ನೆನ್ನೆ ಒಂದು ಪದ್ಯ ಬರೆದೆ…
~ ಕಲ್ಲು ದೇವರನ್ನೆ ಪ್ರೇಮಿಸಬೇಕು!~
ಬಹಳ ಸರ್ತಿ ಅನ್ನಿಸತ್ತೆ
ಕಲ್ಲು ದೇವರನ್ನೆ
ಪ್ರೇಮಿಸೋದು ಒಳ್ಳೇದು.
ಅಂವ ಮೈ ಮುಟ್ಟೋದಿಲ್ಲ,
ಕೂಡು ಬಾರೆಂದು ಕಾಡೋದಿಲ್ಲ.
ಅಕ್ಕ, ಮೀರಾ, ಲಲ್ಲಾ, ಆಂಡಾಳ್,
ನಾಚ್ಚಿಯಾರ್, ಅವ್ವೈಯಾರ್
ಜಾಣೆಯರ ಸಾಲು
ಹೇಳಿ ಹೋದ ಪಾಠ
ಇದೇ ಇರಬೇಕು!
– ಅಂತ….
~
ಬಹಳ ಹಿಂದೆ, ಸುಮಾರು ಏಳೆಂಟು ವರ್ಷಗಳ ಹಿಂದೆ ಒಂದು ಪದ್ಯ ಬರೆದಿದ್ದೆ…
~ ಆತ ಸಜೀವ ಗಂಡಸಾಗಿದ್ದ~
ಮಹಾದೇವಿ ಅಕ್ಕ ಆಗಿದ್ದು
ಕೈ ಹಿಡಿದವನ ಬಿಟ್ಟು
ಕಲ್ಲು ಚೆನ್ನ ಮಲ್ಲಿಕಾರ್ಜುನನ್ನೇ
ಗಂಡನೆಂದು ಬಗೆದಿದ್ದಕ್ಕೆ
ದೇವರಂತೆ ಪೂಜಿಸಿದ್ದಕ್ಕೆ
ಅವನ ಮೇಲೆ ಹಾಡು ಕಟ್ಟಿದ್ದಕ್ಕೆ…..
ಮೀರಾ ಸಂತಳೆನಿಸಿದ್ದೂ
ಪತಿಯನ್ನ ತೊರೆದು
ಗೊಂಬೆ ಮಾಧವನ್ನ
ಗಂಡನೆಂದು ಬಗೆದಿದ್ದಕ್ಕೆ
ದೇವರಂತೆ ಪೂಜಿಸಿದ್ದಕ್ಕೆ
ತಂಬೂರಿ ಹಿಡಿದು ಹಾಡಿದ್ದಕ್ಕೆ….
ಮಹಾದೇವಿ ಅಕ್ಕ ಆಗಿದ್ದು
ಕೈ ಹಿಡಿದವನ ಬಿಟ್ಟು
ಕಲ್ಲು ಚೆನ್ನ ಮಲ್ಲಿಕಾರ್ಜುನನ್ನೇ
ಗಂಡನೆಂದು ಬಗೆದಿದ್ದಕ್ಕೆ
ದೇವರಂತೆ ಪೂಜಿಸಿದ್ದಕ್ಕೆ
ಅವನ ಮೇಲೆ ಹಾಡು ಕಟ್ಟಿದ್ದಕ್ಕೆ…..
ಮೀರಾ ಸಂತಳೆನಿಸಿದ್ದೂ
ಪತಿಯನ್ನ ತೊರೆದು
ಗೊಂಬೆ ಮಾಧವನ್ನ
ಗಂಡನೆಂದು ಬಗೆದಿದ್ದಕ್ಕೆ
ದೇವರಂತೆ ಪೂಜಿಸಿದ್ದಕ್ಕೆ
ತಂಬೂರಿ ಹಿಡಿದು ಹಾಡಿದ್ದಕ್ಕೆ….
ನಾನೂ ಗಂಡನ್ನ ಬಿಟ್ಟೆ
ಮತ್ಯಾರನ್ನೋ ಧೇನಿಸಿದೆ,
ಅವನ ಮೇಲೆ ಹಾಡೂ ಕಟ್ಟಿದೆ….
ಆದರೆ ಜನ ನನ್ನನ್ನ
ಹಾದರಗಿತ್ತಿ ಅಂದರು!
ಯಾಕೆ ಗೊತ್ತಾ?
ಅಂವ ಕಲ್ಲಾಗಿರಲಿಲ್ಲ,
ಅಂವ ಗೊಂಬೆಯಾಗಿರಲಿಲ್ಲ….
ಆ ನನ್ನ ದೇವರಂಥವ,
ಸಜೀವ ಗಂಡಸಾಗಿದ್ದ.
– ಅಂತ…
ಈ ಎರಡು ಪದ್ಯಗಳ ನಡುವಿನ ಕಾಲದ ಅಂತರ ಮತ್ತು ಕಾಣ್ಕೆಯ ಅಂತರಗಳನ್ನ ತಾಳೆ ಹಾಕ್ತಿದ್ದೀನಿ.
ಕಾಲ ಕಳೆದ ಹಾಗೆ ಮನಸ್ಸು ಮಾಗಲೇಬೇಕು. ಮಾಗಿದ್ದೀನಿ, ಬಹುಶಃ…
ಭಕ್ತಿ ಭಾವ ಕಾಮ ಭಾವದ ನಡುವಿನ ವ್ಯತ್ಯಾಸ ನಿಜಕೂ ಅದ್ಭುತ… ಒಂದು ಉಚ್ಚ ಮತೊಂದು ನೀಚ….
ಕೊನೆಯ, ‘ಬಹುಶಃ’ ವನ್ನ ಖಂಡಿತಾ ತೆಗಿಬಹುದು 🙂
ದಯಮಾಡಿ ನೀವು ಬರೀರಿ.
ನಾನು ತಮ್ಮನ್ನು ಭೇಟಿ ಮಾಡಲು ಅವಕಾಶ ಒದಗಬಹುದಾ.ತಮ್ಮ ಸೆಲ್ ನಂಬರ್ ಬೇಕಿತ್ತು.
9481118996
message me @ Facebook…. wl gv there.
https://www.facebook.com/profile.php?id=100008707186526 – my FB ID