ಒಂದು ಸಾಫರ್‌ಜಾದೆ ಕವಿತೆ

ಸಾಫರ್‌ಜಾದೆ ಇರಾನಿ ಕವಯತ್ರಿ. ನೆಟ್ಟಲ್ಲಿ ಜಾಲಾಡುವಾಗ ಸಿಕ್ಕವಳು. ಈಕೆಯ ಕವಿತೆಗಳನ್ನೋದುವಾಗೆಲ್ಲ, ಮತ್ತೆ  ಬಹಳಷ್ಟು ದೇಶಗಳ- ಭಾಷೆಗಳ ಹೆಣ್ಣುಗಳನ್ನೋದುವಾಗೆಲ್ಲ, ಅರೆ! ನಮ್ಮ ಹಾಗೇನೇ... ಇವರೂ ನಮ್ಮಂತೇನೇ... ಅನ್ನಿಸಿ ಸಂಭ್ರಮ ಮತ್ತು ವಿಷಾದ. ಗೆಳೆಯನೊಬ್ಬನಿಗೆ ಈ ಸಾಮ್ಯತೆಯನ್ನು ಹೇಳಿದಾಗ ‘ನಾನ್‌ಸೆನ್ಸ್’ ಅಂದುಬಿಟ್ಟ. ಪರವಾಗಿಲ್ಲ. ಸಾಫರ್‌ಜಾದೆಯನ್ನ ಕನ್ನಡಕ್ಕೆ ತಂದುಕೊಂಡು ಸುಮ್ಮನಿದ್ದೆ. ಅವುಗಳಲ್ಲಿ ಕೆಲವು ಇಲ್ಲಿ ಕಂಡರೂ ಕಾಣಿಸಬಹುದು. ಸಾಮ್ಯತೆ, ನಿಮಗೇ ಗೊತ್ತಾಗುವುದು. ಮೊದಲ ಮಿಡಿತದ ಜಾಗದಲ್ಲಿ... ನನ್ನ ಹುಟ್ಟುನೆಲವನ್ನ ನೋಡಿಲ್ಲ. ಅವಳೆಲ್ಲ ಒಳಗುದಿಗಳ ಸಹಿತ ಅಮ್ಮನ್ನ ಇರಿಸಲಾಗಿತ್ತಲ್ಲ, ಆ ಮನೆಯನ್ನ. ಅಲ್ಲಿನ್ನೂ... Continue Reading →

ಸೃಜನ್ ಅನುವಾದಿಸಿದ ಜಯಪ್ರಭಾ ಕವಿತೆ, ನನ್ನದೆರಡು ಮಾತು…

ಮೊನ್ನೆವರೆಗೂ ಸೃಜನ್ ಚೆಂದದ ಚಿತ್ರಗಳನ್ನು ಬರೆಯುತ್ತಾರೆ, ಸೊಗಸಾದ ವಿನ್ಯಾಸ ಮಾಡುತ್ತಾರೆ ಎಂದಷ್ಟೆ ಗೊತ್ತಿದ್ದ ನನಗೆ, ಅವರು ಕಥೆಯನ್ನೂ ಕವನವನ್ನೂ ಬರೆಯುವುದಲ್ಲದೆ ಒಳ್ಳೆಯ ಅನುವಾದವನ್ನೂ ಮಾಡುತ್ತಾರೆಂದು ತಿಳಿಯಿತು. ನಮ್ಮ ವಾರಗೆಯ ಬರಹಗಾರರ ಬಗ್ಗೆ ಇರುವ ಅಜ್ಞಾನಕ್ಕೆ ನಾಚಿಕೆಯಾಗುವುದರ ಜೊತೆಗೇ ಓದಿನ ಕೊರತೆ ಮುಖಕ್ಕೆ ಹೊಡೆದಂತಾಯ್ತು! ಈ ಜ್ಞಾನೋದಯವಾಗಿದ್ದು, ಸೃಜನ್ ಅವರ ‘ಯಶೋಧರೆ, ಈ ವ್ಯಥೆಯೇತಕೆ?’ ಎಂಬ ಅನುವಾದಿತ ಕವಿತೆಯನ್ನೋದಿದಾಗ. ಈ ಕವಿತೆಯ ಮೂಲ ತೆಲುಗಿನದು. ಅಲ್ಲಿನ ಸ್ತ್ರೀ ಸಂವೇದನೆಯ ಕವಯತ್ರಿ ಡಾ.ಜಯಪ್ರಭಾ ಅವರ ಅದೇ ಹೆಸರಿನ ಕವನ ಸಂಕಲನದ... Continue Reading →

ಕೊನೆಗೂ ಸಿದ್ದಣ್ಣನ ಪುಸ್ತಕ ರೆಡಿಯಾಗ್ತಿದೆ!!

ಹಾಗೆ ನೋಡಿದರೆ, ಸಿದ್ದು ದೇವರ ಮನಿ ಎಂಬ ಯುವ ಕವಿಯ ಕವನ ಸಂಕಲನ ಯಾವತ್ತೋ ಪುಸ್ತಕವಾಗಿ ಹೊರಬರಬೇಕಿತ್ತು. ಆದರೆ, ಚೆಂದ ಚೆಂದದ ಕವಿತೆಗಳನ್ನು ಬರೆದೂ ಗೆಳೆಯರು ‘ಚೆನ್ನಾಗಿದೆ’ ಅಂದಾಗ ಸ್ವತಃ ‘ಹೌದಾ’ ಅನ್ನುತ್ತ ಬೆರಗಿಗೆ ಒಳಗಾಗುವ ಸಂಕೋಚದ ಹುಡುಗ ಸಿದ್ದು, ಹಾಗೆ ತನ್ನಿಂದ ತಾನೆ ಪುಸ್ತಕ ಹೊರಡಿಸುವುದು ಅಸಾಧ್ಯದ ಮಾತಾಗಿತ್ತು. ಕನ್ನಡ ಪುಸ್ತಕ ಪ್ರಾಧಿಕಾರ ಪ್ರತಿ ವರ್ಷ ಆಯ್ದ ಯುವ ಕವಿಗಳ ಚೊಚ್ಚಲ ಕೃತಿ ಪ್ರಕಟಣೆಗೆ ನೀಡುವ ‘ಪ್ರೋತ್ಸಾಹ ಧನ ಪ್ರಶಸ್ತಿ’ಗೆ ಸಿದ್ದುವಿನ ಕವನ ಸಂಕಲನ ಆಯ್ಕೆಯಾಗಿದೆ.... Continue Reading →

ದುಃಖಿಸಲಿಕ್ಕೆ ಇಡಿ ರಾತ್ರಿ ಬಾಕಿ ಇದೆ…

ದುಃಖಿಸಲಿಕ್ಕೆ ಇಡಿ ರಾತ್ರಿ ಬಾಕಿ ಇದೆ ಈ ಬೆಳಗನ್ನ ಬಲಿಕೊಡಲೇಕೆ ನಾನು? ಎಷ್ಟೊಂದು ಕೆಲಸವಿದೆ, ಕಳೆದ ಫೈಲು ಹುಡುಕಬೇಕು ನನ್ನ ಜಾಯಮಾನ ಗೊತ್ತಲ್ಲ? ಕಳಕೊಳ್ಳುತ್ತಲೇ ಇರುವುದು… ನಿನ್ನನೆಲ್ಲಿ ಹುಡುಕಲಿ ಹೇಳು? ನಿನ್ನ ಮುಖದವನೇ ಇದ್ದಾನೆ ಹೀಗೊಬ್ಬ, ಅದೆ ಮಾತು, ಅದೆ ನಗು ಅದೆ ಅದೇ ದೇಹ. ಅದರೊಳಗೆ ನೀನಿದ್ದೆ, ಎಲ್ಲಿ ಹೋದೆ!? ಕಾಲಮೇಲೆ ನಿಲ್ಲುವ ತವಕಕ್ಕೆ, ಕಾಲು ಸೋತು ಹೋಗಿದೆ ನನ್ನ ಹೊಕ್ಕುಕ್ಕಿಸುತ್ತಿದ್ದ ಪ್ರೀತಿ ಸೊರಗಿ ಸೋಲಿಸುತಿದೆ ಯಾಕೆ? ದಣಿದು ಬಂದ ಪ್ರತಿ ಸಂಜೆ ತಪ್ಪದೆ ನಡೆಯುವ... Continue Reading →

ಇಲ್ಲಿ ಸವಾಲ್ ಜವಾಬ್ ನಡೆದಿದೆ…

ಇಲ್ಲಿ ಕವಿತೆಗಳ ಸವಾಲ್ ಜವಾಬ್ ನಡೆದಿದೆ! ಆನಂದ್ ಋಗ್ವೇದಿ ಅವರ ‘ನಿನ್ನ ನೆನಪಿಗೊಂದು ನವಿಲುಗರಿ ಸಾಕು’ ಕವಿತೆಗೆ ಉತ್ತರವೆಂಬಂತೆ ಶಿಶಿರ ಅವರ ‘ಶಾಸ್ತ್ರ’ ಕವಿತೆಯಿದೆ. ಅದಕ್ಕೆ ಸಂವಾದಿಯಾಗಿದೆ, ಪೂರ್ಣಾ ಅವರ ‘ಮೋಸವಾಯಿತೇನೆ ರಾಧೆ!?’ ಕವಿತೆ. ಕನ್ನಡ ಬ್ಲಾಗ್ದಾಣದಲ್ಲಿ ಇದೊಂಥರಾ ಹೊಸ ಪ್ರಯೋಗ. ಆಸಕ್ತಿಯಿದ್ದವರು ಇಲ್ಲೊಮ್ಮೆ ಭೇಟಿಕೊಡಿ. ನಲ್ಮೆ, ಚೇತನಾ ತೀರ್ಥಹಳ್ಳಿ

ಹೀಗೇ ಮೂರು, ವೇದದ ಚೂರು

ಏಕೋಹಮ್ ಬಹುಷ್ಯಾಮ... ಅಲ್ಲಿ ಏನೂ ಇರಲಿಲ್ಲ. ಇರಲಿಲ್ಲವೆಂದರೆ, ಇತ್ತು...  ಹಾಗೆ ‘ಇದೆ’ ಎನ್ನಲು ಮತ್ತೊಂದು ಜೊತೆಗಿರಲಿಲ್ಲ. ಹಾಗೆ ಇದ್ದದ್ದು ಅಗಾಧವಾಗಿತ್ತು. ಏನಿದ್ದರೇನು? ಒಂಟೊಂಟಿಗೆ ಬೆಲೆಯಿಲ್ಲವೆನ್ನುವುದು ಅದಕ್ಕೆ ಗೊತ್ತಾಯ್ತು. ತಿಳಿವಿಗೆ ಬಿರಿದು ಚೂರಾಯ್ತು. ಪ್ರತಿ ಚೂರಲ್ಲೂ ತಾನೇ ತಾನಾಗಿ ತಾನೇ ತಾನಾಗಿ ತಾನೇ ತಾನಾಗಿ... ಚೂರಿನ ಚೂರಿನ ಚೂರಿನ.... ಚೂರು ತನ್ನನ್ನೇ ತಾನು ಮರೆತು, ಜಗತ್ತು, ಜೀವದಿಂದ ತುಂಬಿಕೊಂಡಿತು. ~ ತತ್ ತ್ವಮ್ ಅಸಿ ಬಣ್ಣವಿಲ್ಲ, ರುಚಿಯಿಲ್ಲ, ಆಕಾರವಿಲ್ಲ. ತ್ರೀ ರೋಸಸ್ ಜಾಹೀರಾತಿನ ಸ್ಲೋಗನ್ ಇದಲ್ಲ. ಯಾಕಂದರೆ, ಅದೇನಿಲ್ಲದಿದ್ದರೂ... Continue Reading →

Create a free website or blog at WordPress.com.

Up ↑