ಪುಟ್ಟ ‘ಗುಯಿ’ಗೆ ಹಾಡುವುದು ಅಂದರೆ ಇಷ್ಟ. ನರ್ತಿಸೋದು ಕೂಡಾ. ಬರಿ ಹಸ್ತಗಳನ್ನೆ ಬಳಕಿಸುತ್ತ ಚೂರು ಚೂರೆ ಸೊಂಟ ತಿರುಗಿಸುತ್ತ ಕೊರಿಯಾದ ಹಳೆ ಹಾಡುಗಳಿಗೆ ಹೆಜ್ಜೆ ಹಾಕುತ್ತ ಅಂತಃಪುರದ ಉದ್ದಗಲ ಬಣ್ಣ ತುಂಬುತ್ತಿದ್ದಳು. ಅವಳು ರಾಜ ಕುಮಾರಿ. ಹಾಗಂತ ಅವಳಮ್ಮ ರಾಣಿಯೇನಲ್ಲ. ಜೊಸೆಯಾನ್ ವಂಶದ ರಾಜ ಯಂಗ್ಯುಂಗ್ನ ಹಾದರಕ್ಕೆ ಹುಟ್ಟಿದವಳು. ಜನ್ಮ ಕೊಡುತ್ತಲೇ ಅಮ್ಮ ತೀರಿಕೊಂಡಿದ್ದರಿಂದ ಅಂತಃಪುರದ ಹಿರಿಯ ಹೆಂಗಸರು ಮಗುವನ್ನ ತಂದು ಜೋಪಾನ ಮಾಡಿದ್ದರು, ಮುದ್ದಿನಿಂದ ‘ಗುಯಿ’ ಎಂದು ಕರೆದರು. ಅವಳ ಪೂರ್ತಿ ಹೆಸರು ಹ್ಯುನ್ಯು ಗುಯಿ. ಅವಳ ಮುಂದೆ ಇಲ್ಲಿದೆ….
ನಿಮ್ಮದೊಂದು ಉತ್ತರ