ನಿನ್ನ ಗಂಡೆದೆ ಹೀಗೆ…


ನಿನ್ನೆದೆಯಲ್ಲಿ ಮುಖವಿಟ್ಟಾಗ
ಒಳಗೆಲ್ಲ ಏನೊ ಅರಳಿದ ಸದ್ದು.
ನಿದ್ದೆಯ ಮಗು ನಕ್ಕ ಹಾಗೆ,
ಹಾಗೇ ಸಣ್ಣ ನಿರುಮ್ಮಳ.

ಕೂದಲ ನಡುವೆ ಬೆರಳು ತೂರಿ
ನೀ ತಲೆಯನುಜ್ಜುವಾಗ
ಸಾವಿರ ದಳದ ಮೊಗ್ಗು ಬಿರಿದು,
ಸಹಸ್ರಾರ ಚಟಪಟ.

ಜಗದ ಬೆರಗು ಹರಿಯುವಂತೆ
ತುಳುಕುತ್ತ ನಗುವ
ನಿನ್ನ ಗಂಡೆದೆ ಹೀಗೆ,
ಅಮ್ಮನ ತೊಡೆಯ ಹಾಗೆ…

19 thoughts on “ನಿನ್ನ ಗಂಡೆದೆ ಹೀಗೆ…

Add yours

  1. ಹೌದು ಅವನ ಗಂಡೆದೆ ಅಮ್ಮನ ತೊಡೆಯ ಹಾಗೆ…ಅವನನ್ನ ಅವನ ಪ್ರೀತಿಯನ್ನ ದಿನದ ಜಂಜಡಗಳ ನಡುವೆ ಅವನ ಮೇಲೆ ಸಿಟ್ಟಾಗಿರುವಾಗ ನೆನಪಿಸಿದ್ದಕ್ಕೆ ಸಿಟ್ಟನ್ನು ಅಳಿಸಿಹಾಕಿದ್ದಕ್ಕೆ ಧನ್ಯವಾದಗಳು.

  2. ಇದೇನಿದು?! ಫುಲ್ ಡಿಫರೆನ್ಟು !!
    ನಾನು ಅಪ್ಪಿ ತಪ್ಪಿ ಬೇರೆ ಕಡೆ ಬಂದು ಬಿಟ್ಟೇನಾ ಅಂತ ನೋಡಿದೆ 😉
    ಬೆಂಕಿಯಲ್ಲಿ ಉರಿಯುತ್ತಿದ್ದ ಮರಗಳು ಹಸಿರು ತುಂಬಿ ಹೂ ಬಿಡುತ್ತಿವೆ !

    ಏನೇ ಇರಲಿ, ಈ ಕನವರಿಕೆ ಚೆನ್ನಾಗಿದೆ.

  3. ಅನಾಮಿಕೆ, ಧನ್ಯವಾದಕ್ಕೆ ಧನ್ಯವಾದ.

    ರಮೇಶ್,
    ಯಾರು ಪುಣ್ಯವಂತ್ರು? ಪರ್ವಗಿಲ್ವಾ, ಚೆನಾಗಿದ್ಯಾ? ಗೊಂದಲಗೊಂಡಿದ್ದೇನೆ. ದಯಮಾಡಿ ಪರಿಹರಿಸು.

    ನೀಲಾಂಜಲ,
    ಈ ಹಿಂದೆಯೂ ಈ ಥರದ್ದನ್ನ ಬರೆದಿದ್ದೇನೆ. ಇದು ಕೂಡ ಒಂದು ವರ್ಷ ಹಳೆ ಕವಿತೆ! ಬೆಂಕಿಯಲ್ಲಿ ಅರಳಿದ ಹೂ!? 🙂

    ಸಂದೀಪ್, ವೈಶಾಲಿ, ಮಹೇಶ್, ವಿಜಯ್, ಪ್ರದೀಪ್… ಥ್ಯಾಂಕ್ಸ್.

  4. “ಒಳಗೆಲ್ಲ ಏನೊ ಅರಳಿದ ಸದ್ದು”
    “ಸಾವಿರ ದಳದ ಮೊಗ್ಗು ಬಿರಿದು”
    “ಜಗದ ಬೆರಗು ಹರಿಯುವಂತೆ”

    Very inspiring and energetic. Makes anybody look at the world with more optimism. Good one Chetana.

  5. ಸ್ಖಲನ ಅವರೇ, ಪ್ಲೀಸ್ ಒಂದು ಹೆಸರಿಟ್ಕೊಳ್ಳಿ :). ಸ್ವಂತದ್ದಲ್ಲದಿದ್ರೂ ಪರ್ವಾಗಿಲ್ಲ.
    ನಿಮ್ಮ ಮೆಚ್ಚುಗೆಗೆ ಧನ್ಯವಾದ.
    ಪ್ರೀತಿಯಿಂದ,
    ಚೇತನಾ

  6. ಹಲವಾರು ದಿನಗಳಿಂದ ಬ್ಲಾಗುಗಳನ್ನು ಸ್ವಲ್ಪ ಎಕ್ಸ್ಪ್ಲೋರ್ ಮಾಡಲು ಆರಂಭಿಸಿದ್ದೆ. ನಿಮ್ಮ ಹೆಸರು ಕೇಳಿದ್ದರೂ ಓದುವ ಅವಕಾಶ ಸಿಕ್ಕಿದ್ದು ಇವತ್ತೇ. ಮನೆ, ಆಫೀಸು ಎರಡರ ನಡುವೆ ಹರಸಾಹಸ ಮಾಡಿ ನಂಗೆ ಅಂತ ಒಂದಷ್ಟು ಸಮಯ ಎತ್ತಿಟ್ಟುಕೊಳ್ಳಲು ಈಗಿನ್ನೂ ಪ್ರಾರಂಭಿಸಿದ್ದೇನೆ. ಏನೇ ಬರೆದರೂ ಚೆಂದಾಗಿ ಬರೆಯುತ್ತೀರಿ.
    ನಿನ್ನ ಗಂಡೆದೆ ಹೀಗೆ,
    ಅಮ್ಮನ ತೊಡೆಯ ಹಾಗೆ… ಅನ್ನೋದು ಸತ್ಯ.

    ಅಂದ ಹಾಗೆ ನನ್ನ ಹೆಸರು ಶಮ ಅಂತ.

ನಿಮ್ಮ ಟಿಪ್ಪಣಿ ಬರೆಯಿರಿ

Create a free website or blog at WordPress.com.

Up ↑