ತಪ್ಪೊಪ್ಪಿಗೆ


ಇದೋ! ಕತ್ತಲಾಗಿದೆ.

ನಿನ್ನ ಬೆತ್ತಲು

ಕಾಣುವುದಿಲ್ಲ ನಿನಗೂ…

ನಾಚಿಕೆ ಕಿತ್ತೆಗೆ,

ಒಳಗನೆಲ್ಲ ಹರಡಿ ಹಗುರಾಗು.

ಸುಳ್ಳು ನಾಟಕದ ಹೊರೆ

ಎಷ್ಟೆಂದು ಹೊರುತ್ತೀ?

-ಆತ್ಮ ಸಾಕ್ಷಿಯ ಮಾತು.

 

ತಪ್ಪೊಪ್ಪಿಗೆಯ ಹೊತ್ತಲ್ಲಿ

ಬೆಳೆಯುತ್ತಿದೆ ಪಟ್ಟಿ॒

 

ಎದೆಗೋರಿಯ ಕನವರಿಕೆ,

ಹೇಳಲಾಗದ ಅವನ ಹೆಸರು;

ಬರೆಯದೆ ಬಿಟ್ಟ ಕವಿತೆ,

ಮಡಚಿಟ್ಟ ಪುಟಗಳು.

ಸಂತನೊಡಲಲ್ಲಿ ಹಚ್ಚಿಟ್ಟ

ಹೆಣ ಸುಡುವ ಕಿಚ್ಚು!

ಒಂದೇ, ಎರಡೇ?

 

ನಾ ನಂಬಿಕೊಂಡ ನನ್ನ ಸುಳ್ಳುಗಳು,

ನಾನಪ್ಪಿಕೊಂಡ ನನ್ನ ಶತ್ರುಗಳು,

ನಾ ಕೊಂದ ನನ್ನ ಇಷ್ಟಗಳು,

ನನ್ನದಲ್ಲದ ನನ್ನ ಕಥೆಗಳು…

 

ದಾರಿಯಿಂದ ಕಿತ್ತು ಬಿಸುಟ

ಕರುಳಬಳ್ಳಿ ಹಬ್ಬುಗಳು,

ಸೀಮೆ ದಾಟಿ ತಿಪ್ಪೆ ಸವರಿದ

ಅದೊಂದು ಚಿಕ್ಕ ವಂಚನೆ!

ಒಂದೇ ಎರಡೇ?

 

ನಿಜದ ನನ್ನ ಮುಚ್ಚಿಕೊಳ್ಳಲು

ಎಷ್ಟೆಲ್ಲ ಹೊದಿಕೆಗಳು!

ಮೈಗಂಟಿ ಕೂತ ಚರ್ಮದ ಪದರುಗಳು…

ಸುಲಿದು ತೋರುವ ನೋವಿಗೆ

ಅಂಜುತ್ತಿದ್ದೇನೆ ನಾನು.

 

ಸುಳ್ಳು, ನಾಟಕದ ಹೊರೆ

ಎಷ್ಟೆಂದು ಹೊತ್ತು ನವೆಯುತ್ತೀ?

ಅತ್ಮ ಸಾಕ್ಷಿಯ ಮಾತು…

~

ಹೊರೆಯಿಲ್ಲದ ಅಕ್ಕ,

ಬೆಳಕಲ್ಲೂ ಬೆತ್ತಲಾಗಿದ್ದಳು.

ಕಡುಗತ್ತಲಲ್ಲಿ

ಅಂಜುತ್ತಿದ್ದೇನೆ ನಾನು.

16 thoughts on “ತಪ್ಪೊಪ್ಪಿಗೆ

Add yours

 1. ಚೇತನ ಕವಿತೆ ಚೆನ್ನಾಗಿದೆ ಒಳಗನ್ನು ತೆರೆದಿಡಬೇಕು ಬೆತ್ತಲಾಗಬೇಕು ಈ ಅನಿಸಿಕೆ ಎಲ್ಲರಿಗು ಅನಿಸುತ್ತದೆ
  ಅದರೇನು ಮಾಡುವುದು ಎಲ್ಲರು ಅಕ್ಕ ಆಗಲು ಸಾಧ್ಯವೇ

 2. ಉಮೇಶ್, ಅದು ನಿಜವೇ ನಿಜ. ಅಲ್ವಾ? ಥ್ಯಾಂಕ್ಸ್.
  ಮುರಳಿ, ಗುರು, ಚಂದಿನ, ಸಿಂಧು, ಥ್ಯಾಂಕ್ಸ್…. ಮೆಚ್ಚಿದ್ದಕ್ಕೆ, ಪ್ರತಿಕ್ರಿಯಿಸಿದ್ದಕ್ಕೆ.
  ಪ್ರಭು, prasad its really excellent………….. put more effert……….- ಈ ಕಮೆಂಟು ನನಗೇನಾ? ಖಂಡಿತವಾಗ್ಲೂ ಅರ್ಥವಾಗ್ಲಿಲ್ಲ.

  ನಲ್ಮೆ,
  ಚೇತನಾ

 3. ಆತ್ಮೀಯ
  ಅದ್ಭುತ ಕವನ
  ಯಾರಿಗೂ ಕಾಣದೆ
  ಒಳಗೆಲ್ಲೋ ಸಣ್ಣನೆ ನೋವು
  ಯಾರದೋ ಮಾತಿಗೆ
  ಏತಕೋ ಬೇಸರ
  ಒಳಗೆ ಯಾತನೆ
  ಹೊರಗೆ ಸ೦ತಸದ
  ಮುಖ ಹೊತ್ತು ತಿರುಗುವ
  ಜನ ಸ೦ದಣಿ
  ಬೆಳಕನು ಒಳಗೆ ಕ೦ಡು
  ಹೊರಗೆ ಚೆಲ್ಲುವ ಮ೦ದಿ ಕಡಿಮೆ
  ಹರೀಶ ಆತ್ರೇಯ

 4. I could not believe this & Could not resist from sharing this old poem of mine……Plz excuse….

  haagidde neenu
  ************
  naanE nODuvudakke aMjuva naanadu
  kaNNIraade
  haagittu ninna sparsha.

  nannoLagE hELuvudakke aMjuva maatugaLavu
  haaDaade
  haagittu ninna mauna.

  kattalalloo kaLachuvudakke aMjuvava
  beLakinallE bettalaade
  haagidde neenu!

 5. kavithe super kanri, aadre nange kelveDe upameyagaLu astond arthaa aaglilla.
  Tappopige antheera, aathmasaakshi antheera.. jeevanana astond complex yaakri maadbeku. Life simple life satisfactorily annodalva?
  elru tumba chennagide anthidaare, so kannada pada baLake alliro bhaavane tumba teekshNavaage irbeku.
  nimma character onthara interesting ree. ondondu sala woman empowering thoughts ondond sala asayaka hengsu tara baravanige iratte.

  nimma blog ge bandu sumaar dina aagithu, infact blog lokadinda swalpa doorane irotara aaytu. office kade inda swalpa travels. 1.75 varshada kelage namma jeevanadalli banda namma maga, ibru nanna swalpa baravanige, odu elladrinda doora iTbiTide.

  🙂
  Veena

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Blog at WordPress.com.

Up ↑

%d bloggers like this: