ಈ ಲೇಖನದಲ್ಲಿ ಹೇಳಿದ್ದೆ. ನನಗೆ ಚರ್ಚೆ ಬೇಕು, ಸರಿ ತಪ್ಪು ತಿಳಿಯಬೇಕು ಅಂತೆಲ್ಲಾ. ಅದಕ್ಕೆ ಸರಿಯಾಗಿ, ನನ್ಒಂದು ಕಥೆ, ನಾಲ್ಕು ಮಾತಿಗೆ ನಾಲ್ಕು ಮಂದಿ ಪ್ರತಿಕ್ರಿಯಿಸಿದ್ದಾರೆ. ಜೊತೆಗೆ, ನನ್ನ ಉತ್ತರಗಳೂ ಇವೆ. ಇದರ ಮೂಲಕ ವಿಷಯ ವ್ಯಾಪ್ತಿ ದೊಡ್ಡದಾಗಿರುವುದರಿಂದ ಅದನ್ನು ಪ್ರತ್ಯೇಕವಾಗಿ ಹಾಕ್ತಿದೇನೆ. ಆಸಕ್ತಿಯಿದ್ದವರು ಮುಂದುವರೆಸಬಹುದು.
ಚೇತನಾ,
ವಿಶ್ವಮಾನವರ ಬಗ್ಗೆ ಯಾಕ್ರಿ ತಲೆ ಕೆಡಿಸ್ಕೋತೀರಾ??
ಗಾಂಧೀಜಿಯ ರಾಮರಾಜ್ಯ,ಕುವೆಂಪುರವ ವಿಶ್ವಮಾನವ ಕಲ್ಪನೆ ಎಲ್ಲ ಪುಸ್ತಕದಲ್ಲಿದ್ರೇನೆ ಚೆನ್ನ.
ಕಾನೂನು ಕೈಗೆತ್ತಿದರ ಬಗ್ಗೆ ಆಕ್ಶೇಪ ಎತ್ತೋರು ತುಂಬಾ ಜನ ಸಿಗ್ತಾರೆ.
ಕೊಲೆ ಮಾಡಿದವರು ಕೂಡ ಒಳ್ಳೆಯ ಲಾಯರ್ ಸಹಾಯ ಪಡೆದರೆ ಹೊರಗೆ ಬರಬಹುದು .ಪಾಪ ಪಿಕ್ ಪಾಕೆಟ್ ಮಾಡಿದವನು ಸಾಯೋ ತನಕ (ಕೆಲವೊಂದು ಪ್ರಕರಣಗಳಲ್ಲಿ ಏನೂ ತಪ್ಪು ಮಾಡದವನು ಕೂಡಾ!) ಜೈಲಿನಲ್ಲಿ ಕೊಳೆಯಿತ್ತಿರುವ ಉದಾಹರಣೆಗಳೂ ಇವೆ .
ಮತಾಂತರ ಮಾಡೋರ ಮೇಲೆ ಮೊಕದ್ದಮೆ ಹಾಕಿದ್ರೆ ಅವರನ್ನು ಬಿಡಿಸಲು ಎಲ್ಲಿಂದ ಎಷ್ಟು ಡಾಲರ್ ಗಳು ಬರುತ್ತವೆ ಅನ್ನೋದು ಎಲ್ಲರಿಗೂ ಗೊತ್ತು.
ನಾನೊಂದು ಮಾತು ಹೇಳ್ತೀನಿ ಬೇಜಾರು ಮಾಡ್ಕೋಬೇಡಿ .ನೀವು ಈ ಬಗ್ಗೆ ಎಷ್ಟೇ ಚರ್ಚೆ ಮಾಡಿದ್ರು ನಿಮ್ಮ ಧೋರಣೆಯನ್ನು ವಿರೋಧಿಸುವ ಬುದ್ಧಿಜೀವಿಗಳು ಸಿಕ್ಕೇ ಸಿಕ್ತಾರೆ.ಹಾಗೇ ಆ ಬುದ್ಧಿಜೀವಿಗಳೂ ಹಿಂದುಗಳು ಅನ್ನೋದೂ ನಮ್ಮೆಲ್ಲರ ಸೌಭಾಗ್ಯ.
ಮಂಗಳೂರಿನಲ್ಲಿ ಮತಾಂತರ ಕೇಂದ್ರಗಳನ್ನು ಟಾರ್ಗೆಟ್ ಮಾಡಿದ್ರೂ ಆ ಹಲ್ಲೆಯನ್ನು ಕ್ರಿಶ್ಚಿಯನ್ ಸಮುದಾಯದ ಮೇಲೆ ಆದ ಹಲ್ಲೆ ಅಂತಲೇ ಬಿಂಬಿಸಲಾಗುತ್ತಿದೆ.You can not convince all the people all the time.
– ಸಂದೀಪ್ ಕಾಮತ್
Chetana,
Very wise decision. It is high time, this issue was debated and discussed thread bare. Hope you get enough particiapation to make this debate a success.
>>ಸರ್ವೇ ಭವನ್ತು ಸುಖಿನಃ ಸರ್ವೇ ಸನ್ತು ನಿರಾಮಯಾಃ| ಸರ್ವೇ ಭದ್ರಾಣಿ ಪಶ್ಯನ್ತು ಮಾ ಕಶ್ಚಿದ್ ದುಃಖ ಭಾಗ್ಭವೇತ್|| >>
This is what our culture tells us, but the other side do not believe in this and that is where the problem lies. They believe in the game of numbers and are interested to achieve the numbers by any and all means.
To me it looks very foolish when people argue about the supremacy of their belief system as opposed to another belief system.
Mayura.
ಚೇತನಾ,
-ನೀವು ಬರೆದ ಮೊದಲಿನ ಲೇಖನ ಓದಿದ ಮೇಲೆ ನನಗೆ ತುಂಬಾ ದಿನಗಳಿನ್ದ ಅನ್ನಿಸುತ್ತಿದ್ದನ್ನು ನನ್ನ blogನಲ್ಲಿ ಬರೆದಿದ್ದೇನೆ. ಸಮಯವಿದ್ದರೆ ನೋಡಿ.
-” ಜಾತಿ ಆಧಾರಿತ ಭಯೋತ್ಪಾದನೆ……….” ಬಗೆಗಿನ ಮಾಹಿತಿ ಪ್ರಕಟಿಸಿ. ನನಗೂ ತಿಳಿದುಕೊಳ್ಳುವ ಆಸೆಯಿದೆ.
sandeep,
“ಗಾಂಧೀಜಿಯ ರಾಮರಾಜ್ಯ,” ಅದು ಹೇಗೆ ಸಾಧಿಸಬಹುದು ಎಂಬುದರ ಬಗ್ಗೆಯೂ ಅವರು ಹೇಳಿದ್ದಾರೆ. ಅದು ಕಲ್ಪನೆಯಲ್ಲ. ಸಮಯ ಸಿಕ್ಕಲ್ಲಿ ಗಾಂಧಿ ಅಜ್ಜನ ವಿಚಾರಗಳ ಬಗ್ಗೆ ಓದಿ, ಅಮೇಲೆ ಹೀಗೆಲ್ಲ ಹೇಳಿ. ( ನನ್ನ ಈ ಕಾಮೆನ್ಟ್ ವಿಷಯಾಂತರ ಮಾಡುತ್ತದೆ ಎಂದು ಗೊತ್ತಿದ್ದರು ಹೀಗೆ ಬರೆಯಬೇಕಾಯಿತು
)
– ನೀಲಾಂಜಲ
ಅಕ್ಕಾ,
ಈ ಸಂಪೂರ್ಣ ಘಟನೆಯ ಬಗೆಗಿನ ನನ್ನ ಗ್ರಹಿಕೆಗಳು ಇವು.
‘ಧರ್ಮದ ಹೆಸರಿನಲ್ಲಿ ಭಯೋತ್ಪಾದನೆಯನ್ನು ಮಾಡುತ್ತಿರುವ ಮುಸ್ಲಿಂ ಉಗ್ರಗಾಮಿಗಳು ಹಾಗೂ ಅವರ ಕೃತ್ಯಕ್ಕೆ ನೆರವನ್ನು, ಬೆಂಬಲವನ್ನೂ ನೀಡುವ ನಮ್ಮ ದೇಶದ ‘ಕೆಲವು’ ಮುಸ್ಲೀಮರ ಕೃತ್ಯದಿಂದ ಇಡೀ ಸಮುದಾಯವನ್ನು ನಿಂದನೆಗೆ ಒಳ ಮಾಡುವುದು ತಪ್ಪು. ಇದರಿಂದ ಸಾಮಾನ್ಯ ಮುಸಲ್ಮಾನರು ಹಾಗೂ ಮತಾಂಧತೆಯ ಸೋಂಕು ಇಲ್ಲದವರೂ ಸಹ ಸರಕಾರದ ಮೇಲೆ ನಂಬಿಕೆ ಕಳೆದುಕೊಳ್ಳುತ್ತಾರೆ. ಅವರೂ ಅನಿವಾರ್ಯವಾಗಿ ಭಯೋತ್ಪಾದನೆಯನ್ನು ಒಪ್ಪಿಕೊಳ್ಳುತ್ತಾರೆ. ಇದರಿಂದಾಗಿಯೇ ಬಾಬ್ರಿ ಮಸೀದಿ ಕೆಡವಿದಾಗ, ಗುಜರಾಥದಲ್ಲಿ ಕೋಮು ದಳ್ಳುರಿ ಸಂಭವಿಸಿದಾಗ ಭಯೋತ್ಪಾದನೆ ಹೆಚ್ಚುತ್ತದೆ’ – ಇದು ‘ವಿಶ್ವಮಾನವ, ಬುದ್ಧಿಜೀವಿಗಳ’ ನೈಜ ಕಾಳಜಿಯ ವಾದ. ಇದನ್ನು ಒಪ್ಪಿಕೊಳ್ಳೋಣ, ಇದರಲ್ಲಿ ಆಕ್ಷೇಪ ಪಡಿಸುವಂತಹ ಸಂಗತಿಗಳ್ಯಾವುವೂ ಇಲ್ಲ.
ಈಗ ಇನ್ನೊಂದು ವರ್ಷನ್ ಗಮನಿಸೋಣ. ‘ಫ್ಯಾಸಿಸಂ ಅನ್ನು ಆರಾಧಿಸುವ, ರಕ್ತದೋಕುಳಿ ನಡೆಸಲು ಹೊಂಚು ಹಾಕುವ ಭಜರಂಗದಳ, ಶ್ರೀ ರಾಮ ಸೇನೆ, ವಿ.ಎಚ್.ಪಿ, ವಿಶ್ವ ಹಿಂದೂ ಪರಿಷತ್ತುಗಳು ಹಾಗೂ ದಲಿತರನ್ನು ದಮನಗೈಯ್ಯುವ **ಪುರೋಹಿತಶಾಹಿ** ಜನರು ದೇಶದ ಐಕ್ಯತೆಗೆ ಮಾರಕ. ದಲಿತರನ್ನು ಐದು ಸಾವಿರ ವರ್ಷಗಳಿಂದ ತುಳಿದವರು ಯಾರು ಎಂದು ಹೇಳಬೇಕಿಲ್ಲ. ಈಗ ದಲಿತರು, ಹಿಂದುಳಿದವರು ಮತಾಂತರಗೊಂಡರೆ ಅವರ ಸಾಮಾಜಿಕ ಸ್ಥಾನ ಮಾನ ವೃದ್ಧಿಸುತ್ತದೆ. ಕೆಲಸ ಸಿಕ್ಕುತ್ತದೆ… ಇದನ್ನೂ ವಿರೋಧಿಸುತ್ತಿರುವ ಜನರ ಕೊಳೆತ ಮನಸ್ಥಿತಿಯನ್ನು ಮತಾಂಧತೆ ಎನ್ನದೆ ಇದರಲಾಗದು. ಪ್ರಾರ್ಥನೆ ಮಾಡುವವರ ಮೇಲೆ ಆಕ್ರಮಣ ಮಾಡುವವರ ‘ಧರ್ಮ’ ಎಂಥದ್ದು?’ ಇದೂ ನಮ್ಮ ವಿಶ್ವಮಾನವರ ಹೇಳಿಕೆ.
ಮೊದಲ ಹೇಳಿಕೆಯಲ್ಲಿ ಕಾಣುವ ಕಾಳಜಿಗೂ ಎರಡಾನೆಯ ಹೇಳಿಕೆಯಲ್ಲಿ ಕಾಣುವ ಬೇಜವಾಬ್ದಾರಿಗೂ ಇರುವ ವ್ಯತ್ಯಾಸವನ್ನೇ ಡೈಕಾಟಮಿ ಅನ್ನುವುದು.
ಯಾರೋ ಕೆಲವು ಮಂದಿ ಧರ್ಮದ ಹೆಸರಿನಲ್ಲಿ ಸಂಘಟಿತರಾಗಿ ಮಾಡುವ ಕೆಲಸ ಅವರ ಅಪರಾಧ ಮಾತ್ರ ಅದು ಸಮುದಾಯವೊಂದರ ಅಪರಾಧವಲ್ಲ. ಹೀಗಂತ ಹೇಳುವ ಕಾಂಗ್ರೆಸ್ಸಿನ ಮುತ್ಸದ್ಧಿಗಳು ಹಿಂದೆ ಗೋಡ್ಸೆ ಎಂಬ ಅಡ್ಡನಾಮದ ವ್ಯಕ್ತಿ ಗಾಂಧಿಯನ್ನು ಕೊಂದದ್ದಕ್ಕಾಗಿ ಆ ಸರ್ ನೇಮ್ ಇರುವವರನ್ನೆಲ್ಲಾ ಹಿಂಸಿಸಿದ್ದು, ಈಗಲೂ ಒಂದು ವರ್ಗದ ಜನರ ಬಗ್ಗೆ ಮಾತಾಡುವಾಗ ಗೋಡ್ಸೆ ವಂಶಸ್ಥರು ಎನ್ನುವುದು ಎಲ್ಲಿಯ ವಿಶ್ವಮಾನವತೆ? ಇನ್ನು ಸಿಖ್ ಮಾರಣ ಹೋಮವನ್ನು ಯಾರು ನಡೆಸಿದ್ದು? ಆಗೆಲ್ಲಾ ಯಾಕೆ ಲಾ ಅಂಡ್ ಆರ್ಡರ್ ಕೈಗೆತ್ತಿಕೊಳ್ಳಲಾಯ್ತು? ಹೀಗಿರುವಾಗ ಮತಾಂತರವನ್ನು ತಾತ್ವಿಕವಾಗಿ ವಿರೋಧಿಸುವ ಹಿಂದುಗಳೆಲ್ಲಾ ಕೋಮುವಾದಿಗಳಾಗುತ್ತಾರೆ, ಭಯೋತ್ಪಾದಕರನ್ನು ‘ಭಾಯಿ’ ಎಂದು ಒಪ್ಪಿಕೊಳ್ಳುವವರು ‘ಸಾಮಾನ್ಯ’ ಮುಸ್ಲೀಮರಾಗಿ ಉಳಿಯುತ್ತಾರೆ. ಯಾಕೆ ಹೀಗೆ? ‘ಆರ್ಡರ್’ ಸ್ಪೆಷಲಿಸ್ಟುಗಳಾದ ವಿಶ್ವಮಾನವರು ಉತ್ತರಿಸಬೇಕು.
ಹೌದು ನಮ್ಮ ಯು.ಆರ್.ಎ ಅವರು ಮೂರು ನಾಲ್ಕು ವೇದಿಕೆಗಳಲ್ಲಿ ಉಗ್ರವಾಗಿ ಗಲಭೆಯನ್ನು ವಿರೋಧಿಸಿದ್ದಾರೆ. ಸೆಕ್ಯುಲರಿಸಂನ ಎತ್ತಿ ಹಿಡಿಯುವ ಪ್ರಯತ್ನ ಮಾಡಿದ್ದಾರೆ. ಇವರ ವಾದವನ್ನು ಗಮನಿಸಿದರೆ , ಹಿಂದುಳಿದವರ, ದಲಿತರ ಏಳಿಗೆಗಾಗಿ ಸಂವಿಧಾನದಲ್ಲಿ ಮಾಡಿಕೊಟ್ಟಿರುವ ಸವಲತ್ತುಗಳಾದರೂ ಏಕೆ ಬೇಕಿತ್ತು? ನಮ್ಮ ಸಂವಿಧಾನ ಶಿಲ್ಪಿ ಅಂಬೇಡ್ಕರರಿಗೆ ಬುದ್ಧಿ ಇರಬೇಡವಾ? ಎಲ್ಲಾ ದಲಿತರು, ಹಿಂದುಳಿದವರು, ಎಲ್ಲಾ ಜಾತಿಯ ಬಡವರು, ಸಾಮಾಜಿಕ ನ್ಯಾಯ ಸಿಕ್ಕದವರೆಲ್ಲಾ ಕ್ರೈಸ್ತ ಧರ್ಮಕ್ಕೆ ಹಾರಿಕೊಂಡು ಬಿಡಿ ಎಂದು ಸಂವಿಧಾನದಲ್ಲಿ ನಮೂದಿಸಿಬಿಡಬಹುದಿತ್ತು. ಎಲ್ಲರಿಗೂ ಮನ್ನಣೆ, ಉದ್ಯೋಗ ಸಿಕ್ಕುತ್ತದೆಯಲ್ಲವೇ ಇದರಿಂದ? ಕ್ರಿಸ್ತನ ಧರ್ಮದಲ್ಲಿ ಯಾರಿಗೂ ಕಷ್ಟಗಳೇ ಇರುವುದಿಲ್ಲ. ಅಲ್ಲಿ ಸಮಾನತೆ ಇರುತ್ತದೆ, ಶಾಂತಿ ಸೌಹಾರ್ದತೆ ಇರುತ್ತದೆ ಲಾ ಅಂಡ್ ಆರ್ಡರ್‌ಗಾಗಿ ಇಷ್ಟೆಲ್ಲಾ ನಮ್ಮ ವಿಶ್ವ ಮಾನವರು ಹಾಗೂ ಸರಕಾರ ತಲೆ ಕೆಡಿಸಿಕೊಳ್ಳುವ ಬದಲು ಇಡೀ ದೇಶವನ್ನೇ ಕ್ರಿಶ್ಚಿಯನ್ ದೇಶ ಎಂದು ಕರೆದುಬಿಟ್ಟರೆ ಸಾಕಲ್ಲವೇ? ಇಷ್ಟೆಲ್ಲಾ ಸಂಘರ್ಷಗಳಿಗೆ ಕಾರಣವಾದದ್ದು ಭಾರತ ಕ್ರೈಸ್ತ ಬ್ರಿಟೀಷರಿಂದ ಸ್ವಾತಂತ್ರ್ಯ ಪಡೆದಿದ್ದೇ ಎಂದು ಹೇಳಿ ಬಿಟ್ಟು ಸ್ವಾತಂತ್ರ್ಯ ಹೋರಾಟ ಮಾಡಿದವರೆಲ್ಲಾ ದುಷ್ಟರು ಎಂದು ಬಿಡಿ ಜ್ಞಾನಪೀಠಿಗಳೇ, ಆಗ ನಿಮ್ಮ ಸೆಕ್ಯುಲರಿಸಂ, ಬುದ್ಧಿಜೀವಿತ್ವ ಎಲ್ಲಕ್ಕೂ ಸಾರ್ಥಕ್ಯ ದಕ್ಕಿ ಅವು ನೇರವಾಗಿ ಸ್ವರ್ಗಕ್ಕೆ ಹೋಗುತ್ತವೆ…
supreeth
ಇವು ನನ್ನ ಮಾತುಗಳು…
ನೀಲಾಂಜಲ, ವಿಷಯಾಂತರವಾದರೂ ಪರವಾಗಿಲ್ಲ, ಉತ್ತಮ ವಿಷಯಗಳನ್ನು ಹಂಚಿಕೊಳ್ಳುವುದೇ ನನ್ನ ಇರಾದೆಯಾಗಿದೆ. ಆದ್ದರಿಂದ, ಹೇಳಲಡ್ಡಿಯಿಲ್ಲ. ಖಂಡಿತ ನಾನು ಈ ಬಗ್ಗೆ ಮತ್ತಷ್ಟು ಬರೆಯುವೆ.
ಸಂದೀಪ್,
ನಿಮಗೆ ಬಿಡುವಿದ್ದರೆ, ಆಸಕ್ತಿಯಿದ್ದರೆ ಹೇಳಿ, ಗಾಂಧೀಜಿ ಕುರಿತ ಪುಸ್ತಕಗಳೊಂದಷ್ಟನ್ನು ಪಟ್ಟಿ ಮಾಡಿಕೊಡುತ್ತೇನೆ. ದಯವಿಟ್ಟು ಓದಿ. ಗಾಂಧೀ ತತ್ತ್ವವನ್ನು ಗಂಭೀರವಾಗಿ ಅಧ್ಯಯನ ಮಾಡದೆ ಹೀಗೆಲ್ಲ ಹೇಳಬಾರದು ಅಲ್ವಾ? ಖಂಡಿತ ನಾನು ಕೂಡ ಸಂಪೂರ್ಣವಾಗಿ ತಿಳಿಯುವ ಮುನ್ನ ನಿಮ್ಮ ಹಾಗೇ ಯೋಚಿಸ್ತಿದ್ದೆ. ಗಾಂಧೀ ಚಿಂತನೆಗಳನ್ನ ತಪ್ಪಾಗಿ ಬಿಂಬಿಸ್ತ ಒಂದು ವಿಚಾರಕ್ಕೆ ಮಾತ್ರ ಸೀಮಿತಗೊಳಿಸ್ತಾ ನಮ್ಮ ಹಾದಿ ತಪ್ಪಿಸಿದ್ದು ನಮ್ಮ ದೇಶದ ಪ್ರಮುಖ ರಾಜಕೀಯ ಪಕ್ಷ ಮತ್ತು ಒಂದಷ್ಟು ಜನ ಅದರ ಕೃಪಾಪೋಷಿತ ಚರಿತ್ರಕಾರರು.
ಇನ್ನು ಕುವೆಂಪು… ಖಂಡಿತ ಅವರ ‘ವಿಶ್ವ ಮಾನವ ತತ್ತ್ವ’ ಸಾರ್ವಕಾಲಿಕ, ಆದರಣೀಯ. ಹೇಳಿಕೇಳಿ ಅವರು ನಮ್ಮ ಸ್ವಾಮಿ ವಿವೇಕಾನಂದರ ಶಿಷ್ಯರು. ರಾಮಕೃಷ್ಣಾಶ್ರಮದ ತತ್ತ್ವಗಳನ್ನ ಮೈಗೂಡಿಸಿಕೊಂಡವರು. ಅವರು ಹೇಳಿದ ವಿಶ್ವ ಮಾನವತ್ವವೇ ಹಿಂದೂ ಧರ್ಮದ ಬುನಾದಿಯಾಗಿದೆ. ಪುರೋಹಿತ ಷಾಹಿಯ ಸೋಗಲಾಡಿತನಗಳು, ಕಂದಾಚಾರಗಳನ್ನು ಅವರು ದ್ವೇಷಿಸಿದಷ್ಟೇ ತೀವ್ರವಾಗಿ ಮತಾಂತರ ಮತ್ತು ಕ್ರೈಸ್ತರ ಆಟಾಟೋಪವನ್ನೂ ಖಂಡಿಸುತ್ತಿದ್ದರು ಎನ್ನುವುದನ್ನು ಅವರ ಕೃತಿಗಳಲ್ಲಿ ಗ್ರಹಿಸಬಹುದು. ಮತಾಂತರವಾಗ ಹೊರಟಿದ್ದವನನ್ನು ತಡೆಯಲು, ಪಾದ್ರಿಯನ್ನು ಬೆದರಿಸಲು ಅವರು ತಮ್ಮ ‘ಮಲೆಗಳಲ್ಲಿ ಮದುಮಗಳು ’ ಪಾತ್ರಗಳ ಮೂಲಕ ಬಂದೂಕು ಹಿಡಿಸುತ್ತಾರೆ! (ಹೆದರಿಸಲು ಮಾತ್ರ).
ಸಂದೀಪ್, ನಿಮ್ಮ ಚಿಂತನೆಗಳು, ಭಾವನೆಗಳು ಗಟ್ಟಿಯಾಗಿವೆ. ಖುಷಿಯಾಯ್ತು. ಇನ್ನೊಂಚೂರು ಪ್ರಬುದ್ಧವಾಗಿಬಿಟ್ಟರೆ (ಹೀಗೆ ಹೇಳಬಾರದಿತ್ತೆನಿಸಿದರೆ ಸಾರಿ) ನೀವು ಸಮರ್ಥರಾಗಿಬಿಡುತ್ತೀರಿ!
ಮಯೂರ,
ನಿಜ. ತಾವಾಗಿಯೇ ಎತ್ತರದವರೆಂದು ಗುರುತಿಸಿಕೊಳ್ಳಲು ಸಾಧ್ಯವಾಗದವರು ಮತ್ತೊಬ್ಬರನ್ನು ಹೂತು ಅವರ ಗೋರಿಯ ಮೇಲೆ ನಿಂತು ‘ನನ್ನ ಎತ್ತರ ಅಳೆಯಿರಿ’ ಎನ್ನುತ್ತಾರೆ. ಇದು ಎಲ್ಲಾ ಕಾಲ/ ಕ್ಷೇತ್ರಕ್ಕೂ ಅಪ್ಲೇ ಆಗುತ್ತದೆ.
– ಚೇತನಾ
ಸುಪ್ರೀತ್ ಎತ್ತಿಕೊಟ್ಟ ಮಾತುಗಳು ಚರ್ಚೆಯ ಹರವನ್ನು ಮತ್ತಷ್ಟು ವಿಸ್ತಾರಗೊಳಿಸಿದೆ. ಥ್ಯಾಂಕ್ಸ್ ಟು ಸುಪ್ರೀ.
ನನ್ನ ಕೆಲವು ಮಾತುಗಳನ್ನ ನಿಮ್ಮ ಜೊತೆ ಹಂಚಿಕೊಳ್ಳುವೆ.
* ಇವತ್ತು ವೀರಪ್ಪ ಮೊಯ್ಲಿ ಸ್ಟೇಟ್ ಮೆಂಟ್ ನೋಡಿದೆ. ಗೋಧ್ರಾ ಘಟನೆ ಕುರಿತು ನಾನಾವತಿ ಆಯೋಗ ನೀಡಿದ ವರದಿಗೆ ಪ್ರತಿಕ್ರಿಯಿಸಿರುವ ಅವರು, ಬೇರೆ ದೇಶದಲ್ಲಾಗಿದ್ದರೆ ಮೋದಿಯನ್ನು ಗಲ್ಲಿಗೇರಿಸ್ತಿದ್ದರು ಎಂದು ಹೇಳಿದ್ದಾರೆ.ಗೋಧ್ರಾನಂತರದ ಘಟನೆಗಳು ಕರಸೇವಕರ ಸಜೀವ ದಹನದ ಪ್ರಚೋದನೆಗೆ ಪ್ರತಿಕ್ರಿಯೆಯಾಗಿತ್ತು. ನಿಜ. ಈ ಸಂದರ್ಭದಲ್ಲಿ ಅನೇಕ ಕ್ರೂರ ಹಿಂಸೆಗಳು ಜರುಗಿದವು. ಅದು ಖಂಡನೀಯ. ಆದರೆ ಒಟ್ಟು ಘಟನೆಯನ್ನು ಗಮನಿಸದೆ ಒಟ್ಟಾರೆ ಹಿಂದೂವನ್ನು ಮಾತ್ರ ತಪ್ಪಿಸ್ಥನ ಜಾಗದಲ್ಲಿ ನಿಲ್ಲಿಸೋದನ್ನ ನಾನು ಖಂಡಿಸ್ತೇನೆ.
ಒಂದು ಸಂಗತಿ ನಾವು ಗಮನಿಸಬೇಕು. ಇಲ್ಲಿ ಸಾಮೂಹಿಕ ಪ್ರಚೋದನೆಗೆ ಸಾಮೂಹಿಕ ಪ್ರತಿಕ್ರಿಯೆ ನಡೆದಿತ್ತು. ಆದರೆ,
ಇಂದಿರಾ ಹತ್ಯೆಯಾದಾಗ ಕಾಂಗ್ರೆಸಿಗರು ಇಡಿಯ ಸಿಖ್ ಸಮುದಾಯದ ಮೇಲೆ ಮುಗಿಬಿದ್ದರಲ್ಲ, ಅತೀವ ಪ್ರಮಾಣದ ಜೀವ ಹನಿಯಾದವಲ್ಲ, ಆಗ ಯಾಕೆ ರಾಜೀವ್ ರನ್ನು (ಆಗ ಅವರೇ ತಾನೇ ಪ್ರಧಾನಿಯಾಗಿದ್ದು?) ಯಾರೂ ಪ್ರಶ್ನಿಸಲಿಲ್ಲ? ಯಾಕೆ ಅವರನ್ನು ಗಲ್ಲಿಗೇರಿಸುವ ಉತ್ಸಾಹ ಯಾರಿಗೂ ಮೂಡಲಿಲ್ಲ?
ತಮ್ಮ ಇತಿಹಾಸ ಮರೆತು ಮಾತಾಡೋದು ಇದೆಲ್ಲಿಯ ಜಾಣತನ!?
ಕರ್ನಾಟಕದಲ್ಲಿ ಮತಾಂತರ ನಡೆಯುತ್ತಿದ್ದ ಜಾಗಗಳಲ್ಲಿ ಗಲಭೆಯಾಗಿದ್ದಕ್ಕೆ ಅಮೆರಿಕದ ಕ್ರೈಸ್ತರು ನಮ್ಮ ಪ್ರಧಾನಿಯೆದುರು ಜಾಥಾ ನಡೆಸಿ ಪ್ರತಿಭಟನೆ ತೋರಿಸ್ತಾರೆ… ಹಿಂದೂಗಳು- ಸಾವಿರಾರು ವರ್ಷಗಳ ಮಾತು ಬಿಡಿ, ಸ್ವಾತಂತ್ರ್ಯಾನಂತರದ ಅರವತ್ತು ವರ್ಷಗಳಿಂದಲೂ ಹಿಂಸೆ ಅನುಭವಿಸ್ತಲೇ ಬಂದಿದ್ದಾರೆ, ಯಾಕೆ ಯಾರ ಸಹಾನುಭೂತಿ, ಬೆಂಬಲ, ಭರವಸೆಗಳು ಸಿಕ್ಕೋಲ್ಲ? ಪಕ್ಷನಿಷ್ಟ ಹಿಂದೂಗಳು ಹೇಗಿದ್ದರೂ ಮತ ಹಾಕ್ತಾರೆ, ಮುಸ್ಲಿಂ/ ಕ್ರೈಸ್ತರ ಮತಗಳು ಕಳೆದುಹೋಗುತ್ತದೆಂದು ಭಯವೇ? ಚಿಂತಕರೆನಿಸಿಕೊಂದವರಿಗೆ ತಾವೆಲ್ಲಿ ‘ಗೊಡ್ಡು ಆಚಾರದವರು’ ಎನಿಸಿಕೊಂಡುಬಿಡುವೆವೋ ಎಂಬ ಚಿಂತೆಯೇ?
* ಕ್ರೈಸ್ತ ಧರ್ಮಕ್ಕೆ ಮತಾಂತರವಾದರೆ ಅಸಮಾನತೆ ತೊಲಗುತ್ತದೆಯೆಂದಾದರೆ, ‘ದಲಿತ ಕ್ರೈಸ್ತರು’ ಯಾಕಿದ್ದಾರೆ? ‘ಶಾಂತಿ- ಪ್ರೀತಿಯನ್ನು ಬೋಧಿಸುವ ಧರ್ಮದ ಮೇಲೆ ದಾಳಿ ಖಂಡನೀಯ’ ಅನ್ನುತ್ತಿದ್ದಾರಲ್ಲ, ಶತಶತಮಾನಗಳಿಂದ ಇವರು ಮತಾಂತರ ನಡೆಸಲಿಕ್ಕಾಗಿ, ಲೂಟಿ ಹೊಡೆಯಲಿಕ್ಕಾಗಿ ಏಸುದೇವನ ಹೆಸರನ್ನು ದುರುಪಯೋಗಪಡಿಸ್ಕೊಳ್ತಿರೋದನ್ನು ಒಪ್ಪಬೇಕೇನು?
ಇದೇನೂ ಹಳೆಯ ಕಥೆಯಲ್ಲ, ಈಶಾನ್ಯ ರಾಜ್ಯಗಳಲ್ಲಿ ಕ್ರಿಶ್ಚಿಯನ್ ಭಯೋತ್ಪಾದನೆ ಯಾವ ಮಟ್ಟಕ್ಕೆ ಹೋಗಿದೆ, ಅದರ ಕುಮ್ಮಕ್ಕು ಯಾರದು ಎಂಬುದು ಗೊತ್ತಿಲ್ಲವೇ?
ಹ್ಹ! ನಾಲ್ಕು ಪುಂಡರು ಕಲ್ಲು ಹೊಡೆದ ಮಾತ್ರಕ್ಕೆ ರಾತ್ರೋರಾತ್ರಿ ಹಿಂದೂಗಳು ಭಯೋತ್ಪಾದಕರಾಗಿಹೋದರಲ್ಲವೆ?
* ಮೊನ್ನೆ ಹಿಂದೂ ಸಂತರ ತಂಡ ಮಾತುಕಥೆ ನಡೆಸಿ ‘ಮತ್ತೆ ಚರ್ಚುಗಳ ಮೇಲೆ ದಾಳಿಯದರೆ ಇಪ್ಪತ್ತ ನಾಲ್ಕು ಗಂಟೆ ಉಪವಾಸ ಕುಳಿತು ಪ್ರತಿಭಟಿಸುವೆವು’ ಎಂದು ಹೇಳಿಕೆ ಕೊಟ್ಟಿತು.
ಇಷ್ಟು ಮಾತ್ರದ ಸಹಾನುಭೂತಿ ನಮಗೆ ಯಾವಾಗ ಸಿಕ್ಕಿದೆ ಹೇಳಿ? ಯಾವ ಧರ್ಮಗುರುಗಳು ನಮ್ಮ ಮೇಲೆ ದಾಳಿಯಾದಾಗ ಇಂಥದೊಂದು ಹೇಳಿಕೆ ಕೊಟ್ಟಿದ್ದಾರೆ?
ಇಲ್ಲಿ, ಧರ್ಮ- ಧರ್ಮಗಳ ನಡುವೆ ಕಿಚ್ಚು ಹಚ್ಚುವುದು, ಕೆಸರೆರೆಚಾಟ ನಡೆಸೋದು ನನ್ನ ಉದ್ದೇಶವಲ್ಲ. ಈಗಾಗಲೇ ನೆಲೆ ಕಳೆದುಕೊಂಡು ಅನಾಥನಾಗುತ್ತಿರುವ ಹಿಂದೂವನ್ನು ಸುಖಾಸುಮ್ಮನೆ ದೂಷಿಸೋದನ್ನ ಸಹಿಸಿಕೊಂದ ಸುಮ್ಮನಿರಲಾಗೋದಿಲ್ಲ ಅಷ್ಟೇ.
– ವಂದೇ,
ಚೇತನಾ ತೀರ್ಥಹಳ್ಳಿ

ನನ್ನ ಅಜ್ಜನ ಬಗ್ಗೆನೇ ಇನ್ನೂ ತಿಳಿದುಕೊಂಡಿಲ್ಲ ನಾನು ಇನ್ನು ಗಾಂಧಿ ಅಜ್ಜನ ಬಗ್ಗೆ ಏನು ತಿಳಿದುಕೊಳ್ಳೋದು??
ನೋಡಿ ಗಾಂಧಿ ತಾತನ ಬಗ್ಗೆ ನನಗೇನೂ ದ್ವೇಷವಿಲ್ಲ.ಅವರ ಸಿದ್ಧಾಂತಗಳ ಬಗೆಗೂ ಆಕ್ಶೇಪ ಇಲ್ಲ,ಹಾಗೇ ಕುವೆಂಪು ಬಗ್ಗೆ ಕೂಡಾ ನನ್ಗೆ ಎಳ್ಳಷ್ಟೂ ತಿಳಿದಿಲ್ಲ.
ನನ್ಗೆ ಬದುಕಲು ಬೇಕಾದ ಸಿದ್ಧಾಂತಗಳಲ್ಲಿ ವಿಶ್ವಾಸವಿರೋದು.ಈ ಪ್ರಪಂಚ ಅಷ್ಟು ಒಳ್ಳೇದಲ್ಲ ಅನ್ನೋದು ನಿಮಗೆಲ್ಲಾ ಗೊತ್ತಿರೋದೆ .ಇಂಥ ಪ್ರಪಂಚದಲ್ಲಿ ಬದುಕಲು ಬೇಕಾಗಿರೋ ಸಿಧ್ಧಾಂತಗಳು ಸಾಕು ನನ್ಗೆ.ಇಂಥ ಸಿದ್ಧಾಂತವೊಂದು ಎಲ್ಲರ ಸಿದ್ಧಾಂತಗಳ remix ಆಗಿದ್ರೂ ಪರ್ವಾಗಿಲ್ಲ ನಾನು ಅದನ್ನೇ follow ಮಾಡ್ತೀನಿ.
ಚೇತನಾ ,
ಗಾಂಧೀಜಿಯ ಬಗ್ಗೆ ನೀವು ಎಷ್ಟೇ ಪುಸ್ತಕ ಕೊಟ್ರೂ ನನ್ನ ಧೋರಣೆ ಬದಲಾಗೋದಿಲ್ಲ.
ನಾನು ಪೇಪರ್ ಓದ್ಬೇಕಾದ್ತೂ ಲಂಕೇಶ್,ಹಾಯ್ ಬೆಂಗಳೂರು,ಅಗ್ನಿ,ಪೋಲಿಸ್ ನ್ಯೊಸ್(ಛೀ ಅನ್ಬೇಡಿ!) ಎಲ್ಲ ಗುಡ್ದೆ ಹಾಕ್ಕೊಂಡೇ ಓದೋದು .ನಾನು ಯಾರನ್ನೂ follow ಮಾಡಲ್ಲ.ಚೆನ್ನಾಗಿದ್ರೆ appreciate ಮಾಡ್ತೀನಿ .ಚೆನ್ನಾಗಿಲ್ಲ ಅಂದ್ರೆ ಚೆನ್ನಾಗಿಲ್ಲ ಅಂತೀನಿ.
ಚರ್ಚೆ ಮಾಡೋದಕ್ಕೇನ್ರಿ ’ಜೆಹಾದ್’ ಕೂಡಾ ಒಳ್ಳೇದೆ ಅಂತ ಪುಟಗಟ್ಟಲೆ ಬರೆದು ಚರ್ಚೆ ಮಾಡಬಹುದು .
ಜೆಹಾದಿಗಳಿಗೆ ತಮ್ಮ ಧರ್ಮದ ಬಗ್ಗೆ ಇದ್ದ ಪ್ರೀತಿ ಭಾರತದ ಮೇಲಿದ್ದಿದ್ರೆ ನಾವೆಲ್ಲೋ ಇರ್ತಾ ಇದ್ವಿ !!
hmmm….
MAY GOD BLESS
which god 😉