ಅವನ ಹರವಾದ ಎದೆ ಮೇಲಿನ ಒಂದು ಬೆಳ್ಳಿಕೂದಲು ಗಾಳಿಗೆ ತೊನೆದಾಡ್ತಿದೆ. ಸೆಖೆಗೋ ಷೋಕಿಗೋ ಮೇಲಿನ ಮೂರು ಬಟನ್ಗಳನ್ನು ತೆಗೆದುಕೊಂಡಿದ್ದ. ಮಾಸಲು ನೀಲಿ ಜೀನ್ಸ್, ಅದರ ಮೇಲೆ ಕಪ್ಪು ಇಂಕಿನಿಂದ ಬಿಡಿಸಿದ ಚಿತ್ರಗಳು ಅವನ ಮನಸ್ಥಿತಿಯ ಬಿಂಬದಂತಿವೆ. ಪದೇ ಪದೇ ಜೇಬಿನಿಂದ ಕರ್ಚಿಫ್ ತೆಗೆದು ಬೆವರಿಲ್ಲದಿದ್ದರೂ ಕುತ್ತಿಗೆಯನ್ನ ಒರೆಸಿಕೊಳ್ತಾ ಅವನು ಚಡಪಡಿಸ್ತಿದ್ದ. ಹತ್ತು ನಿಮಿಷದಿಂದ ನಿಂತುಕೊಂಡು ಕಾದರೂ ಅವಳು ಬರದೆ ಇದ್ದುದು ಬೇಸರ ತರಿಸಿ ಅವನು ಉಚ್ಚೆ ಹುಯ್ದು ಬಂದ. ಆವಾಗ ಅವನಿಗೆ ತಾನು ಯಾವಾಗಲೂ ’ಬ್ಲಡಿ ಬಗ್ಗರ್ಸ್’ ಅಂತ ಬಯ್ದುಕೊಳ್ಳೋದು ನೆನಪಾಗಲೇ ಇಲ್ಲ.
ಸಿಗರೇಟು ಸೇದಬೇಕು ಅನ್ನಿಸ್ತಿದೆ. ಆದರೆ ಕೈ ಬರುತ್ತಿಲ್ಲ. ಅವಳು ಹೇಳಿದ್ದಳಲ್ಲ, ’ಸಿಗರೇಟ್ ಸೇದಿ ನೀನು ಹಾಳಾಗು. ಬೇರೆಯವ್ರನ್ನ ಯಾಕೆ ಹಾಳು ಮಾಡ್ತೀಯ? ಎಷ್ಟು ಜನ ಸಿಗರ್…. ಬ್ಲಾ ಬ್ಲಾ ಬ್ಲಾಹ್!’ ಅವಳ ಮಾತು ನೆನೆಸಿಕೊಂಡು ಅವನ ತುಟಿ ಕೊಂಕಿತು. ಮುದ್ದಾದ ಮೊಸರನ್ನದ ಹುಡುಗಿ. ಅವಳು ಹೇಳಿದ್ದೆಲ್ಲ ಅವನ ಮೇಲೆ ಪ್ರಭಾವ ಬೀರಿ ಹೀಗೆ ಅಂಜಾಣಿಸಿದ್ದಲ್ಲ. ಮುದ್ದಾಗಿರುವ ಹುಡುಗಿಯರು ಏನು ಹೇಳಿದರೂ ಚೆಂದವೇ, ಕೇಳಿಸಿಕೊಳ್ಳೋಕೆ ಮಾತ್ರ. ಆಮೇಲೆ…. ಇಲ್ಲಿ ಕ್ಲಿಕ್ ಮಾಡಿ!
ನಿಮ್ಮದೊಂದು ಉತ್ತರ