ರಾಜಕಾರಣದ ಬಗ್ಗೆ ಯಾವತ್ತೂ ಬರೆಯಬಾರದು ಅಂತ ಇದ್ದೆ. ಸುಮ್ಮನಿರಲಾಗಲಿಲ್ಲ. ಬರೆದಿದ್ದನ್ನ ಇಲ್ಲಿ ಪೋಸ್ಟ್ ಮಾಡಬಾರದು ಅಂತಲೂ ಇದ್ದೆ. ಆಗಲೂ ಸುಮ್ಮನಿರಲಾಗಲಿಲ್ಲ. ಶೋಭಾ ತಲೆದಂಡ ಪ್ರಹಸನವನ್ನ ಇಟ್ಟುಕೊಂಡು ನಾಲ್ಕು ಮಾತಾಡುವ ಅನಿಸಿತು. ಗೊತ್ತು, ಇದರಿಂದೇನೂ ಉಪಯೋಗವಿಲ್ಲ!
ಸಿಂಹಾಸನದ ಉಳಿಕೆಗೆ ಪ್ರಾಣಿ, ಪಕ್ಷಿ, ಚಿಕ್ಕ ಮಕ್ಕಳನ್ನು ಬಲಿಕೊಡುತ್ತಿದ್ದುದು ವಾಡಿಕೆ. ಅದೇ ಯಾದಿಯಲ್ಲಿ ಹೆಣ್ಣನ್ನೂ ಸೇರಿಸಿರೋದ್ರಿಂದಲೋ ಏನೋ, ಯಡ್ಯೂರಪ್ಪರ ಪಟ್ಟ ಉಳಿಸಲಿಕ್ಕೆ ಶೋಭಾ ಕರಂದ್ಲಾಜೆಯ ಬಲಿ ನೀಡಿಕೆ ಸಾಂಗವಾಗಿ ನೆರವೇರಿದೆ. ಶುರುವಿನಿಂದಲೂ ‘ಶೋಭಾ ರಾಜೀನಾಮೆ ನೀಡಬೇಕು’ ಎಂದು ಹಾಡಿಕೊಳ್ತಾ ಬಂದಿದ್ದ ಗಣಿಧಣಿ ಅಂಡ್ ಕೋ ಬಳಿ ಸೂಕ್ತ ಕಾರಣಗಳೇ ಇಲ್ಲ. ಈ ವರೆಗೆ ಅಂಥದೊಂದನ್ನೂ ಅವರು ಜನತೆಯ ಎದುರಿಟ್ಟಿಲ್ಲ. ಹೆಣ್ಣೊಬ್ಬಳು (ಅವರ ಪಾಳಯದ ಶಾಂತಾರಂತೆ ಅಲ್ಲದೆ) ಸಕ್ರಿಯ ರಾಜಕಾರಣದಲ್ಲಿ ತೊಡಗಿರುವುದು, ಅಧಿಕಾರದ ಸೂತ್ರ ಹಿಡಿದಿರುವುದು ಅವರ ಪೌರುಷಕ್ಕೆ ಧಕ್ಕೆ ತಂದಿರಬೇಕು. ಅದರ ಹೊರತಾಗಿ ಅವರು ಹೀಗೆ ಹಠ ಹೂಡಿದ್ದಕ್ಕೆ ಬೇರೇನು ಹಿನ್ನೆಲೆಯಿದ್ದೀತು? ಅವರ ಹಾಡಿಗೆ ತಾಳ ಹಾಕಿ, ಚಟುವಟಿಕೆಯ ಮಹಿಳಾ ರಾಜಕಾರಣಿಯೊಬ್ಬಳ ಭವಿಷ್ಯವನ್ನು ಹೊಸಕಿ ಹಾಕಿದ ಇಡಿಯ ಪಕ್ಷದ ವ್ಯವಸ್ಥೆ ಹಾಗೂ ಚಿಂತನೆಗಳ ವಿರುದ್ಧವೂ ನನ್ನ ಧಿಕ್ಕಾರವಿದೆ.
ವರ್ಷಗಳ ಹಿಂದಿನ ರೇಣುಕಾಚಾರ್ಯ ಹಗರಣ ನೆನಪಿಸಿಕೊಳ್ಳಿ. ಹಾದಿಬೀದಿ ರಂಪವಾದಾಗಲೂ ಆ ಮನುಷ್ಯನನ್ನು ಬಿಜೆಪಿಯನ್ನರು ಸಮರ್ಥಿಸಿಕೊಂಡಿದ್ದರು ಹಾಗೂ ಸಂಘ ಪರಿವಾರ ಕೂಡ ಆತನ ಮೇಲೆ ಕ್ರಮ ಕೈಗೊಳ್ಳಲು ಆದೇಶ ನೀಡಿರಲಿಲ್ಲ . ಅದೇ ಇತ್ತೀಚೆಗೆ ಶ್ರುತಿಯ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಘಟನೆಯನ್ನೇ ಮುಂದು ಮಾಡಿಕೊಂಡು ‘ಸಂಸ್ಕೃತಿ ಬಾಹಿರ ಸಂಗತಿ’ ಎನ್ನುತ್ತ ರಾಜೀನಾಮೆ ಕೇಳಿದ್ದರು, ಅದೂ ವಿವೇಚನೆಗೆ ಒಂದೆರಡು ದಿನಗಳ ಕಾಲಾವಕಾಶವನ್ನೂ ತೆಗೆದುಕೊಳ್ಳದೆ! ಮತ್ತೊಂದು ಗಮನೀಯ ಸಂಗತಿ ಎಂದರೆ, ಕಾಂಗ್ರೆಸ್ಸನ್ನು ಟೀಕಿಸುವಾಗ ಬಹಳಷ್ಟು ಬೀಜೇಪಿಯನ್ನರು ‘ವಿದೇಶೀ ಮಹಿಳೆಯ’ ಅದರಲ್ಲೂ ‘ಮಹಿಳೆಯ’ ಕೈಗೊಂಬೆ ಎಂದೆನ್ನುವುದು. ನನ್ನ ಪ್ರಶ್ನೆ, ರಾಜಕಾರಣಿಗಳಂತಹ ಜವಾಬ್ದಾರಿಯುತ ಮನುಷ್ಯರು ಯಾವುದರ ಕೈಗೊಂಬೆಗಳೂ ಆಗಬಾರದು. ಆಗುವುದೇ ಆದರೆ ಹೆಣ್ಣಿನದಾದರೇನು? ಗಂಡಿನದಾದರೇನು? ತನ್ನ ಇಂತಹ ನಡವಳಿಕೆಗಳಿಂದಲೇ ಬಿಜೆಪಿ, ‘ಬಲಪಂಥ’ಕ್ಕೂ ‘ಪುರುಷ ದಬ್ಬಾಳಿಕೆ’ಯ ಮನಸ್ಥಿತಿಗೂ ಇರುವ ಸಂಬಂಧವನ್ನು ಸ್ಪಷ್ಟಪಡಿಸುತ್ತ ನಡೆದಿದೆ.
ಶೋಭಾ ವೈಯಕ್ತಿಕ ಜೀವನ ಏನೇ ಇರಬಹುದು. ಮತ್ತೂ ನೇರವಾಗಿ ಹೇಳಬೇಕೆಂದರೆ, ಯಡ್ಯೂರಪ್ಪನವರ ಜತೆ ಆಕೆಯ ಸಂಬಂಧಗಳು ಏನೇ ಇರಬಹುದು. ಬಹುಶಃ ಈ ಒಳಸುಳಿಗಳ ಮುಜುಗರದಿಂದ ಬಚಾವಾಗಲು ಹಾಗೂ ತನ್ನ ‘ಸಂಸ್ಕೃತಿ’ಯ ಹಿರಿಮೆಯನ್ನು ಕಾಯ್ದುಕೊಳ್ಳಲು ಗಣಿಧಣಿಗಳ ಆಟಾಟೋಪವೇ ನೆವವಾಗಿ ಒಟ್ಟಾರೆ ಬಿಜೆಪಿಯ ಸಂಸ್ಕೃತಿ ಕಾವಲು ಪಡೆ ಹಾಗೂ ಸಂಘ ಪರಿವಾರ ಈ ಸಂಚು ನಡೆಸಿ ಶೋಭಾ ತಲೆದಂಡ ಕೇಳಿರಬಹುದೆಂದೇ ನನ್ನ ಗುಮಾನಿ. ಇಷ್ಟಾದರೂ ‘ನಾನು ಸಂಘ ಬೆಳೆಸಿದ ಹೆಣ್ಣುಮಗಳು’ ಎಂದು ಎದೆ ತಟ್ಟಿಕೊಂಡು ಹೇಳುವ ಶೋಭಾ ಬಗ್ಗೆ ಅಚ್ಚರಿಯೆನಿಸುತ್ತದೆ.
ಇತ್ತೀಚೆಗೆ ರಮ್ಯಾ ಪ್ರಕರಣವನ್ನು ಮುಂದಿಟ್ಟುಕೊಂಡು ಪುರುಷ ಪ್ರಧಾನ ವ್ಯವಸ್ಥೆಯ ಧೋರಣೆಯ ಬಗ್ಗೆ ಬರೆದಾಗ ಹೀಗೊಬ್ಬರು ಶೋಭಾ ವಿಷಯವನ್ನು ಎತ್ತಿದ್ದರು. ಬಿಜೆಪಿಯ ಇವತ್ತಿನ ಬಿಕ್ಕಟ್ಟಿಗೆ ಅಂಥದೇ ಮನಸ್ಥಿತಿ ಕಾರಣವೆಂದು ಅಭಿಪ್ರಾಯಪಟ್ಟಿದ್ದರು. ಈ ಮಾತು ಈಗ ಬಹುತೇಕ ಎಲ್ಲರ ಬಾಯಲ್ಲೂ ಕೇಳಿಬರುತ್ತಿದೆ. ಸ್ವಾತಂತ್ರ್ಯ ಬಂದ ೬೦ ವರ್ಷಗಳ ನಂತರವೂ ಹೆಣ್ಣೊಬ್ಬಳು ತನ್ನ ಅರ್ಹತೆ, ಸಾಮರ್ಥ್ಯಗಳಿಂದ ಗಳಿಸಿಕೊಂಡ ಕೀರ್ತಿ ಮತ್ತು ಅಧಿಕಾರಗಳನ್ನು ಪುರುಷನ ಮರ್ಜಿಯಿಲ್ಲದೆ ಉಳಿಸಿಕೊಳ್ಳಲು ಸಾಧ್ಯವಾಗದಿರುವುದು ದುರಂತವೇ ಸರಿ.
ಸಚಿವ ಸ್ಥಾನ ಸಿಗುವುದೆಂದಾಗ, ‘ಮಹಿಳೆಯರಿಗೆ ಮಹಿಳಾ ಮತ್ತು ಮಕ್ಕಳ ಖಾತೆಯನ್ನೇ ಕೊಡ್ತೀರಿ, ನಂಗೆ ಕೆಪಾಸಿಟಿ ಇದೆ, ಬೇರೆ ಕೊಡೋದಾದ್ರೆ ಕೊಡಿ, ಇಲ್ದಿದ್ರೆ ಬೇಡ’ ಅಂದಿದ್ದ ಶೋಭಾ, ಅಫ್‌ಕೋರ್ಸ್, ರಾಜಕಾರಣಿಯ ಎಲ್ಲ ಬಲಗಳನ್ನೂ ಕೆಲವು ದೌರ್ಬಲ್ಯಗಳನ್ನೂ ಹೊಂದಿರುವ ಹೆಣ್ಣುಮಗಳು. ಆದರೆ, ಕೆಲಸ ಮಾಡುವ ತುಡಿತವಿದ್ದ, ಮಾಡುತ್ತಿದ್ದ ದಿಟ್ಟೆ ಅನ್ನುವುದೂ ನಿಜ. ಇಂಥಾ ಗಟ್ಟಿಗಿತ್ತಿಯನ್ನೇ ಸಲೀಸಾಗಿ ಕಿತ್ತುಹಾಕುವ ಮೂಲಕ ಬಿಜೆಪಿ, ರಾಜಕೀಯವೆಂದರೆ ಹಿಂಜರಿಯುವ ಹೆಣ್ಣುಮಕ್ಕಳ ಆತ್ಮವಿಶ್ವಾಸಕ್ಕೆ ಮತ್ತಷ್ಟು ತಣ್ಣೀರೆರಚಿದೆ. ಆ ಮೂಲಕ, ತನ್ನ ರಾಜಕಾರಣವೇನಿದ್ದರೂ ಪುರುಷರಿಗೆ ಹಾಗೂ ಅವರ ಪ್ರಾಬಲ್ಯವನ್ನೊಪ್ಪುವ ‘ಮಾತೆ’ಯರಿಗೆ ಮಾತ್ರ ಎಂಬ ಸಂದೇಶ ರವಾನಿಸಿದೆ.

ಶೋಭಾ ಕರಂದ್ಲಾಜೆ ಪ್ರಕರಣದಲ್ಲಿ ನನಗೂ ಹೀಗೇ ಅನ್ನಿಸಿತು.
ನಮ್ಮ ರಾಜಕಾರಣದ ಒಳಸುಳಿಗಳೆಲ್ಲ ಅಷ್ಟು ಸುಲಭಕ್ಕೆ ಅರ್ಥವಾಗುವಂತದ್ದಲ್ಲ ಬಿಡಿ. . ಆಕೆಯ ತಲೆದಂಡವಾದಷ್ಟು ಸುಲಭಕ್ಕೆ ಇನ್ಯಾವ ಮಂತ್ರಿಯ ಬಲಿಯೂ ಸಾದ್ಯವಿರಲಿಲ್ಲವೇನೋ ಬಹುಶಃ.
ಸಾರ್ವಜನಿಕ ಜೀವನದಲ್ಲಿರುವಾಗ ಯಾರಿಗೇ ಇರಲಿ ನೈತಿಕತೆ ಹೆಚ್ಚು ಮುಖ್ಯವಾಗುತ್ತೆ. ಅದು ಸರಿ. ಆದರೆ ಶೋಭಾ, ಶ್ರುತಿ ನೈತಿಕತೆಯ ಬಗ್ಗೆ ಮಾತನಾಡುವಷ್ಟೇ ಬಹಿರಂಗವಾಗಿ ಕುಮಾರಸ್ವಾಮಿ, ರೇಣುಕಾಚಾರ್ಯ ಅಥವಾ ಇನ್ನೂ ಅನೇಕ ರಾಜಕಾರಣಿಗಳ ಬಗ್ಗೆ ಮಾತನಾಡಿಯಾರೆ ನಮ್ಮ ಜನ?? ಅಥವಾ ಆ ಕಾರಣಕ್ಕೆ ಕುರ್ಚಿ ಹೋದೀತೇ??
( ಅಂದಹಾಗೆ ಚೇತನಾ, ಇವತ್ತಿನ ರಾಜಕಾರಣದಲ್ಲಿ ಪಕ್ಷ, ನೀತಿ, ವ್ಯವಸ್ಥೆ, ಚಿಂತನೆ ಅಂತೆಲ್ಲ ಇದೆಯಾ???!! 🙂
– ವೈಶಾಲಿ
http://kenecoffee.wordpress.com/
dear chetana,
shobha avara sthithi karuNajanakavagide. Neevu heLdanthe iduvaregu avara melina aapadanegaLige yaroo saha saakshi odagisilla. Most unfortunate.
Rao.
ಚೇತನ ನೀವು ಹೇಳೋಹಾಗೆ ಗಣಿಧಣಿಕೊ ಹಾಗೂ ಯಡ್ಯುರಪ್ಪ ಜಂಟಿ ಕಾರ್ಯಾಚರಣೆ ಯಶಸ್ವಿಯಾಗಿದೆ
ನಾ ಶೋಭಾಅವರಲ್ಲಿ ಕ್ರಿಯಾಶೀಲತೆ ಗುರುತಿಸಿದ್ದೆ ಅದು ಮೈಸೂರು ದಸರಾ ಇರಬಹುದು ಅಥವಾ ಮೊನ್ನೆ ಮಂತ್ರಾಲಯದ ಸ್ವಾಮಿಗಳನ್ನು ಹೆಲಿಕಾಫ್ಟರನಲ್ಲಿ ಕೂಡಿಸಿಕೊಂಡು ಬಚಾವ್ ಮಾಡಿದ್ದೇ ಇರಬಹುದು ಎಲ್ಲೂ ಓರ್ವ ಹೆಂಗಸು ಎಂಬ ಭಾವತಳೆಯಲಿಲ್ಲ ಇಂತಹ ಕ್ರಿಯಾಶೀಲರು ಮಂತ್ರಿಯಾಗಿದ್ದರು ಆದ್ರೆ ಕುರ್ಚಿಆಟಕ್ಕೆ ಬಲಿಯಾದರು ಇದು ನೋವಿನ ಸಂಗತಿ
BJP is another version of Congress…corrupt, male dominated and stupid. If any body had to be sacked it is Reddy Brothers and SriRamulu for their rebellion against the chief minister. This will be last time BJP will ever rule a southern state…they had a great opportunity to consolidate their power and do some good work like Modi, but they wasted the opportunity. Feel sorry for shoba.
ನಿಮ್ಮ ಅಭಿಪ್ರಾಯವನ್ನು ಒಪ್ಪುತ್ತೇನೆ. ಶೋಭಾಳ ತಲೆದಂಡ ನಿಜಕ್ಕೂ ಮರುಕ ಹುಟ್ಟಿಸುತ್ತೆ. ಆದರೇ…ಶೋಭಾಳ ವಯಸ್ಸು,ಅನುಭವ,ಸಾಮರ್ಥ್ಯ ಹಾಗೂ ಅರ್ಹತೆಗೂ ಮೀರಿ ಒದಗಿದ ಸ್ಥಾನಮಾನಕ್ಕೆ ಮುಖ್ಯಮಂತ್ರಿಗಳ ನಿಕಟತೆಯೇ ಪ್ರಮುಖ ಕಾರಣ ಅನ್ನೊದು ವಾಸ್ತವ ತಾನೇ ?
ಹಾಗೇನೇ ಮರೆತ ಮಾತು:..ನಮ್ ದೇವೇಗೌಡ್ರು ಇರದಿದ್ರೆ ಕುಮಾರಣ್ಣ ಎಲ್ಲಿರ್ತಿದ್ರು !
Don’t be emotional on Shobha karandlaje. She is the best lady politician. She is having her own future politics. She overcome from all the drawbacks. OK
ನಮಸ್ತೇ
ಶಿವಕುಮಾರ್,
ನೀವು ಲೇಖನದ ಹಿಂದಿನ ಸೂಕ್ಷ್ಮತೆಯನ್ನ ಗಮನಿಸಿದರೆ, ಇದು ಶೋಭಾ ಪರ ಸಹಾನುಭೂತಿ ಅಥವಾ ಕಾಳಜಿ ಅಥವಾ ಭಾವುಕತೆಯಿಂದ ಬರೆದುದಲ್ಲ ಎಂಬುದು ಅರಿವಾಗಬಹುದು. ಇದು ಶೋಭಾರ ಪ್ರಕರಣವನ್ನು ಮುಂದಿಟ್ಟುಕೊಂಡು, ಒಟ್ಟಾರೆ ಮಹಿಳೆಯರ ಸ್ಥಾನಮಾನಗಳು ಹಾಗೂ ಪುರುಷ ದಬ್ಬಾಳಿಕೆಯ ಬಗ್ಗೆ ನಡೆಸಲಾಗಿರುವ ಚರ್ಚೆ. ಶೋಭಾ ಕೂಡ ಅದರ ಬಲಿಪಶು. ಖಂಡಿತ ಆಕೆ ಅಪ್ಪಟ ರಾಜಕಾರಣಿ. ಮತ್ತೆ ರೆಕ್ಕೆ ಕಟ್ಟಿಕೊಮ್ಡು ಫೀನಿಕ್ಸ್ ಆಗಬಹುದು. ಆದರೆ, ಆಕೆ ತನ್ನ ತನ ಬಿಟ್ಟೂಕೊಟ್ಟು ನಯವಂಚಕತನ ರೂಢಿಸಿಕೊಳ್ಳುವವರೆಗೂ ಪುರುಷ ರಾಜಕಾರಣಿಗಳು ಆಕೆಗೆ ಪ್ರಹಾರ ನೀಡುತ್ತಲೇ ಇರುವರು. ಆಕೆ ಕೂಡ ‘ಜೀ ಹುಜೂರಿಗೆ’ ಇಳಿದ ನಂತರ ಎಲ್ಲವೂ ಸರಿಯಾಗುವುದು. ಆ ಬಗೆಯಲ್ಲಿ ಮಾರ್ಪಾಡಾದರೆ, ಆ ಶೋಭಾ ಬಗ್ಗೆ ನಮಗೆ ಸಹಾನುಭೂತಿ ಇರದು. OK?- ಚೇತನಾ