ಪಾಂಡಣ್ಣನ ನೆನಪಿನೊಂದಿಗೆ ಜಾನುವಾರು ಜಾತ್ರೆ ಬಯಲು

ನಾನು ಚಿಕ್ಕಿರುವಾಗಿಂದ ನೋಡಿದ್ದ ಪಾಂಡಣ್ಣ ಮೊನ್ನೆ, ಹಬ್ಬದ ಹಿಂದಿನ ದಿನ ಹೃದಯನಿಂತು ಇಲ್ಲವಾಗಿದ್ದಾರೆ. ನಾನೂ ಅಪ್ಪಿಯೂ ಪ್ರಿತಿಯಿಂದಲೂ ಚೇಷ್ಟೆಯಿಂದಲೂ 'ಭಾಲು' ಅಂತ ಕರೆಯುವುದಿತ್ತು ಅವರನ್ನ. ಪಾಂಡಣ್ಣ, ತಮ್ಮಪಾಡಿನ ಮನುಷ್ಯ. ಯಾರ ಉಸಾಬರಿಗೂ ಹೋಗದೆ ಇರುತ್ತಿದ್ದವರು. ಊರ ಜನರೆಲ್ಲ ಕಾರ್ತೀಕದ ಹೊತ್ತಿಗೆ ಮಾತ್ರ ವೆಂಕಟರಮಣ ಗುಡಿಗೆ ಸಿಂಗಾರ ಮಾಡಲು ಉತ್ಸಾಹ ತೋರ್ತಿದ್ದರೆ, ಇವರು ಮಾತ್ರ ಪ್ರತಿ ಬೆಳಗ್ಗೆ ಅಲ್ಲೊಂದು ರೌಂಡು ಓಡಾಡಿ, ಗುಡಿ ಸುತ್ತ ಗುಡಿಸಿ, ಅಗೀಗ ಕಳೆ ತೆಗೆದು ಬರುತ್ತಿದ್ರು. ಅದನ್ನವರು 'ಸೇವೆ' ಅಂತಲೂ ಅಂದುಕೊಳ್ತಿರಲಿಲ್ಲ, ಕರ್ತವ್ಯ... Continue Reading →

ಮಾರ್ಚ್ 25,2008ರ ಒಂದು ಬರೆಹ

ಎಂದಿನಂತೆ, ಬ್ಲಾಗಲ್ಲೇನೋ ಗಲಾಟೆಯಾಗಿ, ಬ್ಲಾಗಿಂಗ್ ಶುರು ಮಾಡಿದ ವರ್ಷದೊಳಗೇ ಡಿಲೀಟ್ ಮಾಡಿಬಿಟ್ಟಿದ್ದೆ. ಆಗಿನ ಬರೆಹಗಳ ಸಾಫ್ಟ್ ಕಾಪಿ ಒಂದು ಕಡೆ ಇದ್ದಿದ್ದು ಅಚಾನಕ್ ಇವತ್ತು (ಮತ್ತೊಮ್ಮೆ) ಸಿಕ್ತು. ಕೆಲವೆಲ್ಲ 'ಅರ್ರೆ!' ಅನಿಸಿ, ಮತ್ತೆ ಇಲ್ಲಿ... ಈ ಬರೆಹ, ನೈಪಾಲರು ತಮ್ಮ ಬಯಾಗ್ರಫಿಯಲ್ಲಿ ಬರೆದುಕೊಂಡಿದ್ದ ಒಂದು ಸಂಗತಿಯನ್ನಾಧರಿಸಿ ಬರೆದಿದ್ದಾಗಿತ್ತು... ಬರೋಬ್ಬರಿ ನಲವತ್ತು ವರ್ಷಗಳ ಕಾಲ ಹೆಂಡತಿಯನ್ನ ಹುರಿದುಮುಕ್ಕಿದ ನೈಪಾಲರು ಕನ್ಫೆಸ್ ಮಾಡಿಕೊಂಡಿದ್ದಾರೆ. “ಬಹುಶಃ ನಾನು ನಿರಂತರವಾಗಿ ನೀಡಿದ ಮಾನಸಿಕ ಹಿಂಸೆಯೇ ಅವಳನ್ನು ಕೊಂದಿತು” ಎಂದು ಹೇಳಿಕೊಂಡಿದ್ದಾರೆ.  ಪ್ಯಾಟ್ರಿಕ್ ಫ್ರೆಂಚ್... Continue Reading →

ಅನುಗೂಂಜಿನ ನೆವದಲ್ಲಿ… (ಒಂದು ರಿಸೈಕಲ್ಡ್ ಬರಹ)

ನಾನಿಲ್ಲಿ ಎಂಭತ್ತರ ದಶಕದ ಕೆಲವು ಸೀರಿಯಲ್ಲುಗಳ ಬಗ್ಗೆ ಹರಟಿದ್ದೇನೆ. ಸೂತ್ರವಿಲ್ಲದೆ ಸಾಗಿರುವ ಬರಹವಿದು. ಒಂಥರಾ ನಾಸ್ಟಾಲ್ಜಿಯಾ. ಅಂದಿನ ಸೀರಿಯಲ್ಲುಗಳ ಬಗ್ಗೆ ಗೊತ್ತಿಲ್ಲದವರು, ಇಂದಿನವರು ಇದನ್ನ ಓದಿ ಬಯ್ದುಕೊಳ್ಳಬೇಡಿ. ಬಹುಶಃ ಈ ಲೇಖನದಲ್ಲಿ ನಿಮಗೆ ಏನೂ ಸಿಗಲಾರದು. ಇದೊಂದು ನೆನಪಿನ ಸೆಲೆಬ್ರೇಶನ್ ಅಷ್ಟೇ. ಆದ್ದರಿಂದ ಇದು ಕಡ್ಡಾಯವಾಗಿ ಆಸಕ್ತರಿಗೆ ಮಾತ್ರ. ಆದರೂ ಓದುತ್ತೇವೆಂದು ಹೊರಟು ಬೋರು ಹೊಡೆಸಿಕೊಂಡರೆ, ಆಮೇಲೆ ನನ್ನನ್ನ ಮಾತ್ರ ದೂರಬೇಡಿ, ಮೊದಲೇ ಹೇಳ್ಬಿಟ್ಟಿದ್ದೀನಿ! (ಇದು 3 ವರ್ಷ ಹಳೆಯ ಬರಹ) ~ “ಪ್ರೇಮ್ ಓ ಚಂದನ್... Continue Reading →

ಒಂದು ಹಳೆಯ ತರ್ಲೆ ಪೋಸ್ಟ್

"ಪ್ರಾಮಾಣಿಕವಾಗಿ ಹೇಳ್ತೀನಿ, ನನಗೊಂದು ದುರ್ಬುದ್ಧಿ ಇದೆ. ಅದು ಬಹುತೇಕರಿಗೆ ಇರಬಹುದಾದ ಮೋಸ್ಟ್ ಕಾಮನ್ ದುರ್ಬುದ್ಧಿಯೂ ಹೌದು. ಅದೇನು ಅಂತ ಈ ಲೇಖನ ಓದುವಾಗ ನಿಮ್ಗೆ ಗೊತ್ತಾಗತ್ತೆ" ಅಂತ ಶುರು ಹಚ್ಕೊಂಡು ಬರೆದ ತರಲೆ ಪೋಸ್ಟ್ ಒಂದನ್ನ ಮತ್ತೆ ಓದಿಕೊಳ್ತಿದ್ದೆ. ನನನನಗೇನೆ ಸಿಕ್ಕಾಪಟ್ಟೆ ನಗು. ನೀವೂ ಹಿಂಗೆ ನಿಮ್ಮ ಹಳೆ ತರಲೆಯನ್ನ ನೆನಪು ಮಾಡ್ಕೊಳ್ಳಲಿಕ್ಕೆ ಈ ಪೋಸ್ಟ್ ಕಾರಣವಾಗಬಹುದು. ಟೈಮ್ ಇದ್ರೆ ಓದ್ನೋಡಿ.... ~ ಕೊಕನಕ್ಕಿಯ ಹೆಸರು ಹುಡುಕುತ್ತಾ.... ಮೊನ್ನೆ ಮಲ್ಲೇಶ್ವರಕ್ಕೆ ಹೋಗಿದ್ನಾ, ಅಚಾನಕ್ಕಾಗಿ ಒಬ್ಬಳನ್ನ ನೋಡಿದೆ. ಅದೇ... Continue Reading →

ಜನವರಿ ೧೪- ೨೦೦೮ರ ಕವಿತೆ

ನೀ ಹೇಗೆ ಒಂಟಿಯಾಗಿರುವೆ ಅಲ್ಲಿ!? ನೀ ಹೇಗೆ ಒಂಟಿಯಾಗಿರುವೆ ಅಲ್ಲಿ? ಇಲ್ಲಿ, ಒಂದೆ ಸಮನೆ ಇಬ್ಬನಿ ಸುರಿಯುತ್ತಿದೆ ನನ್ನೆದೆಗೆ ಭಗ್ಗೆನ್ನಲು ವಿರಹದುರಿ ನೀನಿಲ್ಲದೆ ಈ ಬಾರಿ ವಿಪರೀತ ಚಳಿ ರಗ್ಗು- ರಝಾಯಿಗಳ ಕೊಡವುತ್ತಿದ್ದೇನೆ, ಬಿಸಿಯುಸಿರನಷ್ಟು ಕಳಿಸಿಕೊಡು ಬೇಗ! ಹೊರಗೆ ಯಾರೋ ಇಬ್ಬರು ಪ್ರೇಮಿಗಳ ಜಗಳ. ಹೌದು ಬಿಡು, ಹುಡುಗಿಯರ ಕೂಗಾಟವೆ ಹೆಚ್ಚು! ನೀ ಛೇಡಿಸಿದ ನೆನಪು. ಊಟದ ಟೇಬಲ್ಲಿನ ಮೇಲೆ ಅರ್ಧ ಬರೆದಿಟ್ಟ ಕವಿತೆ, ಮಂಚದ ಮೇಲೆ ಕುಂತು ಕುಡಿದಿಟ್ಟ ಕಾಫಿ ಬಟ್ಟಲು ಹಾಗೇ ಇವೆ ಮನೆಯಲ್ಲಿ... Continue Reading →

ಹೀಗೊಂದು ಆಟದ ಪ್ರಸಂಗ…

  ಥೈಯ್ಯ ಥೈಯ್ಯ ಥೈಯ್ಯ ತಾಂಗುಡಿತ ತಾಂಗುಡಿತ ಥೈ! ನಾರೀ ಮಣಿಯೆ ಬಾರೇ… ಮಣಿಯೆ ಬಾರೇ… ಬಾ ಬಾರೇ… ಛೀ! ಪಾಪಿ!! ಸರಿ ದೂರ… ಬಾ ಬಾರೇ… ಮುಖ ತೋರೇ… ದುರುಳ, ಸರಿ ದೂರ…! ಕೀಚಕ ವಧೆ ಪ್ರಸಂಗ. ಮಂಜು ಭಾಗವತ ಗಂಟಲು ಕಿತ್ತುಕೊಂಡು ಹಾಡ್ತಿದ್ದ. ಶಾಮ ಪೂಜಾರಿಯ ಭರ್ಜರಿ ಕೀಚಕ ವೇಷ. ಅವನ ಕಾಕು, ಪಟ್ಟು, ಕುಣಿತ… ಅಬ್ಬ! ಅವನೆದುರು ಸ್ತ್ರೀ ವೇಷದ ದಾಮೋದರ- ದಾಮೂ ಹುದುಗಿಹೋದಂತಿತ್ತು. ದಾಮೂ ಪೀಚಲು ಹುಡುಗ. ದನಿಯೂ ಕೀರಲು. ಸ್ತ್ರೀ... Continue Reading →

ದುಃಖಿಸಲಿಕ್ಕೆ ಇಡಿ ರಾತ್ರಿ ಬಾಕಿ ಇದೆ…

ದುಃಖಿಸಲಿಕ್ಕೆ ಇಡಿ ರಾತ್ರಿ ಬಾಕಿ ಇದೆ ಈ ಬೆಳಗನ್ನ ಬಲಿಕೊಡಲೇಕೆ ನಾನು? ಎಷ್ಟೊಂದು ಕೆಲಸವಿದೆ, ಕಳೆದ ಫೈಲು ಹುಡುಕಬೇಕು ನನ್ನ ಜಾಯಮಾನ ಗೊತ್ತಲ್ಲ? ಕಳಕೊಳ್ಳುತ್ತಲೇ ಇರುವುದು… ನಿನ್ನನೆಲ್ಲಿ ಹುಡುಕಲಿ ಹೇಳು? ನಿನ್ನ ಮುಖದವನೇ ಇದ್ದಾನೆ ಹೀಗೊಬ್ಬ, ಅದೆ ಮಾತು, ಅದೆ ನಗು ಅದೆ ಅದೇ ದೇಹ. ಅದರೊಳಗೆ ನೀನಿದ್ದೆ, ಎಲ್ಲಿ ಹೋದೆ!? ಕಾಲಮೇಲೆ ನಿಲ್ಲುವ ತವಕಕ್ಕೆ, ಕಾಲು ಸೋತು ಹೋಗಿದೆ ನನ್ನ ಹೊಕ್ಕುಕ್ಕಿಸುತ್ತಿದ್ದ ಪ್ರೀತಿ ಸೊರಗಿ ಸೋಲಿಸುತಿದೆ ಯಾಕೆ? ದಣಿದು ಬಂದ ಪ್ರತಿ ಸಂಜೆ ತಪ್ಪದೆ ನಡೆಯುವ... Continue Reading →

`ಕಥೆ’ಯಾಗುವುದು ಮತ್ತು `ಕತೆ’ಯಾಗುವುದು….

ಕನ್ನಡದ ರುಚಿಕಟ್ಟಾದ ಕತೆಗಾರ ಪೂರ್ಣಚಂದ್ರ ತೇಜಸ್ವಿಗೆ ಒಮ್ಮೆ ಅವರ ಕತೆಯ ಪಾತ್ರಗಳೇ ಜೀವಂತವಾಗಿ ಸಿಕ್ಕು ನಮ್ಮ ಬಗ್ಗೆ ಯಾಕೆ ಬರೆದಿರಿ ಅಂತ ಜಗಳ ಹೂಡಿ ಹೋಗಿದ್ದ ಅನುಭವವಾಗಿತ್ತಂತೆ. ’ಕರ್ವಾಲೋ’ ಕಾದಂಬರಿಯ ಎಂಗ್ಟ ಮತ್ತು ಕರಿಯ ಹನ್ನೆರಡು- ಹದಿಮೂರು ವರ್ಷಗಳ ನಂತರ ಬಂದು  ವ್ಯಾಜ್ಯ ಹೂಡಿದ್ದನ್ನ ಅವರು ’ಪರಿಸರದ ಕತೆ’ಯಲ್ಲಿ  ಬರೆದುಕೊಂಡಿದ್ದಾರೆ. ಇತ್ತೀಚಿಗೆ ನನ್ನ ಗೆಳೆಯನಿಗೂ ಇಂಥದೇ ಅನುಭವ ಆಯಿತು. ಅಂವ ಬರೆದ ಸಾಮತಿಯನ್ನ ಸೀರಿಯಸ್ಸಾಗಿ ತೆಗೆದುಕೊಂಡ ಮಹಾಶಯರೊಬ್ಬರು ’ನನ್ನ ಕತೆ ಯಾಕೆ ಬರೆದೆ? ನಾನೇನೂ ಅಂಥವ ಅಲ್ಲ’... Continue Reading →

Create a free website or blog at WordPress.com.

Up ↑