ಬಹುಶಃ ಇದನ್ನ ಕೆಟ್ಟ ಕುತೂಹಲ ಅಂತಲೂ ಅಂತಾರೇನೋ? ಹಾಗೆ ನೋಡಿದರೆ ‘ಸ್ಲಂ ಡಾಗ್… ’ ಮೂವಿಯ ‘ಮೇಕಿಂಗ್’ ಅದ್ಭುತವಾಗಿದೆಯೇ ಹೊರತು ಒಳಗಿನ ಕಥೆ ಬೆರಗಿನದೇನಲ್ಲ. ಅದಕ್ಕೆ ಪ್ರಶಸ್ತಿ ಬಂದಿದ್ದಕ್ಕೇ ಬಹುಶಃ ಇಷ್ಟೆಲ್ಲ ಚರ್ಚೆಯಾಗ್ತಿರೋದು ಅಂತ ಅನಿಸುತ್ತೆ ಈಗಲೂ. ಈಗಾಗಲೇ ಸಾಂಗತ್ಯದಲ್ಲಿ ಈ ಕುರಿತು ನಡೆದ ಉತ್ತಮ ಚರ್ಚೆಗಳನ್ನು ನೋಡಿಯಾಗಿದೆ. ಚರ್ಚೆ ಇನ್ನೂ ನಡೆಯುತ್ತಲೇ ಇದೆ.
ಈಗ ಮ್ಯಾಜಿಕ್ ಕಾರ್ಪೆಟ್ ಈ ಸಿನೆಮಾದ ಕುರಿತ ಸಂವಾದವನ್ನು ಆಯೋಜಿಸುತ್ತಿದೆ. ಪರಮೇಶ್ವರ ಗುರುಸ್ವಾಮಿ ಅವರು ಮುಖ್ಯವಾಗಿ ಇದರಲ್ಲಿ ಪಾಲ್ಗೊಳ್ಳುವವರಿದ್ದಾರೆ. ವಿವರಗಳಿಗಾಗಿ ಇಲ್ಲಿ ನೋಡಿ. ಖಂಡಿತ ಮಿಸ್ ಮಾಡ್ಕೊಳ್ಬೇಡಿ!

ಥ್ಯಾಂಕ್ಸ್
ಅಪರೂಪದ ಅತಿಥಿ
ಗಿರೀಶ ಕೆ.ಎಸ್.
girisha_giri123@yahoo.co.in
ಕನ್ನಡ ಬ್ಲಾಗ್ ಲೋಕದಲ್ಲಿ ಹಲವು ಕಡೆ ಇದರದೇ ಚರ್ಚೆ, ಆದರೆ ನನಗೆ ಒಂದು ಅರ್ಥ ಆಗ್ದೇ ಇರೋದು ಏನಂದ್ರೆ ಇದರ ಭಾರತ ರಿಲೀಸ್ ಜನವರಿ ೨೩, ಅಂದ್ರೆ ಇವತ್ತು. ಅಷ್ಟೊಂದು ಚರ್ಚೆ ಬರೀ ನಕಲಿ ಕಾಪಿಗಳನ್ನು ನೋಡಿಯೊ ಅಥವ ನೋಡದೆ ಬರೀ ರೀವ್ಯೂಗಳನ್ನು ನೋಡೋ.
ಇಲ್ಲಿ ಅಮೇರಿಕದಲ್ಲಂತು ಇದು ಎಲ್ಲ ಥಿಯೇಟ್ರುಗಳನ್ನ ಧೂಳಿಪಟ ಮಾಡ್ತಾ ಇದೆ. ನಾಳೆ ನಾನೂ ಹೋಗೋ ಪ್ಲಾನ್ ಇದೆ, ನೋಡಿ ಹೇಳ್ತೀನಿ ಇಲ್ಲಿನ ಜನರ ಪ್ರತಿಕ್ರಿಯೆ ಹೇಗಿದೆ ಅಂತ.
ಮನೋಜ್ 🙂
ಬಹುಶಃ ನಿಮಗೆ ಅರ್ಥವಾಗಿರತ್ತೆ!!
ಖಮ್ಡಿತ ಸಿನೆಮಾ ನೋಡಿ, ಅನುಭವವನ್ನು, ಅನಿಸಿಕೆಯನ್ನು ಸಾಂಗತ್ಯದೊಡನೆ ಹಂಚಿಕೊಳ್ಳಿ.
ಅಲ್ಲಿನವರ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ತಿಳಿಯುವ ಕುತೂಹಲ ನನಗೂ ಇದೆ.
– ಚೇತನಾ