ಒಮ್ಮೊಮ್ಮೆ ಅನಿಸುತ್ತದೆ
ಸಾವನ್ನ ತಟ್ಟೆಯೊಳಗಿಟ್ಟು
ಚೂರು ಚೂರೆ ಹರಿದು ತಿನ್ನಬೇಕು
ನನಗೆ ಸಾವಿನ ಹಸಿವು…
ಅನಿಸುತ್ತದೆ
ಸಾವನ್ನ ತಬ್ಬಿ ಚುಂಬಿಸಬೇಕು
ತೋಳಲ್ಲಿ ಬಳಸಿ
ಇಂಚಿಂಚು ಕರಗುತ್ತ ಕಳೆದುಹೋಗಬೇಕು
ಒಲ್ಲದ ಮದುವೆಯಂತೆ ಇದು
ಕಟ್ಟಿಕೊಂಡ ಬದುಕು
ಅನಿಸುತ್ತದೆ,
ಕಳ್ಳಾಟವಾಡುತ್ತ
ಸಾವಿನೊಟ್ಟಿಗೆ
ಹಾದರಕ್ಕಿಳಿಯಬೇಕು…
ವಿ.ಸೂ: ಇವೆಲ್ಲ ನನ್ನ ವಿಷಾದಗೀತ ಸೀರೀಸ್ ಕವಿತೆಗಳಷ್ಟೆ. ಸುಮ್ಮನೆ ಬಿದ್ದು ಒದ್ದಾಡಿಕೊಂಡು ಅಳುತ್ತಿದ್ದವು, ಇಲ್ಲಿ ಹಾಕಿಕೊಂಡಿದೇನೆ.

ಹೀಗೆಲ್ಲ ಅನಿಸುತ್ತದೆ ನಿಜ. ನೀಮ್ಮ ಭಾವನೆ ವ್ಯಕ್ತಪಡಿಸಿ ಕ್ರಮ ನನಗೆ ಇಷ್ಟವಾಯಿತು. ಹಾಗೆ ನನಗೆ ಇದು ವಿಶಾದಗೀತೆ ಎಂದು ಅನಿಸುವುದಿಲ್ಲ.
struck a chord.
your words are no nonsense..as powerful as they can get..truly phenomenal.
ತುಂಬಾ ಚೆನ್ನಾಗಿದೆ….
ಸುಘೋಷ್ ಎಸ್. ನಿಗಳೆ
ಕಟು ಸತ್ಯದ ವಿಷಾದ ಗೀತ……. ತುಂಬಾ ಚೆನ್ನಾಗಿದೆ…..
ನನಗೆ ಸಾವಿನ ಹಸಿವು…
ವಿಷಾದ ಗೀತೆ ಯನ್ನು ವ್ಯಕ್ತ ಪಡಿಸಿದ ರೀತಿ ಒಂಥರಾ ಚೆನ್ನಾಗಿತ್ತು.ಹಾದರ ಪದ ಬಳಕೆ ಬೇಡ ಅನಿಸಿತು ನನಗೆ.
ರಾಜೇಶ್, ಸುಷ್ಮಾ, ಸುಘೋಷ್, ದಿನಕರ್… ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್.
ಮಹೇಶ್,….. ತಟ್ಟೆಯೊಳಿಟ್ಟು ಚೂರು ಚೂರೆ ಹರಿದು….!?
ಶಶಿ, ನಾನು ಮಡಿ-ಮೈಲಿಗೆ etc ಎಲ್ಲ ಬಿಟ್ಟವಳಂತ ಅಮ್ಮನೇ ಖುಷಿಯಿಂದ ಒಪ್ಕೊಂಡು ಬಿಟ್ಟಿದಾಳೆ…
ನಲ್ಮೆ,
ಚೇ
ಸಾವಿಗೆ ನೀವು ಕೊಟ್ಟ ಸ್ಮೈಲೀ ಪೋಸು ಭಾಳ ಚೆನ್ನಾಗಿದೆ …. ಇದೇ ಪೋಸು ಸಾವು ನಮಗೆ ಕೊಟ್ಟರೆ ಇನ್ನೂ ಚೆನ್ನಾಗಿರುತ್ತದೆ.. ಕ್ಷಣ ಕ್ಷಣವೂ ಜೀವನಾಮ್ರತವನ್ನು ಹೀರುತ್ತಾ ಹನಿ ಹನಿಯಾಗಿ ಸಾವನ್ನು ಸವಿಯುವುದು ಹ್ರದಯವಂತಿಕೆ.. ಬದುಕ ಭಾರವನ್ನು ಹೊರಲಾಗದೆ ಮೃತ್ಯುವನ್ನುಬಯಸುವುದು ಅಂಜುಬುರುಕತನ. ಒಂದು ವಾಸ್ತವ ಹೀಗಿದೆ… ” ಜೀನಾ ಭಿ ಉಸೀ ಕಾ ಹಕ್ ಹೈ ಜಿಸೇ ಮರ್ನೇಕಾ ಸಲೀಕಾ ಆತಾ ಹೈ * ಮರ್ನೆ ಸೆ ಜೋ ಘಬ್ರಾತಾ ಹೈ ವೋ ಜೀತೇ ಜೀ ಮರ್ ಜಾತಾ ಹೈ ” ಅರ್ಥಾತ್ ಯಾರು ಸಾವಿಗೆ ಸನ್ನದ್ಧನೋ ಅವನಿಗೆ ಮಾತ್ರ ಬದುಕುವ ಹಕ್ಕಿದೆ, ಸಾವಿಗೆ ಹೆದರುವ ಪುಕ್ಕಲ ಜೀವಿಸಿಯೂ ಶವವಾಗಿರುತ್ತಾನೆ.
” ಒಲ್ಲದ ಮದುವೆಯಂತೆ ಇದು
ಕಟ್ಟಿಕೊಂಡ ಬದುಕು
ಅನಿಸುತ್ತದೆ, ”
ಅನಿಸಬಹುದು … ಆದರೆ ಅದರೊಂದಿಗೆ (ಸರಸ)ಸೆಣಸಾಡಿದವನಿಗೆ ಸಾವಿನೊಟ್ಟಿಗೆ ಹಾದರಕ್ಕಿಳಿಯುವ ಅಗತ್ಯ ಬೀಳುವುದಿಲ್ಲ..
a writer like chethana doesnt need an h word for shock value..
with a generic context of forbidden, usage was very apt..
how many people can afford the luxury of death?..namma jeeva nammadu anta nijvaglu ansutta?..
kattikonda jeevna usiru kattistirovaga.. if someone tries an adventure sport which can almost get you killed..its nothing short of haadara..