ಶ್ರಾವಂತಿ v/s ವಿಜಯ್ ಅರಸ್

ಅವನ ಹರವಾದ ಎದೆ ಮೇಲಿನ ಒಂದು ಬೆಳ್ಳಿಕೂದಲು ಗಾಳಿಗೆ ತೊನೆದಾಡ್ತಿದೆ. ಸೆಖೆಗೋ ಷೋಕಿಗೋ ಮೇಲಿನ ಮೂರು ಬಟನ್‌ಗಳನ್ನು ತೆಗೆದುಕೊಂಡಿದ್ದ. ಮಾಸಲು ನೀಲಿ ಜೀನ್ಸ್, ಅದರ ಮೇಲೆ ಕಪ್ಪು ಇಂಕಿನಿಂದ ಬಿಡಿಸಿದ ಚಿತ್ರಗಳು ಅವನ ಮನಸ್ಥಿತಿಯ ಬಿಂಬದಂತಿವೆ. ಪದೇ ಪದೇ ಜೇಬಿನಿಂದ ಕರ್ಚಿಫ್‌ ತೆಗೆದು ಬೆವರಿಲ್ಲದಿದ್ದರೂ ಕುತ್ತಿಗೆಯನ್ನ ಒರೆಸಿಕೊಳ್ತಾ ಅವನು ಚಡಪಡಿಸ್ತಿದ್ದ. ಹತ್ತು ನಿಮಿಷದಿಂದ ನಿಂತುಕೊಂಡು ಕಾದರೂ ಅವಳು ಬರದೆ ಇದ್ದುದು ಬೇಸರ ತರಿಸಿ ಅವನು ಉಚ್ಚೆ ಹುಯ್ದು ಬಂದ. ಆವಾಗ ಅವನಿಗೆ ತಾನು ಯಾವಾಗಲೂ ’ಬ್ಲಡಿ ಬಗ್ಗರ್ಸ್‌’... Continue Reading →

ಹೆಣ್ಣಿನ ಲೈಂಗಿಕ ಸ್ವಾತಂತ್ರ‍್ಯ ಹರಣ ಮಾಡಿದ್ದು ’ಕಾಮ ಸೂತ್ರ’ವಾ?

ಮದುವೆಯಾಗಿ ಸುಖವಾಗಿರುವ ಎಲ್ಲರನ್ನು ನಾನು ಗೌರವಿಸುತ್ತ, ಪ್ರೀತಿಯಿಂದ ಹಾರೈಸುತ್ತಲೇ; ಈ ವ್ಯವಸ್ಥೆಯನ್ನು ಮುಂದಿಟ್ಟುಕೊಂಡು ಹಿಂದೊಮ್ಮೆ ಪುರುಷ ಸಮೂಹ ಹೆಣ್ಣಿನ ಸ್ವಾತಂತ್ರ‍್ಯ ಹರಣಕ್ಕೆ ಮುಂದಾಗಿದ್ದು ಹೇಗೆ? ಅದರ ಪರಿಣಾಮ ಈಗೇನಾಗಿದೆ ಎಂದು ನನಗೆ ನಾನೆ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದೇನೆ. ನನ್ನ ಕಲಿಕೆಯ ತುಣುಕುಗಳು ಇಲ್ಲಿವೆ...

ನಡೆಯುತ್ತಲೇ ನಿಂತವರು, ನಿಂತೂ ನಡೆವವರು….

ನದಿ ಹರೀತಿದೀನಿ ಅಂದುಕೊಳ್ಳತ್ತೆ ಉಹು... ಅದು, ಉಗಮ - ಅಂತಗಳ ನಡುವೆ ನಿಂತಿದೆ. ನಾವು ಬಾಳುವೆ ನಡೆಸ್ತಿದೀವಿ ಅಂದುಕೊಳ್ತೀವಿ. ತಾವೋ ಹೇಳುತ್ತೆ, 'ಬಾಳು ಅದರ ಪಾಡಿಗೆ ನಡೆಯುತ್ತೆ. ಅಸ್ತಿತ್ವ ಅದರ ಕಾಳಜಿ ವಹಿಸತ್ತೆ.' ಬಾಳು, ಹುಟ್ಟು - ಸಾವುಗಳ ನಡುವೆ ನಿಂತಿದೆ. ನಾವು ನಡೆದರೂನು ನಿಂತರೂನು ಅದು ಶತಸ್ಸಿದ್ಧವೇ. ~ ಅಹಂಕಾರ ಇರೋವನಿಗೆ ಸಮುದ್ರದಲ್ಲಿ ಅಲೆಗಳ ವಿರುದ್ಧ ಈಜೋ ಆಸೆ. ಹರಿವಿನೊಳಗೆ ಒಂದಾಗಿ ಹರಿದರೆ ಹಮ್ಮಿಗೆ ತೃಪ್ತಿ ಎಲ್ಲಿ? ಮರದ ಕುಂಟೆ ಹರಿವಿಗೆ ತನ್ನ ಕೊಟ್ಟುಕೊಂಡು, ಅದು... Continue Reading →

ನಿಂತರೆ ಮಾತ್ರ ನಡೆಯಲು ಸಾಧ್ಯ ~ ತಾವೋ

ಇಲ್ಲ. ಎಲ್ಲವನ್ನೂ ಮೇಲಿಂದ ಮೇಲೆ ಅನುಸರಿಸಿ ನೋಡಿಯಾಗಿದೆ. ಯಾವ್ದೂ ಸಮಾಧಾನ ಕೊಡ್ತಾ ಇಲ್ಲ. ವಿಪಸ್ಸನ ಕ್ಲಾಸು, ವೀಕೆಂಡ್ ಮೆಡಿಟೇಶನ್ನು, ಸಂಕೀರ್ತನ ಪಾರ್ಟಿ... ಉಹು... ಯಾವ್ದಕ್ಕೂ ಅರ್ಥವೇ ಇಲ್ಲ. ಏನು ಮಾಡೋದು? ಎಡವೋದು ಇಲ್ಲೇನೆ. ಏನಾದರೂ ಯಾಕೆ ಮಾಡಬೇಕು? ಸುಮ್ಮನೆ ಇರಲು ಸಾಧ್ಯವಾದರೆ ಅಷ್ಟೇ ಸಾಕು. ಅನ್ನುತ್ತೆ ತಾವೋ. ದಿನವೆಲ್ಲ ದಾಪುಗಾಲು ಹಾಕ್ಕೊಂಡು ನಡೀತಾ ಇದ್ದರೆ ಬೇಗ ರಾತ್ರಿಯಾಗಿಬಿಡ್ತದೇನು? ಅನ್ನುತ್ತಾನೆ ಗೆಳೆಯ. ಹಾಗಂತ ಸಾಪೇಕ್ಷ ಸಿದ್ಧಾಂತ ಮರೆಯುವ ಹಾಗಿಲ್ಲ. ನಡಿಗಯಲ್ಲಿ ಸವೆದ ಹೊತ್ತೆಲ್ಲ ರಾತ್ರಿಯನ್ನ ಬೇಗ ಹತ್ತಿರ ತಂದಂಥ... Continue Reading →

ತಾವೋ… ದಾರಿಯಲ್ಲದ ದಾರಿ

ಸುಮಾರು ಒಂದು ವರ್ಷ ಆಗಿರಬಹುದು. ತಾವೋ ಕಾಡಲು ಶುರುವಿಟ್ಟು. ಸುಮ್ಮನಿರುವ ಸುಮ್ಮಾನ ಮತ್ತು ತಾವೋ ತೆ ಚಿಂಗ್ ಓದಿ, ನೆಟ್ಟಾಡಿಸಿ ಕೂಡ ತಣಿಯದೆ ಉಳಿದಾಗ ಸಿಕ್ಕಿದ್ದು ಓಶೋ. ದಾರಿಯಲ್ಲದ ಈ ದಾರಿಯ ಚಹರೆ ಬಗ್ಗೆ ಕೇಳೋದೇ ಒಂದು ಚೆಂದ. ನಮ್ಮ ಪಾಲಿಗೆ ಅಧ್ಯಾತ್ಮ ಗಂಭೀರವಾಗಿಯೂ ಕಠಿಣವಾಗಿಯೂ ಸುಲಭಕ್ಕೆ ಅನುಸರಿಸಲು ಬರದೆ ಇರುವಂಥದ್ದೂ ಸಾಮಯಿಕ ಸಂಪ್ರದಾಯಗಳಿಂದ ಕೂಡಿದ್ದೂ ಆಗಿರಬೇಕು. ಆಗ ಮಾತ್ರ ಅದಕ್ಕೊಂದು ಘನತೆ. ಆದರೆ ತಾವೋ ಹುಲ್ಲಿಗಿಂತ ಹಗುರ. ಮರದಿಂದ ತೊಟ್ಟು ಕಳಚಿ ಗಾಳಿಯೊಟ್ಟಿಗೆ ಅಲೆಅಲೆಯಾಗಿ ತೇಲುತ್ತಾ... Continue Reading →

ನಾನೂ ಸೈತಾನನ ಮಗಳೇನೆ!

ಚೆಂದದ ಫೋಟೋಗಳನ್ನೆ ಹೆಕ್ಕಿ ಫೇಸ್ ಬುಕ್ಕಿಗೆ ಹಾಕುವಾಗ ಗಲ್ಲದ ಮೇಲಿನ ಪಿಂಪಲ್ ಅಣಕಿಸುತ್ತ ಇರುತ್ತದೆ. ಡಿಸೆಂಬರಿನ ತುಟಿಯ ಬಿರುಕಲ್ಲಿ (ಎಲಾ ನಿನ್ನ ಅನ್ನುವಂಥ) ಮುಗುಳು ನಗು ತುಂಬಿಕೊಳ್ಳುತ್ತದೆ. ಈ ಚಳಿಗೆ ಮೈಕೊರೆಯುವಾಗ ಯೋಚನೆ. ಅವಳು ಬೆನ್ನಿಗೆ ಹಾಕಿದ ಚೂರಿ ಫ್ರೀಜರಿನಲ್ಲಿಟ್ಟು ತೆಗೆದ ಐಸ್ ಕ್ಯೂಬಾ? ಕೊರಳ ತಿರುವಲ್ಲಿ ಸದಾ ಅವನ ಹೂಮುತ್ತಿರುವ ಈ ದಿನಗಳಲ್ಲಿ ಕೊರಗಲೊಂದು ನೆವ ಬೇಕು. ಅವಳ ದ್ರೋಹಕ್ಕೆ ಋಣಿ. ಒಂದಲ್ಲ ಒಂದು ಬೇಸರಕ್ಕೆ ಜೋತುಕೊಳ್ಳಲು ಎಷ್ಟೊಂದು ಹಲಬುತ್ತೀವಿ! ಉತ್ಕಟವಾಗಿ ಬದುಕೋದಿಕ್ಕೆ ಪ್ರೀತಿ ಹೇಗೆ... Continue Reading →

ಖಾಲಿಯಲ್ಲಿ ಕಲಿತ ಬದುಕು

ಈ ಬರಹದ ಹಿಂದಿನದು, ಮುಂದಿನದು, ನಡೂ ಮಧ್ಯದ್ದೆಲ್ಲ ಇಲ್ಲಿದೆ, ಕ್ಲಿಕ್ಕಿಸಿ... ಬಾಗಿಲೂ ಗೋಡೆ ಹಾಗಿರುವ ಕಟ್ಟಡದೊಳಗೆ ಕುಂತ ನನಗೆ ಮಳೆ ಬಂದ ವಿಷಯ ಗೊತ್ತಾಗಿದ್ದು ಘಮದಿಂದಲಷ್ಟೆ. ಸಿಗರೇಟಿಗೆ ಹೋದವ ಕಾಮನ ಬಿಲ್ಲು ಕ್ಲಿಕ್ಕಿಸಿ ತಂದಿದಾನೆ, ನನಗಾಗಿ. ಬ್ಲೂಟೂತಲ್ಲಿ ಮೂರುಕ್ಷಣ, ಏಳು ಬಣ್ಣದ ಕಮಾನು ನನ್ನ ಮೊಬೈಲಿನೊಳಗೆ. ಆ ಎಲ್ಲ ಬಣ್ಣಗಳು ಕಣ್ಣೊಳಗೆ ಗೂಡು ಕಟ್ಟಿ ನಾನು ಕೆಂಪುಕೆಂಪು. ~ ಕನ್ನಡಿ ಬೆನ್ನಿಗೆ ಪಾದರಸವೋ ಮತ್ತೊಂದೋ. ಅದನ್ನ ಗೀಚಿ ಹಾಕಿದರಾಯ್ತು, ಆಚೆಗಿನದು ಕಾಣ್ತದೆ. ಈ ತನಕ ಅಲ್ಲಿ ಮೂಡಿರುವ... Continue Reading →

ಕನಸಿನ ಹಾವಿಗೆ ಅವನ ಕಣ್ಣು!

ಒಂದು ಸೋಮಾರಿ ಸಂಜೆಯ ಬೋರುಬೋರು ಸೆಖೆ. ಫ್ಯಾನಿನ ತಣ್ಣನೆ ಗಾಳಿಗೆ ಬೆವರಿನ ಮೈ ಆರಿ ಒಂಥರಾ ಅಂಟು. ಮಗ್ಗಲು ಬದಲಿಸಿದರೆ, ಹರಡಿಟ್ಟ ಪುಸ್ತಕ ರಾಶಿ. ಹುಡುಕುತ್ತಿದ್ದುದೊಂದು ಬಿಟ್ಟು ಮಿಕ್ಕೆಲ್ಲಾ ಸಿಗುತ್ತಿದೆ. ಅಂದರೆ, ಕಳೆದ ವಾರ ಬೇಕಿದ್ದುದು, ಹೋದ ತಿಂಗಳು ಕಳೆದಿದ್ದು, ಇತ್ಯಾದಿ. ವಾರ್ಡ್ರೋಬ್ ಕೆದರುತ್ತಲೇ ಅದು ಸಿಗದೆನ್ನುವ ಆತಂಕಕ್ಕೆ ನಿದ್ದೆ. ನುಣುಚಿಕೊಳ್ಳಲು ಬಹಳಷ್ಟು ದಾರಿ. ಪ್ರಯತ್ನವನ್ನ ಎಷ್ಟು ಹೊತ್ತು ಮುಂದಕ್ಕೆ ಹಾಕಿರ್ತೇವೋ ಅಷ್ಟು ಹೊತ್ತು ವೈಫಲ್ಯದ ಬೇಸರವೂ ಮುಂದಕ್ಕೆ. ಎಂಥ ಒಳ್ಳೆ ಉಪಾಯ! ಪುಸ್ತಕ ಗುಡ್ಡೆಯ ನಡುವೆ,... Continue Reading →

ತುಂಬುತ್ತಿರುವ ಖಾಲಿ ಮತ್ತು ಖಾಲಿಯಾಗ್ತಿರುವ ನಾನು……

ಪೂರ್ತಿ ಬರಹ ಇಲ್ಲಿದೆ ಯಾವ ಹೊತ್ತಿಗಾದರೂ ಅನಂತತೆಯ ಕೊಳಕ್ಕೆ ಜಿಗಿಯಲಿರುವ ಝೆನ್ ಕಪ್ಪೆಯಂತೆ ಅವನು ನಿಶ್ಚಲ ಕುಳಿತಿರುತ್ತಾನೆ. ಅವನು ಇಲ್ಲದಾಗ, ಕಪ್ಪೆ ಹೊಕ್ಕ ಕೊಳದಂತೆ ಅಲ್ಲೆಲ್ಲ ಅವನಿರುವಿನ ಕಂಪನ. ~ ಅಲ್ಲೊಂದು ಕಿಟಕಿಯಿದೆ. ಕುರ್ಚಿಯ ಮೂಲೆಗೆ ಪೂರಾ ವಿರುದ್ಧ ದಿಕ್ಕಿನಲ್ಲಿ. ನನ್ನ ನೋಟ ಸದಾ ನೆಡುವ ಮತ್ತೊಂದು ಮಗ್ಗುಲಲ್ಲಿ. ಯಾವುದೋ ಕಥೆಯಲ್ಲಿ ಓದಿದ್ದಂತೆ ಅದೊಂದು ಖಾಯಂ ಕ್ಯಾನ್ವಾಸ್. ಅದರೊಳಗೆ ಆಗಾಗ ಹಣಕಿ ಚಿತ್ರವಾಗುವ ಅಳಿಲುಗಳನ್ನ ನೋಡೋಕೆ ಚೆಂದ. ಹಾಗೇ ಅದರಾಚೆಗಿನ ಪುರಾತನ ಗೋಡೆ, ಜಾಲರಿಯ ಗವಾಕ್ಷಿ, ಅಪರೂಪಕ್ಕೆ... Continue Reading →

ಕಾಫಿ ಆರುವ ತನಕ…..

ಪೂರ್ತಿ ಬರಹ ಈ ಲಿಂಕಿನಲ್ಲಿದೆ ಅದು, ಸುಖ ಸೂರೆ ಹೋದುದರ ಸಂಕೇತವಾ? ಹಾಲು ಉಕ್ಕಿದ್ದಕ್ಕೆ ಖುಷಿ ಪಡಬೇಕಾ, ದುಃಖವಾ? ಅದು ಸಿನೆಮಾದ ಮುಂದಿನ ಕಥೆಯಲ್ಲಿ ನಿರ್ಧಾರವಾಗ್ತದೆ. ಬಹುತೇಕ ಅಲ್ಲೆಲ್ಲ ಹೀರೋಯಿನ್ನು ಆಮೇಲೆ ಅಳುತ್ತಾಳೆ. ಎಂಥ ಕೆಟ್ಟ ಫಾರ್ಮುಲಾ! ~ ಅಮ್ಮನ ಗೊಣಗಾಟದಲ್ಲಿ ಇಷ್ಟೂ ಕಥೆ ಕೇಳಿ ತಿಳೀತಿದ್ದ ನಾನು ಅಂದುಕೊಳ್ತಿದ್ದೆ. ‘ಈ ಹುಂಜನ್ನ ಯಾರಾದ್ರೂ ತಿಂದು ಹಾಕಬಾರದಾ ಅತ್ಲಾಗಿ?’ ಸ್ವಲ್ಪ ದೊಡ್ಡಕಾದ ಮೇಲೆ ಅಮ್ಮಂಗೆ ಹೇಳಿದ್ದೆ, ‘ಹೀಗೆ ನನ್ನ ನಿದ್ದೆ ಕೆಡಿಸೋ ಬದಲು ನೀವೇ ಕಾಫಿ ಕಾಸ್ಕೊಂಡು... Continue Reading →

Blog at WordPress.com.

Up ↑