ಮಲೆಗಳಲ್ಲಿ ಮದುಮಗಳು- ರಂಗ ಪ್ರಯೋಗ ಮತ್ತು ಪ್ರಸ್ತುತತೆ

ಹೊರ ನೋಟಕ್ಕೆ ನಾವೆತ್ತಲೋ ಸಾಗಿಬಿಟ್ಟಿದ್ದೇವೆ, ಚಂದ್ರನನ್ನು ಜೇಬೊಳಗಿಟ್ಟುಕೊಂಡಿದ್ದೇವೆ ಎನ್ನುವಂತೆ ಕಂಡರೂ ಭಾರತೀಯ ಸಂದರ್ಭದಲ್ಲಿ ಕೌಟುಂಬಿಕ, ಸಾಮಾಜಿಕ ಸಂಗತಿಗಳು ಅವೇ ಹಳೆಯ ಹಳವಂಡಗಳನ್ನೆ ಹೊತ್ತುಕೊಂಡಿವೆ. ಮಲೆಗಳಲ್ಲಿ ಮದುಮಗಳು ರಂಗಪ್ರಯೋಗದ ಪ್ರಸ್ತುತತೆಯ ಬಗ್ಗೆ ಚರ್ಚಿಸುವಾಗ ಈ ಅಂಶವನ್ನು ಗಮನಿಸಬೇಕಾಗುತ್ತದೆ. ಹತ್ತೊಂಭತ್ತನೇ ಶತಮಾನದ ಕಥಾವಸ್ತುವುಳ್ಳ ಕಾದಂಬರಿಯೊಂದು ಇಪ್ಪತ್ತನೇ ಶತಮಾನದಲ್ಲಿ ಬರೆಯಲ್ಪಟ್ಟಾಗ ಒಂದು ಸಂಚಲನವನ್ನು ಹುಟ್ಟು ಹಾಕಿತ್ತು. ರಾಮಾಯಣ ದರ್ಶನಮ್‌ ಬರೆದ ಕುವೆಂಪು ಮಲೆಗಳಲ್ಲಿ ಮದುಮಗಳು ಮಹತ್ಕೃತಿಯನ್ನು ಬರೆದಾಗ ಆ ಕಾಲಘಟ್ಟದಲ್ಲಿ ಅದನ್ನು ಮೆಚ್ಚಿಕೊಂಡವರಿಗಿಂತ ತೇಲಿಸಿ ಮಾತನಾಡಿದವರೇ ಹೆಚ್ಚು. ಕುವೆಂಪು ಅವರಿಂದ ಇಂತಹ... Continue Reading →

ಎಂದೆಂದಿಗೂ ಸಲ್ಲುವ ’ಎದೆಗೆ ಬಿದ್ದ ಅಕ್ಷರ’

ಹಾಗೆಂದು ಈ ಪುಸ್ತಕದ ಅಂಶಗಳೆಲ್ಲವನ್ನೂ ಒಪ್ಪಲೇಬೇಕು, ಹಿರಿಯರೆಂಬ ಕಾರಣಕ್ಕೆ ಆರಾಧ್ಯ ಭಾವದಿಂದ ಕಾಣಬೇಕೆಂದೇನೂ ಇಲ್ಲ. ಮುಂದಿನ ಚರ್ಚೆಗೆ ಗ್ರಾಸವಾಗಲಿ ಎಂದಾದರೂ ಒಂದು ತಲೆಮಾರಿನ ಚಿಂತನಾಕ್ರಮ ಹೇಗಿತ್ತೆಂಬ ಪರಿಚಯಕ್ಕಾಗಿಯಾದರೂ ಅದರ ಅಗತ್ಯವಿದೆಯಷ್ಟೆ. ಇಂದಿನ ತುರ್ತಿಗೆ ಸಲ್ಲುವ ಪುಸ್ತಕ ಈ ಹೊತ್ತು ಯಾವುದಿದೆ? ಯೋಚಿಸಲು ಕುಳಿತರೆ ಎಲ್ಲಕ್ಕಿಂತ ಮೊದಲು ತೋಚುವುದು ದೇವನೂರು ಮಹಾದೇವರ ‘ಎದೆಗೆ ಬಿದ್ದ ಅಕ್ಷರ’. ಇತ್ತೀಚಿನ ಕೆಲ ತಿಂಗಳುಗಳಿಂದ ಸಂವೇದನಾಶೀಲ ಓದುಗರ ವಲಯದಲ್ಲಿ ಒಂದು ಕೋಲಾಹಲವನ್ನೆ ಎಬ್ಬಿಸಿದ ಕೃತಿ ಇದು. ಮತ್ತಷ್ಟು ಚರ್ಚೆಗೆ ಒದಗಬೇಕಿತ್ತು ಎನ್ನಿಸಿದರೂ ಇಂದಿನ... Continue Reading →

Blog at WordPress.com.

Up ↑