ಇರಾನಿನಲ್ಲಿ ಹೀಗೆ….

ಇರಾನ್ ಅಂದರೆ ತಣ್ಣತಣ್ಣನೆಯ ಮಜೀದಿ, ಮಖ್ಮಲ್‌ಬಫ್ ಸಿನೆಮಾಗಳು ಅನಿಸುತ್ತಿತ್ತು. ಕೆಲವು ವರ್ಷಗಳ ಕೆಳಗೆ ಅಹ್ಮದಿನೆಜಾದ್, ನ್ಯೂಕ್ಲಿಯಾರ್ಕಾರ್ಯಾಚರಣೆಗಳು ನೆನಪಾಗ್ತಿದ್ದವು. ಅದಕ್ಕೂ ಮುಂಚೆ ಇರಾನ್ ಜೊತೆ ಇರಾಕಿನ ನೆನಪಾಗಿ ಸದ್ದಾಮನೇ ಭೂತಾಕಾರವಾಗಿ ನಿಂತುಬಿಡ್ತಿದ್ದ. ಇವತ್ತು ಎಲ್ಲವನ್ನೂಮೀರಿ ಇರಾನ್ ಅಂದರೆ ಬೆಚ್ಚಿಬೀಳುವ ಹಾಗೆ ಆಗಿದೆ. ಕಣ್ಣಿಗೆ ಕಣ್ಣು, ಕೈಗೆ ಕೈ ಥರದ ಶಿಕ್ಷೆ ಕೇಳಿ ಗೊತ್ತಿತ್ತು. ಕಲ್ಲು ಹೊಡೆದು ಕೊಲ್ಲುವ ಕಥೆ ಜಮಾನಾದ್ದುಅಂದುಕೊಂಡಿದ್ದೆ. ಅದು ಈಗಲೂ ನಮ್ಮ ನಡುವೆ ಇದೆ ಅಂದರೆ….

ಇರಾನಿನ ಆಕೆಯ ಹೆಸರು ಸಕೀನೇ ಅಶ್ತಿಯಾನಿ. ಅನೈತಿಕ ಸಂಬಂಧ ಹೊಂದಿದ್ದ ಆಕೆಯ ಗಂಡನ ಕೊಲೆಯಾಗಿತ್ತು. 2006ರಲ್ಲಿ ಅವಳಿಗೆ 17ವಯಸ್ಸಿನ ಮಗನಎದುರೇ 99 ಛಡಿಯೇಟುಗಳ ಶಿಕ್ಷೆ ನೀಡಲಾಯ್ತು. ಗಂಡನ ಕೊಲೆಯಲ್ಲಿ ಅವಳ ಪಾತ್ರವಿಲ್ಲವೆಂದು ಸಾಬೀತಾದರೂ ಅವಳಿಗೆ ಮಾತ್ರ ಮುಕ್ತಿ ಸಿಗಲಿಲ್ಲ. ಈಗ, ಅವಳನ್ನುಕಲ್ಲು ಹೊಡೆದು ಸಾಯಿಸುವಆದೇಶ ನೀಡಲಾಗಿದೆ! ಇದನ್ನ ಯಾರೋ ಅಲ್ಲಿನ ಮೂಲಭೂತವಾದಿಗಳು ಇಪ್ಪತ್ತು ಜನ ಸೇರಿ ನಿರ್ಧರಿಸಿ ಆದೇಶ ಹೊರಡಿಸಿರೋದಲ್ಲ.ಯಾವುದೇ ಸಮುದಾಯ ಅಥವಾ ಸಂಘಟನೆಯ ಮನ್‌ಮಾನಿಯಲ್ಲ. ಸಾಂವಿಧಾನಿಕವಾಗಿಯೇ ಅದನ್ನು ಘೋಷಿಸಲಾಗಿದೆ!!

ಇರಾನಿನಲ್ಲಿ ಹೀಗೆ ಕಲ್ಲು ಹೊಡೆದು ಕೊಲ್ಲೋದು ಹೊಸತೇನಲ್ಲವಂತೆ. ನಾನು ಥರದ್ದನ್ನಕೈಟ್ ರನ್ನರ್ನಲ್ಲಿ ನೋಡಿದ್ದೆ ಮತ್ತು ಈಗ ಇಂತಹ ಪೈಶಾಚಿಕಕೃತ್ಯಗಳು ಕಾನೂನಾತ್ಮಕವಾಗಿ ರಾಜಾರೋಷವಾಗಿಯಂತೂ ನಡೆಯೋದಿಲ್ಲ ಅಂದುಕೊಂಡಿದ್ದೆ. ಉಹುಅಲ್ಲಿ ಬಗ್ಗೆ ಕಾನೂನೇ ಇದೆ.

ಇರಾನಿಯನ್ ಪೀನಲ್ ಕೋಡಿನ 192ನೇ ಆರ್ಟಿಕಲ್, ಕಲ್ಲೇಟಿನ ಶಿಕ್ಷೆಗೆ ಗುರಿಯಾಗುವ ಹೆಂಗಸನ್ನು ಎದೆ ಮಟ್ಟ ಹುಗಿಯಬೇಕೆಂದೂ ಗಂಡಸನ್ನು ಸೊಂಟಮಟ್ಟಹುಗಿಯಬೇಕೆಂದೂ ಹೇಳುತ್ತದೆ. ಗಂಡಸು ಬದುಕುಳಿದರೆ ಸ್ವತಂತ್ರನಾಗಿರುವ ಮತ್ತು ಸಾಹಸಪಟ್ಟರೆ ಓಡಿ ತಪ್ಪಿಸಿಕೊಳ್ಳುವ ಅವಕಾಶ ನೀಡಲಾಗ್ತದೆಯಂತೆ. ಹೆಂಗಸಿಗೆಹಾಗಲ್ಲ. ಎದೆಮಟ್ಟ ಹುಗಿದು, ಎದೆ ಮೇಲೆ, ತಲೆಗೆ ಕಲ್ಲು ಬೀಸುವುದು. ಅದರಲ್ಲಿ ಅವಳು ಸಾಯಲೇಬೇಕು. ಬದುಕುಳಿದರೆ ಸುಖವೇನೂ ಇಲ್ಲ. ಅವಳನ್ನು ಉಳಿದಜೀವನಪರ್ಯಂತ ಸೆರೆಮನೆಗೆ ತಳ್ಳಲಾಗುತ್ತದೆ.

ಆರ್ಟಿಕಲ್ 104 ರ ಪ್ರಕಾರ ಅನೈತಿಕ ಸಂಬಂಧಕ್ಕೆ ಕಲ್ಲೇಟಿನ ಶಿಕ್ಷೆಯಲ್ಲಿ ಬಳಸಬೇಕಾದ ಕಲ್ಲಿನ ಗಾತ್ರದ ಬಗ್ಗೆಯೂ ವಿವರಣೆ ಇದೆ. ಹೀಗೆ ಹೊಡೆಯಲು ಬಳಸುವ ಕಲ್ಲುದೊಡ್ಡದೂ ಇರಬಾರದು, ಸಣ್ಣದೂ ಇರಬಾರದಂತೆ. ದೊಡ್ಡದಿದ್ದು, ಕೆಲವೇ ಏಟಿಗೆ ಸತ್ತುಹೋದರೆ, ಹೊಡೆಯುವ ವಿಕೃತ ಆನಂದ ಸಿಗದೆ ಹೋಗುವುದೆಂದೋ, ಶಿಕ್ಷೆಸಾಲದಾಗುವುದೆಂದೋ ಇದನ್ನು ರೂಪಿಸಲಾಗಿದೆ ಇರಬೇಕು. ಒಟ್ಟಾರೆ, ಹಿಂಸಿಸಿ ಹಿಂಸಿಸಿ ಕೊಲ್ಲುವ ಪೈಶಾಚಿಕತೆ.

ಇದು ಅಶ್ತಿಯಾನಿ ಒಬ್ಬಾಕೆಯ ಕೇಸ್ ಅಲ್ಲ. ಬಾರಿ ಮಗನೇ ಅಮ್ಮನ ಶಿಕ್ಷೆ ಮಾಫ್ ಮಾಡಿಸುವುದಕ್ಕೆ ಒದ್ದಾಡುತ್ತಿದ್ದಾನಾದ್ದರಿಂದ ಮತ್ತು ಆಮ್ನೆಸ್ಟಿಇಂಟರ್‌ನ್ಯಾಶನಲ್ ಬಾರಿ ಪಟ್ಟುಹಿಡಿದು ಶಿಕ್ಷೆ ರದ್ಧತಿಗೆ ಒತ್ತಾಯಪಡಿಸುತ್ತಿರುವುದರಿಂದ ಜಾಗತಿಕ ಚರ್ಚೆಗೆ ಒಳಪಟ್ಟಿದೆಯಷ್ಟೆ. ಆದರೆ ಇರಾನ್ ಇದಕ್ಕೆ ಒಪ್ಪುತ್ತಿಲ್ಲ.ತನ್ನ ದೇಶದ ಆಂತರಿಕ ಸಂಗತಿಗಳಲ್ಲಿ ಮೂಗು ತೂರಿಸಬಾರದೆನ್ನುವ ಧೋರಣೆ ಅದರದು. ಸಖೀನೇ ಕಲ್ಲೇಟಿನಿಂದ ತಪ್ಪಿಸ್ಕೊಳ್ಳಬೇಕೆಂದರೆ ಅಲ್ಲಿನ ಪರಮೋಚ್ಛ ನಾಯಕ ಖೊಮೇನಿಯ ಅಥವಾ ನ್ಯಾಯಾಧ್ಯಕ್ಷ ಲಾರಿಜಾನಿಯ ಒಪ್ಪಿಗೆ ಪತ್ರ ಬೇಕು. ಅದೇನೂ ಸಿಗುವ ಥರದಲ್ಲಿಲ್ಲ.

ಕಾಲದಲ್ಲೂ ಇಂಥಹ ಅಮಾನವೀಯ ಸಂಹಿತೆಗಳು ಆಚರಣೆಯಲ್ಲಿದೆ ಅನ್ನುವುದೇ ಮನುಷ್ಯರಾದವರು ತಲೆತಗ್ಗಿಸುವ ಸಂಗತಿ. ಇದನ್ನಲ್ಲಿ ಬರೆದಿಟ್ಟಮನುಯಾರೋ!?