ಜವಾಬ್ದಾರಿಯುತ ಮನುಷ್ಯರು ಸಾಕಷ್ಟಿದ್ದಾರೆ…


ನೋವಿನ ನದಿ ಹರಿಸಿ
ಧರ್ಮದ ತೆಪ್ಪದಲ್ಲಿ
ದಡ ಸೇರಲು ಬಯಸಿದ್ದಾರೆ!

ತೊಟ್ಟಿಕ್ಕಿದ ನೋವು
ಮಣ್ಣಲ್ಲಿ ಬೆರೆತು
ಕೆಂಪಾಗಿದೆ…

ಈ  ಹಾಯ್ಕುವನ್ನು ಸ್ನೇಹಿತರಾದ ಡಾ.ರವೀಂದ್ರನಾಥ್ ಕಳುಹಿಸಿಕೊಟ್ಟಿದ್ದು. ಆಗವರು ನ್ಯೂಸ್ ನೋಡುತ್ತ ಕುಳಿತಿದ್ದರು. ಅದರಲ್ಲಿ ಏನು ಬರುತ್ತಿತ್ತೆನ್ನುವುದನ್ನು ಹೇಳಬೇಕಿಲ್ಲ ಅಲ್ಲವೆ?

~
ಹೀಗೆ ನೆನ್ನೆಯಿಡೀ ಹರಿದಾಡಿದ ಮೆಸೇಜುಗಳಿಗೆ ಲೆಕ್ಕವಿಲ್ಲ. ರೋಷದ, ವಿಷಾದದ, ಹತಾಶೆಯ, ಸೇಡಿನ, ದ್ವೇಷದ, ಆತಂಕದ, ವಿಡಂಬನೆಯ…. ಒಂದೇ ಎರಡೇ?
ಈ ಮೆಸೇಜುಗಳಲ್ಲಿ ಎರಡು ಹೀಗಿವೆ:

1. Pass it on… ” Forgiving the terrorists is left to God; But fixing their appointment with God is our responsibility”

2. We salute the brave officers who laid down their lives in protecting us and our country, including HEMANT KARKARE, ASHOK KAMTE, VIJAY SALASKAR and SANDIP UNNIKRISHNAN. Pray for our forces who are still fighting with terrorists without thinking about their lives and family just for us. JAI HIND!!

3. ತಾಜಾ ಸುದ್ದಿ. ತಮ್ಮ ಬಂಧುಗಳು ಮಾಡಿದ ಕೃತ್ಯಗಳಿಂದಾಗಿ ನೊಂದು ಒಬ್ಬ ಪಳಾಗಿದ ರಾಜಕಾರಣಿ,  ಒಬ್ಬ ಸಾಹಿತಿ ಮತ್ತು ಒಬ್ಬ ಪತ್ರಕರ್ತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ!! ( ಬಂದ ಮೆಸೇಜಲ್ಲಿ ಅವರೆಲ್ಲರ ಹೆಸರುಗಳೂ ಇದ್ದವು. ಅದನ್ನ ಬೇಕೆಂದೇ ಕೈಬಿಟ್ಟಿದ್ದೇನೆ.)

4.  NSG Commandos – who have both North Indians and South Indians have come to Mumbai so that Raj Thakre can sleep peacefully. Pl forward this so that it finally reaches the coward bully!

~

ಕನ್ನಡ ಬ್ಲಾಗ್ ಲೋಕದಲ್ಲಿ ಬರೀ ಕಥೆ- ಕವನ- ಭಾವ ಲಹರಿಗಳಲ್ಲಿ ಕಳೆದುಹೋಗದೆ ಸಮಾಜದ ಅಗುಹೋಗುಗಳಿಗೆ ಸ್ಪಂದಿಸುವ ಜವಾಬ್ದಾರಿಯುತ ಮನಸ್ಸುಗಳೂ ಇವೆ. ಅದು ಈ ಹಿಂದೆಯೂ ಸಾಕಷ್ಟು ಸಂದರ್ಭದಲ್ಲಿ ಪ್ರೂವ್ ಆಗಿದ್ದರೂ ಈಗ ಮತ್ತೊಮ್ಮೆ ಅದನ್ನು ತಮ್ಮ ಗಮನಕ್ಕೆ ತರುವ ಯತ್ನ ಮಾಡುತ್ತಿದ್ದೇನೆ. ಈ ಕೆಳಗಿನ ಬ್ಲಗ್ ಗಳ ಲಿಂಕುಗಳಲ್ಲಿ ಮುಂಬಯಿಯಲ್ಲಿ ನಡೆದ ನರಮೇಧದ ಕುರಿತು ಬ್ಲಾಗಿಗರ ಅಭಿಪ್ರಾಯಗಳನ್ನು ನೋಡಬಹುದು. ನಾನು ನನ್ನ ಕಣ್ಣಿಗೆ ಬಿದ್ದ ಕೆಲವನ್ನಷ್ಟೆ ಇಲ್ಲಿ ನೀಡಲು ಸಾಧ್ಯವಾಗಿದೆ. ನಿಮಗೂಇದಕ್ಕೆ ಸಂಬಂಧಿಸಿದ ಲೇಖನಗಳು ಕಣ್ಣಿಗೆ ಬಿದ್ದರೆ ದಯವಿಟ್ಟು ಲಿಂಕ್ ಕಳುಹಿಸಿಕೊಡಿ. ಇವುಗಳ ಜೊತೆ ಒಂದಷ್ಟು ಸಂಪದಿಗರೂ ಈ ಬಗ್ಗೆ ಬರೆದಿದ್ದಾರೆ. ಆದರೆ ಅದು ನನ್ನ ಈ ಸಿಸ್ಟಮ್ ನಲ್ಲಿ ಓಪನ್ ಆಗುತ್ತ್ತಿಲ್ಲವಾದ್ದರಿಂದ ಲಿಂಕ್ ನೀಡಲು ಸಾಧ್ಯವಾಗಲಿಲ್ಲ.

ಈ ಪೋಸ್ಟಿನ ಜೊತೆಗೆ ಮುಂಬಯ್ ನರಮೇಧದ ಕುರಿತ ನನ್ನ ಅಭಿಪ್ರಾಯ- ಬರಹಗಳನ್ನು ಮುಗಿಸುತ್ತಿದ್ದೇನೆ.

ಬ್ಲಾಗ್ ಲಿಂಕ್ ಗಳು:

ನೆಲದ ಮಾತು

ಕಳ್ಳ- ಕುಳ್ಳ,

ಟೀನಾ ಝೋನ್

ಚೆಂಡೆ ಮದ್ದಳೆ

ಚಂಪಕಾವತಿ

ಕುಮ್ರಿ

V. Joshi

kanasu-preeti

ಅಕ್ಷರ ವಿಹಾರ

ಶರಧಿ

ಏನ್ ಗುರು?

9 thoughts on “ಜವಾಬ್ದಾರಿಯುತ ಮನುಷ್ಯರು ಸಾಕಷ್ಟಿದ್ದಾರೆ…

Add yours

  1. ಮುಂದಿನ ಟಾರ್ಗೆಟ್ ಯಾವ ಊರಾದರೂ ಭಯವೇ ಅಲ್ಲವೇ, ಗುರು?

    ಲೇಖನ ನಮ್ಮೆಲ್ಲರ ಒಳತೋಟಿಯನ್ನು ಬಿಂಬಿಸಿದೆ. ಭಯೋತ್ಪಾದನೆಗೆ ರಾಜಕೀಯ, ಜಾತೀಯ, ಮತೀಯ, ಆರ್ಥಿಕ ಬಣ್ಣಗಳನ್ನು ಹಚ್ಚುವುದನ್ನು “ದೊಡ್ಡವರು” ಎಲ್ಲಿಯವರೆಗೆ ಬಿಡುವುದಿಲ್ಲವೋ ಅಲ್ಲಿಯವರೆಗೆ ನಮ್ಮಂಥ ಸಾಮಾನ್ಯರಿಗೆ ಭಯ ತಪ್ಪಿದ್ದಲ್ಲ. ನಾಳೆ ಯಾವ ಊರಲ್ಲಾದರೂ “ಢಮಾರ್” ಅನ್ನಬಹುದು, ನೆಲ ಕೆಂಪಗೆ ನೆನೆಯಬಹುದು, ಉಸಿರು ಹೊಗೆಯಲ್ಲಿ ನರಳಬಹುದು. ಇದಕ್ಕೆಲ್ಲ ನಮ್ಮ ಸಹನೆಯ ಮಿತಿ ಒಂದೇ ಸಾಲದು ನಮ್ಮ ರಾಜಕಾರಣಿಗಳ ಆಸೆಯ/ ಕಿಸೆಯ ಮಿತಿಯೂ ಮುಖ್ಯವಾಗಿರುವುದು ವಿಷಾದದ ಸಂಗತಿ.

    ಇದೇ ಧೋರಣೆಯೊಂದಿಗೆ ನಾವುಗಳು ಒಟ್ಟಾಗಿ ಬರಿಗೈಯಲ್ಲಿ ಬೀದಿಗಿಳಿದರೂ ನಾವೇ ಭಯೋತ್ಪಾದಕರಾಗಿ ಹಣೆಪಟ್ಟಿ ಪಡೆಯುವ ಸಾಧ್ಯತೆಯೇ ಹೆಚ್ಚು. ಬೇಕೆ?

    ಏನು ಮಾಡಬಹುದು?

  2. ಅಕ್ಕಾ,
    ನನ್ನ ಬ್ಲಾಗ್ ಲಿಂಕ್‌ ನೀಡಿ ಜವಬ್ದಾರಿ ಹೆಚ್ಚಿಸಿದ್ದಕ್ಕೆ ಧನ್ಯವಾದಗಳು. ದೇಶದ ದುಸ್ಥಿತಿ ನೋಡಿ ಯಾಕೋ ಭಯವಾಗುತ್ತಿದೆ. ರಾಸಾಯನಿಕ ಅಸ್ತ್ರಗಳೇನಾದರೂ ಭಯೋತ್ಪಾದಕರ ಕೈಗೆ ಸಿಕ್ಕರೆ ದೇಶದ ಗತಿ ಏನು ಎಂಬ ಚಿಂತೆ ಕಾಡುತ್ತಿದೆ…
    ವಿನಾಯಕ

  3. >>> ಕನ್ನಡ ಬ್ಲಾಗ್ ಲೋಕದಲ್ಲಿ ಬರೀ ಕಥೆ- ಕವನ- ಭಾವ ಲಹರಿಗಳಲ್ಲಿ ಕಳೆದುಹೋಗದೆ ಸಮಾಜದ ಅಗುಹೋಗುಗಳಿಗೆ ಸ್ಪಂದಿಸುವ ಜವಾಬ್ದಾರಿಯುತ ಮನಸ್ಸುಗಳೂ ಇವೆ.

    ಯಾಕೋ ನನಗೆ ಈ ವಾಕ್ಯ ಅನವಶ್ಯಕ ಅನ್ನಿಸಿತು. ಸಮಾಜದ ಆಗುಹೋಗುಗಳಿಗೆ ಜವಾಬ್ದಾರಿಯುತವಾಗಿ ಸ್ಪಂದಿಸುವುದಕ್ಕೆ ಬ್ಲಾಗ್ ಒಂದೇ ಮಾರ್ಗವಲ್ಲ, ಬರೀ ಸಾಹಿತ್ಯವಲ್ಲದೆ ಇಂತಹ ಚರ್ಚೆಯೂ ನಡೆದಿದೆ ಎಂದು ಬರೆದ್ದರೆ ಸಾಕಿತ್ತು ಅನ್ನಿಸುತ್ತದೆ.

  4. ಚೇತನಾ ಮೇಡಂ,

    ಮುಂಬೈ ನರಮೇಧದ ಕುರಿತು ನಿಮ್ಮ ಕಳಕಳಿ ನೋಡಿ ಖುಷಿಯಾಯ್ತು.

    >>> ಕನ್ನಡ ಬ್ಲಾಗ್ ಲೋಕದಲ್ಲಿ ಬರೀ ಕಥೆ- ಕವನ- ಭಾವ ಲಹರಿಗಳಲ್ಲಿ ಕಳೆದುಹೋಗದೆ ಸಮಾಜದ ಅಗುಹೋಗುಗಳಿಗೆ ಸ್ಪಂದಿಸುವ ಜವಾಬ್ದಾರಿಯುತ ಮನಸ್ಸುಗಳೂ ಇವೆ.<<<

    ಆದರೆ ನಿಮ್ಮ ಈ ಲೇಖನದ ಟೈಟಲ್,ಮತ್ತು ಈ ಸಾಲು ಹಿಡಿಸಲಿಲ್ಲ. ಬರೆದರೆ ಮಾತ್ರ ಜವಾಬ್ದಾರಿ ಪೂರೈಸಿದಂತೆಯೆ?

    ನಮ್ಮ ಜವಾಬ್ದಾರಿಯನ್ನು ನಾವು ನೀವು ಹೇಳಿದಂತೆಯೇ ತೋರ್ಪಡಿಸಿಕೊಳ್ಳಬೇಕೇ?

    ಇಂತಿ ಜವಾಬ್ದಾರಿಯುತ ಬ್ಲಾಗಿಗ,
    ರಂಜಿತ್.

  5. ಸುಪ್ರೀ, ರಂಜಿತ್,
    ತಪ್ಪಾಗಿ ಅರ್ಥ ಮಾಡಿಕೊಮ್ದಿರುವಂತಿದೆ. ಅಥವಾ, ಬರೆದಿರುವುದೇ ಹಾಗೆ ಎರಡರ್ಥ ಬರುವಂತಿದೆಯೇನೋ ಗೊತ್ತಾಗ್ತಿಲ್ಲ.
    ಇಲ್ಲಿ, ಬರೆದವರು ಮಾತ್ರ ‘ಜವಾಬ್ದಾರಿಯುಳ್ಳವರು’ ಎಂದು ಹೇಳುತ್ತಿಲ್ಲ. ಅದರ ಜೊತೆ ಇದನ್ನೂ ಮಾಡಿರುವ ಕೆಲವರಿದ್ದಾರೆ ಎಂದು ಹೇಳುವುದು ನನ್ನ ಉದ್ದೇಶವಾಗಿತ್ತು.
    ಛೆ! ಛೇ!! ನಾನು ಹೇಳಿದಂತೆ ನೀವ್ಯಾಕೆ ನಿಮ್ಮ ಜವಾಬ್ದಾರಿ ತೋರಿಸ್ಕೊಳ್ಬೇಕು? ಈ ಬಗೆಯ ಹೇರಿಕೆ ನಾನು ಮಾಡ್ತೇನೆಯೇ?

    ಹಾಗೂ ಈ ವಾಕ್ಯಗಳು ಧೋರಣೆಯದಾಗಿ ಕಂಡುಬಂದರೆ, ಬಹುಶಃ ಅದು ಉದ್ವೇಗದ ಹೊತ್ತಿನಲ್ಲಿ ಬರೆದಿದ್ದರಿಂದ ಇರಬಹುದು. ನಿಮ್ಮ ಆಕ್ಷೇಪಣೆಗೆ ಮನ್ನಣೆಯಿದೆ.

    ಧನ್ಯವಾದ,
    ಚೇತನಾ

  6. ಇಷ್ಟು ದಿನ ಎಲ್ಲರೂ ಬೇಜವಾಬ್ದಾರಿಯಿಂದಿದ್ದುದಾಯಿತು.

    ಈ ಘಟನೆಯಿಂದಾಗಿ ನಮ್ಮ ಜವಾಬ್ದಾರಿ ಹೆಚ್ಚಿದೆ.

    ಎಂತೆಂಥವರನ್ನೆಲ್ಲಾ ಆರಿಸಿ ಕಳಿಸುತ್ತಿದ್ದೇವೆ?
    ಯುವಕರು ಯಾಕೆ ರಾಜಕಾರಣಕ್ಕಿಳಿಯುತ್ತಿಲ್ಲ? ಇದ್ದರೂ ಅವರ್ಯಾಕೆ ಬಸ್ ಸ್ಟಾಂಡ್ ಪಕ್ಕದಲ್ಲಿನ ದೊಡ್ಡ ಪೋಸ್ಟರ್‍ನಲ್ಲೇ ಉಳಿದುಹೋಗುತ್ತಿದ್ದಾರೆ?
    ರಾಜಕಾರಣಕ್ಕಿಳಿಯಲು ಓದು ಯಾಕೆ ಅರ್ಹತೆಯಾಗಿಲ್ಲ?

    ಎಲ್ಲ ಪ್ರಶ್ನೆಗಳು ಮೂಡುತ್ತಿದೆ….

    ನನ್ನ ಅನುಮಾನಗಳಿಗೆ ನೀವು ಉತ್ತರಿಸಿದ್ದಕ್ಕೆ ಥ್ಯಾಂಕ್ಸ್….

ನಿಮ್ಮ ಟಿಪ್ಪಣಿ ಬರೆಯಿರಿ

Create a free website or blog at WordPress.com.

Up ↑