾಗೆಯೇ ಕೆಲವು ಮಂದಿ ಬಂದ್ ಗೆ ಸಹಕರಿಸದಂತೆ ಚಿತಾವಣೆ ನಡೆಸುತ್ತಿರುವುದೂ ತಿಳಿದಿದೆ. ಇಲ್ಲಿಯೂ ಕೂಡ ರಾಜಕಾರಣವನ್ನು ಎಳೆದು ತರುತ್ತಿರುವ ಮನಸ್ಸುಗಳ ಅಸ್ವಸ್ಥತೆಯ ಬಗ್ಗೆ ಅನುಕಂಪ ಮೂಡುತ್ತಿದೆ.
ಇರಲಿನಮ್ಮ ಪಾಲಿನ ಪ್ರತಿಭಟನೆಯನ್ನು ನಮ್ಮ ಮಾಧ್ಯಮದ ಮೂಲಕ ಅಭಿವ್ಯಕ್ತ ಪಡಿಸೋಣ.
ನಿಮಗೆಲ್ಲರಿಗೂ ಧನ್ಯವಾದ.

ಚರ್ಚೆ ಮುಂದುವರೆದ ಬಗೆ ಇದು

           ಅಲ್ಲಿ ಹುಡುಗರನ್ನು ಕೂಡ ಹಿಡ್ಕೊಂಡು ಹೊಡೆದಿದ್ದಾರಲ್ಲ. ಅವರೂ ಕೂಡ ಜೀನ್ಸ್ ಪ್ಯಾಂಟ್ ಹಾಕಿದ್ರು ಅಂತಲೇ ಹೊಡೆದಿದ್ದಾ? ಅಥವಾ ಹುಡುಗರನ್ನ ಹೊಡೆಯೋದು ನಮ್ ಸಂಸ್ಕೃತಿಯಲ್ಲಿ allowed ಅಂತನಾ?!! Timesnews, TV9 ಗಳಂತಹ channelಗಳಿಗೂ ಬರಹಕ್ಕೂ ಏನೂ ವ್ಯತ್ಯಾಸವೇ ಕಾಣ್ತಾ ಇಲ್ಲ.                                                                           ವಿಕಾಸ್

~

ವಿಕಾಸ್,
ಪಬ್ ಗೆ ಹೋಗುವುದನ್ನು ಹೀಗೆಲ್ಲಾ ಅಸಂಬದ್ಧವಾಗಿ ವಿರೋಧಿಸೋದೇ ಒಂದು ದುಷ್ಕೃತಿ. ಇದರ ವಿರುದ್ಧ ಲೇಖನದಲ್ಲಿ ಮಾತಾಡಿದ್ದೇನೆ. ಆದರೂ, ನಿರ್ದಿಷ್ಟವಾಗಿ ನನ್ನ ವಿರೋಧ ಹೇಳಬಯಸುತ್ತಿರುವುದು ಹೆಣ್ಣುಮಕ್ಕಳನ್ನ ಅಸಭ್ಯವಾಗಿ ನಡೆಸಿಕೊಂದುದರ ಬಗ್ಗೆಯೇ. ಊಟ, ಉಡುಗೆ ತೊಡುಗೆ ಅವರವರ ಖಾಸಗಿ ವಿಚಾರ. ಅದರಲ್ಲೂ ಪಬ್ ಗೆ ಹೋಗುವ ಹೆಣ್ಣು ಮಕ್ಕಳು ತಮಗೆ ಕಮ್ಫರ್ಟ್ ಅನ್ನುವ ಬಟ್ಟೆ ತೊಟ್ಟರೆ ಇವರ ಗಂಟೇನು ಹೋಯ್ತು
?
ಕಾಲೇಜಿಗೆ ಹೋಗುವ ಹುಡುಗಿಯರು ತೀರ ಪ್ರಚೋದನಕಾರಿಯಾಗಿ ಡ್ರೆಸ್ ಹಾಕಿದರೆ ಅದರಿಂದ ಹುಡುಗರ ಏಕಾಗ್ರತೆಗೆ ಭಂಗ ಅಥವಾ ಹುಡುಗಿಯರಿಗೇ ತೊಂದರೆ ಇತ್ಯಾದಿ ಕಾರಣ ಹೇಳಬಹುದು. ಹೋಗ್ತಿರೋದೇ ಪಬ್ ಗೆ ಅಂತಾದಮೇಲೆ, ಉಡುಗೆಗೆ ನಿರ್ಬಂಧವೇಕೆ
?
ಸಂಸ್ಕೃತಿಯ ಬಗ್ಗೆ ಮಾತಾಡೋರು ಹುಡುಗಿಯೊಬ್ಬಳ ಮೈಮುಟ್ಟುವಾಗ ನೂರು ಸಾರ್ತಿ ಯೋಚಿಸಬೇಕಿತ್ತು. ಇಂಥ ಹುಂಬರನ್ನ ಯಾವ ಕಾರಣಕ್ಕೂ ಸ್ವಸ್ಥ ಮನಸ್ಸಿನ ಯಾರೂ ಸಮರ್ಥಿಸಲಾರರು.                                                                      – CHETANA

~

ತುಂಬಾ ಸಮಯದ ನಂತರ ನಿನ್ನ ಬ್ಲಾಗಲ್ಲಿ ಕಮೆಂಟು ಬಿಡ್ತಾ ಇದೀನಿ. ಆದರೆ ಎಲ್ಲಾ ಓದ್ತಾ ಇದ್ದೆಭಯಂಕರ ಕಾವು ಇದ್ದುದರಿಂದ ಸ್ವಲ್ಪ ದೂರದಿಂದಲೆ.

ಒಳ್ಳೆಯ ಬರಹ. ಅಲ್ಲ, ಸಾವಿರಾರು ವರ್ಷಗಳಿಂದ ಉಳಿದು, ವಿಕಸಿಸಿ, ಬೆಳೆದಿರುವ ಸಂಸ್ಕೃತಿ, ಭಾಷೆ, ಧರ್ಮ ಇಂಥವನ್ನು ಒಂದಷ್ಟು ಗುಂಪುಗಳು ರಕ್ಷಿಸುವ ಹೊಣೆ ಹೊರುತ್ತವೆ ಎಂಬುದರ ಅರ್ಥವಾದರೂ ಏನು? ಅದೆಂಥ ಸೊಕ್ಕು ಅದು?                                                            – SANKET

~

Its good that, you have raised this issue.ಟೆಲಿವಿಷನ್ ನಲ್ಲಿ, visuals ನೋಡಿ ಮೈ ಉರಿದು ಹೋಯ್ತು. ಇದೇನು ರಾಮ ಸೇನೆಯೋ ಅಥವಾ ರಾವಣ ಸೇನೆಯೋ? ಸಂಸ್ಕೃತಿ ಹಾಗೂ ಭಾಷೆ ರಕ್ಷಣೆಯ ಸೋಗು ಹಾಕುತ್ತಾ, ಹಫ್ತಾ ವಸೂಲಿ ಮಾಡುವ, ಇಂತಹ ವರ ವಿರುದ್ದ ಸರ್ಕಾರ ನಿಜವಾಗ್ಲೂ ಕಠಿಣ ಕ್ರಮ ಕೈಗೊಳ್ಳಬೇಕು.                                                               ಪ್ರಸಾದ್

~

Avaru madiddu tappu oppikollona. adre neevu helta irodu yenu. pub ge hodre hogli antiralla. kudiyodu tappalva. neevu kuditira hege? hindomme gnanapeeti girish karnad saha heege helida nenapu.                               – PURVI

~

ಬಹಲ ದಿನಗಳಿಂದ ಮಂಗಳೂರಿನಲ್ಲಿ ಸಂಸ್ಕೃತಿಯ ಹೆಸರಿನಲ್ಲಿ ಸಂಘಪರಿವಾರ ಗೂಂಡಾಗಿರಿ ನಡೆಸುತ್ತಿದ್ದು ಮಾದ್ಯಮಗಳ ಜಾನ ಮೌನ ಮತ್ತು ಎಲೈಟ್ ಪಭ್ ಸಂಸ್ಕೃತಿಯನ್ನು ಮೆಚ್ಚುವವರು ಮೌನವಹಿಸಿದುದರ ಪರಿಣಾಮ ಇಂದು ಹಾಡು ಹಗಲೆ ಹೆಣ್ಮಕ್ಕಲ ಮೇಲೆ ಕೈಮಾಡುವಷ್ಟು ಬೆಳೆದಿದ್ದಾರೆ. ಪೋಲೀಸರ ಮೌನ ಮುಕ್ತ ಪರವಾನಿಗೆಯು ಇದಕ್ಕೆ kaaranavendare ತಪ್ಪಾಗಳಾರದು. ಸಮಾಜದಲ್ಲಿ ದಲ್ಲಿ ನೈತಿಕತyannu ಬೆಳೆಸಲು ಸೂಕ್ತವಾದ ಹಾದಿಗಳಿಗೆ ಅದನ್ನು ಅನುಸರಿಸದೆ ಕಾಣೂನನ್ನು ಕೈಗೆತ್ತಿಕೊಂಡು ಭಯದವಾತಾವರಣವನ್ನು ಸೃಷ್ಟಿ ಸೂದು ದೇಶದ್ರೋಹದ ಕೃತ್ಯವಾಗಿದೆ. ಸಮಾಜದ ಸೌಹರ್ದ ಪ್ರಿಯರೆಲ್ಲರು ಒಂದಾಗಿ ಕೃತ್ಯವನ್ನು ಖಂಡಿಸಿ ಪ್ರತಿಭಟಿಸಲೇಬೇಕುಧನ್ಯವಾದಗಳು                                    SHIHAB

~                                                                                                                     

ಪ್ರಸಾದ್,
ಸರ್ಕಾರದ ಮೇಲೆ ಕಠಿಣ ಕ್ರಮ ಕೈಗೊಳ್ಳೋರು ಯಾರು
!?

ಪೂರ್ವಿ,
ನೀವು ಯಾವ ಕಾಲಘಟ್ಟದಲ್ಲಿರುವಿರೆಂದು ನೆನೆಸಿಕೊಳ್ಳಿ. ಕುಡಿತವನ್ನು ಕೆಟ್ಟದ್ದಾಗಿಸಿಕೊಳ್ಳೋದು ಮನುಷ್ಯನೇ. ಮಿತಿಯಲ್ಲಿದ್ದರೆ ಎಲ್ಲವೂ ಒಳಿತೇ. ನಾನು ಕುಡಿಯದೆ ಇರೋದುಅದು ತಪ್ಪು ಅನ್ನುವ ಕಾರಣಕ್ಕಲ್ಲ.

ಶಿಹಾಬ್,
ಹೌದು. ಖಂಡಿಸಬೇಕು. ಖಂಡಿಸೋಣ.

                                                                             -ಚೇತನಾ ತೀರ್ಥಹಳ್ಳಿ

~

ಭಾಷೆ,ಧರ್ಮ,ಸಂಸ್ಕೃತಿಯ ಹೆಸರಲ್ಲಿ ಯಾವ ರೀತಿಯಾದರೂ ದಾಳಿ ನಡೆಸಬಹುದೆಂದು ಕೆಲವರು ಅಂದುಕೊಂಡಿದ್ದಾರೆ.ನಮ್ಮತನ ಉಳಿಸಲು ಹೋರಾಟ ಮಾಡಬೇಕು ಸರಿ,ಆದರೆ ರೀತಿಯ ಹೋರಾಟಹಾರಾಟಗಳು ನಮ್ಮ ಸಂಸ್ಕೃತಿಯಲ್ಲ ಎಂದು ಸುಸಂಸ್ಕೃತರುತಿಳಿದುಕೊಳ್ಳಬೇಕು.
                                                                                               
ಅಶೋಕ ಉಚ್ಚಂಗಿ

 

 

 

 

 

~

ಚೇತನಾ ಅವರೇ, ನಿಜಕ್ಕೂ ಚೆನ್ನಾಗಿ ಬರೆದಿದ್ದೀರಿ. ’ಎಲ್ಲಿ ಮಹಿಳೆಯರು ವಾಸಿಸುತ್ತಾರೆ ಅಲ್ಲಿ ದೇವತೆಗಳು ನೆಲೆಸುತ್ತಾರೆಎನ್ನುವ ದೇಶದಲ್ಲಿ ಲಕ್ಷಾಂತರ ಹೆಣ್ಣು ಭ್ರೂಣಗಳು ಜಗತ್ತನ್ನು ನೋಡುವ ಮುಂಚೆ ಕಣ್ಮುಚ್ಚಿ ಹೋಗಿವೆ. ಮಹಿಳೆಯರ ಮೇಲೆ ದೇಶದಲ್ಲಿ ಪ್ರತಿದಿನ ಒಂದಲ್ಲ ಒಂದುಕಡೆ ಲೈಂಗಿಕ ಕಿರುಕುಳ, ಅತ್ಯಾಚಾರ ನಡೆಯುತ್ತಿವೆ. ದೇವದಾಸಿ ಪದ್ಧತಿ ಇನ್ನೂ ಜೀವಂತವಾಗಿದೆ. ಮುಸ್ಲಿಂ ಮಹಿಳೆಯರು ಬುರಕಿಯಲ್ಲಿ ಅವಿತರೆ, ಹಿಂದೂ ಮಹಿಳೆಯರು ಸೆರಗಿನ ಮರೆಯಲ್ಲಿ ಅವಿತುಕೊಳ್ಳುತ್ತಾರೆ. ಇವರೆಲ್ಲಾ ಭಾರತದ ಆದರ್ಶನಾರಿಯರು!
ಹುಡುಗಿಯರು ಜಿನ್ಸ್ ಹಾಕಿದರೆ ಸಂಸ್ಕೃತಿ ಹಾಳಾಗುತ್ತದೆ
!!
ಎಲ್ಲಾ ಧರ್ಮಗಳ ಧರ್ಮಾಂಧರಿಗೆ ಮಹಿಳೆ ಮಾತ್ರ ಯಾಕೇಹೀಗಿರಬೇಕುಎಂದು ಹೇಳುತ್ತಿವೆ. ಇದು ಮೂಲಭೂತ ಪ್ರಶ್ನೆ? ಇಂತಹ ಪ್ರಶ್ನೆಯ ಬಗ್ಗೆ ಕೂಡಾ ಚರ್ಚೆ ಆರಂಭವಾಗಬೇಕು
.
ನಿಮ್ಮ ಬಗ್ಗೆ ನನಗಿರುವ ಪೂರ್ವಗ್ರಹಗಳು ಕಡಿಮೆಯಾಗುತ್ತಿವೆ. ಚರ್ಚೆ ಮೂಲಕ ನಮ್ಮ ನಮ್ಮ ಅನುಮಾನಗಳನ್ನು ಬಗೆಹರಿಸಿಕೊಂಡು ಹೋಗಬಹುದು ಎಂದು ನಂಬಿರುವವನು ನಾನು
.
                                                                                   
ಪರಶುರಾಮ ಕಲಾಲ್

~

ಚೇತನ,
ಹೌದು, ರಾಮ ಸೇನೆಗೂ ತಾಲಿಬಾನಿಗೂ ಯಾವುದೇ ವ್ಯತ್ಯಾಸವಿಲ್ಲ. ಕ್ರಿಶ್ಚಿಯನ್ನರ ಹಾಗೂ ದಲಿತರ ಮೇಲೆ ಹಲ್ಲೆ ಮಾಡುತ್ತಿದ್ದವರು ಈಗ ಎಲ್ಲ ಹಿಂದೂ ಹೆಂಗಸರು ಹೇಗೆ ಬದುಕಬೇಕು ಎಂದು ಪಾಠ ಹೇಳಲು ಶುರುಮಾಡಿದ್ದಾರೆ. ಪಬ್ ನಲ್ಲಿದ್ದವರಿಗೆ ನಮ್ಮ ಸಂವಿಧಾನ ಕೊಡುವ ಹಕ್ಕುಗಳನ್ನು ಉಲ್ಲಂಘಿಸಿದ್ದಾರೆ.

ಸಂವಿಧಾನಕ್ಕೆ ಬದ್ಧವಾಗಿ ಬದುಕುವುದು ಪ್ರಜಾಪ್ರಭುತ್ವವನ್ನು ಸಾಕಾರಗೊಳಿಸುವ ರೀತಿ ಎನ್ನುವ ತಿಳುವಳಿಕೆ ನಮ್ಮ ದೇಶದಲ್ಲಿ ಇನ್ನೂ ಬಂದಿಲ್ಲ. ಸಂವಿಧಾನ ಬದ್ಧ ನಡವಳಿಕೆಯನ್ನು ಎತ್ತಿ ಹಿಡಿಯಲು justice system ಹಾಗೂ ಪೋಲಿಸರು, ಸರ್ಕಾರದ ರಾಜಕೀಯ ಶ್ರದ್ಧೆಗಳ ಪ್ರಭಾವವಿಲ್ಲದೆ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಆದರೆ ನಮ್ಮ ದೇಶದಲ್ಲಿ ಇದು ಎಂದಿಗೆ ಸಾಧ್ಯವಾಗುವುದೊ ಗೊತ್ತಿಲ್ಲ.

ಯಾರೋ videotape ಮಾಡಿದ್ದರಿಂದ ನಮಗೆ ಘಟನೆಯ ಪೂರ್ಣ ಚಿತ್ರ ದೊರೆತಿದೆ. videotape ಆಗದೇ, ವರದಿಯಾಗದೇ ಇರುವ ಇನ್ನೂ ಎಷ್ಟು ಕುಕೃತ್ಯಗಳನ್ನು ರಾಮಸೇನೆಯವರು ಮಾಡಿದ್ದಾರೋ ಗೊತ್ತಿಲ್ಲ.

ವಿಕಾಸ್,
ನಿಮ್ಮ ತಿಳುವಳಿಕೆಯ ಮಟ್ಟ ಹಾಗೂ ವಿಷಯ ಗ್ರಹಣದ ಮಟ್ಟ ಅತಿ ಸಾಧಾರಣವಾಗಿದೆ. ರಾಜಕಾರಣಿಗಳಿಗೂ ಅರ್ಥವಾಗಿರುವ ಸುದ್ದಿ ನಿಮಗೆ ಸರಿಯಾಗಿ ಅರ್ಥವಾದಂತಿಲ್ಲ. ಪಬ್ ನಲ್ಲಿ ನಡೆದ ಘಟನೆಗೆ ಸಾಮ್ಯವಿರುವ ಇತರ ಆಘಾತಕಾರಿ ಘಟನೆಗಳ ಬಗ್ಗೆ ಚೇತನಾ ಬರೆದ್ದಿದ್ದಾರೆ. ಇಷ್ಟು ಸರಳವಾಗಿ ಬರೆದಿರುವ ಬರಹ ನಿಮಗೆ ಅರ್ಥವಾಗಿಲ್ಲವೆಂದ ಮೇಲೆ, ನೀವು ಯಾವುದೇ ಕೆಲಸ ಮಾಡಿದರೂ, ಅದರ ಪೂರ್ಣ ಪರಿಣಾಮ ತಿಳಿದುಕೊಳ್ಳಲು ನಿಮಗೆ ಸಾಧ್ಯವಾಗದ ಕಾರಣ, ಬೇರೆಯವರಿಗೆ ನಿಮ್ಮಿಂದ ಅಪಾಯವಾಗುವ ಸಂಭವ ಇರುತ್ತದೆ. ನಿಮ್ಮ ಬಾಲ್ಯದಲ್ಲಿ ನಡೆದಿರಬಹುದಾದ ಯಾವುದೋ ಆಘಾತಕಾರಿ ಘಟನೆ/ಗಳು ಇದಕ್ಕೆ ಕಾರಣವಿರಬಹುದು. ನೀವು ನಿಮ್ಮ ಮನಸ್ಥಿತಿಯ ಬಗ್ಗೆ ಗಂಭೀರವಾಗಿ ಯೋಚಿಸಬೇಕೆಂದು ನನ್ನ ಅನಿಸಿಕೆ
.
                                                                                                           
ಅನುರಾಧ

~

ಹೆಂಗಸಿನ ಬಟ್ಟೆಯ ವಿಚಾರವಾಗಿ ನಮ್ಮ ಇತಿಹಾಸವನ್ನೋ ಕಾವ್ಯಗಳನ್ನು ಓದಿದರೆ ತಿಳಿಯುವುದು.

ಕಾಳಿದಾಸನ ಶಾಕುಂತಲೆಯ ವಸ್ತ್ರವಿನ್ಯಾಸ, ಬೇಲೂರಿನ ಶಿಲಾಬಾಲಿಕೆಯರು, ತಿರುಪತಿಯಲ್ಲಿರುವ ಕೃಷ್ಣದೇವರಾಯನ ಹೆಂಡತಿಯರ ವಿಗ್ರಹಗಳು, ಅಷ್ಟೇ ಯಾಕೆ ನಮ್ಮ ಕನ್ನಡನಾಡಿನ ಹಳ್ಳಿಗಾಡಿನ ಹೆಂಗಸಿನ ಉಡುಗೆ ಇವೆಲ್ಲವುಗಳನ್ನು ಗಮನಿಸಿದರೆ ನಮ್ಮಲ್ಲಿ ಹೆಂಗಸಿಗೆ ಇಸ್ಲಾಂ ದೇಶಗಳ ಹಾಗೆ ತುಂಬುತೋಳು, ಪಾದದ ತನಕ, ಕುತ್ತಿಗೆಯ ವರೆಗೆ, ಹೊಟ್ಟೆ ತೋರದ ಹಾಗೆ, ತಲೆ ಮುಖ ಮುಚ್ಚಿಕೊಳ್ಳುವ ಹಾಗೆ ಬಟ್ಟೆಯ ಸಂಸ್ಕೃತಿ ಇದೆಯೇ?

ಪೂಚಂತೇ ಅವರ ಕಿರಗೂರಿನ ಗಯ್ಯಾಳಿಗಳಲ್ಲಿ ಬರುವ ಕಿರಗೂರಿನ ರೈತಾಪಿ ಹೆಂಗಸರ ಉಡುಗೆಯ ಉಲ್ಲೇಖ ನೋಡಿದರೆ ತಿಳಿಯುವುದು.

ಬಟ್ಟೆಯಿಂದ ಮನಸ್ಸನ್ನು ಅಳೆಯುವುದು ಎಂಥ ಮೂರ್ಖತನ!” ಗಾಂಧಿಯವರ ಬಟ್ಟೆ ನೋಡಿ ಬ್ರಿಟೀಶರು ಮೊದಲು ನಕ್ಕರಂತೆ.

ತಾಲಿಬಾನಿಗೊಂದು ಸಂಸ್ಕೃತ ಪದ ಹುಡುಕಬೇಕಾದೀತು ಮತ್ತೆ!” ಹಿಂದೂ ಕೂಡ ಸಂಸ್ಕೃತದ ಪದವಲ್ಲ. ಅದೂತಾಲಿಬಾನ್ಪದವಿರುವ ಭಾಷೆಯದೆ ಅಲ್ಲವೇ.! ಹಾಗೇಗುಲಾಬಿ’, ’ನೀಯತ್ತು’, ’ಖಾಸಗಿಮುಂತಾದವೂ ಅದೇ ಭಾಷೆಯ ಪದ.

ಚೇತನಾ ಅವರೆ ನಿಮ್ಮ ಬರಹ ಚನ್ನಾಗಿದೆ. ನಮ್ಮ ಹೆಂಗಸರು ಬಗ್ಗೆ ದನಿಯತ್ತಿದ್ದಕ್ಕೆ ಮಾದರಿ ನೀವು.

ನನ್ನಿ.                                                                             – MAAYSA

~

ಈಗ ನಡೆದ ಘಟನೆ ಒಂದು ಪೀಠಿಕೆ ಅಷ್ಟೇ. ಆದ್ರೆ ಲೆಕ್ಕಾಚಾರ ತಪ್ಪಿ ಹೋಯ್ತು.

ಒಂದುರಾಜ್ಯದಲ್ಲಿರೋ ಸರ್ಕಾರದ ಸಹಾಯ ಹಸ್ತ ತಲೆ ಮೇಲೆ ಇದೆ ಎನ್ನುವ ಭಂಡ ಧೈರ್ಯ ಗುಂಪುಗಳಿಗೆ.

ಎರಡುಅಲ್ಲಿರೋ ಜನ ಎಲ್ಲ ಬಾಡಿಗೆಯವರು. ಬೇಕಾದಾಗ ಗಲಾಟೆ ಮಾಡೋದಕ್ಕೆ ಬರ್ತಾರೆ. ಹಣ ಕೊಟ್ರೆ ಪೆಟ್ಟು ತಿನ್ನೋಕೇನಂತೆ. ಕೆಲಸ ಹೇಗೂ ಇಲ್ಲ.
ಅವರ ಮೇಲೆ ಇರೋ ಪ್ರಖಂಡ ತಲೆಗಳುಅವು ಮೊದಲು ಸ್ವಸ್ಥವಾಗಬೇಕು. ಆದ್ರೆ, ರಾಜಕಾರಣಿಗಳು ಮತ್ತು ಸರಕಾರಗಳಿಗೆ ಬೇಕಾಗೋದೇ ಇಂತಹ ಕೆಲಸವಿಲ್ಲದ ಮಂಗಗಳು. ಸಮಸ್ಯೆ ಯಾವಾಗಲೂ ಜ್ವಲಂತವಾಗಿದ್ದರೆ ತಾನೆ ಅವರ ಬೇಳೆ ಬೇಯೋದು !!!! ಅದು ಪೆದ್ದು ತಲೆಗಳಿಗೆ ಹೇಗೆ ಅರ್ಥವಾಗುತ್ತೆ ಪಾಪ !

ಮೂರುದೊಡ್ಡ ದೊಡ್ಡದಾಗಿ ಮಾತೋಡೋ ಜನಗಳೇ ಸಣ್ಣ ದೊಡ್ಡ ಪಾರ್ಟಿಗಳಲ್ಲಿ ಕುಡ್ದು ಅವಾಂತರ ಮಾಡ್ಕೊಳ್ತಾರೆ. ಅದನ್ನೆಲ್ಲಾ ಎಂತದ್ದು ಹೇಳೋದು !!! ಹೇಳಿ ಮುಗಿಯುತ್ತಾ ???

ನಾಲ್ಕು ರೂಲ್ಸ್ಕಟ್ಟು ಪಾಡು ಇವೆಲ್ಲಾ ನಮ್ಗೇಹೆಂಗಸರಿಗೇ ಅಲ್ವಾ. !!! ಅದನ್ನು ನಾವೇ ಬ್ರೇಕ್ ಮಾಡ್ಬೇಕು !!!
we love to break the rules ! forever !!!

ವಿಷಯ ಎತ್ತಿಕೊಂಡದ್ದಕ್ಕೆ thanks.                                   – HEMA SHREE

~

ಎಲ್ಲರದ್ದೂ ತಪ್ಪು ಇದೆ.
ನಾವೇ ಇಡೀ ದೇಶವನ್ನು ರಕ್ಷಿಸ್ತಾ ಇದ್ದೇವೆ ಎ೦ಬ ಅತಿಯಾದ ಕಾಳಜಿ/ಅಧಿಕಪ್ರಸ೦ಗದ ಪರಮಾವಧಿ
.
ಅಷ್ಟು ರಾತ್ರಿ ಪಬ್ ಓಪನ್ ಮಾಡೋದಿಕ್ಕೆ ಅನುಮತಿ ಕೊಟ್ಟಿದ್ದು
.
ಓದೋದು ಬಿಟ್ಟು ಪಬ್ ಅಲ್ಲಿ ಬಿದ್ಕೊಳ್ಳೋದು.

ಮಾಧ್ಯಮದ ಪ್ರಚಾರ ಅಥವಾ ಬೆ೦ಬಲ. ಯಾಕ೦ದ್ರೆ ರಾಮ ಸೇನೆಯವ್ರು tv9 ಅವ್ರನ್ನು ಕರ್ಕೊ೦ಡು ಬ೦ದಿದ್ದಾರೆ. ಮಾಧ್ಯಮದವರಿಗೂ ನ್ಯೂಸ್ ಬೇಕಲ್ಲ. ಇ೦ತಹ ಘಟನೆಯನ್ನು ಅವ್ರು ತಡೆದಿದ್ರೆ( ಸಮ್ ಹೌ..) ಪಾಪ ಅವ್ರು ಏನ್ ಮಾಡ್ತಾರೆ!!!                                   – PRAMOD

 

 

10 thoughts on “‘ಶ್ರೀ ರಾಮ ಸೇನೆಯ ಕಪಿ ಚೇಷ್ಟೆ’- ಮುಂದುವರಿದ ಚರ್ಚೆ…

Add yours

 1. @ಚೇತನಾ
  ನಾವು ನಿಮ್ಮ ಬರಹಕ್ಕೆ ಬರೆದ commentಗಳನ್ನು ಚರ್ಚೆ ಎಂಬ ಹೆಸರು ಕೊಟ್ಟು ಮುಂದುವರೆಸುವುದು ತರವಲ್ಲ ಎಂದು ನನ್ನನಿಸಿಕೆ. ನಾವು ಆ ಬರಹಕ್ಕೆ ನಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿರುತ್ತೆವೆಯೇ ಹೊರತು ಆ ವಿಷಯದ ಬಗ್ಗೆ ಚರ್ಚೆ ದೃಷ್ಟಿಯಿಂದಲ್ಲ. ಚರ್ಚೆ ಆಗಿದ್ದರೆ ಬೇರೆ ರೀತಿಯೇ ಬರೆಯಬೇಕಾಗುತ್ತದೆ. ಮೊದಲೇ ಹೇಳಿಬಿಡಿ.

  @ಅನುರಾಧಾ,
  ಬರಹ ನನಗೆ ಅರ್ಥವಾಗಿಲ್ಲ ಎಂದು ಎಲ್ಲೂ ನಾನು ಹೇಳಿಲ್ಲ. ನಾನು TV9, Timesnews ಬಗ್ಗೆ ಯಾಕೆ ಉಲ್ಲೇಖಿಸಿದೆ ಗೊತ್ತಾ? ಅವೂ ಕೂಡ ಪ್ರಸ್ತುತ ಬರಹದಂತೆ ಘಟನೆಯ, ಸಮಸ್ಯೆಯ ಒಂದೇ ಮಗ್ಗುಲನ್ನು ಹೈಲೈಟು ಮಾಡುತ್ತಿದ್ದವು ಅಷ್ಟೆ. ಇದು ನಿಮಗಿರುವ ಅಸಾಧಾರಣ ತಿಳುವಳಿಕೆಯ ಮಟ್ಟಕ್ಕೂ ಎಟುಕಲಿಲ್ಲವೆಂದರೆ ನಿಮಗೆ ನನ್ನ ಸಂತಾಪಗಳಿವೆ. bye

 2. ಬ್ಲಾಗ್ ನಲ್ಲಾಗಲೀ ಎಲ್ಲೇ ಆಗಲೀ ತೀರ ವೈಯಕ್ತಿಕವಾಗಿ ದೂಷಿಸುವುದು ನನಗೆ ಸೇರದು. ವಿಕಾಸ್, ನನ್ನ ಬ್ಲಾಗ್ ನಲ್ಲಿ ನಿನ್ನ ಮೇಲೆ ನಡೆದ ವೈಯಕ್ತಿಕ ದೂಷಣೆಗೆ ಕ್ಷಮೆ ಕೇಳ್ತಿದೇನೆ.

  ಅಶೋಕ್,
  ಹೌದು. ಮೊದಲು ‘ಸಂಸ್ಕೃತಿ’ಯನ್ನು ಸರಿಯಾಗಿ ಅರ್ಥೈಸ್ಕೊಳ್ಳಬೇಕು. ಇಲ್ಲವಾದರೆ ನಡೆಯೋದು ಇಂಥ ವಿಕೃತಿಗಳೇ.

  ಕಲಾಲ್,
  ನೀವು ಅವತ್ತು ಕಮೆಂಟ್ ಮಾಡಿದ್ದರಲ್ಲ, ‘ಮಾತಾಡಬೇಕು’ ಅಂತ, ಅದನ್ನು ಈ ಸಂದರ್ಭದ- ಪರಸ್ಪರ ತಿಳುವಳಿಕೆಯ ಅಗತ್ಯವಿರುವ ಹೊತ್ತಿನಲ್ಲಿ ನಾನು ಒಪ್ಪುತ್ತೇನೆ. ನಮ್ಮ ನಡುವೆ ಮಾತಿನ ಅಗತ್ಯ ತುಂಬ ಇದೆ. ನಾನಂತೂ ಸದ ಸಿದ್ಧ. ಪೂರ್ವಗ್ರಹಗಳ ಹೊರತಾಗಿ ಎಂದಾದರೂ ಎಲ್ಲರೂ ಕೂಡಿ ಮಾತಾಡೋಣ. ಏನಂತೀರಿ?

  ಅನುರಾಧಾ,
  ತೆರೆಮರೆಯ ಘಟನೆಗಳು ಅದೆಷ್ಟೋ? ಅನ್ನೋದು ನಿಜ. ಈ ಸೇನೆಯವರು ವರದಕ್ಷಿಣೆ ಕಿರುಕುಳ ಕೊಡೋರ ಮೇಲೆ, ಭ್ರೂಣ ಹತ್ಯೆ ಮಾಡೋರ ಮೇಲೆ, ಅತ್ಯಾಚಾರಿಗಳ ಮೇಲೆ ಹೀಗೆಲ್ಲ ತಿರುಗಿಬೀಳೋಲ್ಲ. ಅದನ್ನೆಲ್ಲ ಅವರು ‘ಸಂಸ್ಕೃತಿ’ಯ ಲಿಸ್ಟಲ್ಲಿ ಸೇರಿಸ್ಕೊಂಡ ಹಾಗಿದೆ!

  ಮಾಯ್ಸ,
  ನನ್ನಿ!? (ಅರ್ಥ ಗೊತ್ತಾಗ್ಲಿಲ್ಲ 😦 )

  ಹೇಮ ಶ್ರೀ,
  ರೂಲ್ಸ್ ಮಾಡಿದ್ರೆ ಬ್ರೇಕ್ ಮಾಡೋದೇ! ಸುಮ್ಮನಿದ್ರೆ, ನಮ್ ಪಾಡಿಗೆ ನಾವೂ ಲಕ್ಷಣವಾಗಿರ್ತೀವಿ… ಅಲ್ವಾ!? ಕಮೆಂಟಿಸಿದ್ದಕ್ಕೆ ಥ್ಯಾಂಕ್ಸ್.

  ಪ್ರಮೋದ್,
  ತಪ್ಪು, ತಪ್ಪೇ…

  ವಂದೇ,
  ಚೇತನಾ ತೀರ್ಥಹಳ್ಳಿ

 3. Chetana,

  Please visit this link. There seems to be something very fishy about this whole episode.

  http://www.hindu.com/2009/01/27/stories/2009012759421000.htm

  I do not support any voilence against women. It is upto them what they want to do. However, the reaction of oscar fernandes and veerappa moily who were sitting in delhi to this incident and added to that the loksabha election slated for mangalore and congress ticket for that seat all have added a murky twist to this whole episode. We need a impartial probe into this incident to bring out the truth.

  Regards,

  Mayura

 4. ಮಾಯ್ಸ ಅವರೇ,
  ಧನ್ಯವಾದ.
  ಕನ್ನಡ ಪದದ ಅರ್ಥವನ್ನೂ ಡಿಕ್ಷನರಿ ನೋಡಿ ತಿಳಿದುಕೊಳ್ಳಬೇಕಾದ ಸ್ಥಿತಿಒಯಲ್ಲಿ ನಾನಿದ್ದೀನಾ? ಅಥವಾ ಹೆಚ್ಚು ಬಳಕೆಯಲ್ಲಿಲ್ಲದ ಪದವನ್ನು ಬಳಸಿ, ಉಳಿಸುವ ಕೆಲಸ ನೀವು ಮಾಡ್ತಿದೀರಾ ಗೊತ್ತಾಗ್ಲಿಲ್ಲ. ಹಾಗೇನಾದರೂ ಇದ್ದರೆ, ನಿಮ್ಮ ಪ್ರಯತ್ನ ನಿಜಕ್ಕೂ ಅಭಿನಂದನಾರ್ಹ.
  – ಚೇತನಾ

 5. ಅಭಿನಂದನೆಗೆ ನನ್ನಿ!

  ನಿಮ್ಮ ಬ್ಲಾಗ್ ಚಳುವಳಿ ಚನ್ನಾಗಿ ಸಾಗಲಿ.. ’ಕಪಿ’ಚೇಷ್ಟೆಯವರು ಕಿಂಚಿತ್ತಾದರು ಕರುಣೆ ಹೊಂದಲಿ ಅಲ್ವ!

 6. ಅಕ್ಕಾ,
  ಮಾಡರೇಟ್ ಮುಸ್ಲೀಮರು ಎಂಬ ಒಂದು ಸಂಕೀರ್ಣವಾದ ವರ್ಗವೊಂದರ ತಲ್ಲಣಗಳ ಬಗ್ಗೆ ಹೆಚ್ಚು ಸ್ಪಷ್ಟವಾದ ಸಂಗತಿಗಳು ಈಗೀಗ ಕಾಣಿಸತೊಡಗಿವೆ. ಮಲೆಗಾವ್‌ನಲ್ಲಿ ಬಾಂಬ್ ಸ್ಪೋಟಿಸಿದ್ದು ಹಿಂದೂ ಸಂಘಟನೆಯವರು. ಹಿಂದುತ್ವದ ರಕ್ಷಣೆಯಲ್ಲಿ ನಿಂತವರು ಚರ್ಚುಗಳ ಮೇಲೆ ದಾಳಿ ಮಾಡುವರು. ಪಬ್ ಹಿಂದೂ ಸಂಸ್ಕೃತಿಯನ್ನು ಹಾಳುಗೆಡವುತ್ತದೆ ಎಂದು ದಾಳಿ ಮಾಡುವರು. ನಾವು ಅವರನ್ನು ಚುನಾಯಿಸಿದ್ದೇವಾ, ನಮ್ಮ ರಕ್ಷಣೆಯನ್ನು ಮಾಡುವುದಕ್ಕೆ? ನಮ್ಮ ಒಳಿತು ಕೆಡುಕು ನಿರ್ಧರಿಸುವುದಕ್ಕೆ ಅವರಿಗೇನು ಹಕ್ಕಿದೆ? ಕಾನೂನು ಕೈಗೆ ತೆಗೆದುಕೊಳ್ಳುವ ಎಲ್ಲಾ ಸಂಘಟನೆ, ವೇದಿಕೆ, ಸೇನೆಗಳಿಗೂ ಈ ಮಾತು ಅನ್ವಯವಾಗುತ್ತದೆ. ಇವರು ತಾವು ಸಂವಿಧಾನ ಬದ್ಧರಾದ ಸಂಘಟನೆಗಳು ಹೌದೋ ಅಲ್ಲವೋ ಎಂಬುದನ್ನು ಮೊದಲು ಸ್ಪಷ್ಟ ಪಡಿಸಬೇಕು. ಮುತಾಲಿಕ್‌ರನ್ನು ಬಿಡುಗಡೆ ಮಾಡದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಸೇನೆಯ ಮುಖಂಡನೊಬ್ಬ ಸರಕಾರಕ್ಕೆ ಸವಾಲೆಸೆಯುತ್ತಾನೆಂದರೆ, ಠಾಕ್ರೆಯಂಥವರು ಇಡೀ ಪೊಲೀಸು ವ್ಯವಸ್ಥೆಯನ್ನು ನಿಷ್ಕ್ರಿಯರಾಗಿಸುತ್ತಾರೆಂದರೆ ಇವರು ಸಮಾಜ ವಿದ್ರೋಹಿ ಎಲಿಮೆಂಟುಗಳಲ್ಲದೆ ಮತ್ತೇನು?

  ಈ ಘಟನೆಗೆ ಇನ್ನೊಂದು ಮುಖವೂ ಇದೆ ಎಂದು ವಾದಿಸುವ ವಿಕಾಸ್, ವಿನಾಯಕರ ವಾದ ಹಾಸ್ಯಾಸ್ಪದವೆನ್ನಿಸುತ್ತದೆ. ನಕ್ಸಲರ ಬಗ್ಗೆ ಇವರು ಬರೆದಿರುವ ಲೇಖನಗಳ ಧಾಟಿಯನ್ನು, ಬಳಸಿರುವ ಭಾಷೆಯನ್ನು ಗಮನಿಸಿದರೆ- ಅವರಿಗೆ ಯಾವ ಹೋರಾಟವನ್ನಾದರೂ ಸಂವಿಧಾನ ಬದ್ಧವಾಗಿ ನಡೆಸಬೇಕು ಎಂದು ಉಪದೇಶಿಸಿದ್ದನ್ನು ನೋಡಿದರೆ ಈಗಿನ ಅಭಿಪ್ರಾಯವು ದ್ವಂದ್ವ ನೀತಿಯಲ್ಲದೆ ಮತ್ತೇನಲ್ಲ. ಬಹುಶಃ ಈ ಯಾವುದೇ ಘಟನೆಗಳಿಗೆ ವೈಯಕ್ತಿಕವಾಗಿ ಭಾಗಿಯಾಗದೆ ಸುಮ್ಮನೆ ದೂರದಲ್ಲಿ ಕೂತು ಅಭಿಪ್ರಾಯ ರೂಪಿಸಿಕೊಳ್ಳುವ ಎಲ್ಲರಲ್ಲೂ (ನನ್ನನ್ನೂ ಸೇರಿಸಿ) ಈ ರೀತಿಯ ಗೊಂದಲ ಉಂಟಾಗುತ್ತದೆಯೇನೋ!

  ಘಟನೆಗೆ ಕಾರಣರಾದವರನ್ನೆಲ್ಲಾ ಪೊಲೀಸರು ಬಂಧಿಸಿದ್ದಾರೆ. ಅವರಿಗೆ ಕಾನೂನು ರೀತಿ ಸರಿಯಾದ ಶಿಕ್ಷೆಯಾಗಬೇಕು. ಜತೆಗೆ ಇಂಥ ಕೃತ್ಯಗಳಿಗೆ ಸೈಲಂಟ್ ಮೆಜಾರಿಟಿಯ ಬೆಂಬಲ ದೊರಕದಂತೆ ಎಚ್ಚರವಹಿಸಬೇಕು. ಅಲ್ಲದೆ ಇದೇ ಸಂದರ್ಭವನ್ನು ಬಳಸಿಕೊಂಡು ತಮ್ಮ ರಾಜಕೀಯ ಲಾಭವನ್ನು ಮಾಡಿಕೊಳ್ಳಲು ಯತ್ನಿಸುವವರನ್ನು, ವಿಕೃತಿಯನ್ನೇ ಆಧುನಿಕತೆ ಎಂದು ಪ್ರಚಾರ ಮಾಡುವ ಸ್ವಹಿತಾಸಕ್ತಿಯನ್ನೇ ಜನರ ಭಾವನೆ ಎನ್ನುವ ಮಾಧ್ಯಮಗಳನ್ನು, ಇಂಟಲೆಕ್ಛುಯಲ್‌ಗಳನ್ನು ವಿರೋಧಿಸಬೇಕು.

  ಇದಕ್ಕೆಲ್ಲಾ ನಿಮ್ಮ ಬ್ಲಾಗು ವೇದಿಕೆಯಾದದ್ದಕ್ಕೆ ನಿಮಗೆ ಅಭಿನಂದನೆಗಳು.

  ಸುಪ್ರೀತ್.ಕೆ.ಎಸ್

 7. ಚಿಂತನಾರ್ಹ ಪ್ರತಿಕ್ರಿಯೆಗೆ ಧನ್ಯವಾದ ಸುಪ್ರೀ.
  ಈ ಘಟನೆ ಮೇಲೆ ಕಾಣಿಸುವಷ್ಟು ಸರಳವಾಗಿಲ್ಲ. ಧರ್ಮಾಂಧತೆಯ ಅಮಲು ಹತ್ತಿದ ಒಂದಷ್ಟು ಹುಡುಗರಿಗೆ ರಾಜಕಾರಣದ ಚೇಳು ಕುಟುಕಿ, ಗಂಡಸುತನದ ದೆವ್ವವೂ ಮೆತ್ತಿಕೊಂಡು ಹೀಗಾಗಿದೆಯಷ್ಟೆ. ಇದರಿಂದ ಒಳ್ಳೆಯ ಸಂಗತಿ- ವಿಚಾರಗಳಿಗೂ ಮಸಿ ಮೆತ್ತಿಹೋಗುತ್ತದೆಯೆಂಬ ವಿಷಾದ ನನ್ನದು.

  – ಚೇತನಾ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Blog at WordPress.com.

Up ↑

%d bloggers like this: