ತಳವಿಲ್ಲದಾಳದಲ್ಲಿ ಮುಳುಗುತ್ತಿದ್ದೇವೆ, ಒಬ್ಬರದೊಬ್ಬರ ಕಣ್ಣುಗಳಲ್ಲಿ…


ನಿಜಘಮದ ಕೇದಗೆ ~ 5 ಇಲ್ಲಿದೆ….

‘ನೀನೊಬ್ಬಳು ಪುರಾತನ ಹುಡುಗಿ..’ ಅವನ ತಳವಿಲ್ಲದಾಳದ ಕಣ್ಣಲ್ಲಿ ನನ್ನ ಬಿಂಬ. ಅಲ್ಲಿ ದಾಖಲಾದ ಖುಷಿಗೆ ಮಿತಿಯಾದರೂ ಎಲ್ಲಿ? ಮುಸ್ಸಂಜೆಯಂಥವನು. ಅಲ್ಲಿ ಹಗಲಿನದೂ ಇರುಳಿನದೂ ಸಮಬೆರಕೆ. ಅವನಲ್ಲಿ ಬೆಳಕಿನ ನೆನಪೂ ಕತ್ತಲಿನ ಎಚ್ಚರವೂ ಇವೆ. ಆ ಹೊತ್ತು, ಆಕಾಶ ಒಂಥರಾ ನೀಲಿಗಪ್ಪು ಇರುತ್ತದಲ್ಲ, ಆಗ ನೋಡುತ್ತ ಕೂರಬೇಕು. ಅಲ್ಲಿ ಕಾಣುತ್ತೆ ಅಗಾಧ ಕ್ಯಾನ್ವಾಸಿನ ತುಂಬ ಅಂವ ಬರೆವ ನನ್ನ ಚಿತ್ರಗಳು.

~

ನಾ ಹೀಗೆ ಆಕಾಶ ನೋಡುತ್ತ ಕುಂತಾಗ ಅಮ್ಮ ಹತ್ತು ಸಾರ್ತಿ ಹಣಕಿ ಹೋಗುತ್ತಾಳೆ. ಏನೆಲ್ಲ ಯೋಚಿಸ್ತಾಳೋ. ಮುಖದ ಮೇಲೆ ನೂರು ಗೆರೆ. ಯಾವ ಗೆರೆಗೆ ಯಾವ ಪ್ರಶ್ನೆ? ಯೋಚಿಸೋಕೆ ನನಗೆ ಭಯ. ಹೆಳಿಕೊಳ್ಳೋಕೆ ಅವಳಿಗೂ. ಅದನ್ನ ಮರೆಸಲಿಕ್ಕೆಂದೇ ನನ್ನ ಹಿಂದೆ ಮುಂದೆ ಸುತ್ತುವಳು. ನಾನು ಆರಾಮ ಕುಂತಾಗಲೇ ಇವೆಲ್ಲಕ್ಕೆ ಸರಿಸಮಯ ಅಂದುಕೊಂಡು, ತನ್ನ ಮಾತಾಡದ ಅಕ್ಕನ, ಮುನಿಸಿಕೊಂಡ ಮಗನ, ಬಾತ್‌ರೂಮಿಗೆ ನೀರು ಹಾಕದ ಹುಡುಗಿಯ ವಿಷಯವೆಲ್ಲ ಹೇಳುವಳು.

~

ಈ ಕಾಲು ಶತಮಾನದ ಹಿಂದೆ ಅಂವ ಅದೇನು ಮಾಡ್ತಿದ್ದನೋ? ತೋಟಕ್ಕೆ ಲಗ್ಗೆ ಇಟ್ಟು, ಬೇಲಿ ಹಾರಿ ಪೆಟ್ಟು ತಿಂದು, ತಲೆ ಒಡೆದು- ಹೊಲಿಗೆ….
ಅವನಪ್ಪ ಬಯ್ದಿರಲಿಲ್ಲ. ಅಪ್ಪನ ಹತ್ತಿರ ಬಯ್ಸಿಕೊಳ್ಳದೆಯೇ ಬೆಳೆದ ಹುಡುಗ, ಎಷ್ಟೊಂದು ನವಿರು ನವಿರು!

~

ಎಲ್ಲ ಒಂದಕ್ಕೊಂದು ಹೆಣಿಗೆ. ‘ಪ್ರತಿಯೊಂದೂ ಗೊತ್ತಿದ್ದು – ಗೊತ್ತಿಲ್ಲದೆ ಒಳಹೆಣಿಗೆಯಲ್ಲಿ ಸೇರಿಕೊಂಡಿರ್ತವೆ’ ಅಂವ ತಲೆ ಹೊಕ್ಕಿಸಿದ ಕ್ವಾಂಟಮ್ ಥಿಯರಿಯ ಪಾಠ. ನಿರ್ವಾತ ಕೂಡ ಯಾವುದಾದರೊಂದು ಸಾಧ್ಯತೆಯ ವೇದಿಕೆಯಂತೆ.

ಇದರ ಹಿಂದು ಮುಂದಿನದ್ದು ಇಲ್ಲಿದೆ

ನಿಮ್ಮ ಟಿಪ್ಪಣಿ ಬರೆಯಿರಿ

Blog at WordPress.com.

Up ↑