‘ಮಗು’ ~ ಮೂರು ಪದ್ಯಗಳು

ಈ ಮೂರು ಕವಿತೆಗಳು ಕಾಲಕ್ರಮದಲ್ಲಿ ಮಗನ ಹುಟ್ಟುಹಬ್ಬದ ಸಂದರ್ಭಗಳಲ್ಲಿ ಬರೆದವು. ಈ ಮೂರೂ ಕವಿತೆಗಳು ಬದುಕಿನ ಪಲ್ಲಟಗಳನ್ನು ಸಂಕೇತಿಸುತ್ತವೆಂದು ಅಂದುಕೊಳ್ಳುತ್ತೇನೆ.  ಮಗುವಲ್ಲಿ ಅವನ ನಗು! (2007) ಮಗು. ಅರೆ! ನನ್ನದೇ ಜೀವ, ನನ್ನ ನಿರಂತರತೆ. ಆದರೆ ಅದು ನಾನಲ್ಲ. ಅದು ನಾನು ಮಾತ್ರ ಅಲ್ಲ. ಅಂವ ಕೂಡ ಅಂದುಕೊಳ್ತಾನೇನೋ, ನನ್ನ ಮಗು, ನನ್ನದೇ ನಿರಂತರತೆ! ಮಗು. . . ಈಗ ತಾನೆ ಕಡೆದು ತೆಗೆದ ಮೆದು ಬೆಣ್ಣೆ. ಕಾದು ಕಾದು ಹೊನ್ನುಗಟ್ಟಿದ ಹಾಲುಕೆನೆ. ಮಗು, ಹುಲ್ಲಿನೆಳೆಯ ಮೇಲಿನ... Continue Reading →

ಸಿಂಬಿ ಸುತ್ತಿದ ಹಾವು

~ * ~ ಏಳೆಚ್ಚರಗೊಳದೆ ಸಿಂಬಿ ಸುತ್ತಿ ಮಲಗಿದ ಹಾವೆ, ಕುಡಿತದುನ್ಮಾದವೇ ನು ವೀರ್ಯಹನಿ ಯೋನಿ ರಸದಾಹಾರ? ಮಸ್ತು ಜೊಂಪರು ನಿದ್ರೆ ಚೂರು ಕಸಿವಿಸಿಗೆ ಎಚ್ಚರದ ಸುಳಿವು ಸಿಕ್ಕಾಗ ನಿಪ್ಪಲ್ಲು ತುರುಕುವಂತೆ ಮತ್ತೆ ಅಂಗ ಸಂಭೋಗ. ಏಳುವುದಿಲ್ಲ ಕುಂಡಲಿನಿ ಆರೂ ಚಕ್ರದ ಕೀಲು ತುಕ್ಕಿನಲಿ ಸ್ತಬ್ದ. ಸಹಸ್ರಾರ ದಳವೊಣಗಿ ಸುಡುಮಧ್ಯಾಹ್ನದ ಸುಸ್ತು- ನಿದ್ರೆ, ಹಸಿವು, ಮೈಥುನ... ಸಿಂಬಿ ಸುತ್ತಿದ ಹಾವು ಕಡುನಿದ್ರೆಯ ಕುಂಡಲಿನಿ ಹೊತ್ತುಹೊತ್ತಿಗೆ ಉಣಿಸು, ನಿದ್ರೆಯಲೆ ಸಾವು.

ಹಳೆಯದೊಂದು ಮಳೆಕವಿತೆ

ಇವತ್ತೂ ಮಳೆ ಬರಲಿಲ್ಲ ಕಣೋ ಮೋಡಗಟ್ಟಿದ ಮಬ್ಬು ಹಾಗೇ ಇದೆ ಇನ್ನೂ ಬಾಯಾರಿ ಬಿರಿದ ಎದೆಗೆ ನಿನ್ನ ನೆನಪು ಸುಡು ಸೂರ್ಯ ಇಲ್ಲ, ಬರಲಿಲ್ಲ ಮಳೆ ಇವತ್ತೂ, ಕ್ಷಿತಿಜದಂಚಲ್ಲಿ ಕಾಮನ ಬಿಲ್ಲು ಮೂಡಿದ್ದು ಯಾಕೋ ಗೊತ್ತಾಗಲಿಲ್ಲ! ನನ್ನ ಕಣ್ಣ ಹನಿ, ನಿನ್ನ ನಗೆ ಬೆಳಕು- ಅದರಲ್ಲಿ ಇದು ಹಾದು ನಡೆದ ಭೌತ ಶಾಸ್ತ್ರದ ಕರಾಮತ್ತು ನನಗೆ ತಿಳಿಯಲಿಲ್ಲ ಮಳೆ ಇವತ್ತೂ ಬರಲಿಲ್ಲವೋ… ಅದಕೆಂದೇ ಕಾಪಿಟ್ಟ ಮಳೆ ಹಾಡು ಉಳಿದುಹೋಗಿದೆ ಹಾಗೇ, ಹನಿ ಹನಿಗು ನಿನ್ನ ಮುತ್ತನಿಟ್ಟು ಹೆಣೆಯಲಿದ್ದ... Continue Reading →

ಇನ್ನೂ ಒಂದು ಹಳೆಕವಿತೆ

ನೀರಿಲ್ಲದ ಬಾವಿ ಯೆದುರು ಖಾಲಿ ಕೊಡದ ನಾನು ಎದೆ ಬಗೆದು ತೋಡಿದರೂ ಕಣ್ಣು ಹನಿಯದು ~ ಮರಳುಗಾಡು, ಮರೀಚಿಕೆ… ಅವೆಲ್ಲ ಕ್ಲೀಷೆ. ನೀನಿಲ್ಲದ ಬದುಕಿಗೆ ನೀ ನೀಡದ ಪ್ರೀತಿಗೆ ಬೇರೇನೂ ಹೋಲಿಕೆ ತೋಚುತ್ತಿಲ್ಲ ನನಗೆ. ~ ಹಾಳು ಮೌನದ ಬಯಲಲ್ಲಿ ಒಂಟಿ ಪಾಪಾಸುಕಳ್ಳಿ ಯ ಹಾಗೆ ನಿಂತಿರುವೆ ಅದಕ್ಕೇ, ಮಾತಿಗೆ ನೆವವಿಲ್ಲ, ಪ್ರೀತಿಗೆ ಜನವಿಲ್ಲ!

ಮತ್ತೂ ಒಂದು ಹಳೆ ಕವಿತೆ

ಮಳೆ ಯಾಕೋ ಇವತ್ತು ಹಠ ಹಿಡಿದಿದೆ  ನಿನ್ನ ಹಾಗೆ ನೆನೆನೆನೆದು ಮುನಿಯುತ್ತಿದೆ ಮುನಿಮುನಿದು ನೆನೆಸುತ್ತಿದೆ ಯಾಕೋ… ಮಳೆ ಯಾಕೋ ಇವತ್ತು ಹಠ ಹಿಡಿದಿದೆ ನಿನ್ನ ಹಾಗೆ ನೀ ಕಣ್ತೆರೆದಂತೆ ಮಿಂಚು ಮಿಂಚಿ ಮೈಯೆಲ್ಲ ಸೆಳೆದು ಒಳಗೆಲ್ಲೋ ಕೋಡಿ ಒಡೆದು ಪ್ರವಾಹ ಬಿದ್ದು ಸುಳಿವು ನಿನ್ನ ನಗುವಿನದೇ ಸಿಡಿಲು- ನೀ ನಗುನಗುತ್ತ ಸಿಡುಕಿ ಆಡಿದ ಮಾತು ನನ್ನ ಸುಟ್ಟಿತ್ತಲ್ಲೇ ಸಿಡಿಲ ಹಾಗೆ! ಹಾಗೆ ಸುಟ್ಟಿದೆ ನೋಡು ಮನೆಯೆದುರ ಒಂಟಿ ತೆಂಗು, ಗರಿಗಳೆಲ್ಲ ಉದುರಿ, ಫಲಗಳೆಲ್ಲ ಚದುರಿ ಉದ್ದಾನುದ್ದ ನಿಂತಿದೆಯಲ್ಲಿ... Continue Reading →

ಮತ್ತೊಂದು ಹಳೆ ಕವಿತೆ

ಮೊಗ್ಗಿನ್ನು ಅರಳುವುದಿಲ್ಲ… ಇನ್ನು, ಮೊಗ್ಗು ಅರಳುವುದಿಲ್ಲ. ಹೂವಾಗದೆ, ಕಾಯಾಗದೆ, ಹಣ್ಣಾಗಿದೆ ಮೊಗ್ಗು- ಬಿರಿಯುವುದಿಲ್ಲ. ಯಾವ ಪಾತರಗಿತ್ತಿಯ ತುಟಿ ಸೋಂಕಿಗೂ ದಳ ತಳಮಳಿಸುವುದಿಲ್ಲ. ಬಿಗಿದು ಕುಂತಿದೆ ಮೊಗ್ಗು, ಇನ್ನು ಅರಳುವುದಿಲ್ಲ. ಮೊಗ್ಗೊಳಗೆ ಹೂತು ಕೂತ ಬೀಜ ಮತ್ತೆ ಮೊಳೆಯುವುದಿಲ್ಲ. ಅದು, ಗಿಡವಾಗಿ ಚಿಗಿಯುವುದಿಲ್ಲ, ಹೂ ಹೆರುವುದಿಲ್ಲ. ಯಾಕೆಂದರೆ, ಮೊಗ್ಗಿನ್ನು ಅರಳುವುದಿಲ್ಲ. ಹೂವಾಗದೆ ಕಾಯಾಗದೆ ಹಣ್ಣಾಗಿದೆ ಮೊಗ್ಗು, ಇನ್ನು ಬಿರಿಯುವುದಿಲ್ಲ.

ಒಂದು ಹಳೆಯ ಕವಿತೆ

ಇದು, ಅದೇ ನೀರವ ರಾತ್ರಿ… ಗೂಬೆ ಕೂಗುವ ಸದ್ದು. ದೂ  ರ  ದ ಕಬ್ಬಿನ ಗದ್ದೆಯಲ್ಲಿ ಊಳಿಡುತ್ತಿರುವ ನರಿಗಳ ಧ್ವನಿ, ನನ್ನೆದೆಯಲ್ಲಿ ಪ್ರತಿಧ್ವನಿ. ಈ ರಾತ್ರಿ, ಚಂದಿರನ ಮುಖದಲ್ಲಿ ಸೂತಕದ ಛಾಯೆ. ಆಕಾಶ ವಿಷ ಕುಡಿದೇ ನೀಲಿಗಟ್ಟಿದೆಯೇನೋ ಅನ್ನುವಂತೆ… ನಕ್ಷತ್ರಗಳು ಕೂಡ ಅಂಗಳ ಬಿಟ್ಟು ನಡೆದಿವೆ, ನನ್ನ ಹಾಗೆ ಚಂದಿರ ಕೂಡ ಒಬ್ಬಂಟಿ. ನಾನಿಲ್ಲಿ ಹೀಗೆ, ಸರಿ ರಾತ್ರಿಯಲ್ಲಿ ಹಳದಿ ಹೂಗಳನ್ನ ಜೋಡಿಸಿಡುತ್ತ ಕುಳಿತಿದ್ದೇನೆ. ಕಾಯುತ್ತಿದ್ದೇನೆ; ಕ್ಯಾಲೆಂಡರಿನ ಹಾಳೆ ತಿರುವಲು, ನೀ ಬರುವ ದಿನ ಊಹಿಸಿ ತಿಂಗಳ... Continue Reading →

2009, ಮಾರ್ಚ್ 18ರ ಕವಿತೆ

  ದಂಡೆ ನಿರ್ಲಿಪ್ತ ಓಡೋಡಿ ಬರುವ ಅಲೆಯ ನಿಯತ್ತು ಅದಕ್ಕೆ ಗೊತ್ತು. ~ ದಂಡೆ ಬಿಟ್ಟಿರಲಾಗದ ಅಲೆಗೆ ತಳಮಳ. ಬಂದಪ್ಪಿದರೆ ಮತ್ತೆ ನೀರ ಸೆಳೆತ. ~ ಬರುವಾಗ ಹೆದ್ದೆರೆ, ದಡವನಪ್ಪಿ ಭೋರ್ಗರೆದು ಹಿಂಜರಿದು ನಡೆವಾಗ ತಗ್ಗಿ ಕುಗ್ಗಿ, ಇಲ್ಲವಾಗಿಬಿಡುತ್ತಿದೆ. ~ ಸಾಗರದೊಡಲಿಂದ ಬಂಡೆದ್ದ ಸಾವಿರ ಸಾವಿರ ಅಲೆಗಳು ನೆಲವ ನೆಚ್ಚಿಕೊಳ್ಳಲಾಗದೆ ಮರಳಿ ಹೋಗುತ್ತಿವೆ. ~ ದಡ, ಸಾಗರ ದಡ, ಸಾಗರ- ದಾಟದಲ್ಲಿ ಅಲೆಗಳು ಸೋತು ಸೊರಗುತ್ತಿವೆ. ~ ನೀರೋ, ನೆಲವೋ? ಕ್ಷಣಕ್ಷಣವೂ ದ್ವಂದ್ವ... ಸಾಗರ ದನಿ ತೆಗೆದು... Continue Reading →

ತಿನ್ನಬಾರದ ಹಣ್ಣು ತಿಂದಿದೇವೆ ನಾವು

(ಓಶೋ ನಿಷೇಧಿತ ಹಣ್ಣಿನ ಬಗ್ಗೆ ಕೊಡೋ ವ್ಯಾಖ್ಯೆ ಅದ್ಭುತ. ಅವರದನ್ನ ತಿಳಿವಿನ ಹಣ್ನು ಅನ್ನುತ್ತಾರೆ. ಅದನ್ನ ತಿಂದಾಗ ಆಡಮ್- ಈವರಿಗೆ ತಮ್ಮ ಹುಟ್ಟಿನ ಉದ್ದೇಶ ಗೊತ್ತಾಯ್ತು, ಸ್ವತಂತ್ರರಾಗಿ ಬದುಕು ಕಟ್ಟಿಕೊಂಡರು ಅನ್ನುತ್ತಾರೆ ಓಶೋ. ಅದನ್ನ ಓದುತ್ತ ನನ್ನೊಳಗಿನ ಅವರಂಥದೇ ತಲೆತಿರುಕತನ ಜಾಗೃತವಾಗಿ ಈ ಕವಿತೆ.... ಥರದ್ದು...) ಬಾಯಿ ಒರೆಸಿಕೋ ನೀರು ಕುಡಿದುಬಿಡು ರುಚಿ ನಾಲಗೆಯಗಲಿ ತೊಲಗಿಹೋಯ್ತೋ ನೋಡು. ತಿನ್ನಬಾರದ ಹಣ್ಣು ತಿಂದಿದೇವೆ ನಾವು. ಮೊದಲಿಂದಲೂ ಹಾಗೇನೇ ದೇವರೆಂಬ ಅಪ್ಪ ತೋಟದಲಿ ಗಿಡ ನೆಟ್ಟು ಹೂಬಿಟ್ಟು ಹಣ್ಣಿಟ್ಟು ತಿನ್ನಬೇಡಿರೆಂದ.... Continue Reading →

ಒಂದು ಹಳೆ ಕವಿತೆ, ಹೊಸ ಸಮಜಾಯಿಷಿ ಜತೆ

ಭಾನುವಾರ ಕಳೀಬೇಕಲ್ಲ, ಎಂಥದೋ ತರಲೆ ಕೆಲಸ ಹಚ್ಚಿಕೊಂದು ಬುಕ್‌ಶೆಲ್ಫಿನ ಗ್ರಾಚಾರ ಬಿಡಿಸ್ತಿದ್ದೆ. ಅಕಸ್ಮಾತ್ ನನ್ನ ಹಳೆ ಡೈರಿಗಳು ಸಿಕ್ಕಾಕಿಕೊಂಡವು. ಈ ಹಳೆ ಡೈರಿಗಳು ಮಜಾ ಇರ್ತವೆ. ಅರ್ಧ ಬರೆದ ಕಥೆ ಥರದ್ದು, ಕವಿತೆ ಥರದ್ದು, ಯಾರನ್ನೋ ನೆನೆದು ಬಯ್ದುಕೊಂಡ ‘ಈಡಿಯಟ್’, ಒಂದು ಹೂವಿನ ಚಿತ್ರ, ನೀಟಾಗಿ ಶ್ರದ್ಧೆಯಿಂದ ಬರೆದ ಒಂದು ಹೆಸರು, ಹೀಗೆಲ್ಲ. ಹಾಗೆ ಅವು ಸಿಕ್ಕಿದ್ದೇ ಸಿಕ್ಕಿದ್ದು, ಸಂಜೆಯ ತನಕ ಪುಟಗಳನ್ನ ತಿರುವಿ ಹಾಕುವುದಾಯ್ತು. ಆ ನನ್ನ ಗುಜರಿ ನಿಧಿಯಲ್ಲಿ ಸಿಕ್ಕ ಕಟ್ಲರಿಗಳು ಒಂದೆರಡಲ್ಲ. ಅವುಗಳ... Continue Reading →

Blog at WordPress.com.

Up ↑