ಭಾನುವಾರದ ಸಾಕ್ಷಿಯಾಗಿ
ಹೇಳುತ್ತೇನೆ ಕೇಳು,
ವಾರವೆಲ್ಲ ಹೀಗೇ ಇದ್ದರೆಷ್ಟು ಚೆಂದ!
ಅಂದುಕೊಂಡಿದ್ದು ಸುಳ್ಳಲ್ಲ.
ಥರ ಥರದ ತರಕಾರಿ,
ಹೊಸ ರುಚಿಯ ಬುಕ್ಕು,
ಮಜ ಮಜದ ಸೀರಿಯಲ್ಲು, ಸಂಜೆ ಶಾಪಿಂಗು
ನೀ ಬರುವ ಹೊತ್ತಲ್ಲಿ
(ಮಲ್ಲಿಗೆ ಮುಡಿಯಲಾರೆ ಅಲರ್ಜಿ!)
ಹೊಸಿಲಲ್ಲಿ ನಿಂತು ನಾಚುವುದೆಷ್ಟು ಚೆಂದ!
ಅಂದುಕೊಂಡಿದ್ದು ಸುಳ್ಳಲ್ಲ.
ಫೋನಲ್ಲಿ ಗಂಟೆ ಗಂಟೆ ಹರಟುವುದು
ನೀ ಬಿಲ್ಲು ನೋಡಿ ಬಯ್ಯುವುದು,
ಹಗೂರ ಹೆಜ್ಜೆಯಲಿ ಬಂದು
ಹ್ಯಾಂಗರಿನ ಷರಟಿಂದ
ನೋಟು ಕದಿಯುವುದು,
ಲೆಕ್ಕ ತಪ್ಪುವ ನಿನ್ನ ಕೆನ್ನೆಗೊಂದು ಚಿವುಟಿ
ನೂರೊಂದು ಕಥೆ ಹೇಳುವುದೆಷ್ಟು ಚೆಂದ!
ಅಂದುಕೊಂಡಿದ್ದು ಸುಳ್ಳಲ್ಲ.
ಓದುತ್ತ ಕುಂತ ನಿನ್ನ ಕುತ್ತಿಗೆ ಸುತ್ತ
ಕೈ ಹಾರ ಹಾಕಿ ನಗುವುದು,
ಸಾಲು ತಪ್ಪುವ ನೀನು
ಹೈರಾಣಾಗಿ ಹುಡುಕುವುದು,
ಪಾತ್ರೆಯುಜ್ಜುವ ನನ್ನ
ಸೆರಗೆಳೆದು ನೀ ಕಾಡುವುದು,
ಸಾರಿಗುಪ್ಪು ಹೆಚ್ಚೆಂದು ಜಗಳಾಡಿ ಮಲಗುವುದು,
ಆಮೇಲಿನ ಹೊಸ ಜಗಳವೆಲ್ಲ ಅದೆಷ್ಟು ಚೆಂದ!
ಅಂದುಕೊಂಡಿದ್ದು ಸುಳ್ಳಲ್ಲ.
ಹೀಗೆಲ್ಲ ಅಂದುಕೊಳ್ಳುತ್ತಿರುವ ಹೊತ್ತಲ್ಲಿ
ಅಲಾರಮ್ಮು ಕಿರುಚಿ ಕನಸು ತಿಳಿದೆದ್ದೆ.
ತಲೆ ತುಂಬ ರಿಪೋರ್ಟು- ಲೇ ಔಟು
ಉಳಿದ ಸುದ್ದಿ ನೂರೆಂಟು…
ಒಣ ಬ್ರೆಡ್ಡು ಮುಕ್ಕಿ ಹೊರಟವಳು
ಕನ್ನಡಕ ಮರೆತೆ.
ಕೀಲಿ ತಿರುವುತ್ತ ನಿಂತವಳಿಗೆ ಯಾಕೋ
ಅಡಿಗರು ನೆನಪಾಗಿದ್ದು ಸುಳ್ಳಲ್ಲ,
ಅಡಿಗರ ಸಾಲು ನೆನಪಾಗಿದ್ದು ಸುಳ್ಳಲ್ಲ…

Excellent chetana super. eshtu chand baritira ri hottekichchagutte.
ಕುಂತ ನಿನ್ನ ಕುತ್ತಿಗೆ ಸುತ್ತ
ಕೈ ಹಾರ ಹಾಕಿ ನಗುವುದು,
ಸಾಲು ತಪ್ಪುವ ನೀನು
ಹೈರಾಣಾಗಿ ಹುಡುಕುವುದು,
ಪಾತ್ರೆಯುಜ್ಜುವ ನನ್ನ
ಸೆರಗೆಳೆದು ನೀ ಕಾಡುವುದು,
ಸಾರಿಗುಪ್ಪು ಹೆಚ್ಚೆಂದು ಜಗಳಾಡಿ ಮಲಗುವುದು,
ಆಮೇಲಿನ ಹೊಸ ಜಗಳವೆಲ್ಲ ಅದೆಷ್ಟು ಚೆಂದ!
ಅಂದುಕೊಂಡಿದ್ದು ಸುಳ್ಳಲ್ಲ.
idantu nammalli nadiyutte. anda haage sunday serial iralla kanri.
ಲಹರಿ ಸೊಗಸಾಗಿದೆ, ಆದರೆ ಕೊನೆ ಪ್ಯಾರಾ ಬೇಡಿತ್ತು ಅನಿಸುತ್ತೆ, ಮೊದಲಿನ ಲಹರಿಯನ್ನೇ ಇನ್ನೂ ಹರಿಯಲು ಬಿಡಬೇಕಿತ್ತು ಅನಿಸಿತು.
– ಕೇಶವ (www.kannada-nudi.blogspot.com)
ಗುರು, ಧನ್ಯವಾದ.
ಕೇಶವ ಅವರೇ,
ಬ್ಂದಿದ್ದಕ್ಕೆ, ಕಮೆಂಟಿಸಿದ್ದಕ್ಕೆ ಥ್ಯಾಂಕ್ಸ್.
ಬರುತ್ತಾ ಇರಿ.
ವಂದೇ,
ಚೇತನಾ