ಚರ್ಚೆ- ಕೊನೆಯ ಕಂತು


‘ಶ್ರೀ ರಾಮ ಸೇನೆ’ ಮಾಡಿದ್ದು ತಪ್ಪು. ಅದು ಬಹಿರಂಗವಾಗಿ ಕ್ಷಮೆ ಕೇಳಬೇಕು ಮತ್ತು ಮುಂದೆ ಈ ರೀತಿಯ ದುರ್ನಡತೆಗೆ ಅವಕಾಶ ಕೊಡುವುದಿಲ್ಲವೆಂದು ಭರವಸೆ ನೀಡಬೇಕು. ಇದು ನನ್ನ ಒತ್ತಾಯ. ಬಿಜೆಪಿಗಾಗಲೀ ಅದರ ಸಚಿವರಿಗಾಗಲೀ ‘ಪಬ್ ಸಂಸ್ಕೃತಿ ವಿರೋಧಿಸುತ್ತೇವೆ’ ಎಂದೆಲ್ಲ ಹೇಳಿಕೆ ನೀಡುವ ನೈತಿಕತೆ ಎಷ್ಟು ಮಾತ್ರವೂ ಇಲ್ಲ.  ಚುನಾವಣೆಗಳಲ್ಲಿ, ರಾಜಕಾರನದ ‘ಆಪರೇಶನ್ನು’ಗಳಲ್ಲಿ, ಖಾಸಗಿ ಮೀಟಿಂಗುಗಳಲ್ಲಿ, ‘ರೆಸಾರ್ಟ್ ರಾಜಕಾರಣ’ದ ಸಂದರ್ಭಗಳಲ್ಲಿ ನೆನಪಾಗದ ಸಾಂಸ್ಕೃತಿಕ ಕಾಳಜಿ ಈಗ ಜಾಗೃತಗೊಂಡರೆ ಅದಕ್ಕೆ ಮೌಲ್ಯವಿಲ್ಲ.

ಇನ್ನು ಶ್ರೀ ರಾಮ ಸೇನೆಯವರು… ಇವರಲ್ಲಿ ನನ್ನ ವಿನಂತಿ, ‘ಪ್ರಜಾ ರಂಜಕ ಶ್ರೀ ರಾಮನ ಹೆಸರಲ್ಲಿ ಪ್ರಜಾಪ್ರಭುತ್ವಕ್ಕೆ ಮಸಿ ಬಳಿಯಬೇಡಿ’ ಎಂಬುದೊಂದೇ. ನನ್ನ ಪಾಲಿನ, ಗಾಂಧೀಜಿಯಂತಹ ಮಹಾತ್ಮರ ಪಾಲಿನ, ಕೋಟಿ ಕೋಟಿ ಭಾರತೀಯರ ಪಾಲಿನ, ಹಿಂದೂ ಸಂಸ್ಕೃತಿಯ ಬಗ್ಗೆ ಗೌರವವುಳ್ಳ ಎಲ್ಲರ ಪಾಲಿನ ಶ್ರೀರಾಮನನ್ನು ನಮ್ಮಿಂದ ಕಸಿದುಕೊಳ್ಳಬೇಡಿ. ಈಗ ಕ್ಷಮೆ ಕೇಳಿ, ಮತ್ತು ಸುಮ್ಮನಾಗಿ.

‘ಪಬ್ ಸಂಸ್ಕೃತಿ’ ಬಗ್ಗೆ ಮಾತು ಎಳೆಯುತ್ತಲೇ ಇರುವವರಲ್ಲೂ ವಿನಂತಿ ಇದೆ. ಹೀಗೊಬ್ಬರು ಸ್ಟ್ರೆಸ್ ಆದರೆ ಯೋಗ ಮಾಡಿ, ಧ್ಯಾನ ಮಾಡಿ ಎಂದು ಸಲಹೆ ನೀಡಿದ್ದಾರೆ. ಟೀನಾಳನ್ನು ಉದ್ದೇಶಿಸಿ ಬರೆದಿರುವ ಅವರಿಗೊಂದು ಕ್ಲಾರಿಫಿಕೇಶನ್ನು. ಮೇಡಮ್, (ಹೆಸರು ಮರೆಮಾಚಿ ಕಮೆಂಟಿಸಿದ್ದರೆ, ‘ಸರ್’ ) ಇಲ್ಲಿ ಆಕೆ ಹೇಳಿರೋದು ನನಗೆ ಸ್ಟ್ರೆಸ್ ಆದರೆ ನಾನು ಪಬ್ ಗೆ ಹೋಗ್ತೇನೆ ಅಂತ ಅಲ್ಲ. ಅಥವಾ ಹೋಗಲೂ ಬಹುದು. ಆದರೆ ಟೀನಾ ಹೇಳಿರುವುದು ಒಟ್ಟು ಹೆಣ್ಣು ಮಕ್ಕಳ ಹಕ್ಕು- ಸ್ವಾತಂತ್ರ್ಯದ ಬಗ್ಗೆ. ನೀವದನ್ನ ವೈಯಕ್ತಿಕವಾಗಿ ಪರಿಗಣಿಸಿ ಸಲಹೆ ನೀದಬೇಕಾದ ಅಗತ್ಯವಿಲ್ಲ.

ಪಬ್, ಬಾರ್, ಕುಡಿತಗಳು ಕೂಡದು ಎಂದಾದರೆ ಈ ಕೂಡಲೇ ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ನೋಡೋಣ! ಸತ್ಯಕಾಮರ ಮಾತೊಂದಿದೆ: ‘ವೇಶ್ಯಾ ಸ್ತ್ರೀ ಇದ್ದಾಳೆಂದೇ ಮನೆಯಲ್ಲಿ ಹೆಂಗಸರು, ಊರ ಹೆಣ್ಣುಗಳು ನಿಶ್ಚಿಂತೆಯಿಂದ ಇರಲು ಸಾಧ್ಯವಾಗಿದೆ’ ಎಂದು. ಇದನ್ನ ನೀವು ಪಬ್ ಗಳಿಗೂ ಅನ್ವಯಿಸಿಕೊಳ್ಳಬಹುದು ಬೇಕಿದ್ದರೆ. ಪಬ್ ಗೆ ಹೋಗುವವರೆಲ್ಲರೂ ಕಟ್ಟಾ ಕುಡುಕರು, ಕೆಡುಕರು ಎಂದು ನಿಮ್ಮ ಅಭಿಪ್ರಾಯವಾಗಿದ್ದರೆ…!

ಇನ್ನು, ಪ್ರತಿಕ್ರಿಯೆಗಳು…

ರಾಮಸೇನೆಯ ವಕ್ತಾರರೊಬ್ಬರ ಮಾತುಗಳಿವು – *ಹುಡುಗಿರನ್ನು ನಾವೇನು ಅತ್ಯಾಚಾರ ಮಾಡಿಲ್ಲ ಅಥವಾ ಅವರ ಜತೆ ಅಸಭ್ಯವಾಗಿಯೂ ವರ್ತಿಸಿಲ್ಲ. ದಾಳಿ ಉತ್ಸಾಹದಲ್ಲಿ 4 ಏಟನ್ನು ಕಾರ್ಯಕರ್ತರು ಹೊಡೆದಿದ್ದಾರೆ.’ ವಾಹವಾ! ನಾಳೆ ಯಾರೊ ಪರಿಚಿತರು ಇವರನ್ನು ಹಿಗ್ಗಾಮುಗ್ಗಾ ಚಚ್ಚಿ ಅವಮಾನಮಾಡಿ ’ಏನೊ ಉತ್ಸಾಹದಲ್ಲಿ ನಾಕೇಟು ಹಾಕಿದ್ವಿ’ ಅಂದರೆ!! ಯಾರಿಗೋ ಬಿದ್ದ ಏಟುಗಳ ಬಗ್ಗೆ ಅವರಿಗೆ ಬೇಸರವಿಲ್ಲ. ದೂರದ ಬೆಟ್ಟ ನುಣ್ಣಗೆ. ಅಲ್ಲ? ಇದನ್ನು ಉದ್ಧರಿಸಿ ಬರೆವ ಮನುಷ್ಯನಿಗೆ ವಿಶ್ಲೇಷಣೆಯ ತಾಕತ್ತು ಇರುವುದು ಸಾಧ್ಯವೆ?
ಇನ್ನು, ಮಾಧ್ಯಮಗಳ ಮೇಲಿನ ಬೇಸರದ ಬಗ್ಗೆ ಮಾತಾಡುವ. ದಾಳಿ ನಡೆವ ಮುನ್ನ ಮಾಧ್ಯಮಗಳು ಅಲ್ಲಿ ಹೋಗಿ ಘಟನೆಯ ಚಿತ್ರೀಕರಣ ನಡೆಸಿದ್ದರ ಬಗ್ಗೆ ನನಗೂ ರೇಜಿಗೆ ಇದೆ. ಅವರ ತಪ್ಪನ್ನು ಅವರಿಗೆ ಮನವರಿಕೆ ಮಾಡಿಕೊಡುವ ಜವಾಬ್ದಾರಿ ನಮ್ಮ ಮೇಲೆ ಇದೆ. ಆದರೆ ಮಾಧ್ಯಮದವರು ಇದಕ್ಕೆ ಸೂಕ್ತ ಪ್ರಚಾರ ನೀಡದೆ ಹೋಗಿದ್ದಿದ್ದರೆ ಇದಕ್ಕೆ ರಾಷ್ಟ್ರೀಯ ಪ್ರಾಮುಖ್ಯತೆ ದೊರಕುತ್ತಿತ್ತೆ? ಇದಕ್ಕೆ ವ್ಯಕ್ತವಾದ ಕಂಡನೆಯಿಂದ ಇನ್ನು ಮುಂದೆ ಈ ರೀತಿ ಕೆಲಸ ಮಾಡಲು ಬಯಸುವವರು ಹಿಂದೇಟು ಹಾಕುವಂತೆ ಆಗಲಿಲ್ಲವೆ? ನಾಳೆ ಇಅವರು ನಾವು ಸುಮ್ಮನಿದ್ದರೆ, ಎಲ್ಲರೂ ಆರುಗಂತೆಯ ಒಳಗೆ ಮನೆಸೇರಿಕೊಳ್ಳಲೆಬೇಕು, ಎಂದು ಕೊಲೆಸುಲಿಗೆ ಅತ್ಯಾಚಾರಗಳ ರೀಸನ್ನು ಕೊಟ್ಟು ಫತ್ವಾ ಹೊರಡಿಸಿದರೆ ಒಪ್ಪಿಕೊಳ್ಳಲಾದೀತೆ? ಅದು ಹಾಗಿರಲಿ, ಅಂಥ ಹೆಸರಾಂತ ಸುದ್ದಿಮಾಧ್ಯಮಗಳನ್ನು ನೀವು ಅಲ್ಲಗಳೆಯುತ್ತೀರಿ. ಸರಿ, ಒಪ್ಪಿಕೊಳ್ಳೋಣ. ಹಾಗೆ ಅವನ್ನು ಒಪ್ಪದ ನೀವು ಅಕ್ಷರವಿಹಾರದ ಲೇಖಕ ಹೇಳಿದ್ದನ್ನು ಹೇಗೆ ’ನಿಜ’ ಎಂದು ಸುಲಭವಾಗಿ ಒಪ್ಪಿಕೊಡುಬಿಟ್ಟಿರಿ? ಆ ಹೆಣ್ಣುಮಕ್ಕಳು ತಮ್ಮನ್ನು ಹೇಗೆ ವಿವಸ್ತ್ರಗೊಳಿಸಿ ಮೈಮುಟ್ಟಿ ಅಶ್ಲೀಲ ಭಾಷೆ ಬಳಸಿ ಅವಮಾನಿಸಲಾಯಿತು ಎಂದು ಕೊಟ್ಟ ಹೇಳಿಕೆಯ ಬಗ್ಗೆ ಏನೂ ಅನಿಸುವುದಿಲ್ಲವಾದರೆ ರಾಮಸೇನೆಯ ರಾಜಕೀಯ ನಾಯಕರ ಹೇಳಿಕೆಯ ಬಗ್ಗೆ ಹೇಗೆ ನಂಬಿಕೆ ಬಂದಿತು?
ಇನ್ನು ಪಬ್ ಸಂಸ್ಕೃತಿಯ ಬಗ್ಗೆ… ಚೇತನಾರನ್ನು ಆಕೆ ಕುಡಿಯುತ್ತಾಳೆಯೆ ಎಂಬಂಥ ಅಸಂಬದ್ಧ ಪ್ರಶ್ನೆ ಎತ್ತಿರುವ ಪೂರ್ವಿಯವರಿಗೆ ಪಬ್ಬುಗಳಲ್ಲಿ ನಡೆವ ಅನೈತಿಕ ಚತುವಟಿಕೆಗಳ ಬಗ್ಗೆ ಚೆನ್ನಾಗಿ ಅರಿವಿರುವಂತಿದೆ. ಅವರು ತಮ್ಮ ಅರಿವನ್ನು ನಮ್ಮ ಜತೆ, ಪೊಲೀಸರ ಜತೆ, ಮಾಧ್ಯಮದವರ ಜತೆ ಹಂಚಿಕೊಂಡಲ್ಲಿ ಒಳ್ಳೆಯದಲ್ಲವೆ?ಅಂಥ ಚಟುವಟಿಕೆಗಳನ್ನು ನಿಲ್ಲಿಸಲು ನನ್ನ ಸಂಪೂರ್ಣ ಬೆಂಬಲವಿದೆ. ಹಾಗೆ ನೋಡಿದರೆ ವೇಶ್ಯಾವಾಟಿಕೆ ಮುಂತಾದವು ನಮ್ಮ ಬೆಂಗಳೂರ ಮೆಜೆಸ್ಟಿಕಿನ ಬಸ್ಟಾಂಡಿನಲ್ಲು ಹಾಡಹಗಲೆ ನಡೆಯುತ್ತದೆ. ಅದರ ಬಗ್ಗೆ ರಾಮಸೇನೆಯವರು ಜಾಗೄತರಾಗದೆ ಪಬ್ಬಿನೆಡೆ ಸಾಗಿರುವದು ಅವರ ಕಾಳಜಿ, ಆಸಕ್ತಿಗಳನ್ನು ತೋರುತ್ತದೆ.
ಯಾರೊ ಪಬ್ಬಿಗೆ ಹೋದಮಾತ್ರಕ್ಕೆ ಆಕೆ ನಾಚಿಕೆಗೆಟ್ಟವಳು ಅನ್ನುವವರ ಬಗ್ಗೆ ನನಗೆ ಸಂತಾಪವಿದೆ, ಅವರ ಇಗ್ನೋರೆನ್ಸಿನ ಬಗ್ಗೆ ಬೇಸರವಿದೆ.ಆದರೆ ಇಲ್ಲಿ ಮಾತು ನನ್ನ ನಿಮ್ಮ ಸ್ವಾತಂತ್ರ್ಯದ್ದು. ಪಬ್ಬಿನದಲ್ಲ.ನನ್ನ ಜೀವನ ನನ್ನದು ಅದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಹಕ್ಕಿರುವದು ನನಗೆ ಮಾತ್ರ. ನಾನು ಜೀವಿಸುತ್ತಿರುವುದು ಡೆಮಾಕ್ರಸಿ ಇರುವ ದೇಶದಲ್ಲಿ. ನಾನು ಸ್ವತಂತ್ರಳು. I have freedom of movement. It is one of my basic rights. ಇಲ್ಲಿ ರಾಮಸೇನೆಯವರು ನಮ್ಮ ದೇಶದ ಕಾನೂನನ್ನ ಉಲ್ಲಂಘಿಸಿದಾರೆ ಅಂದಮೇಲೆ ಅವರನ್ನು ಯಾರಾದರು ಸಪೋರ್ಟು ಮಾದಲು ಹೇಗೆ ಸಾಧ್ಯ?      – ಟೀನಾ

ಒಂದು ಬೇಸಿಕ್ ಪ್ರಶ್ನೆ: ಪಬ್ ಸಂಸ್ಕೃತಿ ಎಂದರೆ ಏನು?                                   – ಸಂಕೇತ್

ನಿಜ, ಸಧ್ಯಕ್ಕೆ ಹೆಣ್ಣುಮಕ್ಕಳನ್ನ ಜಗ್ಗಾಡಿ, ಹದ್ದು ಮೀರಿ ವರ್ತಿಸಿದ ಕೃತಿಯನ್ನು ಖಂಡಿಸೋಣ. ಅದು ರಾಮಸೇನೆಯೋ ಇನ್ನೊಂದು ಸೇನೆಯೊ. ಅದು ನನಗೆ ಸೆಕೆಂಡರಿ.                 – ನೀಲಾಂಜಲ

ನನ್ನ ಜೀವನ ನನ್ನದು ಅದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಹಕ್ಕಿರುವದು ನನಗೆ ಮಾತ್ರ. ನಾನು ಜೀವಿಸುತ್ತಿರುವುದು ಡೆಮಾಕ್ರಸಿ ಇರುವ ದೇಶದಲ್ಲಿ. ನಾನು ಸ್ವತಂತ್ರಳು. I have freedom of movement. It is one of my basic rights.

Idannu odi ella kudukaru haage helidre yenu gati teena madam, ashtu work stress adre yoga madli, dyana madli, illa kudilebeku andre maneyalli neetagi kuntu kudiyali. adu bittu pub ge hogodu. kudida mattinalli yendru hechchu kammi madikollodu ivella beka?                                                  – ಪೂರ್ವಿ

ಟಿವಿ ಚಾನೆಲ್ ಗಳಿಗೂ ನಿಮ್ಮ ಬ್ಲಾಗ್ ಪೋಸ್ಟ್ ಗಳಿಗೂ ಜಾಸ್ತಿ ವ್ಯತ್ಯಾಸ ಕಾಣಿಸ್ತಾ ಇಲ್ಲ ಈಗೀಗ.. ಪ್ರಮೋದ್

ಈಗ ಪಬ್ ಎಂಬ ಒಳಾಂಗಣದಲ್ಲಿ ಕುಡಿಯುವುದಕ್ಕಿಂತ ಮನೆಯಲ್ಲಿ ಮಕ್ಕಳ ಮುಂದೆ ಕುಡಿಯೋ, ಸಿಗರೇಟು ಸೇದೋ ಭೂಪರು ಒಳ್ಳೆಯವರೇನು?
ಕುಡಿಯುತ್ತಾ ತನ್ನ ಮಗಳ ಕಯ್ಯಲ್ಲೇ ಸಿಗರೇಟು ತರಿಸುವ, ಹೆಂಡತಿ ಕಯ್ಯಲ್ಲೇ ಮೊಟ್ಟೆ ಮಾಡಿಸಿ ಉಣ್ಣುವ ಸಭ್ಯರಿದ್ದಾರೆ. ಹಲವು ದೊಡ್ಡ ಮಂದಿಯ ಕತೆ ಇದು. ತಮ್ಮ ಮನೆಯ ಕೆಲಸದ ಹೆಣ್ಣು ಮಕ್ಕಳ ಕಯ್ಯಲೇ ಸೋಡಾ, ಸಿಗರೇಟಿನ ಸರಬರಾಜು. ಇವರೇ ನಮ್ಮನ್ನು ಆಳ್ತಾ ಇರೋದು ಕೂಡ ಅಲ್ವ!    – ಮಾಯ್ಸ

ಮಾಧ್ಯಮದ ಬಗೆಗಿನ ಪ್ರಶ್ನೆಗಳಲ್ಲಿ ಕೆಲವಕ್ಕೆ ಉತ್ತರ –
1) ಘಟನೆ ನಡೆಯುವ ಮುನ್ನ ಸಂಘಟನೆಯ ಕಾರ್ಯಕರ್ತರು ದೂರವಾಣಿ ಮೂಲಕ 10-12 ಜನ ವರದಿಗಾರರಿಗೆ ಹೀಗೆ ಮಾಡಲಿದ್ದೇವೆ ಎಂದು ತಿಳಿಸಿದ ಕಾರಣ ಮಾಧ್ಯಮಗಳು ಅಲ್ಲಿ ಬಂದಿದ್ದವು. (ಇಂಥ ಸಂದರ್ಭದಲ್ಲಿ ಮಾಧ್ಯಮಗಳು ವರದಿ ಮಾತ್ರ ಮಾಡಬೇಕಾ ಅಥವಾ ಕ್ಯಾಮರಾ-ಪೆನ್ನು ಕೆಳಗಿಟ್ಟು ಬಲಿಯಾಗುತ್ತಿರುವವರನ್ನು ರಕ್ಷಿಸಬೇಕಾ ಎಂಬುದು ಐತಿಹಾಸಿಕ ಸಮಸ್ಯೆ, ಇದಕ್ಕೆ ಪ್ರಣಯ್ ರಾಯ್ ರಾಜ್-ದೀಪ್ ಸರ್ದೇಸಾಯಿಯಾದಿಯಾಗಿ ಯಾರಿಗೂ ಇಲ್ಲಿವರೆಗೂ ಉತ್ತರ ಸಿಕ್ಕಿಲ್ಲ)
2) ಘಟನೆ ರಾಷ್ಟ್ರೀಯವಾಗುವಲ್ಲಿ ರಾಜಕೀಯದ ಪಾತ್ರವಿದೆಯೆಂದು ಹೇಳಲಾಗುತ್ತಿದೆ. ಇದನ್ನು ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಸ್ವತಹ ಒಪ್ಪಿಕೊಂಡಿದೆಂತೆ. ಆದರೆ, ಹಾಗಾಗದಿದ್ದರೆ ಆ ಸಂಘಟನೆಯ ಕುರಿತು ರಾಷ್ಟ್ರಮಟ್ಟದಲ್ಲಿ ಸಾಮಾನ್ಯ ಜನರಿಗೆ ಗೊತ್ತೇ ಆಗುತ್ತಿರಲಿಲ್ಲ. ಈ ಸಂಘಟನೆಯ ಕುರಿತು ನಿಜಕ್ಕೂ ರಾಷ್ಟ್ರಮಟ್ಟದಲ್ಲಿ, ಸರಕಾರದ, ಕಾನೂನಿನ ಗಮನ ಸೆಳೆಯಬೇಕಾದ ಅಗತ್ಯವಿದೆ. ಹುಬ್ಬಳ್ಳಿ ನ್ಯಾಯಾಲಯ ಸ್ಫೋಟ ಪ್ರಕರಣದ ಆರೋಪಿಗಳು ಶ್ರೀರಾಮಸೇನೆ ಕಾರ್ಯಕರ್ತರೇ. (ವಿವರಗಳಿಗೆ ಜನವರಿ 12ರ ಕನ್ನಡಪ್ರಭಾ ಓದಿ, ಕನ್ನಡಪ್ರಭಾ ಬಿಟ್ಟರೆ ಬೇರ್ಯಾವ ಪತ್ರಿಕೆಯೂ ಇದರ ಬಗ್ಗೆ ಬರೆಯುವ ಧೈರ್ಯತೋರಿಸಿಲ್ಲ) ಮಂಗಳೂರಿಗೆ ಮಾಲೆಗಾಂವ್ ಸ್ಫಓಟಕ್ಕೆ ಸಂಬಂಧಿಸಿಂತೆ ಮುತಾಲಿಕ್ ವಿಚಾರಣೆಗೆ ಮಹಾರಾಷ್ಟ್ರ ಎಟಿಎಸ್ ಬಂದಿದೆ, ಅವರ ಚಾರ್ಜ್-ಶೀಟ್ ಪ್ರಕಾರ ತಪ್ಪಿಸಿಕೊಂಡಿರುವ ಮೂರು ಜನರಲ್ಲಿ ಒಬ್ಬ ಪ್ರವೀಣ್ ಮುತಾಲಿಕ್, ಹುಬ್ಬಳ್ಳಿಯಲ್ಲಿ ಶ್ರೀರಾಮಸೇನೆ ಕಾರ್ಯಕರ್ತನಾಗಿದ್ದನಂತೆ. ನಮಗೆಲ್ಲ ಇಂತಹ ಕೃತ್ಯಗಳೆಲ್ಲ ಎಷ್ಟು ಅಭ್ಯಾಸವಾಗಿದೆಯೆಂದರೆ, ನಮ್ಮ ರಾಜ್ಯದ ಮಾಧ್ಯಮಗಳು ಇವೆಲ್ಲ ಸಾಮಾನ್ಯವೆಂದು ಬದಿಗಿಟ್ಟುಬಿಡುವಷ್ಟು ಜಡ್ಡುಕಟ್ಟಿಹೋಗಿವೆ. ದೊಡ್ಡದಾಗಿ ವರದಿಯಾಗಿದ್ದು ಇದೊಂದು ಮಾತ್ರ. ವರದಿಯಾಗದಿರುವಂಥ ಕೃತ್ಯಗಳು ನೂರಾರಿವೆ. ಮುತಾಲಿಕ್ ಬೆಂಗಳೂರಿನಲ್ಲೇ ತನ್ನ ರಾಷ್ಟ್ರ ರಕ್ಷಾಸೇನೆಯ armed training photos ಬಿಡುಗಡೆ ಮಾಡಿದರೂ ಯಾರೂ ಆತನನ್ನು ಏನು ಮಾಡುತ್ತಿದ್ದೀಯಾ ಅಂತ ಪ್ರಶ್ನಿಸಲಿಲ್ಲ. ನಕ್ಸಲ್ ವಿರುದ್ಧ ಧ್ವನಿಯೆತ್ತುವ ನೂರಾರು ಮಂದಿಗೆ ಬಲಪಂಥೀಯ ಉಗ್ರವಾದದ ಬಗ್ಗೆ ಗೊತ್ತೇ ಇರಲಿಕ್ಕಿಲ್ಲ.ಈ ಘಟನೆಯಿಂದ ಸಂಘಟನೆಯ ನೂರಾರು ಮಗ್ಗಲುಗಳು ದೇಶಕ್ಕೆ ಪರಿಚಯವಾಗುತ್ತಿವೆ.                             – ಶ್ರೀ

ಈ ಪ್ರತಿಕ್ರಿಯೆಗಳೊಂದಿಗೆ ‘ಶ್ರೀ ರಾಮ ಸೇನೆಯ ಕಪಿ ಚೇಷ್ಟೆ’ ಚರ್ಚೆಯನ್ನು ಕುರಿತ ಬರಹಗಳನ್ನು ಮುಗಿಸುತ್ತಿದ್ದೇನೆ.

10 thoughts on “ಚರ್ಚೆ- ಕೊನೆಯ ಕಂತು

Add yours

 1. ಮಂಗಳೂರಿನವನಾದ ನನಗೆ ಇಲ್ಲಿ ನಡೆದ ಘಟನೆಗಿಂತ ಸುದ್ದಿಯಾದ ರೀತಿ ಸೋಜಿಗ ತರುತ್ತದೆ. ಪಬ್ಬಿನಲ್ಲಿ ಹುಡುಗಿಯರಿಗೆ ಹೊಡೆದ ಆರೋಪ ಹೊತ್ತ ಶ್ರೀರಾಮಸೇನೆ ವರ್ಷದ ಹಿಂದೆ ಪುತ್ತೂರಿನಲ್ಲಿ ನಿಗೂಢವಾಗಿ ಕೊಲೆಯಾದ ಅಕ್ಷತಾ ಹಂತಕನ ಪತ್ತೆಗಾಗಿ ಶಾಂತಿಯುತ ಬಂದ್ ಆಚರಿಸಿತ್ತು. ಈಗ ಇವರು ಅವರೇನಾ ಎಂಬಂಥ ಸ್ಥಿತಿ.
  mambady.blogspot.com

 2. ನಮ್ಮ ಮಂಗಳೂರಲ್ಲಿ ಸಾವಿರ ಸಮಸ್ಯೆಗಳಿದ್ದರೂ ಅವುಗಳನ್ನಾವುದೇ ಲೆಕ್ಕಿಸದೇ ಯಾವುದೋ ಒಂದು ಪಬ್ನಲ್ಲಾದ ಘಟನೆಯನ್ನು ಎಳೆದು ವಾರಗಟ್ಟಲೆ ಟೀವಿ, ಪತ್ರಿಕೆಗಳಲ್ಲಿ ಹಾಕಿದುದರ ಹಿಂದೆ ಮಾಧ್ಯಮದವರ ಸಾಧನೆಗೆ ಏನು ಹೇಳಲೋ ತಿಳಿಯದು. ಇಲ್ಲಿರುವಷ್ಟು ಕುಲಗೆಟ್ಟ ರಸ್ತೆಗಳು ಇನ್ನೆಲ್ಲೂ ನೋಡಿಲ್ಲವೆಂದು ಪರವೂರಿನ ಮಿತ್ರರೂ ಹೇಳುತ್ತಾರೆ. ಆದರೆ, ಇಂತಹ “ಚಿಲ್ಲರೆ” ಸಮಸ್ಯೆಗಳಾವನಿಗೆ ಬೇಕು. ಯಾರು ಯಾರಿಗೆ ಹೊಡೆದರೋ, ಯಾರು ಯಾರ ಮುಗಿಸಿದರೋ….. ನಿಜಕ್ಕೂ, ಇಂದಿಗೆ “ಜನ ಮರುಳೋ, ಮಾಧ್ಯಮ ಮರುಳೊ” ಎಂಬಂತಾಗಿದೆ.

 3. pub ge avru hogiddu.. avra vartane adellaa.. bere tanike naDeyali…
  aadre haage hinde munde noDade kaanoonu kaigettikoLLOdu yaava paksha, sangatane, yaare idru avrige shobhe tarolla…

  pradeep avru heLida road vishyakke bandre… I agree with pradeep 🙂
  Chetana avre nivu recent aagi aa kade hogilla andkotini 🙂

 4. ಇಲ್ನೋಡಿ ಚೆತನಾ ಅವರೇ, ಇಲ್ಲಿ ಜೀವನ ಎಲ್ಲಿಂದ ಬಂತು? ಬರೇ ರೋಡ್ ಮಾತ್ರ ಅಂತೇನೂ ಹೇಳಿಲ್ಲ. ಇಲ್ಲಿ ಹಲವಾರು ಸಮಸ್ಯೆಗಳಿದ್ದರೂ, ಯಾವುದೋ ಒಂದು ವಿಷಯ ಹಿಡಿದೆಳೆದು ದೊಡ್ಡ ಸುದ್ದಿ ಮಾಡಿದ್ದಾರೆ. ಸುದ್ದಿಯಾಗದ ಉದಾಹರಣೆಗೆ ರಸ್ತೆಯ ವಿಷಯ ಹೇಳಿದ್ದೆ ಅಷ್ಟೇ. ನೀವು ಒಮ್ಮೆ ಮಂಗಳೂರಿಗೆ ಬಂದು ನೋಡಿ ಚೇತನಾ ಅವರೇ, ಇಲ್ಲಿ ಎಷ್ಟ್ ಪಬ್ಗಳಿವೆ, ಹಾಗೂ ಎಷ್ಟು ವರುಷಗಳಿಂದ ಓಡುತ್ತಿವೆ, ಇಲ್ಲಿಯವರೆಗೆ ಅವುಗಳ ಮೇಲೆ ಏಕೆ ದಾಳಿಗಳಾಗಿಲ್ಲ? ಇತ್ತೀಚೆಗೆಂಬಂತೆ ಶುರುವಾದ ಅಮ್ನೇಷಿಯ ಮೇಲೆಯೇ ದಾಳಿ ಯಾಕಾಯಿತು? ಇದೆಲ್ಲ ಬಲ್ಲಿರಾ, ಯೋಚಿಸಿದ್ದೀರಾ? ಹೊಡೆದಾಟಗಳು ಯಾವ ಊರಲ್ಲಿಲ್ಲ ಹೇಳಿ, ಈ ಒಂದು ಘಟನೆಗೇ ಮಾತ್ರ ಮಾಧ್ಯಮಗಳೆಲ್ಲ ಏಕೆ ಹೆಚ್ಚು ಒತ್ತು ನೀಡುತ್ತಿವೆ? ನಿಮಗೆ ಯಾರದೋ ಹೊಡೆದಾಟ ಮುಖ್ಯನೋ, ನಿಮ್ಮ ಪ್ರದೇಶದ ಪರಿಸ್ಥಿಥಿ ಮುಖ್ಯನೋ, ಅದು ನಿಮಗೆ ಬಿಟ್ಟಿದ್ದು. ಖಂಡನೀಯವಾದುದನ್ನು ಕಂಡಿಸಬೇಕು ನಿಜ. ಆದರೆ, ಮಾಧ್ಯಮಗಳು ಸ್ರುಷ್ಟಿಸುವ “hype”ಗಳಿಗೆ ಬಲಿಪಶುವಾಗಬೇಡಿ.

 5. ಜೀವನ ಅಂದ್ರೆ ರೋಡು ಮಾತ್ರಾನಾ?
  ಅಂದ್ರಿ…
  ಆದ್ರೆ ಆ ರೋಡಿನಲ್ಲೇ ನಮ್ಮ ಜೀವನದ ಅಳಿವು, ಉಳಿವು ಇರುತ್ತದೆ. ಎಲ್ಲರೂ ರೋಡಿನಲ್ಲಿ ಹೋಗುತ್ತಾರೆ. ಆದರೆ ಕೆಲವರು ಮಾತ್ರ ಪಬ್ಬಿಗೆ ಹೋಗುತ್ತಾರೆ. ಇತ್ತೀಚೆಗೆ ಮಂಗಳೂರಿನ ಕಡೆ ಹೋಗಿಲ್ಲ ಎಂದು ಬರೆದಿದ್ದೀರಿ. ಆದರೆ ನಾನು ಇವತ್ತಿನವರೆಗೆ ಮಂಗಳೂರಿನಲ್ಲೇ ಇದ್ದೇನೆ. ಇಲ್ಲೇ ಶಾಲೆ, ಕಾಲೇಜಿಗೆ ಹೋಗಿದ್ದು. ನನ್ನ ಹಾಗೆ ಅನೇಕ ಮಂಗಳೂರಿಗರಿಗೆ ಪಬ್ಬು, ಬಾರುಗಳು ಮುಖ್ಯ ಅಲ್ಲ. ಅಂದ ಹಾಗೆ ಮಂಗಳೂರಿಗೆ ಪಬ್ಬುಗಳು ಕಾಲಿಟ್ಟದ್ದೇ ಮೊನ್ನೆ ಮೊನ್ನೆ. ಅಲ್ಲಿಗೆ ಹೋಗುವವರು ಅತಿ ಶ್ರೀಮಂತರು ಮಾತ್ರ.. ನನ್ನಂಥವರಲ್ಲ. ನನ್ನ ಅಕ್ಕ, ತಂಗಿಯರೂ ಅಲ್ಲ. ನಿಮಗೆ ಮಂಗಳೂರಿನ ಬಗ್ಗೆ ಹೆಚ್ಹಿನ ವಿವರದ ಆಸಕ್ತಿ ಇದ್ದರೆ ನನ್ನ ಬ್ಲಾಗ್ ನೋಡಿ.

 6. please dont trivilise things. There is difference in nackedness in slum and bar. Mangalore pubs and bar have become prostitution den. Why can not police through legal mechanism control that. there are much larger issues of life which needs to be debated. i am of the opinion pubs should be closed after 6, not necessarly only in managalore but entire india. do we need to floow western socities in every aspects. dont we have our own view aboout life

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Create a free website or blog at WordPress.com.

Up ↑

%d bloggers like this: