ದುಃಖಿಸಲಿಕ್ಕೆ ಇಡಿ ರಾತ್ರಿ ಬಾಕಿ ಇದೆ…


ದುಃಖಿಸಲಿಕ್ಕೆ ಇಡಿ ರಾತ್ರಿ ಬಾಕಿ ಇದೆ
ಬೆಳಗನ್ನ ಬಲಿಕೊಡಲೇಕೆ ನಾನು?

ಎಷ್ಟೊಂದು ಕೆಲಸವಿದೆ,
ಕಳೆದ ಫೈಲು ಹುಡುಕಬೇಕು

ನನ್ನ ಜಾಯಮಾನ ಗೊತ್ತಲ್ಲ?
ಕಳಕೊಳ್ಳುತ್ತಲೇ ಇರುವುದು

ನಿನ್ನನೆಲ್ಲಿ ಹುಡುಕಲಿ ಹೇಳು?

ನಿನ್ನ ಮುಖದವನೇ ಇದ್ದಾನೆ ಹೀಗೊಬ್ಬ,
ಅದೆ ಮಾತು, ಅದೆ ನಗು

ಅದೆ ಅದೇ ದೇಹ.
ಅದರೊಳಗೆ ನೀನಿದ್ದೆ
,
ಎಲ್ಲಿ ಹೋದೆ!?

ಕಾಲಮೇಲೆ ನಿಲ್ಲುವ
ತವಕಕ್ಕೆ,
ಕಾಲು ಸೋತು ಹೋಗಿದೆ

ನನ್ನ ಹೊಕ್ಕುಕ್ಕಿಸುತ್ತಿದ್ದ ಪ್ರೀತಿ
ಸೊರಗಿ ಸೋಲಿಸುತಿದೆ ಯಾಕೆ?

ದಣಿದು ಬಂದ ಪ್ರತಿ ಸಂಜೆ
ತಪ್ಪದೆ ನಡೆಯುವ ಪಾರಾಯಣ,
ಮತ್ತವೇ ಹಳೆ ಪಟ್ಟಿ

ನಾ ಮರೆತ ನಿನ್ನ ಕೆಲಸ
,
ಪ್ರೀತಿ ಕಡಿಮೆಯಾಗಿದೆ
”,
ಇತ್ಯಾದಿ

ನೀ ಮರೆತ ನಿನ್ನ ನೆನಪು
ಎಲ್ಲಿಂದ ಹೆಕ್ಕಿ ಕೊಡಲಿ?
ಬಿಡು

ಕೆಲಸವಿದೆ, ಫೈಲು ಹುಡುಕಬೇಕು

ಅಲ್ಲದೆ,
ಆಫೀಸಲ್ಲಿ ಅತ್ತರೆ

ಅವರಿವರು ನೋಡುವ ನಾಚಿಕೆ ನನಗೆ.

ಹೇಗೂ
ದುಃಖಿಸಲಿಕ್ಕೆ ಇಡಿ ರಾತ್ರಿ ಬಾಕಿಯಿದೆ,
ನೀ ಗೊಣಗುತ್ತೀಯೆಂದು

ಇತ್ತೀಚೆಗೆ
ಬೆಡ್ ಲೈಟೂ ಹಾಕುತ್ತಿಲ್ಲ ನಾನು.

 

( March 1, 2008 at 7:44 am ರಂದು ಬ್ಲಾಗ್ ನಲ್ಲಿ ಹಾಕಿದ್ದು)

 

2 thoughts on “ದುಃಖಿಸಲಿಕ್ಕೆ ಇಡಿ ರಾತ್ರಿ ಬಾಕಿ ಇದೆ…

Add yours

  1. ತುಂಬಾ ಆಪ್ಯಾಯಮಾನ ಅನ್ನಿಸಿತು. ನಿಜ. ಒಮ್ಮೊಮ್ಮೆ ಈ ತರಹ ಅನ್ನಿಸಿ ಬಿಡುತ್ತದೆ. ಸುಮಾರು 2 ವರೆ ವರುಷದ ಹಿಂದೆ ನಾನು ಇದೇ ಸ್ಥಿತಿಯಲ್ಲಿದ್ದೆ. ಒಂದು ಸರಕಾರಿ ಕಛೇರಿಯಲ್ಲಿ ಗುಮಾಸ್ತನಾಗಿ ಫೈಲುಗಳನ್ನು ಎಲ್ಲೊ ಇಟ್ಟು ಇನ್ನೆಲ್ಲೋ ಹುಡುಕುತ್ತಿದ್ದಾಗ……ನಾನು ಕಳೆದಕೊಂಡಿದ್ದರ ಬಗೆಗೆ ತುಂಬಾ feel ಅಗ್ತಿತ್ತು. ಈ ವಾಗ ನಿಮ್ಮ ಪದ್ಯ ಓದಿದ ಮೇಲೆ ಅದರ ಒಂದು ಸಣ್ಣ ನೆನಪಿನ ನವಿಲುಗರಿ ಸುಳಿದು ಹೋಯ್ಟು. thanks

    ನಿಮ್ಮ ಬ್ಲಾಗಿನ ಅಪರೂಪದ ಅತಿಥಿ
    ಗಿರೀಶ ಕೆ.ಎಸ್.
    girisha_giri123@yahoo.co.in

ನಿಮ್ಮ ಟಿಪ್ಪಣಿ ಬರೆಯಿರಿ

Blog at WordPress.com.

Up ↑