ಬಾಗಿಲು ಬಡಿದ ಸದ್ದಿಗೆ ಕೆಲಸದಾಕೆ ಓಡಿ ಬಂದಳು. ನನ್ನ ನೋಡಿ `ತಗಾಳಿ! ಡೆಲ್ಲಿಯಿಂದ ಬರೋದೂ ಅಂದ್ರೆ ಶಿಮಾಗದಿಂದ ಬಂದಷ್ಟ್ ಸುಲೂಭ ಆಗ್ಯದೆ ಈಗ’ ಅಂದು ಸಡಗರಿಸಿದಳು.
ಅವಳ ಹಿಂದೆಯೇ ಸೆರಗಿಗೆ ಕೈಯೊರೆಸುತ್ತ ಬಂದ ಅಮ್ಮನ ಮುಖದಲ್ಲೇನೂ ಖುಷಿ ಕಾಣಲಿಲ್ಲ.
ಕಾಣೋದಾದರೂ ಹೇಗೆ? ನಾನೊಬ್ಬಳೇ… ಅದೂ ಅಷ್ಟು ದೊಡ್ಡ ಸೂಟ್ ಕೇಸ್ ಹಿಡ್ಕೊಂಡು, ಹೀಗೆ ಹೇಳದೆ ಕೇಳದೆ ಬಂದಿರುವಾಗ!? ಮುಂದಿನದು ಇಲ್ಲಿದೆ…

ಚೇತನಾ ಅವರೆ ಈ ಅಪರೂಪದ ಅತಿಥಿಯ ನಮಸ್ಕಾರಗಳನ್ನು ಸ್ವೀಕರಿಸಿರಿ.
ತುಂಬಾ ದಿನಗಳ ನಂತರ ನಾನು ನಿಮ್ಮ ಬ್ಲಾಗ ನೋಡಿದೆ ಎಂದಿನಂತೆ ಹೊಸ ಚೈತನ್ನವೇ ಮನಸ್ಸನ್ನು ಹೊಕ್ಕಿತು. ಆದರೆ, ನಿಮ್ಮ ಮೇಲೆ ಮಾಡಿದಂತಹ ಆರೋಪಗಳಲ್ಲಿ ಎಳ್ಳಷ್ಟು ಹುರುಳಿಲ್ಲ ಅನಿಸಿತು. ಇದು ಪ್ರಜಾಪ್ರಭುತ್ವ ಅಲ್ಲವೇ ಎಲ್ಲರೀಗೂ ಅವರವರ ಅಭಿಪ್ರಾಯ ತಿಳಿಸುವ ವಾಕ್ ಸ್ವಾತಂತ್ರೈ ಇದೆ ಅಲ್ಲ ಬಿಡಿ ನಾವು ಮಾಡುವ ಕೆಲಸ ನಮ್ಮ ಅಂತರಾತ್ಮಗಳಿಗೆ ಸರಿ ಎನಿಸಿದರೆ ಸಾಕು ಅಲ್ಲವೇ??
ಸಾರಿ ನಿಮ್ಮ ಬ್ಲಾಗನ್ನು ಪ್ರತಿದಿನ ನೋಡುವ, ಓದುವ ಭಾಗ್ಯ ನನಗಿಲ್ಲ . ಈ ಬಿಡುವಿರದ ಬದುಕಿನಲ್ಲಿ ನನ್ನದೊಂದು computer, internet connection ತಗೊಲ್ಲೊವರೆಗೂ ಇದು ಸಾಧ್ಯ ಆಗೊಲ್ಲ ಅನ್ನಿಸುತ್ತೆ. ಓಕೆ ಮೇಡಂ ನಮಸ್ಕಾರ ಬರ್ತೀನಿ.
ಗಿರೀಶ ಕೆ.ಎಸ್.
girisha_giri123@yahoo.co.in
ಧನ್ಯವಾದ ಗಿರೀಶ್,
ಭೇಟಿ ನೀಡುತ್ತಿರಿ.
ವಂದೇ,
ಚೇತನಾ