ಸೌಹಾರ್ದ ಪ್ರಿಯರು ಹೀಗಂತಾರೆ…


*ಕಳೆದ ಅಲ್ಲ, ಅದರ ಹಿಂದಿನ ಫೆಬ್ರವರಿಯಲ್ಲಿ ಪತ್ರಿಕೆಯೊಂದರಲ್ಲಿ ಏನೋ ಬಂದು, ಜನ ಟಯರ್ ಸುಟ್ಟು, ಎರಡು ಸಾವು (ಅವರ ಮೇಲೆ ಶಾಂತಿ ಇರಲಿ) ಸಂಭವಿಸಿತ್ತು. ನಮ್ಮ ಸೌಹಾರ್ದಪ್ರಿಯರು ‘ಹಂಗಾ ಬರೆಯೋದು? ಭಾಷೆ ಬಳಕೆ ಮೇಲಾದ್ರೂ ನಿಗಾ ಬೇಡವಾ? ಏನೆ ಆಗಲಿ ಮತ್ತೊಂದು ಧರ್ಮದ ಮುಖಂಡ ಅವರು. ಹಾಗೆಲ್ಲ ಭಾವನೆಗೆ ಧಕ್ಕೆ ಮಾಡೋದು ಎಂಥ ವಿಕೃತಿ ಅಂದಿದ್ದರು.

* ಈಗ ಹಿಂಗಾಗಿದೆ. ಇಲ್ಲೊಬ್ಬರು ಒಂದಷ್ಟು ಜನರಿಗೆ ನೋವಾಗುವಂಥ ಧಾಟಿಯಲ್ಲಿ ಬರೆದಿದಾರೆ. ಅದೇ ಸೌಹಾರ್ದಪ್ರಿಯರು ಮಾತಿನ ಮೂಲಕ, ಧರಣಿಯ ಮೂಲಕ ಪ್ರತಿಭಟಿಸ್ತೀವಿ ಅಂದವರನ್ನ ‘ರೌಡಿಗಳು’ ‘ಚಡ್ಡಿಗಳು’ ಅನ್ತಿದಾರೆ. ಶಿವಮೊಗ್ಗದಲ್ಲಿ ಪ್ರತಿಭಟನೆಗೆ ಹೋದ ಹೆಣ್ಣುಮಕ್ಕಳಿಗೂ ಪೆಟ್ಟು ಬಿದ್ದಿದೆ.

* ಆಕ್ಷೇಪ ಇಷ್ಟೇ ನಮ್ಮದು. ಬರೆದಿರೋದರಲ್ಲಿ ತಪ್ಪೇನೂ ಇಲ್ಲ. ಸೇಮ್ ಆ ಪ್ರಕರಣ ನಂ.1 ರ ಹಾಗೆ. ಆದರೆ ಬರಹದ ಧಾಟಿ ನೋಯಿಸುವಂತಿದೆ, ಭಾವನೆಗೆ ಧಕ್ಕೆ ತರುವಂತಿದೆ. ಪುನಃ ಪ್ರಕರಣ ನಂ.1ರ ಹಾಗೇನೇ. ಮತ್ಯಾಕೆ ಇಂಥ ಇಬ್ಬಗೆ ನೀತಿ?

ಎಡ ಅಲ್ಲದವರ ಮೇಲೆ ಇಷ್ಟೆಲ್ಲ ಉರಿ ಯಾತಕ್ಕೋ? ಗೊತ್ತಾಗ್ತಿಲ್ಲ.

ಸೌಹಾರ್ದ ಅಂದ್ರೆ ಎಂತದು? ಕೇಳಹೋದರೆ ನನ್ನ ಪ್ರೀತಿಯ ಗೆಳೆಯರು ನನ್ನನ್ನ ‘ಈ ಜನ್ಮದಲ್ಲಿ ಉದ್ಧಾರ ಆಗೋಲ್ಲ ಅಂತಾರೆ. ಜೀನ್ಸ್ ತೊಡುವ ನನ್ನನ್ನ ಚಡ್ಡಿ ಅಂತಾರೆ.

6 thoughts on “ಸೌಹಾರ್ದ ಪ್ರಿಯರು ಹೀಗಂತಾರೆ…

Add yours

  1. ಕಾಶ್ಮೀರದ ಸ್ಥಿತಿ ಕರ್ನಾಟಕದಲ್ಲಿ ಬರುವ ವರೆಗೆ ಬುಧ್ದಿಜೀವಿಗಳ ಬಾಯಿಗೆ ಬ್ರೇಕ್ ಬೀಳೋದಿಲ್ಲ. ಯಾರಾದರೂ ಈ ದೇಶದ ಸಂಸ್ಕೃತಿಯ ಬಗ್ಗೆ, ಸನಾತನ ಹಿಂದೂ ಧರ್ಮದ ಬಗ್ಗೆ ಮಾತಾಡಿದರೆ ಅದನ್ನು ಕೋಮುವಾದ ಅನ್ನುವ ಹೆಸರಿನಲ್ಲಿ ಕರೆಯುವ ಈ ಬುದ್ದಿ ಜೀವಿಗಳಿಗೆ ಜೆಹಾದಿಗಳ ಬಂದೂಕಿನ ಬಗ್ಗೆ ಮಾತಾಡಲು ನಾಲಗೆ ಹೊರ ಬರುವುದಿಲ್ಲ.

  2. Bari Jihadi onde alla Sanatana Hindu dharmada Vidambane madodu ondanna bittu avarige bere yava samaja haagu dharmada kolaku kannalla adu Australiadalli aada namma bharatiyara bandhugala melina halle irabahudu, america, Europe(UK, Russia) allella nadeda ghatane irabahudu athava nereya Keraladalli Kai kadida ghatane irabaudu innu savira Udaharanegalu. Athava Purandaradasaru ennuvanthe “Ellaru Maduvudu hottegagi” Endu yaara bali Kai oddi tamma bele beyiskolta idaro. Actually naanu observe maadid haage ivarella yavudo pakshada (Vyaktiya) kaaryasochiyalli kelsa madtirohagide or They looking like an agents of a particular party or organization.

  3. ಚೇತನಾ ಅವರಿಗೆ ನಮಸ್ಕಾರ.

    ವಿವೇಕಾನಂದರ ಕುರಿತ ತಮ್ಮ ಅನಿಸಿಕೆಗಳನ್ನೂ ಅದಕ್ಕೆ ಬಂದ ಪ್ರತಿಕ್ರಿಯೆಗಳನ್ನೂ ಗಮನಿಸಿದೆ. ಪ್ರತಿಕ್ರಿಯೆಗಳ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ. ಆದರೆ, ತಾವೊಬ್ಬ ಪತ್ರಕರ್ತೆಯಾಗಿ ಈ ರೀತಿ ಮಾತನಾಡುವುದು ನನಗೆ ಅಚ್ಚರಿ ಉಂಟು ಮಾಡಿದೆ. ಪತ್ರಕರ್ತರು ಚಳವಳಿಕಾರರಂತೆ ಮಾತನಾಡಬಾರದು. ಹಾಗೆ ಮಾತನಾಡುವುದಿದ್ದರೆ ಪತ್ರಿಕೋದ್ಯಮದಿಂದ ಹೊರಗಿರಬೇಕು. ಎರಡನ್ನೂ ಸಂಭಾಳಿಸುತ್ತೇನೆ ಎನ್ನುವುದು ಅನೈತಿಕ ಅಲ್ಲವೇ?

  4. ನಾಗರಾಜ್ ಅವರೇ, ಎಲ್ಲಾ ಪತ್ರಕರ್ತರಿಗೂ journalistic ethics ಇರಲೇ ಬೇಕೆಂದಿಲ್ಲ. ಹಾಗಿದ್ದರೆ ಪತ್ರಿಕೋದ್ಯಮ ಈ ರೀತಿ ಕೆಟ್ಟು ನಾತ ಹೊಡೆಯುತ್ತಿರಲಿಲ್ಲ. ಅಸಹ್ಯ ಹುಟ್ಟಿಸುವ, ಈ ದೇಶಕ್ಕೆ ಅಪರಿಚಿತವಾದ ಅಸಹನೆ ಯಾವುದೇ ಕಡೆಯಿಂದ ಬಂದರೂ ಅವುಗಳನ್ನು ಖಂಡಿಸಬೇಕು, ವಿರೋಧಿಸಬೇಕು. ಆದರೆ ಅಜೆಂಡಾಗಳಿಗೆ ಮರುಳಾದ ಜನ ಈ ಮಾತಿಗೆ ಕಿವಿಗೊಡುವರೆ?

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Blog at WordPress.com.

Up ↑

%d bloggers like this: