ಭ್ರಷ್ಟಾಚಾರದ ಬಗ್ಗೆ ಮಾತನಾಡುವಾ ಅಂತ ನಾನೇನಾದರೂ ಅಂದರೆ ನೀವು ನಕ್ಕುಬಿಡಬಹುದು. ಈಗ ನಾನು ಹೇಳಲಿರುವ ವಿಷಯ ಅತ್ಯಂತ ಸಾಮಾನ್ಯ ಸಂಗತಿಯೂ ಆಗಿರಬಹುದು. ಆದರೆ, ವಿದ್ಯಾರ್ಥಿನಿಯೊಬ್ಬಳು ಲಂಚ ಕೊಡಲು ಮನಸೊಲ್ಲದೆ, ಕೊಡದೆ ಬೇರೆ ದಾರಿಯಿಲ್ಲದೆ ತನ್ನ ಸಂಕಟ ತೋಡಿಕೊಂಡಾಗ, ಇದನ್ನು ನಿಮ್ಮ ಮುಂದಿಟ್ಟು, ಪರಿಹಾರ ತಿಳಿದಿದ್ದರೆ, ಸಲಹೆ ಸೂಚನೆಗಳಿದ್ದರೆ ಕೇಳಬೇಕೆನಿಸಿತು.
ಇಲ್ಲಿದೆ- ಶ್ವೇತಾ ಎನ್ನುವ ಹುಡುಗಿಯ ಸಂಕಟ, ಅಣ್ಣ ಚಕ್ರವರ್ತಿಯ ಬಳಿ ಹೇಳಿಕೊಂಡಂತೆ… ನಾವು ನಿಮ್ಮ ಸಲಹೆ ಸಹಕಾರಗಳಿಗಾಗಿ ಕಾದಿದ್ದೇವೆ. ಶ್ವೇತಾ ಕೂಡಾ.
ವಂದೇ,
ಚೇತನಾ ತೀರ್ಥಹಳ್ಳಿ.

ಸಮಸ್ಯೆಗೆ ಪರಿಹಾರ ಇದೇ ಇದೆ .
ಆದ್ರೆ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು?
ಕೊನೆಗೆ ಶ್ವೇತಾಳೆ “ಅಕ್ಕ ನಂದು ತಪ್ಪಾಯ್ತು ಉಗುರಲ್ಲಿ ಆಗೋದಕ್ಕೆ ಕೊಡಲಿ ಎತ್ತಿಕೊಂಡೆ ” ಅಂತ ಏನಾದ್ರೂ ಹೇಳಿದ್ರೆ ಸಹಾಯಕ್ಕೆ ಬಂದವರೆಲ್ಲ ಜೀವನಪೂರ್ತಿ ಯಾರಿಗೂ ಸಹಾಯ ಮಾಡದೇ ಇರೋ ಪರಿಸ್ಥಿತಿ ಬರಬಹುದು.(ಯಾಕಂದ್ರೆ ಬಹಳಷ್ಟು ಸಂದರ್ಭದಲ್ಲಿ ನನಗೇ ಈ ರೀತಿ ಸಹಾಯ ಮಾಡಲು ಹೋಗಿ ,ಸಹಾಯ ಪಡೆದವರೇ ಕಾರಣಾಂತರಗಳಿಂದ ತಿರುಗಿ ಬಿದ್ದಿದ್ದಾರೆ)
ಲಂಚ ತಗೊಳ್ಳೋದು ಒಂದು ಚಟ .ಈಗ ಸಿಕ್ಕಿ ಬಿದ್ದು ಸಸ್ಪೆಂಡ್ ಆದ್ರೂ ಮುಂದೆ ಖಂಡಿತ ಚಾಳಿ ಮುಂದುವರೆಸುತ್ತಾರೆ ಅವರು.
ಲೋಕಾಯುಕ್ತವೇ ಸಧ್ಯದ ಪರಿಹಾರ.
lokayukta link ಹಾಕಬೇಕಾದ್ರೆ ಎಡವಟ್ಟಾಯ್ತು.
Click to access telephone.pdf
ಲೋಕಾಯುಕ್ತದ ಲಿಂಕು
ಚೇತನಾ,
ಸಮಸ್ಯೆ ಬುಡಕ್ಕೆ ಕೈ ಹಾಕಬೇಕು, ಅದು ಅಷ್ಟು ಸುಲಭದ ಕೆಲಸವಲ್ಲ. ಇಡಿ ವ್ಯವಸ್ಥೆಯನ್ನು ಸರಿ ಮಾಡಲು ವರ್ಷಗಟ್ಟಳೆ ತೆಗೆದುಕೊಳ್ಳಬಹುದು.
ನಂಗೆ ಕೇಳಿದರೆ ಅವರ/ಅಂತವರ ಮನೆಗೆ ದಿನಕ್ಕೊಂದು ಪೋಸ್ಟ ಕಾರ್ಡ್ ಕಳಿಸಿ. . ಅದರಲ್ಲಿ ಧೀಮಂತ ಗುರುಗಳ ಕತೆ ಬರೆದು ಕಳಿಸಿ, ಹೆದರಿಸಬೇಡಿ ಮಾತ್ರ.
ನಮ್ಮ ಕಾಲೇಜಿನಲ್ಲೂ ಇದೇ ರೀತಿ ನಮ್ಮ ಸೀನಿಯರ್ಸ್ ಗೆ ಒಬ್ರು ಲೆಕ್ಚರರ್ ಪ್ರಾಕ್ಟಿಕಲ್ ಎಕ್ಸಾಮ್ ಗೆ ಹಣ ಕೇಳಿದ್ರು .Rs 1000/- per head!
ಎಲ್ಲಾ ಸೇರಿ ಕೊಟ್ಟಿದ್ರು .ಅವ್ರು ಎಲ್ಲರಿಗೂ ಕಣ್ನು ಮುಚ್ಚಿ 90 ರ ಮೇಲೆ ಮಾರ್ಕ್ಸ್ ಕೊಟ್ಟಿದ್ರು .
ಪಾಪ ಬಹಳಷ್ಟು ಜನರಿಗೆ ಪ್ರಾಕ್ಟಿಕಲ್ ನಲ್ಲಿ 90 ಬಂದ್ರೂ ಥಿಯರಿನಲ್ಲಿ 35 ತೆಗೆಯೋದಕ್ಕೆ ಸಾಧ್ಯ ಆಗೇ ಇಲ್ಲ:))