ಏನೋ ಬರೆಯಲು ಹೋಗಿ…


ಕವಿತೆ ಬರೆಯುವಾಗ, ಕವಿತೆ ಬಿಡಿ, ಏನನ್ನೇ ಬರಿಯುವಾಗಲೂ ಶುರು ಮಾಡುವಾಗಲೇ ಒಂದು, ಮುಗಿಸುವಾಗಲೇ ಮತ್ತೊಂದು ಆಗಿಬಿಟ್ಟಿರುತ್ತದೆ. ನನ್ನ ಪಾಲಿಗಂತೂ ಅದು ಯಾವತ್ತೂ ಹಾಗೇ ಆಗೋದು. ಪದ- ಸಾಲುಗಳಿರಲಿ, ಕೆಲವು ಸಾರ್ತಿ ಭಾವವೇ ಬದಲಾಗೋದಿದೆ.

ಅಥವಾ, ಮತ್ತೆ ಕೆಲವು ಸಾರ್ತಿ ಕವಿತೆ ಪೂರ್ತಿ ಬರೆದಾದ ಮೇಲೆ ಅದನ್ನ ಮೊದಲಿಗಿಂತ ಬೆರೆಯದೇ ಆಗಿ ತಿದ್ದುವುದಿದೆ. ನಾನ್ಯಾಕೆ ಹೀಗೆಲ್ಲ ಪರದಾಡ್ತೇನೆ ಅಂತ ತಲೆಕೆರ್ಕೊಳ್ಳುವಾಗ ಮಹೇಶ ‘ನಾನೂ ನಿನ್ನ ಹಾಗೊಬ್ಬನಿದ್ದೇನೆ’ ಅಂತ ಸಮಾಧಾನ ಮಾಡಿದ್ದಾನೆ. ಆಮೇಲೆ ನೋಡ್ತಾ ಹೋದರೆ, ಬಹುತೇಕ ಜನರೆಲ್ಲ ಹಾಗೇ ಮಾಡೋದು ಅಂತ ಗೊತ್ತಾಗಿ, ನಾನು ನಾರ್ಮಲ್ಲಾಗಿದೇನೆ ಅಂತ ಸಮಾಧಾನವೂ ಆಗಿದೆ. 🙂

ಈಗೋ, ಈ ಲಿಂಕಿನ ಜಾಡುಹಿಡಿದು ಹೋದರೆ, ಬೆಳಕು ಮತ್ತು ಆಕೆಯ ಅನುಮತಿಯಿಲ್ಲ ಎನ್ನುವ ಎರಡು ಕವಿತೆಗಳು ಸಿಗುತ್ತವೆ. ನಿಮಗ್ಯಾವುದಿಷ್ಟವಾಯ್ತು/ ಆಗಿಲ್ಲ ಅನ್ನೋದನ್ನ ಹೇಳಿದರೆ ಚೆನ್ನ. ನಿಮ್ಮ ಪ್ರಯೋಗಗಳನ್ನ ಹಂಚ್ಕೊಂಡರೆ ಮತ್ತೂ ಚೆನ್ನ!

3 thoughts on “ಏನೋ ಬರೆಯಲು ಹೋಗಿ…

Add yours

  1. ನಿಮ್ಮ ಇಸ್ಕಾನ್ ಮೇಲ್ ಐಡಿ ಕೆಲಸ ಮಾಡ್ತಾ ಇಲ್ಲವಾ ಪ್ರೊಫೆಸರ್ ಮೇಡಂ ?? ನಾ ಕಳಿಸಿದ ಸಂಕ್ರಾಂತಿ ಮೇಲ್ ಫೈಲ್ ಆಗಿದೆ… ಬೇರೆ ಇದ್ರೆ ಮೇಲ್ ಮಾಡಿ
    – shama

ನಿಮ್ಮ ಟಿಪ್ಪಣಿ ಬರೆಯಿರಿ

Blog at WordPress.com.

Up ↑