ಗೊಣಗೋದು ಬಿಟ್ಟು ನಾವೂ ಏನಾದರೂ ಮಾಡಬಹುದು!


ಇದು ಬಹಳ ತಿಂಗಳುಗಳ ಹಿಂದಿನ ಕಥೆ. ಒಂದಷ್ಟು ಜನ ’ಐ ಯಾಮ್ ಲೀವಿಂಗ್ ಬ್ಯಾಂಗಲೋರ್’ ಅಂತ ಕಮ್ಯುನಿಟಿಗಳನ್ನ ಮಾಡಿಕೊಂಡು ನಮ್ಮೂರಿನ (!?) ಬಗ್ಗೆ ಕಂಪ್ಲೇಂಟುಗಳನ್ನು ಹೇಳುತ್ತ, ಇಲ್ಲಿನ ಜನಗಳನ್ನು ಹೀಯಾಳಿಸುತ್ತ ದೊಡ್ಡ ದೊಡ್ಡ ಪೋಸ್ಟರುಗಳನ್ನು ಹಾಕಿಕೊಂಡು ಗುಲ್ಲು ಮಾಡಿದ್ದರು.

ಹಾಗೆ ಬೆನ್ನು ತಿರುಗಿಸಿ ನಿಂತವರ ಕಡೆ ಕ್ಯಾರೇ ಅನ್ನದೆ ಜನ ಜೀವನ ನಡೆದುಕೊಂಡು ಹೋಯ್ತು ನೋಡಿ, ಎಲ್ಲವೂ ತಣ್ಣಗಾಯ್ತು. ಬೆಂಗಳೂರಂಥಾ ಬೆಂಗಳೂರಲ್ಲೇ ಇವರಿಷ್ಟು ಕ್ಯಾತೆ ತೆಗೀತಾರೆನ್ನುವುದಾದರ ಜಗತ್ತಿನ ಯಾವ ಭಾಗದಲ್ಲಿ ಜೀವನ ಮಾಡಬಲ್ಲರು ಹೇಳಿ!?
ಮ್… ನಾವೂ(ನೂ) ಆಗೀಗ ಬೆಂಗಳೂರಿನ ಕೆಲವು ಕಲ್ಯಾಣಗುಣಗಳ ಬಗ್ಗೆ ಮುನಿದು ಗೊಣಗಾಡೋದಿದೆ. ಆದರೆ ಅದು ಯಾವತ್ತೂ ಬೆಂಗಳೂರಿನೆಡೆಗಿನ ದ್ವೇಷವಾಗಿದ್ದಿಲ್ಲ. ನನ್ನೂರು ಅಂದರೆ ಹುಚ್ಚು ವ್ಯಾಮೋಹ ನಿಜ. ಹಾಗಂತ ಬದುಕು ಕಟ್ಟಿಕೊಟ್ಟ ಊರಿನೆಡೆಗೆ ತಾತ್ಸಾರವೇನೂ ಇಲ್ಲ. ಇನ್ನೂ ಕೆಲವು ಸಾರ್ತಿ, ಶುದ್ಧ ಬೆಂಗಳೂರಿಗರ ಪಾಲಿಗೆ ನಾವು ಏನೂ ಉಳಿಸುತ್ತಿಲ್ಲವಲ್ಲ ಅನ್ನೂ ಗಿಲ್ಟು ಕಾಡೊದೂ ಇದೆ.

ಸಧ್ಯಕ್ಕೆ ನನಗೆ ಬೆಂಗಳೂರಿನ ಸಮಸ್ಯೆ ಅಂತ ಕಾಣ್ತಿರೋದು ಇಲ್ಲಿನ ಟ್ರಾಫಿಕ್ಕು. ಅರ್ಧ ಆಯುಷ್ಯವೇ ರಸ್ತೆಗಳಲ್ಲಿ ಕಳೆದು ಹೋಗುತ್ತೇನೋ ಅನುವಷ್ಟು ಕಿಕ್ಕಿರಿದ ವಾಹನ ದಟ್ಟಣೆ. ಬರಬರುತ್ತ ವಾಹನ ಮತ್ತು ಹೊಗೆಯಿಂದಲೇ ಬೆಂಗಳೂರು ಸ್ಫೋಟಗೊಳ್ಳುತ್ತದೆ ಅನ್ನುವ ಆತಂಕ ಕೆಲವರದಾದರೆ, ಇದಕ್ಕೆ ಪರಿಹಾರವೇ ಇಲ್ಲ ಅನ್ನುವ ಹತಾಶೆ ಕೆಲವರದು.
ಹಾಗಂತ, ಕೈಲಾಗದು ಅಂದುಕೊಂಡು ಕುಳಿತರೆ ಕೆಲಸ ನಡೆಯುತ್ತದೆಯೇ?
ಟ್ರಾಫಿಕ್ ನಿಯಂತ್ರಣಕ್ಕೆ ಸರ್ಕಾರಗಳು ಯಾವ ಕ್ರಮವನ್ನೂ ಕೈಗೊಂಡಿಲ್ಲವೆ? ಕೈಗೊಂಡಿದ್ದರೂ ಅವು ಎಷ್ಟರ ಮಟ್ಟಿಗೆ ಸಾಕಾರವಾಗುವಂಥವು? ಇದರಲ್ಲಿ ನಾವು ಹೇಗೆ ಸಹಭಾಗಿಗಳಾಗಬಹುದು? ಇವೆಲ್ಲ ತಿಳಿಯದೆ ಹೋದರೆ ನಮಗೆ ಗೊಣಗಾಡುವ ಅಧಿಕಾರವೂ ಇರುವುದಿಲ್ಲ.

ಅದಕ್ಕೆಂದೇ ಸಮಾಜಮುಖಿ ಆಸಕ್ತಿಯ ಗೆಳೆಯ ರಮೇಶ್ ಬಿ.ವಿ. ಒಂದು ಮೇಲ್ ಕಳಿಸಿಕೊಟ್ಟಿದ್ದರು. ಅದನ್ನು ಹಾಹಾಗೇ ನಿಮ್ಮೆದುರು ಇಡುತ್ತಿದ್ದೇನೆ. ನಾವೆಲ್ಲರೂ ಜೊತೆಯಾಗಿ ನಡೆದಾಗ ಮಾತ್ರ ಪ್ರಗತಿ ಸಾಧ್ಯ ಅಲ್ಲವೆ?  ನಿಮ್ಮೆಲ್ಲರ ಸಹಕಾರ ಕೋರುತ್ತಾ…
ವಂದೇ,
ಚೇತನಾ ತೀರ್ಥಹಳ್ಳಿ.

ಓವರ್ ಟು ಆರ್.ಕೆ.ಮಿಶ್ರಾ…
(ಟಿ.ಓ.ಐ. ಲೀಡ್ ಇಂಡಿಯಾ ವಿಜೇತರು)


Dear Friends,

As you are aware, ABIDe (Agenda for Bengaluru Infrastructure & Development) Task Force, with the  involvement of government, has been constituted to revive and rebuild Bengaluru through a combination of Comprehensive planning, improved municipal services and new investments into infrastructure. ABIDe also owns the task of providing a blue-print for sustainable and orderly development of Bangalore under Bengaluru Vision 2020.

I and Ashwin Mahesh (IIM-B), are entrusted with the task of suggesting solutions to the Traffic and Transport issues of Bangalore – A tough job indeed :).  Please visit http://abidebengalu ru.in/report/ show/7 to read and give suggestions on our recommendations.

The Transportation team at ABIDe has identified public transport as the most important tool in reducing traffic congestion and chaos on Bangalore roads. Given that metro rail network is still some years away, Bus based public transport system is being promoted with a corridor approach.

To promote public transport and make travel hassle free, 10 major arterial roads (Big-10) have been identified as high density traffic corridors which will be made junction/signal free with dedicated point-to-point Bus Services, both A/C and non-A/C buses, named as Big-10 service.

Priority Bus Lanes, Bus Bays, Paved Footpaths, Safe Pedestrian Crossings, Cycle Lanes (proposed) will also be introduced on these Big-10 routes. We have 3, 6, 12, 18 and 24 month deadlines to accomplish all these Road Infrastructure Improvement objectives on all Big-10 Corridors. Please visit ABIDe website for corridor and other details. – http://www.abideben galuru.in

However, deployment of Big-10 and Hop-on Hop-Off (HoHo) Bus Services has already begun.

Out of 10 Corridors Big-10 Bus Service is already in operation on Hosur Road (Vellara Jn – Electronic City) and HAL Airport Road (Trinity Jn – Whitefield-Hope Farm jn). This is proving to be extremely popular. Next week Bannerghatta Road Big-10 Service will start. In next 2 months all 10 Corridors will have Big-10 Bus Service with a frequency of 5-10 minutes, both A/C and Non-A/C Service.

This service CONVENIENTLY connects with Central Business District (CBD)  HoHo Service (Kendra Sarige) at Vellara Jn on Hosur Rd and Trinity Jn on HAL Airport rd respectively. This makes it extremely convenient for anyone living and commuting on these routes to use this Big-10 Service in conjunction with CBD HoHo service to reach any point in the city including all shopping malls and offices, without the need to take their private vehicles to work or shop.

I have myself used these services and they are extremely convenient and efficient.

Please encourage all your friends and colleagues to use these BUS services. Traffic congestion will reduce only if we stop/reduce taking our cars to work and shop.
No amount of cribbing or road widening is going to help if we keep adding private cars to our roads. Now we have the comfortable and convenient public transport in close proximity to our homes and work places, lets use it and help our city and the environment.

PS: Please share this information with your friends and colleagues. We need to popularize public transport through media, blogs, personal contacts and word of mouth, to save Bangalore from traffic chaos.

RK

9 thoughts on “ಗೊಣಗೋದು ಬಿಟ್ಟು ನಾವೂ ಏನಾದರೂ ಮಾಡಬಹುದು!

Add yours

 1. ಮೇಡಂ,
  ಬೆಂಗಳೂರಿಗೆ ಬಂದಾಗಲೆಲ್ಲಾ ಟ್ರಾಫಿಕ್ ಕಿರಿಕಿರಿ ಅನುಭವಿಸುತ್ತಲೇ ಮನೆಗೆ ವಾಪಸಾಗುವಷ್ಟರಲ್ಲಿ ಕಣ್ಣು ಕೆಂಪಗಾಗಿಸಿಕೊಂಡಿರುವೆ.
  ನನ್ನ ಮಗನಿಗಂತೂ ಬೆಂಗಳೂರಿನಿಂದ ಬಂದ ಕೂಡಲೇ ಕೆಮ್ಮು ಶುರುವಾಗುತ್ತದೆ. ಆದರು ವಿಧಿಯಿಲ್ಲ. ಬರಲೇಬೇಕಲ್ಲ!
  “ಸಂಗತ್ಯ” ಬ್ಲಾಗ್ ಚೆನ್ನಾಗಿದೆ. ಮಾಹಿತಿ ಕೊಟ್ಟದ್ದಕ್ಕೆ ಥ್ಯಾಂಕ್ಸ್.

 2. ನಿಜ ಚೇತನಾರೇ, ನೀವು ಹೇಳುವುದು ನಿಜ. ನಾವು ಸಮಸ್ಯೆಗಳಿಗೆ ಪರಿಹಾರ ಹುಡುಕುವಲ್ಲಿ ಭಾಗಿಯಾಗದಿದ್ದರೆ ಗೊಣಗುವ ಅಧಿಕಾರವೂ ಇಲ್ಲ. ಆದರೆ ವಿಪರ್ಯಾಸದ ಸಂಗತಿಯೆಂದರೆ “ಬುದ್ಧಿವಂತರ ಸರಕಾರ” (ಎಜುಕೇಟೆಡ್) ಬಂದು ಒಂದಿಷ್ಟು ನಾಗರಿಕರ ಸಹಕಾರ ಪಡೆಯುತ್ತೆ ಅಂತ ತಿಳ್ಕೊಂಡಿದ್ದೆವು. ಆದರೆ ಅದು ಸುಳ್ಳಾಗಿದೆ. ಒಂದಷ್ಟು ನಾಗರಿಕ ಸಮಿತಿಗಳನ್ನು ರಚಿಸಿ, ಅವುಗಳಿಂದ ಪರಿಹಾರ ಹುಡುಕಿಕೊಂಡು ಅದನ್ನು ಕಾರ್ಯ ಸಾಧ್ಯವಾಗುವತ್ತ ಸರಕಾರಗಳು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಆದರೆ ಅದು ಸಾಧ್ಯವಾಗುತ್ತಿಲ್ಲ. ದಿಲ್ಲಿಯ ಮೆಟ್ರೋ ರೈಲಿಗೆ ಸಲಹೆ ಕೊಟ್ಟ ನಿವೃತ್ತ ಎಂಜಿನಿಯರ್ ಗಳೂ ಇದ್ದಾರೆ. ಅಂಥವರನ್ನು ಕನಿಷ್ಠ ಮಾತನಾಡಿಸುವ ಕೆಲಸವೂ ಸರಕಾರಗಳಿಂದ ನಡೆಯೋದಿಲ್ಲ. ನಮ್ಮಲ್ಲಿ ಯೋಜನೆಗಿಂತ ಮೊದಲು ಅದರ ಕಾರ್ಯಸಾಧ್ಯ, ಪರಿಣಾಮಗಳ ಬಗ್ಗೆ ಯೋಚಿಸೋದಿಲ್ಲ. ಮೊದಲು ಜಾಗ ಹುಡುಕುತ್ತೇವೆ, ಜಾಗ ಕಂಡಕೂಡಲೇ ಯೋಜನೆ ಸಿದ್ಧವಾಗುತ್ತದೆ, ಜಾರಿಯಾಗುತ್ತದೆ. ಇಲ್ಲಿ ಈ ಯೋಜನೆ ಕಾರ್ಯಗತಗೊಳ್ಳುವ ಅಗತ್ಯವಿದೆಯೇ ಎಂದು ಸ್ಥಳೀರನ್ನಾರೂ ಕೇಳುವುದಿಲ್ಲ. ಏಕಾಏಕಿ ಯೋಜನೆ ಸಿದ್ಧ. ಅಂಥ ಅಪ್ರಯೋಜಕ ಯೋಜನೆ ಬೇಕಾದಷ್ಟು ಬೆಂಗಳೂರಿನಲ್ಲಿ ಕಾರ್ಯಗತಗೊಂಡಿವೆ. ಹಾಗಾಗಿ ಸಮಸ್ಯೆ ಬಗೆಹರಿದಿಲ್ಲ.ಉದಾಹರಣೆಗೆ ರಿಚ್ಮಂಡ್ ಸರ್ಕಲ್ ಫ್ಲೈ ಒವರ್ ನೋಡಿ. ನಮ್ಮ ಅತ್ಯಂತ ಕೆಟ್ಟ ಯೋಜನೆ, ಭ್ರಷ್ಟತೆಗೆ ಸ್ಪಷ್ಟ ಉದಾಹರಣೆ.
  ಶುಕ್ಲವರ್ಣಿ

 3. Traffic problem will be solved if all the proposed projects get implemented. Problem is in executing the plans, not in lack of proper ideas.
  Every city has traffic problem. For me, there are bigger problems in Bangalore – lack of employment opportunities, lay-offs, cutting of salaries, youth turning criminals, increasing crime rate etc.

  By the way I heard RK is supposed to contest elections this time..?

 4. ಬೆಂಗಳೂರಲ್ಲಿ ಅನಿವಾರ್ಯವಾಗಿ ವಾಸ ಮಾಡುವವರೇ ಕ್ಷಮಿಸಿ. ವರ್ಷಕ್ಕೊಮ್ಮೆ(ಪುರುಸೊತ್ತಾದರೆ) ಬೆಂಗಳೂರಿಗೆ ಬರುವ ನನ್ನಂಥವರಿಗೂ ಆ ಊರೇ ಅಲರ್ಜಿ(ಧೂಳಿನಿಂದ )ಅನಿಸುತ್ತದೆ. ಆದಸ್ಟು ಬೇಗ ಊರಿಗೆ ಹೋಗುವ ಅಂದುಕೊಳ್ಳುತ್ತೇನೆ. ನಿಜಕ್ಕಾದರೆ ಊರು ಸುಂದರವಾಗೇ ಇದೆ. ಆದರೆ ಕಾಂಕ್ರೀಟು ತುಂಬಿದೆ. ಟಿ.ವಿ.ಯವರು ಅದನ್ನು ಉದ್ಯಾನನಗರಿ ಎಂದಾಗ ನಗು ಬರುತ್ತದೆ. ನನ್ನೂರು ಮಂಗಳೂರು ಸಹ ಮತ್ತೊಂದು ಬೆಂಗಳೂರು ಆಗುತ್ತೆ ಅನಿಸುತ್ತದೆ.

 5. ಕಣ್ಣು ತೆರೆಸಿದ ಲೇಖನ. ಹೌದು, ಬರೇ ಗೊಣಗಾಟ ಮುಂದುವರಿಸ್ತಾ ಇದ್ರೆ ಮತ್ತು ಸಮಷ್ಟಿಯ ಹಿತದ ಬಗ್ಗೆ ಆಲೋಚಿಸದೇ ಇದ್ರೆ… ಬೆಂಗಳೂರು ಇಲ್ಲಾ ಇನ್ಯಾವುದೇ ಊರಿಗೂ ‘I am leaving’ ಅಂತಾನೇ ಹೇಳಬೇಕಾಗಬಹುದು. ಜನರಿಗೂ ಒಂದಿನಿತು ಜವಾಬ್ದಾರಿ ಬೇಡವೇ… ಈ ಬಗ್ಗೆ ಯೋಚಿಸಲು ಸಮಯ ಮಾಡಿಕೊಳ್ಳಬೇಕಷ್ಟೆ.

 6. ಚೇತನಾ,

  ಜನಸಂಖ್ಯೆಗಿಂತ ಡಬಲ್ ವೇಗದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟನೆಯೇ ಟೆರಿರಿಸ್ಮ್ ಗಿಂತ ದೊಡ್ಡ ಸಮಸ್ಯೆ ಅಂತ ವಿಶ್ವೇಶ್ವರ ಭಟ್ಟರ ಲೇಖನದಲ್ಲೊಮ್ಮೆ ಓದಿದ ನೆನಪು.

  ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗಲು ವೇಗದ ದಾರಿ ಎಂದರೆ ನಡೆದು ಹೋಗುವುದೇ ಎಂಬ ಕಾಲ ಬರಬಹುದು. ( ಕಾರಲ್ ಹೋದ್ರೆ ಒಂದ್ ಘಂಟೆ ಸಾರ್… ನಡ್ಕಂಡಾದ್ರೆ ಐದು ನಿಮ್ಷ ಸಾಕು!)

  ಸಾರ್ವಜನಿಕ ಸಾರಿಗೆಯ ಹೆಚ್ಚು ಬಳಕೆ, ಹತ್ತಿರದ ದೂರಗಳಿಗೆ ಸೈಕಲ್ ಬಳಸುವುದೇ ಪರಿಹಾರ ಅನ್ನಿಸುತ್ತದೆ.

 7. ನೀವು ಬರೆದ ಕಥೆ, ಕವಿತೆ ಓದಿದ್ದೇನೆ, ಮೆಚ್ಚಿದ್ದೇನೆ. ಹೃದಯಕ್ಕವು ಆಪ್ತ.
  ನಿಮ್ಮ ಬ್ಲಾಗ್‌ಗೆ ಇದೇ ಮೊದಲ ಸಲ ಬಂದದ್ದು. ಬ್ಲಾಗೂ ಆಪ್ತವೆನ್ನಿಸಿತು.
  ನಿಮ್ಮ ಕಥನಕಲೆಯನ್ನು ಮತ್ತು ಕವಿಭಾವವನ್ನು ಗ್ರಹಿಸಿದ್ದ ನನಗಿಂದು ನಿಮ್ಮ ಆಸಕ್ತಿವೈವಿಧ್ಯ, ಸಾಮಾಜಿಕ ಕಳಕಳಿ ಮತ್ತು ಅಪರಿಮಿತ ಚೇತನ ಇವುಗಳ ಅರಿವು ಈ ಬ್ಲಾಗ್ ಮೂಲಕ ಆಯಿತು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Create a free website or blog at WordPress.com.

Up ↑

%d bloggers like this: