ದಕ್ಷಿಣೇಶ್ವರ ಯಾತ್ರೆಗೆ…


ಸಂಜೆಯಾಗಲು ತವಕಿಪುದು ಮನ
ದಕ್ಷಿಣೇಶ್ವರ ಯಾತ್ರೆಗೆ
ಪರಮಹಂಸರ ತೀರ್ಥವಾಣಿಯ
ಪಂಚ ಅಮೃತದ ಪಾತ್ರೆಗೆ…  ( ಕುವೆಂಪು ರಚನೆ)

                        belurmath3bodhibasueo8

ಸಾಕಾಗಿದೆ. ಒಂದು ಹತ್ತು ದಿನ ತಣ್ಣಗೆ ನನ್ನ ನೆಚ್ಚಿನ ಸ್ಥಳದಲ್ಲಿ ಇದ್ದು ಬರ್ತೇನೆ. ಪರಮಹಂಸರು, ಶಾರದಾ ದೇವಿ, ವಿವೇಕಾನಂದರು ಓಡಾಡಿದ ಜಾಗಗಳನ್ನ ಕಣ್ತುಂಬಿಸಿಕೊಂಡು ಬರ್ತೇನೆ.
ಕುವೆಂಪು ಹಾಡಿದ್ದಂತೆ ಪ್ರತಿ ದಿನವೂ ಇದನ್ನು ನಾನು ಹಾಡುವವಳೇ. ಹಾಗೆಂದೇ ಮತ್ತೆ ಕೈಬೀಸಿ ಕರೆಯುತ್ತಿರುವ ದಕ್ಷಿಣೇಶ್ವರದತ್ತ ಪ್ರಯಾಣ. ನಾಳೆ ಹೊರಟಿದ್ದೇನೆ.

ಬಂದಮೇಲೆ, ಕುವೆಂಪು ಅವರ ಅಧ್ಯಾತ್ಮಿಕ ಆಸಕ್ತಿಯ ಬಗ್ಗೆ, ಅವರು ರಾಮಕೃಷ್ಣ ಆಶ್ರಮದಿಂದ ದೀಕ್ಷೆ ಪಡೆದಿದ್ದರ ಬಗ್ಗೆ, ವಿವೇಕಾನಂದರಿಂದ ಪ್ರೇರಿತರಾಗಿದ್ದುದರ ಬಗ್ಗೆ ಎಲ್ಲ ಮಾತನಾಡಬಹುದಲ್ಲ? ಆ ಬಗ್ಗೆ ತೇಜಸ್ವಿ ಮತ್ತು ದೇ.ಜ.ಗೌಡರ ಬರಹಗಳಲ್ಲಿ, ಸ್ವತಃ ಕುವೆಂಪು ಬರಹಗಳಲ್ಲಿ ಸಾಕಷ್ಟು ಮಾಹಿತಿ ಇದೆ. ವಿವೇಕಾನಂದರ ‘ಸಾಂಗ್ ಆಫ್ ಸನ್ಯಾಸಿನ್’ ಗೀತೆಯನ್ನು ಕುವೆಂಪು ಮೂಲಕ್ಕಿಂತಲೂ ಹೆಚ್ಚು ಪ್ರಖರವಾಗಿ ಕನ್ನಡದಲ್ಲಿ ಪುನರ್ನಿರೂಪಿಸಿದ್ದಾರೆ. “ಏಳು ಮೇಲೇಳು ಸಾಧುವೆ ಹಾಡು ಚಾಗಿಯ ಹಾಡನು; ಹಾಡಿನಿಂದೆಚ್ಚರಿಸು ಮಲಗಿಹ ನಮ್ಮ ಈ ತಾಯ್ನಾಡನು…” ಎಂಬ ವಿವೇಕಾನಂದರ ಕರೆ ಅದು.

ಇರಲಿ,
ಅವೆಲ್ಲ ಬಂದ ಮೇಲೆಯೂ ಮಾತಾಡಬಹುದಲ್ಲವೇ?

ಬರುವವರೆಗೂ,
ಬೈ…

ಪ್ರೀತಿಯಿಂದ,
ಚೇತನಾ ತೀರ್ಥಹಳ್ಳಿ

11 thoughts on “ದಕ್ಷಿಣೇಶ್ವರ ಯಾತ್ರೆಗೆ…

Add yours

  1. ವಾವ್!!!! ದಕ್ಶಿಣೆಶ್ವರ, ಕೋಲ್ಕೊತ್ತ, ಬೇಲೂರು ಮಠ, ಹೋಗಿಬನ್ನಿ. Song of sanyasiನ್ನ ಕುವೆಂಪು ರವರು ಎಷ್ತ್ತುeffective ಆಗಿ ಕನ್ನಡಕ್ಕೆ ತಂದಿದ್ದಾರೆ ಅಂದರೆ ಇವತ್ತಿಗೂ ಆ ಹಾಡನ್ನು ಕೇಳುವಾಗ, ಅದನ್ನ ಮೊದಲ ಬಾರಿಗೆ ಕೇಳಿದಾಗ ಎಷ್ತ್ತುimpress ಹಾಗೂ excite ಆಗಿದ್ದೆನೋ ಹಾಗೆಯೇ ಇವತ್ತಿಗೂ ಆಗುತ್ತದೆ.

    -ಪ್ರಸಾದ್.

  2. ವಿವೇಕಾನ೦ದರಿಗೆ, ಥೇರೆಸಾ ರಿಗೆ ಮೊನ್ನೆ ಬಾ೦ಬೆ ವಿಷಯ ಅಪ್ಪಿತಪ್ಪಿಯೂ ಹೇಳದಿರಿ…
    ವಿಶ್ರಾ೦ತಿಯಲ್ಲಿರುವ ಜೀವಗಳು ಕನಲಿಬಿಟ್ಟಾವು.
    ಪ್ರಯಣ ಸುಖಕರವಾಗಲಿ.. ಜಲ್ದಿ ದಿನಾ೦ಕ ೧೬ ಆಗಲಿ..

  3. ಚೇತನಾ..

    ಪ್ರಯಾಣ ಶುಭ ತರಲಿ..

    ಬರುವಾಗೊಂದಷ್ಟು ಶಾಂತಿಯನ್ನು ಮೊಗೆ ಮೊಗೆದು ತನ್ನಿ.. ನಮ್ಮ ನಡುವೆ ಅದು ಆಲದ ಮರದಂತೆ ಹರಡಲಿ.. ಅಮೃತ ಬಳ್ಳಿಯಂತೆ ಹಬ್ಬಲಿ…

  4. ಚೇತನಾರವರೆ,
    ನಾನು ತೀರ್ಥಹಳ್ಳಿ ಯವನು, ನಿಮ್ಮ ಬ್ಲಾಗ್ ನೋಡಿದೆ, ಲೇಖನಗಳು ಚೆನ್ನಾಗಿ ಮೂಡಿ ಬಂದಿದೆ. ಬಹುಶಃ ಈಗ ನೀವು ತಮ್ಮ ಪ್ರವಾಸ ಮುಗಿಸಿ ಬಂದಿರ ಬಹುದೆಂದು ಭಾವಿಸುತ್ತೇನೆ ಹಾಗು ಪ್ರವಾಸದ ಅನುಭವ ತಿಳಿಯಲು ಕಾಯುತಿರುತ್ತೇನೆ, ನಿರಾಸೆಯುಂಟು ಮಾಡುವುದಿಲ್ಲ ತಾನೇ.
    -ರಾಜೇಶ್ ಮಂಜುನಾಥ್

ನಿಮ್ಮ ಟಿಪ್ಪಣಿ ಬರೆಯಿರಿ

Create a free website or blog at WordPress.com.

Up ↑