……… ಇದಕ್ಕೆ ಕಾರಣವೇನಿರಬಹುದು?


‘ಜಂಭಗಾತಿ ಹುಡುಗಿ’ಯನ್ನ ಎದುರಿಟ್ಟುಕೊಂಡು ಮಾತನಾಡುತ್ತಿದ್ದಾಗ,  “ಹುಟ್ಟಿದಾಗಿನಿಂದಲೆ ಅವಳ ಆತ್ಮವಿಶ್ವಾಸವನ್ನು ಕೊಲ್ಲುವ ಎಲ್ಲ ಪ್ರಯತ್ನಗಳನ್ನು ಸಮಾಜ ಅದರಲ್ಲೂ ಹೆಚ್ಚಾಗಿ ಹಿರಿಯ ಹೆಂಗಸರೇ ಮಾಡುತ್ತಾರೆ” . ಇದಕ್ಕೆ ಕಾರಣವೇನಿರಬಹುದು? 
ಎಂದು ಸುಮಾ ಕೇಳಿಕೊಂಡ ಪ್ರಶ್ನೆಗೆ ‘ವಿ’ ಕೂಡಾ ದನಿ ಸೇರಿಸಿದ್ದಾರೆ.

ಈ ಪ್ರಶ್ನೆಗೆ ಮೊದಲಿಂದಲೂ ನನಗೆ ತೋಚಿದ್ದ ಸರಳ ಉತ್ತರವನ್ನ ಈ ಕೆಳಗೆ ಹೇಳಿದೇನೆ. ಆದರೆ, ಹೆಣ್ಣು ಕೂಡ ಗಂಡಿನಂತೆ ಮಾನವ ಕುಲಕ್ಕೆ ಸೇರಿದ ಜೀವಿಯಾದ್ರಿಂದ, ಆಕೆಗೂ ಮಾನವ ಸಹಜವಾದ ಸ್ಪರ್ಧಾ ಮನೋಭಾವ, ಅರಿಷಡ್ವರ್ಗಾದಿ ಮನಸ್ಥಿತಿಗಳು ಇರುತ್ತವೆ ಅನ್ನುವುದನ್ನು ನಾವು ನೆನಪಿಟ್ಟುಕೊಳ್ಳಬೇಕು. ಹಾಗೂ ಇವಾವುದೂ ಹೆಣ್ಣಿಗೆ ಮಾತ್ರ ಸೀಮಿತವಲ್ಲದ ದೋಷಗಳೆಂಬುದನ್ನು ಮರೆಯಬಾರದು. ಈಗ ನನ್ನ ಅನಿಸಿಕೆಗಳು:

೧. ಹೆಣ್ಣು ತನ್ನ ಪ್ರತಿಯೊಂದಕ್ಕೂ ಗಂಡಸನ್ನೇ ಅವಲಂಬಿಸಬೇಕು ಅಂದುಕೊಂಡು ಆತನನ್ನು ಒಲಿಸಿಕೊಳ್ಳುವ ಯತ್ನವಾಗಿ, ದಬ್ಬಾಳಿಕೆ ಸಹಿಸುವ ಮನಸ್ಥಿತಿಯನ್ನು ರೂಢಿಸಿಕೊಂಡಿರುವುದು, ಅದನ್ನೇ ತನ್ನ ಮುಂದಿನ ಪೀಳಿಗೆಗೂ ದಾಟಿಸುತ್ತಿರುವುದು…

೨. ಸಮಾಜದಲ್ಲಿ ಹೆಣ್ಣಿನ ಸ್ಥಾನಮಾನಗಳು ಜತೆಗಾರ ಗಂಡಸಿನ ಇರುವಿಕೆ/ ಇಲ್ಲದಿರುವಿಕೆ, ಆತನೊಂದಿಗಿನ ಬಾಂಧವ್ಯಗಳನ್ನು ಅವಲಂಬಿಸಿರುವುದರಿಂದ, ಅದನ್ನು ಉಳಿಸಿಕೊಳ್ಳುವ ಯತ್ನ….

೩. ಮತ್ತೊಬ್ಬ ಹೆಣ್ಣನ್ನು ಛೀಕರಿಸುವ ಮೂಲಕ ಗಂಡಸಿನ (ಅದು ಗಂಡ, ಮಗ ಯಾರೇ ಆಗಿರಲಿ…) ಗಮನವನ್ನು ತನ್ನತ್ತ ಸೆಳೆದುಕೊಳ್ಳುವುದು, ಆತನನ್ನು ಅಂಕೆಯಲ್ಲಿರಿಸಿಕೊಳ್ಳಲು ಬಯಸುವುದು, ತನ್ನ ಅಸುರಕ್ಷತಾಭಾವವನ್ನು ಹೋಗಲಾಡಿಸಿಕೊಳ್ಳಲು ಇತರರ ಗಮನವನ್ನು ಸೆಳೆಯಲಿಕ್ಕೆಂದೇ ಗಯ್ಯಾಳಿತನ ಬೆಳೆಸಿಕೊಳ್ಳುವುದು….

ಪರಿಹಾರವೇನಿರಬಹುದು?

೧. ಆರ್ಥಿಕ ಸುಭದ್ರತೆ
೨. ಹೆಚ್ಚು ಹೆಚ್ಚಾಗಿ ಹೆಣ್ಣುಮಕ್ಕಳೊಂದಿಗೆ ಸ್ನೇಹ ಬೆಳೆಸಿಕೊಳ್ಳುವುದು, ಒಂದು ಸಂಘಟನೆಯಾಗಿ ಸಾಮಾಜಿಕ ಬದುಕಿಗೆ ತೆರೆದುಕೊಳ್ಳುವುದು
೩. ಭಾವನಾತ್ಮಕವಾಗಿ ಗಂಡಿನ ಮೇಲೆ ಅವಲಂಬಿಸಿದ್ದರೂ ಅದನ್ನು ದೌರ್ಬಲ್ಯವಾಗಿ ಮಾಡಿಕೊಳ್ಳದಿರುವುದು

ಹೀಗೇ ಒಂದಿಷ್ಟು….
ಈಗಲಾದರೂ ನಾವು ನಮ್ಮನ್ನು ಬರೀ ಮನೆವಾಳ್ತೆಗೆ ಸೀಮಿತಗೊಳಿಸಿಕೊಳ್ಳದೆ ಸಮಾಜಕ್ಕೂ ತೆರೆದುಕೊಂಡರೆ, ಸಂಘಟಿತರಾದರೆ, ಬಹುಶಃ ಈ ‘ಹೆಣ್ಣು- ಹೆಣ್ಣಿನ ಶೋಷಣೆ’ ಕಡಿಮೆಯಾಗುತ್ತ ಹೋಗಬಹುದೇನೋ?

ಗೆಳತಿ ಟೀನಾ ಒಮ್ಮೆ ಮಾತನಾಡುವಾಗ ಹೇಳಿದ್ದಳು. ಹೆಣ್ಣು ಸಾಂಸರಿಕ, ಸಾಮಾಜಿಕ, ರಾಜಕೀಯ ಹಾಗೂ ಧಾರ್ಮಿಕ- ಈ ನಾಲ್ಕೂ ಸ್ತರಗಳಲ್ಲೂ ಶೋಷಣೆಗೊಳಗಾಗ್ತಾಳೆ ಅಂತ. ಅದು ಸರಿಯೆನಿಸಿತು. ನಾವು ಎಲ್ಲೀವರೆಗೂ ಸಂಸಾರವೇ ನಮ್ಮ ಮೊದಲ ಪ್ರಿಫರೆನ್ಸ್ ಅಂದುಕೊಳ್ತೀವೋ ಅಲ್ಲೀವರೆಗೂ ಈ ಶೋಷಣೆ ತಪ್ಪೋದಿಲ್ಲ. ನಾವು ಸಂಸಾರದ ಚೌಕಟ್ಟು ಮೀರಿ ಬೆಳೆದು ಸಮಾಜದ ಹೊಸ್ತಿಲಲ್ಲಿ ನಿಲ್ಬೇಕು. ನಮ್ಮ ಸಾಧ್ಯತೆಗಳನ್ನ ಇತರರಿಗೆ ಮನದಟ್ಟು ಮಾಡಿಸೋ ಮೊದಲು, ನಮ್ಮನ್ನು ನಾವು ಅರಿತುಕೊಳ್ಬೇಕು. ಸ್ನೇಹಿತರೊಬ್ಬರು ನನ್ನ ಯೋಚನೆಗಳ ಬಗ್ಗೆ ಅಭಿಪ್ರಾಯಪಟ್ಟಿರುವಂತೆ ಇದು ‘ರೊಮ್ಯಾಂಟಿಕ್’ ಮಟ್ಟಕ್ಕೆ ನಿಲ್ಲುವಂಥದಲ್ಲ. ಅವರು, ಹೆಣ್ಣು ಸಂಸಾರವನ್ನು, ಸಮಾಜವನ್ನು ಮೀರಬೇಕು, ಮೀರುತ್ತಾಳೆ ಅನ್ನುವ ನನ್ನ ಕಲ್ಪನೆಯನ್ನ ಹಾಗೆಂದಿರುವರು. ಇದು ತಮ್ಮ ಗಂಡು ಯೋಚನೆಯಲ್ಲವೆಂದೂ ಸ್ಪಷ್ಟಪಡಿಸಿದ್ದರು. ಆದರೆ, ಮೊದಲ ಬೇಲಿಯಾದ ಸಂಸಾರದ ನಿರ್ಬಂಧಗಳನ್ನು ಮೀರದೆ ಹೆಣ್ಣು ಮುಂದುವರೆಯೋದು ಹೇಗೆ? ನಾನು ಮೀರುವಿಕೆಯನ್ನು ‘ದ್ರೋಹ’ದ ಅರ್ಥದಲ್ಲಿ ಬಳಸುವುದಿಲ್ಲ. ಇದನ್ನು ಅರಿತುಕೊಂಡರೆ ಸಾಕು.

ಹೀಗೆ ಮೀರುವಿಕೆಯ ಮಾತು ಬಂದಾಗ ಇಸ್ಮತ್‌ರ ಕಥೆ ನೆನಪಾಗುತ್ತೆ. ಅವರದೊಂದು ಕಥೆಯಲ್ಲಿ ನಾಯಕಿ, ಕಪ್ಪುಕೀಳರಿಮೆಯ ಗಂಡ ತಾನೇ ದುಪಟ್ಟಾ ತೆರೆಯಲೆಂದು ಕಾದಿರುತ್ತಾಳೆ. ಅವನಾದರೋ ತನ್ನ ಕೀಳರಿಮೆಯನ್ನು ಮೆಟ್ಟಿನಿಲ್ಲಲು, ಆಕೆಗೇ ಅದನ್ನು ತೆಗೆದು ಮುಖ ತೋರುವಂತೆ ಆದೇಶಿಸುತ್ತಾನೆ. ಹಾಗೆ ಹೆಣ್ಣು ಮೊದಲ ಸಾರ್ತಿ ಗಂಡನಿಗೆ ಮುಖದೋರುವಾಗ ತಾನೇ ದುಪಟ್ಟಾ ತೆಗೆಯೋದು ಲಜ್ಜೆಗೇಡಿತನ ಅನ್ನುತ್ತದೆ ಸಂಪ್ರದಾಯ. ಅದಕ್ಕೇ ಅವಳು ತೆಗೆಯೋದಿಲ್ಲ. ಅವನ ದರ್ಪದ ಒಳಗುಟ್ಟು ಅವಳಿಗೆ ಗೊತ್ತಿದ್ದುದೂ ಅದಕ್ಕೆ ಕಾರಣವಾಗಿದ್ದಿರಬಹುದು. ಹೀಗೆ ಕೊನೆಯವರೆಗೂ ಅವಳು ತನ್ನ ದುಪಟ್ಟಾ ಅವನೆದುರು ತೆರೆಯೋದೇ ಇಲ್ಲ. ಅದಕ್ಕಾಗಿ ತಾನು ಸಂಸಾರ ಸುಖವನ್ನೇ ಕಳಕೊಳ್ಳಬೇಕಾಗಿ ಬಂದಾಗಲೂ ಸಹಾ. ಇಲ್ಲಿ ಇವಳ ಮೀರುವಿಕೆ- ಗಂಡನ ಆದೇಶದ ಮೀರುವಿಕೆ- ಅಂದರೆ ಸಾಮಾಜಿಕ ಕಟ್ಟುಪಾಡಿನ (ಗಂಡನ ಮಾತು ಕೇಳಬೇಕೆನ್ನುವ) ಮೀರುವಿಕೆ, ಸಂಪ್ರದಾಯದ ಚೌಕಟ್ಟಿನೊಳಗೇ ನಡೆದಿದೆ! ಈ ಕಥೆಯಲ್ಲಿ ಅವಳದು ಅತ್ಯಂತ ಡಿಗ್ನಿಫೈಡ್ ಆದ ಪ್ರತಿಭಟನೆ.

ನನ್ನ ಮಾತುಗಳಿಗೂ ಈ ಕಥೆಗೂ ಹೇಗೆ ಲಿಂಕ್ ಮಾಡಿಕೊಳ್ಳುವಿರೋ ಗೊತ್ತಿಲ್ಲ. ನನ್ನ ತಲೆಯೊಳಗಂತೂ ಇವೆಲ್ಲ ಒಂದಕ್ಕೊಂದು ಹೆಣೆದುಕೊಂಡಿವೆ. ಒಂದು ಎಳೆ ಹಿಡಿದೆಳೆದರೆ ಎಲ್ಲವೂ ಉರುಳಿ ಬರುತ್ತವೆ.

ಕೊನೆಯ ಮಾತಿನೊಂದಿಗೆ ಮುಗಿಸ್ತೇನೆ…
ಒಟ್ಟಾರೆ, ಎಲ್ಲೀವರೆಗೂ ಹೆಣ್ಣುಗಳು ಗಂಡಸಿನ ಕೃಪಾಪೋಷಣೆಗೆ ಒಳಗಾಗಿ ಬದುಕೋದೇ ತಮ್ಮ ಪರಮ ಧ್ಯೇಯವೆಂದುಕೊಳ್ತಾರೋ ಅಲ್ಲೀವರೆಗೂ ಹೆಣ್ಣಿಂದ ಹೆಣ್ಣಿನ ಶೋಷಣೆ ತಪ್ಪಿದ್ದಲ್ಲ. ನಾವು ನಮ್ಮ ಅಸ್ತಿತ್ವವನ್ನು ಕಂಡುಕೊಂಡು ಬದುಕಿ, ಮುಂದಿನ ಪೀಳಿಗೆಗೂ ಅದನ್ನೇ ಕಲಿಸತೊಡಗಿದರೆ ಮಾತ್ರ ಇದೆಲ್ಲ ಪರಿಹಾರವಾಗಬಹುದೇನೋ ಅಂದುಕೊಳ್ತೇನೆ.

 

4 thoughts on “……… ಇದಕ್ಕೆ ಕಾರಣವೇನಿರಬಹುದು?

Add yours

 1. ನಿಮ್ಮ ಅನಿಸಿಕೆಗೆ ನನ್ನ ಸಹಮತವಿದೆ ಚೇತನ.ಇವುಗಳೊಂದಿಗೆ ನಾನು ಗುರುತಿಸಿದಂತೆ ನನ್ನ ಅಜ್ಜಿಯ ತಲೆಮಾರಿನವರು(೬೫-೭೦ ವಯಸ್ಸಿನ) ಸಂಪ್ರದಾಯಕ್ಕಂಜಿ ಹೆಣ್ಣುಮಗಳು ಹೀಗೇ ಇರಬೇಕು ಎಂಬ ಶಾಸನ ವಿಧಿಸುತ್ತಾರೆ. ಅದೇ ನಮ್ಮ ತಾಯಿಯ ತಲೆಮಾರಿನವರು ಮನದಲ್ಲಿ ನನ್ನ ಮಗಳು ನಾಲ್ಕು ಜನರ ನಡುವೆ ತಲೆಯೆತ್ತಿ ಓಡಾಡಲಿ ಎಂದು ಬಯಸಿದರೂ ಸಮಾಜ ಏನ್ನುತ್ತದೆಯೋ ಎಂಬ ಭಯದಿಂದ ಹಿಂಜರಿದು ಮಗಳ ಉತ್ಸಾಹಕ್ಕೆ ತಣ್ಣೀರೆರಚುತ್ತಾರೆ.
  ಬಹುಶಃ ನಮ್ಮ ತಲೆಮಾರಿನವರಿಂದ ಹೆಣ್ಣುಮಕ್ಕಳನ್ನು ಆತ್ಮವಿಶ್ವಾಸದಿಂದ ಬೆಳೆಸುವ ಕೆಲಸವಾಗಬೇಕಿದೆ. ಹೆಣ್ಣುಮಕ್ಕಳು ವಿದ್ಯಾವಂತರಾಗಿ ,ಅರ್ಥಿಕವಾಗಿ ಸ್ವಾವಲಂಬಿಯಾಗಿ , ಸಮಾಜಮುಖಿಯಾದಾಗಲಷ್ಟೆ ಈ ಸಂಕುಚಿತ ಮನೋಭಾವವನ್ನು ಮೀರಲು ಸಾಧ್ಯ.

 2. ಚೇತನಾ,
  ಅನೇಕ ಸಾರಿ ಸ್ತ್ರೀಯರು ಎದುರಿಸುವ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವಾಗ,”ಸ್ತ್ರೀಯರೇ ತಮ್ಮ ಏಳಿಗೆಗೆ ಅಡ್ಡಿ ಮಾಡುತ್ತಾರೆ’ ಎಂಬಲ್ಲಿಗೆ ಬಂದು ನಿಂತುಬಿಡುತ್ತವೆ (ನಿಮ್ಮ ಹಿಂದಿನ ಬ್ಲಾಗ್ ನಲ್ಲಿ ಆದಂತೆ) . ಇದಕ್ಕೆ ಕಾರಣಗಳನ್ನು ಹುಡುಕುವಾಗ, ನನಗೂ ನೀವು ಬರೆದಿರುವಂತೆಯೇ ಅನಿಸುತ್ತದೆ. ಈ sensitive ವಿಷಯವನ್ನು ಚೆನ್ನಾಗಿ ವಿಶ್ಲೇಷಿಸಿದ್ದೀರಿ. ನಿಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.
  -V

 3. chethoo… ninna itheechina barahagala bagge comment thumba ide. adre ee khsna agthaa illa. yako barahakke mai manseradoo spandane kammi agide. munde bareyuve.

  anda hage itheechina barahagalalli modalidda kechchu maayavaagi ontharaa tumbaa prabudhdha shailiya prathibhatane kandide nange. khushiya vishayavidu gelathi…

  innomme ramakrishna ashramakke hoguvaaga helade hodre gottalla… navella chikkandinindale….. be ware !!!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Blog at WordPress.com.

Up ↑

%d bloggers like this: