
~ * ~
ಏಳೆಚ್ಚರಗೊಳದೆ ಸಿಂಬಿ
ಸುತ್ತಿ ಮಲಗಿದ ಹಾವೆ,
ಕುಡಿತದುನ್ಮಾದವೇ
ನು ವೀರ್ಯಹನಿ ಯೋನಿ
ರಸದಾಹಾರ?
ಮಸ್ತು ಜೊಂಪರು ನಿದ್ರೆ
ಚೂರು ಕಸಿವಿಸಿಗೆ
ಎಚ್ಚರದ ಸುಳಿವು
ಸಿಕ್ಕಾಗ ನಿಪ್ಪಲ್ಲು
ತುರುಕುವಂತೆ ಮತ್ತೆ
ಅಂಗ ಸಂಭೋಗ.
ಏಳುವುದಿಲ್ಲ ಕುಂಡಲಿನಿ
ಆರೂ ಚಕ್ರದ ಕೀಲು
ತುಕ್ಕಿನಲಿ ಸ್ತಬ್ದ.
ಸಹಸ್ರಾರ ದಳವೊಣಗಿ
ಸುಡುಮಧ್ಯಾಹ್ನದ ಸುಸ್ತು-
ನಿದ್ರೆ, ಹಸಿವು, ಮೈಥುನ…
ಸಿಂಬಿ ಸುತ್ತಿದ ಹಾವು
ಕಡುನಿದ್ರೆಯ ಕುಂಡಲಿನಿ
ಹೊತ್ತುಹೊತ್ತಿಗೆ ಉಣಿಸು,
ನಿದ್ರೆಯಲೆ ಸಾವು.
ABBABBHA..! HAAVU!,,ADENTHA PRATIMEREE..,CHENDADA KAAVYA!
good
Thank u
Thank u
acchukattada abhivyakthige anuroopavada che’chitra..:) good