ಅದ್ಯಾವ ಘಳಿಗೇಲಿ ಬ್ಲಾಗೋದುಗ ಮಹಾಶಯರೊಬ್ಬರು ‘ಆಗು ನೀ ಅನಿಕೇತನ’ ಅಂತ ಹಾರೈಸಿದ್ರೋ, ಕಾಕತಾಳೀಯವೆನ್ನುವ ಹಾಗೆ ಮೇಲಿನ ಮನೆ ಆಂಟಿ ಕೂಡ ಬೆಳಗಾಗೆದ್ದು “ಪೂಜೀಸಾಲೆನ್ನಿಂದ ವರವೇ ಶ್ರೀ ಗವ್ರೀ ನಿನ್ನಯ ಚರಣಗಳಾ… ಓ ನನ್ನ ಚೇತನಾ, ಆಗು ನೀ ಅನಿಕೇತನಾ… ಹೂವ್ವೂ… ಚೆಲುವೆಲ್ಲಾ ನಂದೆಂದಿತೂ…” ಅಂತ ರಿಮಿಕ್ಸ್ ಹಾಡಲು ಶುರುವಿಟ್ಟರು. ದಿನಾಬೆಳಗೂ ಅವರ ಆರ್ಕೆಸ್ಟ್ರ್‍ಆ ಕೇಳೀ ಕೇಳೀ, ಅದಿಲ್ಲದೆ ಊಟ ನಿದ್ದೆ ಸೇರದೆ ಪುಷ್ಪಕವಿಮಾನದ ಕಮಲ್ ಹಾಸನ್ ಸ್ಥಿತಿ ತಲುಪಿದ್ದ ನನಗೆ ಈ … ಅನಿಕೇತನ… ಎಲ್ಲಿಂದ ಬಂದು ಸೇರ್ಕೊಳ್ತು ಅಂತ ಗಾಬರಿಯಾಗಿದ್ದಂತೂ ಹೌದು. ಕಳೆದೆರಡು ವಾರದಿಂದ ಹೊಸಿಲ ಮುಂದೆ ಚಪ್ಪಲಿ ಬಿಡ್ಬೇಡ, ಸಂಜೆ ಒಂದ್ ದೀಪಾನಾದ್ರೂ ಹಚ್ಚು… ಇತ್ಯಾದಿ ವರಾತ ತೆಗೆದಿದ್ದ ಓನರಾಂಟಿ ಇಂಡೈರೆಕ್ಟಾಗಿ “ಎಲೈ ಚೇತನಾ, ಮನೆ ಬಿಟ್ಟು ಹೋಗು… ಮನೆ ಇಲ್ಲದವಳಾಗು” ಅಂತ ಹೇಳ್ತಿದಾರೇನೋ ಅನ್ನುವ ಗುಮಾನಿ ಕೂಡ ಬಂದ್ಬಿಡ್ತು.
ಸರಿ. ಇನ್ ಹೀಗೇ ಸುಮ್ನೆ ಕುಂತ್ರಾಗಲ್ಲ ಅಂದ್ಕೊಂಡು ಮನೆ ಹುಡುಕೋಕೆ ಶುರುವಿಟ್ಟೆ. ಅದಕ್ಕೆ ಸರಿಯಾಗಿ, ಅದೇನೋ ವರ ಮಹಾ ಲಕ್ಷ್ಮಿ ಪೂಜೆ ದಿನ ಸಂಜೆ ನಾನು ಕಸ ಗುಡಿಸಿದೆ ಅನ್ನೋದೊಂದು ಅಂತಾರಾಷ್ಟ್ರೀಯ ಮಟ್ಟದ ಪ್ರಮಾದವಾಗಿ ಸುತ್ತ ನಾಲ್ಕು ಮನೆ ಹೆಂಗಸರು ಜಗಲಿಯಲ್ಲಿ ಕುಂತು ಸುದೀರ್ಘ ಸಮಾಲೋಚನೆ ಮಾಡೋ ಮಟ್ಟಕ್ಕೆ ಬೆಳೆದುಬಿಟ್ಟಿತ್ತು. ಇದ್ಯಾಕೋ ಕೆಲಸ ಕೆಡ್ತಲ್ಲ ಅಂತ ನಾನು ತಲೆ ಕೆಡಿಸ್ಕೊಂಡು ಕುಂತೆ.

ಮನೆ ಹುಡುಕ್ಬೇಕು ಅಂದ್ರೆ ಈ ಬೆಂಗ್ಳೂರಲ್ಲಿ ‘ಕಾರ್ಯವಾಸಿ ಕತ್ತೆ ಕಾಲು’ ಕಟ್ಬೇಕು (ನಾನು ಬ್ರೋಕರ್ ಗಳನ್ನ ಕತ್ತೆ ಅಂದೆ ಅಂತ ಸೀರಿಯಸ್ಸಾಗಿ ಅಂದ್ಕೋಬೇಡಿ ಪ್ಲೀಸ್…) ಅಲ್ವಾ? ನಾನೂ ಕಟ್ದೆ. ಆ ಪುಣ್ಯಾತ್ಮ ಸ್ಲಮ್ಮಿಂದ ಹಿಡಿದು ಕೊಟ್ಟಿಗೆವರೆಗೂ ( ಅಯ್ಯೋ! ಸಾಮಾಜಿಕ ಅಂತೆಲ್ಲ ಸೀರಿಯಸ್ ಕಮೆಂಟ್ಸ್ ಬೇಡ ಪ್ಲೀಸ್!) ನಲವತ್ ಸಾವ್ರ ಅಡ್ವಾನ್ಸ್, ಮೂರೂ ವರೆ ಬಾಡ್ಗೆ ಅಂತ ಹಲ್ಕಿರೀತ ಓಡಾಡಿಸ್ದ.
ಇನ್ನಿವನ ಸಾವಾಸ ಬೇಡ ಅಂತ ಡಿಸೈಡ್ ಮಾಡ್ಕೊಂಡು ‘ಟು ಲೆಟ್’ ಬೋರ್ಡ್ ಇದ್ದ ಮನೆಗಳ್ಗೆ ಎಡತಾಕತೊಡಗಿದೆ. ಒಂದ್ ವಮ್ಮ ಎಷ್ಟ್ ಜನ ಇರ್ತೀರಿ? ಅಂತು. ‘ಒಬ್ಳೇ’ ಅಂದಿದ್ಕೆ, ಬ್ಯಾಚುಲರ್ರಾ? ಒಂಟಿ ಹೆಣ್ಮಕ್ಳಿಗೆ ಮನೆ ಕೊಡಲ್ಲ ಅಂತ ಓಡಿಸಿಬಿಡ್ತು. ಮತ್ತೊಂದ್ಕಡೆ ‘ನಂಗೆ ಮದ್ವೆ ಆಗಿದೆ, ವರ್ಷಕ್ಕೊಮ್ಮೆ ಮಗು ಬರಬಹುದು, ಆಗೀಗ ಅಣ್ಣ ತಮ್ಮಂದಿರು ಬರ್ತಿರ್ತಾರೆ ಅಂತೆಲ್ಲ ಪ್ರವರ ಒಪ್ಪಿಸ್ದೆ. ಆ ಪುಣ್ಯಾತ್ಗಿತ್ತಿ, ‘ಮದ್ವೆ ಆಗಿ ಎಷ್ಟ್ ವರ್ಷ ಆಯ್ತು? ಒಬ್ಳೇ ಯಾಕಿದಿ? ಬರೋರು ಅಣ್ಣಾ ತಮ್ಮಾನೇ ಆಗಿರ್ತಾರೆ ಅಂತ ಏನ್ ಗ್ಯಾರೆಂಟಿ?’ ಅಂತೆಲ್ಲ ರೇಜಿಗೆ ಹುಟ್ಟಿಸಿಬಿಡ್ತು. ಅವತ್ಯಾಕೋ ಸಹಿಸ್ಲಿಕ್ಕೇ ಆಗ್ಲಿಲ್ಲ ನನ್ ಕೈಲಿ. ನಿಂತಲ್ಲೇ ಒಳಗಿಂದ ಅಳು ಒತ್ತರಿಸ್ಕೊಂಡು ಬರೋದೊಂದು ಬಾಕಿ.
ಒಂಟಿ ಹೆಣ್ಣುಮಕ್ಕಳಿಗೆ ಸಮಾಜ ಅದೆಷ್ಟು ಗೌರವ ಕೊಡತ್ತೆ ನೋಡಿ! ಇಷ್ಟ್ ದಿನ ಯಾರಾದ್ರೂ ಹೆಣ್ಮಕ್ಳು ಸುಯ್ ಸೈಡ್ ಮಾಡ್ಕೊಂಡ್ರೆ ಹೆಡಿಗಳು ಅಂತಿದ್ದೆ. ಪಾಪ. ಅವರಿಗೆ ಬದುಕು ಅದೆಷ್ಟ್ ಬೇಸರ ಬಂದಿರಬಹುದಲ್ಲ ಅನಿಸ್ತಿದೆ ಈಗ. ಇನ್ಮೇಲೆ ನಾನು ಹಾಗೆಲ್ಲ ಬೈಕೊಳೋಲ್ಲ! ( ಹೀಗಂದಾಗ ಅಣ್ಣ, ‘ಮನೆ ಸಿಗ್ಲಿಲ್ಲ ಅಂತ ನೀನೇನಾದ್ರೂ ಸಾಯೋ ಪ್ಲ್ಯಾನಲ್ ಇದ್ರೆ ಹೇಳ್ಬಿಡು ಮಾರಾಯ್ತಿ ಮೊದ್ಲೇ’ ಅಂತ ರೇಗ್ಸಿದ. ಇಲ್ಲಪ್ಪಾ! ನಂಗೆ ಅಷ್ಟೆಲ್ಲ ಧೈರ್ಯ ಇಲ್ಲ!!)
ಇಷ್ಟೆಲ್ಲಾ ಆಯ್ತಾ… ಈಗೇನ್ ಮಾಡೋದು ಅಂತ ಯೋಚ್ನೆ ಆಗ್ತಿದೆ ನಂಗೆ. ಅತ್ಲಾಗಿ ದಿನಾ ಸಂಜೆ ಸುಮ್ನೆ ದೇವ್ರೆದ್ರಿಗೆ ಒಂದ್ ದೀಪ ಹಚ್ಚಿಟ್ಟು ಜೋರು ಜೋರಾಗಿ ಹಾಡು ಹೇಳಲಾ? ಊದುಬತ್ತಿ ಕಟ್ಟು ಹಚ್ಚಿ ಅವರ ಮನೆ ಕಿಟಕಿಯೊಳಗೆ ಹೊಗೆ ತೂರಿಸಿ ನನ್ನ ಸಂಪ್ರದಾಯವಂತಿಕೆ ಸಾಬೀತುಪಡಿಸಲಾ? ಅಥವಾ, ಶುಕ್ರವಾರ ಪೂಜೆ ಮಾಡಿ ಅರಿಷಿಣ ಕುಂಕುಮಕ್ಕೆ ಕರೆದು ಮಸ್ಕಾ ಹೊಡೆಯಲಾ? ನಾನು ಈ ಮನೇಲೇ ಇದ್ಕೊಂಡ್ ಬಿಡ್ತೀನಿ ಅಂತ!?
– ಬಹುಶಃ ಬದುಕು, ಬಂಡೇಳುವತನಕ ಸುಲಭ. ಬಂಡೆದ್ದ ಮೇಲೆ ಕಷ್ಟ.

ಕೊನೆಯ ಸಾಲು ಇಷ್ಟ ಆಯ್ತು. very true…
ನಿಮ್ಮ ಪುಸ್ತಕ ಎಲ್ಲಿ ಸಿಗುತ್ತೆ? ಸಪ್ನ ಬುಕ್ ಹೌಸ್?
Chetana, don’t lose heart. Try some apartment instead of independent houses. Nobody bothers in an apartment about personal lives of their nighbour.
@Shree, yea you do get the book in Sapna. I got it last Sat and finished reading 🙂
ಬ್ಯಾಚುಲರ್ಸ್‌ಗೆ, ಒಬ್ರೇ ಇರೋವ್ರಿಗೆ ಬಾಡಿಗೆ ಮನೆ ಸಿಗೋದು ಭಾಳಾ ಕಷ್ಟ ಅಕ್ಕ ಬೆಂಗ್ಳೂರಲ್ಲಿ.. ಏನ್ ಮಾಡೋದು..
If my guess is right, ನೀವು ಮನೆ ಹುಡುಕ್ತಿರೋದು ಗಾಯತ್ರಿನಗರ – ಸುಬ್ರಮಣ್ಯನಗರ ಆಸುಪಾಸಾ? 😉
ಕೊನೆಯ ಸಾಲು ನನಗೂ ಇಷ್ಟವಾಯಿತು.
ಪ್ರೀತಿಯ ಚೇತನಾ,
ನಿಮ್ಮ ಭಾಮಿನೀ ಷಟ್ಪದಿಯ ಕುಂಭಸಂಭವಕ್ಕೆ ಬರಲಾಗದೆ ಹೋದೆ. ಕ್ಷಮಿಸಿ. ಟೀನಾ ಒಂದು ಪುಟ್ಟ ವರದಿ ಕೊಟ್ಟಿದಾರೆ ಹೇಗಾಯ್ತು ಅಂತ. ಒಂದಿನ ಸುಮ್ ಸುಮ್ನೆ ಸಿಗೋಣ.. ಬೈಟೂ ಚುರುಮುರಿ, ಕಾಫಿ ಮತ್ತು ಮರದ ಕೆಳಗೆ..
ನಿಮ್ಮಾಂಟಿ ಏನಾದ್ರೂ ನಿಮ್ಮನ್ನ ಬಿಲ್ಕುಲ್ ಅನಿಕೇತನ ಮಾಡ್ ಬಿಟ್ರೆ, ನಿಮ್ಮದೊಂದು ಗೂಡು ಹುಡುಕುವವರೆಗೆ ನಮ್ಮನೆಗೆ ಬಂದಿರಿ. ಜಾಸ್ತಿ ಮಾತಾಡ್ಸೋಲ್ಲ ನಿಮ್ ಪಾಡಿಗೆ ನೀವಿರ್ ಬಹುದು. ಇಲ್ಲಿಂದ ಇಸ್ಕಾನ್ ರೂಟಿನ ಬಸ್ಸುಗಳೂ ಇವೆ.
ಮೈಲ್ ಮಾಡಿ.
ಪ್ರೀತಿಯಿಂದ
ಸಿಂಧು
ಶ್ರೀ, ಉತ್ತರ ಸಿಕ್ಕಿತಲ್ಲ? ಹರೀಶ್, ನಿಮ್ಮಿಬ್ಬರಿಗೂ ಸಾಲು ಇಷ್ಟವಾಗಿದ್ದಕ್ಕೆ ಥ್ಯಾಂಕ್ಸ್. ಆದ್ರೆ ಇಂಥ ಸಾಲುಗಳು ಇಷ್ಟವಾಯ್ತು ಅನ್ನೋದೂ ಕಷ್ಟ ಅಲ್ವಾ!?
ರಾಧಿಕಾ, ಅಪಾರ್ಟ್ಮೆಂಟಾ? ಬಯಲಿಂದ ಗೂಡಿಗೆ…! ಟ್ರೈ ಮಾಡ್ತೀನಿ, ಥ್ಯಾಂಕ್ಸ್.
ಸುಶ್ರುತ, ಹೌದು. ಗಾಯತ್ರಿ- ಸುಬ್ರಹ್ಮಣ್ಯ ನಗರ. ನೀವೂ ಇಲ್ಲೇ ಎಲ್ಲೋ ಇದೀರ ಅಲ್ವಾ?
ಸಿಂಧು, ಅಕ್ಕರೆಗೆ ಥ್ಯಾಂಕ್ಸ್. ನಂಗೊಂಥರಾ ಬೇವಿನ ರುಚಿ ನೋಡೋ ಖಯಾಲಿ. ಅದೇ ಅಭ್ಯಾಸ ಬಿದ್ದುಹೋಗಿದೆ ಕೂಡಾ. ಇರಲಿ. ಮತ್ತೊಮ್ಮೆ ಥ್ಯಾಂಕ್ಸ್.
ಖಂಡಿತ ನಾವೆಲ್ಲ ಸಿಗುವ. ಆದ್ರೆ ಯಾವಾಗ ಅನ್ನೋದೇ ಮಿಲಿಯನ್ ಡಾಲರ್ ಪ್ರಶ್ನೆ! ನನಗೆ ಬೇರೆ ಮನೆ ಸಿಗುತ್ತದೋ ಅನ್ನೋದಕ್ಕಿಂತ್ಲೂ ದೊಡ್ಡ ಪ್ರಶ್ನೆ!!
– ಪ್ರೀತಿಯಿಂದ,
ಚೇತನಾ
ಮೊನ್ನೆ ಅಂಕಿತಾಕ್ಕೆ ಹೋಗಿ ಭಾಮಿನಿ ಷಟ್ಪದಿ ತಗೊಂಡು ಬಂದು, ಒಂದೇ ಗುಕ್ಕಿಗೆ ಓದಿ ಮುಗಿಸಿದೆ. ನಿಮ್ಮ ಮುಂಚಿನ ಕೆಲವು ಬರಹ ನಾನು ಬ್ಲಾಗಲ್ಲಿ ಓದಿರಲಿಲ್ಲ. ಅದೆಲ್ಲವನ್ನು ಒಟ್ಟಾಗಿ ಓದೋ ಖುಷಿ ಸಿಕ್ಕಿತು….
ಬದುಕು, ಬಂಡೇಳುವತನಕ ಸುಲಭ. ಬಂಡೆದ್ದ ಮೇಲೆ ಕಷ್ಟ!! ಇರಬಹುದು….. ಆದರೆ ಎಲ್ಲೋ ಓದಿದ ಒಂದೆರಡು ಸಾಲುಗಳು ನೆನಪಾಗ್ತಾ ಇದೆ
“ನದಿಗೆದುರೀಸುತ ಹೋಗುವುದಾದರೆ ಜೀವಂತ ಮತ್ಸ್ಯವು ಬೇಕು
ಹೊನಲಿನ ದಿಕ್ಕಿಗೆ ಸಾಗುವುದಾದರೆ ಕೊಳೆತೊಂದು ಕಸಕಡ್ಡಿ ಸಾಕು”
ರೀ ಚೇತನಾ, ನಾವು ಬ್ಯಾಚುಲರ್ ಹುಡುಗ್ರ ಕಥೆನೂ ಇದೇ!ಮನೆ ನೇ ಕೊಡಲ್ಲ ನಮಗೆ:(
ನಾವು ಮನೇನ ಕ್ಲೀನ್ ಇಟ್ ಕೊಳ್ಳಲ್ವಂತೆ!ಜೋರಾಗಿ ಹಾಡು ಕೇಳ್ತೀವಂತೆ!
ಪಕ್ಕದ ಮನೆ ಹುಡುಗೀರ್ನ ಬುಟ್ಟಿಗೆ ಹಾಕ್ಕೋತೀವಂತೆ !
ಸಿಗರೇಟ್ ಸೇದ್ತೀವಂತೆ ,ಕುಡೀತೀವಂತೆ !!
ಎಷ್ಟು ಕಷ್ಟ ನಮಗೂನು !!!
ಈ ಕಡೆ ಏರಿಯಾದಲ್ಲಿ ಸ್ವಲ್ಪ ಕಷ್ಟ…cookes town, airport road ಆ ಕಡೆಯೆಲ್ಲಾ ಅಷ್ಟು ತೊಂದ್ರೆ ಇಲ್ಲ… ಹಳೇ ಮಡಿವಂತಿಕೆಯ ಪೂರ್ವಾಗ್ರಹಗಳು ಇದ್ದಿದ್ದೇ… ನಿಮ್ಗೆ ಇನ್ನೂ ಮನೆ ಸಿಕ್ಕಿಲ್ಲದಿದ್ರೆ ಯಾವ್ ಥರ ಮನೆ ಬೇಕು, ಏನ್ ಬಜೆಟ್ಟೂ – ಒಂದು ಮೈಲ್ ಕುಟ್ಟಿ ನನಗೆ, ಸ್ವಲ್ಪ ನೆಟ್‌ವರ್ಕ್ ಇದೆ ಈ ಕಡೆ, ಹುಡುಕೋಣಂತೆ:)
ನಮ್ಮ ಮೀಟ್ ಆಗ್ತಾನೇ ಇದೆ ಮಾರ್ಚ್‌ನಲ್ಲಿ ಬ್ಲಾಗರ್ಸ್ ಮೀಟ್ ಆದಾಗ್ಲಿಂದ!:(
Ooohooo… Thank youuu, Thank youuu…
but, Shree, nan tale nOvna nimge vargAyisOke ishTavilla nange. nODONa… nAnu pUje mADada dEvru nan jote idAne!!
Bus hattO abhyAsa iddidre dUrada Area nE oLLEdittu nange. but ashTu doora… Auto ODATa work out AgOlla 😦
Sandeep, 🙂
Vijay rAj, nAnantU meenAgirOke iShTa paDteeni 🙂
Sree, mattelrigU… haudaudu… nAvu oTTagtalE dieevi, mArch ninda!!
Chetana,
I can help you in finding a house, in South Bangalore….
-Prasad.
ಬಂಡೆದ್ದ ನಂತರದ ಪರಿಣಾಮವನ್ನು ಎದುರಿಸಲಾಗದ ಮನಸ್ಸಿಗೆ ಬಂಡೇಳುವ ಶಕ್ತಿಯೇ ಇರುವುದಿಲ್ಲ,ಅನ್ನೋದು ನನ್ನ ನಂಬಿಕೆ.ಹೌದಾ ಚೇತನಾ?ಮನೆಯ ಪೇಂಟಿಂಗ್ ಚೆನ್ನಾಗಿದೆ.-ಎಸ್.ಗಂಗಾಧರಯ್ಯ.
allaa.. ee ooralli mane sigOdu “banDa” beeLO ashtu kashta antha ansirlilla nange.. 😉
anda haage naanoo huttidaaginda idE ooralli ideeni, mane badlaayskonDu..
neevu athi sheeghradallE nikEtanigaLaagli antha harasuttEne… 😉
ಅದೇನು ಕಾಕತಾಳೀಯನೊ, ನಿಮ್ಮ ಬ್ಲಾಗ್‍ನ title “ಓ ನನ್ನ ಚೇತನಾ” ಅಂತ readerನಲ್ಲಿ ನೋಡಿದ ತಕ್ಷಣ ನನ್ನ ತಲೆಲಿ ಟಕ್ ಅಂತ “ಆಗು ನೀ ಅನಿಕೇತನ” ಅಂತ ರಾಗವಾಗಿ ಬಂತು. Feed ತೆಗ್ದು ನೋಡಿದ್ರೆ ಮೊದಲನೇ ಸಾಲಲ್ಲೇ ಅನಿಕೇತನ, ಒಂತರ ತಲೆ ಕೆಟ್ಟೊಯ್ತು, ಒಂದು ಸೆಕೆಂಡ್ ಇವ್ರೇನಾದ್ರು mind read ಮಾಡೋಕೆ ಶುರು ಮಾಡ್ದ್ರಾ ಅನ್ಸ್ತು.
last line is very nice and very true .
thanks .
hi,
nimage E photo ellinda sikkiddu??
he is my ex-colleague.
http://kumar.varma1.googlepages.com/interestandhobbies
do u know him? have u asked him?
nanu monnene noDidaga edello noDidde anta anista ittu. ivattu …1975 gamanakke bantu.
-love
soupi
“ಇಷ್ಟೆಲ್ಲಾ ಆಯ್ತಾ……..ಬಿಡ್ತೀನಿ ಅಂತ!?”
ಚೆನ್ನಾಗಿದೆರಿ.
ಇಂಪ್ರೇಷನ್ ಒಂದ್ಸಲ ಬಿದ್ದಾದ ಮೇಲೆ ಅದನ್ನು ಆಳಿಸೋದು ಕಷ್ಟ ಅಲ್ವಾ ?
ನೀವು ನಿಜವಾಗಿಯೂ ಮನೆ ಹುಡುಕುತ್ತಿದ್ದರೆ, ನಿಮಗೆ ಅನುಕೂಲವಾಗುತ್ತೆ ಎಂದೆನಿಸಿದರೆ ಗಿರಿನಗರದ ಆಸುಪಾಸಿನಲ್ಲಿ ಹುಡುಕಿ.
ಏರಿಯಾ ತುಂಬಾ ಚೆನ್ನಾಗಿದೆ. ನಾನು ಮೊದಲು ಅಲ್ಲೇ ಒಬ್ಬಳೇ ಮನೆ, 1bhk ಮಾಡಿಕೊಂಡಿದ್ದೆ. ನನ್ನ ಪರಿಚಯದವರಿಬ್ಬರೂ ಸಹ ತಮ್ಮ ಬಂಡಾಯದ ಸ್ವಭಾವದಿಂದ ಒಂಟಿಯಾಗಿ ಅಲ್ಲೇ ಮನೆ-1bhk ಮಾಡಿಕೊಂಡು ಇದ್ದಾರೆ.
ಹಾಯ್ ಚೇತನಾ ಮೇಡಂ,
ನಿಮ್ಮ ಬ್ಲಾಗಿಗೆ ದಿನಂಪ್ರತಿ ಬರಲಾಗದಿದ್ದರೂ ಆಗೊಮ್ಮೆ ಈಗೊಮ್ಮೆ ಬಂದು ಹೋಗ್ತಾ ಇದ್ದೀನಿ….ಕೆಲವೊಂದು ಸಲ ಓದಿದರೂ reply ಮಾಡೊದಿಕ್ಕೆ ಆಗೊದಿಲ್ಲ. ನಿಮ್ಮ ಕೊನೆಯ ಸಾಲು ಮಾತ್ರ ಅಲ್ಲ..ಇಡಿಯ ಲೇಖನ ಸೊಗಸಾಗಿದೆ. ನಿಮ್ಮ ಈ ಲಿಲಿತಪ್ರಬಂಧ ಓದಿದ ಮೇಲೆ ವೀಸೀ ಅವರ ಬಾಡಿಗೆ ಮನೆ ಎಂಬ ಪ್ರಬಂಧ ನೆನಪಾಯಿತ. ಕಾಲೇಜಿನ ದಿನಗಳಲ್ಲಿ ಅದನ್ನೋದಿ ನಾನೆ ನಾವಿದ್ದ ಬಾಡಿಗೆ ಮನೆಯ ಸ್ವರೂಪವನ್ನು ಲಲಿತ ಪ್ರಬಂಧದಂತೆ ಬರೆದಿದ್ದು….ಅಂದಿನ ಬರಹದ ಹವ್ಯಾಸ ಈಗಿಲ್ಲವಲ್ಲ ಅಂತಾನೂ ಬೇಜಾರಾಯ್ತು.
ಇನ್ನು ನಿಮ್ಮ ಬಾಡಿಗೆ ಮನೆ ಸಮಸ್ಯೆ ಬಗೆಗೆ ತುಂಬಾ ತಡ ಆಯಿತು ಅನ್ಸುತ್ತೆ. ಅದರೂ ನಿಮ್ಮ ಸಮಸ್ಯೆಗೆ ಒಂದು ಸಣ್ಣ ಸ್ಪಂದನೆ ನನ್ನಿಂದ….
ನಮ್ಮ ಮನೆಯ ವಠಾರದಲ್ಲಿ ಒಂದು ಮನೆ ಖಾಲಿಇದೆ. ಅದಕ್ಕೊಂದು ಪಾಕಶಾಲೆ ಬಿಟ್ಟರೆ ಬೇರೆ ಯಾವ ಕೋಣೆಗಳೂ ಇಲ್ಲ. ಒಂದು ಚಿಕ್ಕದಾದ hall ಇದೆ. ಅಷ್ಟೆ.
ನಿಮಗೆ ಆಸಕ್ತಿ ಇದ್ದರೆ ಮೇಲ್ ಮಾಡಿ.
ನನಗೂ ಇಂತಹ ಬಾಡಿಗೆ ಮನೆಗಳ ಸಮಸ್ತಯ 2 ವಷದ ಹಿಂದಿತ್ತು ಕಣ್ರಿ but ಈಗಿಲ್ಲ ಆರಾಮವಾಗಿದ್ದೀನಿ….ಅಣ್ಣಂದಿರ ಹಾಗೆ ಇರೋ ಇಬ್ಬರು ಜತೆಗಾರರ ಜೊತೆ …ಮನೆಯವರೇನೋ ಅನ್ನೋತರಹ…ಎಷ್ಟು ಅಂದ್ರೆ ನಾನು night shift ಮುಗಿಸಿ ಮನೆಗೆ ಹೋಗೋದು ಸುಮಾರು 3 ಗಂಟೆ ಆಗುತ್ತೆ. ಅವರು ನಾನು ಮಲಗುವ ಹಾಸಿಗೆ ಹಾಸಿ, ದಿಂಬು ಇಟ್ಟು, ಕುಡಿಯಲು ನೀರನ್ನು ಬಾಟಲ್ಲಲಿ ತುಂಬಿಸಿಟ್ಟು ಮಲಗಿರುತ್ತಾರೆ.
ok ok thanks ಕಣ್ರೀ ಬರಿತಾ ಇದ್ರೇ ಇದು ನನ್ನದೆ ಬ್ಲಾಗು ಅಂದ್ಕೊಂಡು…time sense ಇಲ್ಲದೆ….ಏನ ಬರೀತಿದ್ದೀನ ಅನ್ನೋ ಪ್ರಜ್ಞೆ ನೂ ಇಲ್ಲದೆ ಗೀಜ್ತಾ ಹೋಗ್ತೀನಿ
ಇನ್ನೂ ಸಾಕಷ್ಟು ಕೆಲ್ಸ ಇದೆ ಬರ್ಲಾ..?
by the by
wish you good luck
ಮತ್ತೆ ಎಂದಾದರೊಮ್ಮೆ ಬರುವ
ಅಪರೂಪದ ಅತಿಥಿ
ಗಿರೀಶ ಕೆ.ಎಸ್.
girisha_giri123@yahoo.co.in
My dear friend Arun, Wish you Happy New year 2009.Nimma padyada koneya saalu tumba tumba channagide,haagoo arthagarbhithavaagide yakendare life irode hige alva? realy u are a creater. i proud of you. keep it up, wish u all the best.
ನಮಸ್ತೇ ಅಶೋಕ್ ಅವರೇ,
ನಿಮ್ಮ ಕಮೆಮ್ಟ್ ಅರ್ಥವಾಗಲಿಲ್ಲ… ಇಲ್ಲಿ ಅರುಣನ ಕವಿತೆ ಎಲ್ಲಿದೆ? (ನೀವು ಅರುಣ ಜೋಳದಕೂಡ್ಲಿಯನ್ನ ಉದ್ದೇಶಿಸಿ ಬರೆದಿ೫ರಬಹುದು ಅಂದ್ಕೊಳ್ತೇನೆ)
ಎಲ್ಲೋ ಮಾಡಬೇಕಾದ ಕಮೆಂಟು ಇಲ್ಲಿ ಬಂದಿದೆ… 🙂