ನನ್ನ ಪ್ರಿಯ ಸ್ನೇಹಿತರೊಬ್ಬರು ಒಂದು ಹೊಸ ಬ್ಲಾಗ್ ಶುರು ಮಾಡಿದಾರೆ. ಹೆಸರು- ಇನಿಗ್ಮಾ.
“ಏನ ಬೇಡಲಿ ಹರಿಯೆ ನಿನ್ನ ಬಳಿಗೆ ಬಂದು” ಎಂದು ಹಾಡಿದರು ಹರಿದಾಸರು. ತನಗಿಂತಲೂ ಭಗವಂತನೇ ಹೆಚ್ಚು ಕಷ್ಟದಲ್ಲಿದ್ದಾನೆ ಎನ್ನಿಸಿದ ಆ ಗಳಿಗೆ ಅಗಾಧ ಶಕ್ತಿಯುಳ್ಳದ್ದು. ಅದೊಂದು ಮಿಂಚು. ನಮಗೆಲ್ಲ ಆ ಮಿಂಚು ಬೇಕು. ಅದನ್ನು ಹಿಡಿವ ಹಾದಿಯಲ್ಲಿ ಅರೆ, ನಾವೆಷ್ಟು ಜನ!
~ ಹೀಗನ್ನುತ್ತಾರೆ ಈ ಬ್ಲಾಗಿನ ಸಂಪಾದಕರು. ಈಗಿನ್ನೂ ಇದರ ಶುರುವಾತು ಅಷ್ಟೇ. ಮುಂದೆ ಅವರು ವಿಭಿನ್ನ ಓದನ್ನ ನಮಗಿಲ್ಲಿ ಕಟ್ಟಿಕೊಡಲಿರುವುದನ್ನು ನೀವೇ ನೋಡುವಿರಿ.
ಸದ್ಯಕ್ಕೆ ಈ ಬ್ಲಾಗಿನಲ್ಲಿ ಎರಡು ಕವಿತೆಗಳಿವೆ. ಚೆಂದದೊಂದು ಲೇಖನವಿದೆ. (ಸ್ನೇಹದ ಅಭಿಮಾನಕ್ಕೆ ನನ್ನದೊಂದು ಲೇಖನ ಕೂಡ ಹಾಕಿರುವರು)
ನಿಜಕ್ಕೂ ಇನ್ನು ಮುಂದೆ ನೀವು ರೆಗ್ಯುಲರ್ರಾಗಿ ನೋಡಬಹುದಾದ ಬ್ಲಾಗ್ ಇದು ಅನ್ನುವುದು ನನ್ನ ಭರವಸೆ! ಆಸಕ್ತಿಯಿದ್ದರೆ ಭೇಟಿ ಕೊಡಿ:
– ಪ್ರೀತಿಯಿಂದ, ಚೇತನಾ ತೀರ್ಥಹಳ್ಳಿ

ನಿಮ್ಮ ಟಿಪ್ಪಣಿ ಬರೆಯಿರಿ