ಮೌನವಾಗಿ ಉಳಿದಿದೇನೆ
ಅಂದ ಮಾತ್ರಕ್ಕೆ
ಶಾಂತವಾಗಿದ್ದೇನೆ ಎಂದಲ್ಲ
ನೂರೊಂದು ನೋವುಗಳ
ಎದೆಗುದಿಯುಕ್ಕಿ ಸಿಡಿಯುವ
ಹೊತ್ತಿಗೆ ಕಾದಿದ್ದೇನೆ.
ವಿಷದ ಹನಿ ಹನಿ
ನುಂಗುತ್ತ ಬೆಳೆದಿದ್ದೇನೆ.
ಸಾವಿರ ನಾಲಗೆಯ ನಂಜು ಕೂಡ
ನನ್ನ ನೀಲಿಗಟ್ಟಿಸಲು ಸೋತಿವೆ
ರಣಚೋರಳೆನ್ನ ಬೇಡಿ,
ತಮ್ಮ ಕಣ್ಣುರಿಗೆ ತಾವೇ
ಬೂದಿಯಾಗುವಂತೆ
ಕನ್ನಡಿಗಳನಿರಿಸಿದ್ದೇನೆ.
ಅವರವರ ‘ನಿಜ’ ಬಿಂಬ
ಕಂಡವರು ಸುಟ್ಟುಹೋಗುತ್ತಿದ್ದಾರೆ.
ಜಡಿಮಳೆಗೆ ಮುನ್ನ
ಹೆಪ್ಪುಗಟ್ಟುವ ಕತ್ತಲಂತೆ
ಅಮಾಯಕಳಂತೆ ಸುಮ್ಮನೆ–
ಸುಮ್ಮನೇ ಕುಳಿತಿದೇನೆ.
ಅಂದ ಮಾತ್ರಕ್ಕೆ
ಶಾಂತವಾಗಿದ್ದೇನೆ ಎಂದಲ್ಲ
ಸಿಡಿಲಾಗುವ ತವಕದಲ್ಲಿ
ಮಾತನೆಲ್ಲ ಒಟ್ಟುಮಾಡುತಿದ್ದೇನೆ.
ಅದೋ,
ಅವೆರಡು ಮೋಡಗಳು ಢಿಕ್ಕಿಯಿಟ್ಟು
ಯುದ್ಧ ಸಾರುವುದನ್ನೆ ಕಾಯುತ್ತಿದ್ದೇನೆ…

Whoa. ಓದಿ ಸುಧಾರಿಸ್ಕೊಳ್ಳಕ್ಕೆ ಕೊಂಚ ಸಮಯ ಹಿಡೀತು.
ತುಂಬ ನಿಗೂಢಾರ್ಥಗಳಿವೆ ಕವಿತೆಗೆ!!
🙂
ಚೇತನಾರವರು ಈಗೀಗ ಏನು ಬರಿತಾ ಇಲ್ವಲ್ಲ ಅಂತ ಇವತ್ತಷ್ಟೇ ಅಂದುಕೊಂಡಿದ್ದೆ, ಉತ್ತರ ಸಿಕ್ತು.
!!!
ಚೇತನಾ ಅವರೆ,
ಅದ್ಭುತ, ನಿಮಗಿಷ್ಟೊಂದು ಕೋಪ ಬರುತ್ತೆ ಅಂಥ ಗೊತ್ತಿರಲಿಲ್ಲ.
ಢಂ!!! ಫಳಾರ್!!
ಅಂತ ಸಿಡಿಯೋ ಮೊದ್ಲು, ಜಡಿಮಳೆ ಬಂದೇಬಿಡಲಿ. ಎದೆಗುದಿಗಳೆಲ್ಲ ತಣಿದು ನೀರಾಗಲಿ…. ಮನದೊಳಗಿನ ಯುದ್ಧ ನಿಲ್ಲುವುದನ್ನೇ ಕಾಯುತ್ತಿರೋಣ.
ಕ ವ ನ ಮ ನ ತ ಟ್ಟು ವಂ ತಿ ದೆ.
ಇತ್ತೀಚೆಗಷ್ಟೇ ಮಯೂರದಲ್ಲಿ ನಿಮ್ಮ ಕಥೆಯೊಂದನ್ನು ಓದಿದ್ದೆ. ಕಥೆಯ ವಸ್ತುವಿಷಯದ ಬಗ್ಗೆ ನನ್ನಲ್ಲಿ ತಕರಾರುಗಳೆದ್ದರೂ ನಿಮ್ಮ ಶೈಲಿ ಮಾತ್ರ ತುಂಬ ತುಂಬ ತುಂಬ ಇಷ್ಟವಾಯುತು. ಈ ಕವನದ ಮೊದಲ ಓದಿನಲ್ಲಿ ನೀವು ಆತುರ ಪಟ್ಟಿರುವೇನೋ ಅನಿಸುತ್ತಿದೆ. ಸಿಡಿಲಾಗಲು ಕಾಯುತ್ತಾ ‘ತಾಳ್ಮೆ’ಯಿಂದ ಕುಳಿತಿರುವ ನೀವು ಅದೇ ತಾಳ್ಮೆಯನ್ನು ಕವಿತೆಯ ರಚನೆಯಲ್ಲಿ ಯಾಕೆ ತೋರಿಸಿಲ್ಲ ಎಂದು ಸ್ವಲ್ಪ ಬೇಸರವಾಯಿತು. ನಿಮ್ಮ ಇತರ ಬರಹಗಳನ್ನು ಓದುವ ಕುತೂಹಲ ಮೂಡಿದೆ.
ಟೀನ್,
ಹುಷ್ಶ್… ಇಲ್ಲಿ ಎಲ್ಲವು ನಿಗೂಢ… 🙂
ವೈಶಾಲಿ,
🙂
ಸುಪ್ರಿ,
!!!!! ????
ಮನೋಜ್,
ಉತ್ರ ಸಿಕ್ತಲ್ಲ?
ಚಂದಿನ,
ಕೋಪವೂ ಕೆಲವು ಸರ್ತಿ ಅದ್ಭುತವಾಗಿಬಿಡತ್ತೆ! ಧನ್ಯವಾದ…
ಅನ್ವೇಷಿ
ನೀವು ರಣರಂಗಕ್ಕೆ ಇಳಿಯೋಲ್ವ?
ಪ್ರೇಮಶೇಖರರೆ
ಪ್ರತಿಕ್ರಿಯೆಗೆ ಧನ್ಯವಾದ. ನೀವು ಹೇಳಿದ ಅಂಶವನ್ನು ಖಂಡಿತ ಯೋಚಿಸುತ್ತೇನೆ.
ಎಲ್ಲರಿಗು thanx.
ಚೇತನ ತೀರ್ಥಹಳ್ಳಿ
ರಣಚೋರ ಇ ಶಬ್ದ ಪ್ರಯೋಗ ಹೊಸತನದಿಂದ ಕೂಡಿದೆ ನಿಮ್ಮ ಕವಿತಾ ಅನೇಕ ಹೊಸ ಆಶಯ ತೆರೆದಿಡುತ್ತದೆ.
🙂 nice.
yaako itteechege nimma blog bahaLa nidhaanavaagi update aagtideyappa
posting frequency jaasti aagali annO harake mattu haaraike
ವಿಷದ ಹನಿ ಹನಿ ನುಂಗುತ್ತ ಬೆಳೆದಿದ್ದೇನೆ. ಸಾವಿರ ನಾಲಗೆಯ ನಂಜು ಕೂಡ ನನ್ನ ನೀಲಿಗಟ್ಟಿಸಲು ಸೋತಿವೆ…ಸಾಲುಗಳು ಇಷ್ಟವಾಯಿತು. ಪಕ್ಕಾ ಸ್ತ್ರೀ ಸಂವೇದನೆಯ ಕವಿತೆ
ಬಹಳಷ್ಟು ಸಾಲುಗಳು ನಿಗೂಢಾರ್ಥ ಗೊತ್ತಾಗಲಲಿಲ್ಲ. ಅದು ಗೊತ್ತಾಗದಿದ್ದರೇನೇ ಚೆಂದ.
ಶುಭವಾಗಲಿ…
ದೇಸಾಯರೇ,
ಧನ್ಯವಾದ.
ಕನ್ನಂತರೇ,
ನಿಮ್ಮಂತಹ ಹಿತೈಷಿಗಳ ಸಾಥ್ ಮತ್ತು ಸಹಕಾರವೇ ನನ್ನಂತಹವರ ಬರವಣಿಗೆಯ ಮೂಲ ದ್ರವ್ಯ. ಥ್ಯಾಂಕ್ಯೂ.
ಪ್ರಸಾದರೇ,
ಸ್ತ್ರೀ ಸಂವೇದನೆಯ ಕವಿತೆಯಾ!?
ಬರುತ್ತಿರಿ…
ಲಕ್ಷ್ಮೀ ಕಾಂತರೇ,
ಹೌದಾ?
ಸರಿ. ಥ್ಯಾಂಕ್ಯೂ.
ತುಂಬು ಪ್ರೀತಿ,
ಚೇತನಾ ತೀರ್ಥಹಳ್ಳಿ
Hi Chetana
I had written a similar poem long back. Please have a look.
ನನಗೆ ಶಬ್ದಗಳ ಪರಿಚಯವಿದೆ
ಎಂದ ಮಾತ್ರಕ್ಕೆ
ಮಾತನಾಡುತ್ತೇನೆ ಎಂದೆಲ್ಲ
ಖುಷಿಪಡಬೇಡಿ. ನಾನು
ಸುಮ್ಮನಿರುತ್ತೇನೆ ಶಬ್ದಗಳಿಗೆ ನೊಂದು.
ನನಗೆ ನಿಶ್ಯಬ್ದಗಳ ಬಗ್ಗೆ ಒಲವಿದೆ
ಎಂದಮಾತ್ರಕ್ಕೆ
ಸುಮ್ಮನಿರುತ್ತೇನೆ ಎಂದೆಲ್ಲ
ದುಃಖಿಸಬೇಡಿ. ನಾನು
ಮಾತನಾಡುವೆನಲ್ಲಿ ನಿಶ್ಯಬ್ದಕ್ಕೆ ಸೋತು.
ನಿಮಗೆ ಖುಷಿಯಿದ್ದಾಗ ಸುಮ್ಮನಿರುತ್ತೇನೆ
ನೀವು ದುಃಖಿಸುತ್ತಿದ್ದರೆ ಮಾತನಾಡುತ್ತೇನೆ
ಎಂಬ ಹೊಂದಾಣಿಕೆಗೂ ಬಂದಿದೆ ನನ್ನ
ಬದುಕು.
A compromise which is much hated
Yet
Inevitable
ಹ್ಮ್! ವಿಷದ ಹನಿ ಉಂಡು ಬೆಳೆದ, ಸಾವಿರ ನಂಜು ನಾಲಗೆಯ ಸುತ್ತ ಹರಿದ ಬಾಳಿನ ಪರಿಚಯ ನನಗೂ ಇದೆ. ನನ್ನೊಳಗನ್ನೇ ನೀವಿಲ್ಲಿ ತೆರೆದಿದ್ದೀರೇನು? ಕೊನೆಯಲ್ಲಿ ಗೆಲುವು ನಮ್ಮದಾಗಲು ನಡುವಲ್ಲಿ ಸುಮ್ಮನಿರುವುದು ಉತ್ತಮ, ಆದರೆ ಅಷ್ಟೇ ಕಷ್ಟ. ನಿಜರೂಪ ತೋರಿಸುವ ಕನ್ನಡಿಗಳನ್ನು ಇಡುವ ಹೋಲಿಕೆ ಇಷ್ಟವಾಯ್ತು.
ಚೇತನಾ, ಎಲ್ಲಿತ್ತು ವಿನೂತನ ಈ ತನನ
ಮೋಡಗಳನ್ನು ಢೀ ಹೊಡೆಸಿ ಅವುಗಳ ಗುದ್ದಾಟ, ಸಿಡಿಲು, ಮಳೆ ಹೀಗೆಲ್ಲಾ ನಿಮಗೆ ಅನುಭವವಿದೆ ಅಂದ್ರೆ….ಮೋಡಬಿತ್ತನೆ ಮಾದಬಹುದಲ್ಲಾ…ಮಳೆಹನಿಸಬಹುದಲ್ಲಾ…ಒಟ್ಟಿನಲ್ಲಿ…ಚಂದದ ಪದಗಳ ಹನಿಗಳನ್ನು ಘನೀಕರಿಸಿ ಕವನದ ಮೋಡಗಳನ್ನು ಕಟ್ಟಿ ನಮ್ಮ ಪ್ರತಿಕ್ರಿಯೆಗಳ ಮೂಲಕ ಅವುಗಳ ಢೀ ಗೆ ಕಾಯುತ್ತಿದ್ದೀರಿ ಎಂದಾಯಿತು….??!!! ಚನ್ನಾಗಿದೆ.