ಮೊದಲೇ ಬಂಗಾಳದ ಆಕರ್ಷಣೆ. ಸಾಲದಕ್ಕೆ ಋತ್ವಿಕ್ ಘಟಕ್ ಸಿನೆಮಾ… ಇವರ ಸಿನೆಮಾಗಳಲ್ಲಿ ನಾನು ನೊಡಿರೋದು ಎರಡೇ. ಒಂದು, ಜುಕ್ತಿ ಟಕ್ಕೋ ಆರ್ ಗಪ್ಪೋ. ಮತ್ತೊಂದು ಮೇಘೇ ಡಕ್ಕೆ ತಾರಾ. ಈ ಎರಡನೆಯದ್ದನ್ನ ನೋಡಿ ಜಮಾನಾ ಕಳೆದಿದೆ. ಹೈಸ್ಕೂಲಿನ ದಿನಗಳಲ್ಲಿ ನೋಡಿದ್ದ ನೆನಪು. ಆದರೂ ಈ ಸಿನೆಮಾಗಳು ನನ್ನನ್ನ ತಟ್ಟಿದ ಪರಿ ಹೇಳಲಿಕ್ಕೆ ಬಾರದು. ಆದರೂ ತಕ್ಕ ಮಟ್ಟಿಗೆ ಬರೆಯುವ ಯತ್ನ ಮಾಡಿದ್ದೇನೆ. ಅದು ಹೀಗಿದೆ…

~
ಜುಕ್ತಿ, ಟಕೋ ಆರ್ ಗಪ್ಪೋ. ಅಂದರೆ- ಕಾರಣ, ವಾದ, ಮತ್ತು ಕಥೆ. ಈ ಶೀರ್ಷಿಕೆ, ಈ ಸಿನೆಮಾವನ್ನು ನೋಡಬಹುದಾದ ಆಯಾಮಗಳನ್ನು ಸೂಚ್ಯವಾಗಿ ತಿಳಿಸುತ್ತದೆ.
‘…. ಆರ್ ಗಪ್ಪೋ’ ಬಂಗಾಳದ ಇಂಟಲೆಕ್ಚುಯಲ್ ನಿರ್ದೇಶಕ ಋತ್ವಿಕ್ ಘಟಕ್ ಅವರ ಕೊನೆಯ ಪ್ರಸ್ತುತಿ. ಆಂಶಿಕವಾಗಿ ಅವರ ಬಯಾಗ್ರಫಿ ಕೂಡಾ.

namaste madem blog, baraha chennagide, cinema bagge mattastu bareyiri nanna blog kuda nodi
http://ravirajgalagali.blogspot.com