ಅಮ್ಮ ಕಾಲ್ ಮಾಡಿದ್ದಳು.
“ನೆನ್ನೆ ತೀರ್ಥಳ್ಳಿ ಬಂದ್ ಇತ್ತು ಕಣೇ. ಟೀವಿ ನೈನಲ್ಲಿ ತೋರಿಸ್ತಿದಾರೆ ನೋಡ್ಲಿಲ್ವ?” ಅಂದಳು.
ಬಂದ್ ಆಗಿರೋ ತೀರ್ಥಳ್ಳೀನ ಟೀವೀಲಿ ತೋರಿಸೋವಷ್ಟು ಘನಂದಾರಿ ಕೆಲಸ ಏನಾಗಿದೆ ಅಂತ ನಂಗೆ ಕುತೂಹಲ. ಮುಂದಿನದು ಅಮ್ಮನ ಮಾತು, ಹಾಹಾಗೇ…
“ಹೋ ನಿಂಗೊತ್ತಿಲ್ವ? ದೊಡ್ ಮನೆ ಕೇರಿ ಹುಡುಗ, ಮಿಲ್ಕೇರಿ ಹುಡುಗಿ ಓಡೋಗಿದಾರೆ. ಅದ್ಕೆ ದೊಡ್ ಗಲಾಟೆ ಇಲ್ಲಿ. ನೆನ್ನೆ ಬಂದ್. ಇವತ್ತೂ ಚೂರು ಪಾರು ರಗಳೆ ಇದ್ದೇ ಇದೆ. ಎಂಥದೇನೋ ಮಾರಾಯ್ತಿ. ನಮ್ ಪಾಡಿಗೆ ನಾವಿದ್ವಿ ಅತ್ಲಾಗೆ. ಸಾಯ್ತಾವೆ, ಕೆಲಸವಿಲ್ದ ಈ ಹುಡುಗ್ರು”
“ಎಂತ ಸರಿ ಹೇಳ್ತೀಯೋ ಇಲ್ಲೋ? ಲವ್ ಮ್ಯಾರೇಜ್ ಏನು ಮೊದಲ್ನೆ ಸರ್ತಿ ಆಗ್ತಿದ್ಯ ಊರಲ್ಲಿ?”
“ಮಾರಾಯ್ತಿ, ಎಂಥದೋ ಲವ್ ಜಿಹಾದ್ ಅಂತೆ. ನಿನ್ನೆ ಭಜರಂಗ ದಳದವ್ರು ಭಾಷಣ ಮಾಡಿದ್ರು. ಕರ್ಮ. ಐವತ್ ವರ್ಷದಿಂದ ಇಲ್ಲಿ ಮುಸ್ಲಿಮ್ ಹುಡ್ಗ, ಹಿಂದೂ ಹುಡ್ಗಿ ಮದ್ವೆ ನಡೀತ್ಲೇ ಇದೆ. ಇವತ್ತಿಗೂ ಭಾರತೀಪುರ ಬ್ರಾಹ್ಮಣರ ಹುಡುಗಿ ಮುಸ್ಲಿಮ್ ಮದ್ವೆಯಾಗಿದ್ದೋಳು ಘೋಷ ಹಾಕ್ಕಂಡ್ ಅರಾಮಾಗೇ ಜೀವ್ನ ಮಾಡಿದಾಳೆ. ಅಲ್ಲ, ಇದೆಲ್ಲ ಎಂತ ಅಂತ?”
“ಅಯ್ಯೋ ಭಗವಂತ! ಹುಡ್ಗ ಯಾರು?”
“ಅಯ್ಯೋ ನಾ ನೋಡಿದೀನಿ ಕಣೇ. ಅವನ ಅಪ್ಪ ಅಮ್ಮ ಹುಡ್ಗಿ ಮನೇಗೆ ಮೊದ್ಲೇ ವಾರ್ನ್ ಮಾಡಿದ್ರಂತೆ. ನಿಮ್ ಹುಡ್ಗಿ, ನಮ್ ಹುಡ್ಗ ಸಿಕ್ಕಾಪಟ್ಟೆ ಓಡಾಡ್ತಿದಾರೆ, ಬೇಗ ಮದ್ವೆ ಮಾಡ್ಕೊಳಿ ನಿಮ್ ಕಡೆಗೆ ಕೊಟ್ಟು. ನಾವೂ ಹುಡ್ಗನ್ನ ಹೊರಗೆಲ್ಲಾರೂ ಕಳಿಸ್ತೀವಿ ಅಂತ. ಇವ್ರು ಕೇರ್ ಲೆಸ್ಸಾಗಿದ್ರೋ ಎಂಥದೋ, ಅವ್ರಿಬ್ರೂ ಓಡೋದ್ರು. ಅಲ್ಲೆ, ಯಾವನಾದ್ರೂ ಜಿಹಾದ್ ಮಾಡೋನು ಮೊದ್ಲೇ ಹಾಗೆ ಇನ್‌ಫರ್ಮ್ ಮಾಡ್ತಾನಾ? ಬೆಂಗ್ಳೂರಲ್ಲಿ ಪೋಲಿಸ್ರಿಗೆ ಶರಣಾಗಿ ಪ್ರೊಟೆಕ್ಷನ್ ಕೇಳ್ತಾನಾ? ಒಟ್ನಲ್ಲಿ, ಬೆಂಕಿ ಹಚ್ಚೋ ಕೆಲಸ ಇದು ಅಷ್ಟೇಯ!”
“…………..”
“ ಅವ್ರಿಬ್ರೂ ಪ್ರೀತ್ಸಿ ಮದ್ವೆ ಆಗ್ತಿದಾರಪ್ಪ. ಅವ್ರ ಪಾಡಿಗೆ ಬಿಡಬಾರ್ದ? ಅವಳನ್ನ ವಾಪಸ್ ಕರ್ಕೊಂಡ್ ಬರ್ತಾರಂತೆ. ಆಮೇಲೆ ಇವ್ರಲ್ಲಿ ಯಾರಾದ್ರೂ ಮದ್ವೆ ಮಾಡ್ಕೊಂಡು ಅವ್ಳನ್ನ ಖುಷಿಯಾಗಿ ಬಾಳಿಸೋ ತಾಕತ್ತಿದೆಯಾ? ಪ್ರೀತಿಸ್ಕೊಂಡಿದಾರೆ, ಮದ್ವೆ ಆಗ್ತವೆ. ಕಷ್ಟ ಪಟ್ರೆ ಅವುಗಳ ಹಣೇಬರ. ಭಾರಿ ಈ ಜಾತಿ ಜಾತಿ ಒಳಗೆ ಮದ್ವೆ ಆದ ಹೆಣ್ಮಕ್ಕಳ ಸುಖ ಸೂರೆ ಹೋಗ್ತಿರೋದು ಈಗ”
“……………..”
“ಎಂತ ಲವ್ ಜಿಹಾದು? ಭಾಳಾ ಹಿಂದೆ ಆಗೊಂದ್ಸಾರ್ತಿ ತಾವು ಶ್ರೀಮಂತರು ಅನ್ನೋ ಕಾರಣಕ್ಕೆ ಮುಸ್ಲಿಮ್ ಜನ ತಮ್ ಹುಡ್ಗೀನ ಕೊಡದೆ ಆ ಹುಡುಗನ ಕಥೆ ಮುಗ್ಸಿದ್ರು ಬಿಟ್ರೆ ಬೇರೆ ಎಂತದಾಗಿಲ್ಲ ಈ ಊರಲ್ಲಿ. ಹಂಗೆ ಶ್ರೀಮಂತ್ರು ಬಡವ್ರು ಈ ವಿಷಯಕ್ಕೆ ಹೊಡೆದಾಡೋದು ಇದ್ದಿದ್ದೇ. ಜಾತಿ ಏನು ಮಾಡತ್ತಲ್ಲಿ? ಹೊಸಹೊಸತೆಲ್ಲ ಶುರುವಾಗ್ತಿದೆ ನೊಡು! ಸರ್ಯಾಗಿ ಕಾಪಾಡ್ಕೊಂಡೋಗೋ ಸರ್ಕಾರ ತರ್ಬೇಕು. ಅದೂ ಕರ್ಮವೇ. ಕಾಂಗ್ರೆಸ್ಸು ಯಾರ್ನೂ ಗಲ್ಲಿಗೇ ಹಾಕಲ್ಲ ಅನ್ನತ್ತೆ. ಬೀಜೇಪಿ ಬಂದ್ರೆ ಮತ್ತೊಂಥರ ಕೇಡು. ಬಿಟ್ರೆ ಈ ನಕ್ಸಲೈಟ್ರು ಕಾಟ. ಯಾರ್ನ ಅನುಮಾನಿಸ್ಬೇಕು ಅವ್ರನ್ನ ಅನುಮಾನಿಸಲ್ಲ. ಎಲ್ಲಿ ಬೇಕೋ ಅಲ್ಲಿ ರಕ್ಷಣೆ ಕೊಡಲ್ಲ. ಸಾವು ಮಾರಯ್ತಿ. ಇನ್ನು ನಿಮ್ ಮಕ್ಳು ಮರಿ ಕಾಲಕ್ಕೆ ಏನು ಗತೀನೋ?”
“ಹೋ… ತಡಿ ತಡಿ… ನೀ ಹೇಳಿದ್ದೇನಾದ್ರೂ ಮರ್ತೋದ್ರೆ ಕಷ್ಟ. ಬ್ಲಾಗಿಗೆ ಹಾಕಿ ಬರ್ತೀನಿ”
“ಸರಿ. ನಾನು ನ್ಯೂಸಲ್ಲಿ ಏನೇನು ತೋರಿಸ್ತಾರೆ ನೋಡಿ ಹೇಳ್ತೀನಿ.”
~
ಇದು, ಈಗ ಅಂದರೆ ಎಂಟು ಗಂಟೆ ಸುಮಾರಿಗೆ ನಡೆದ ಸಂಭಾಷಣೆ.
ಅಮ್ಮ ಅರ್ಚಕರ ಮನೆಯ ಹೆಣ್ಣುಮಗಳು. ಓದಿದ್ದು ಎಸ್ಸೆಸ್ಸೆಲ್ಸಿ. ಈಗ ವಯಸ್ಸು ಐವತ್ತು ದಾಟುತ್ತಿದೆ. ಮಡಿ ಮೈಲಿಗೆ ಇಲ್ದಿದ್ರೂ ದೇವರು- ದಿಂಡರು ಮಾಡುವಾಕೆ.
~
ನಮಗೆ ಮತ್ತೊಬ್ಬ ಹಿಟ್ಲರ್ ಬೇಡ. ನಮ್ಮಲ್ಲಿ ಸತ್ವವಿದ್ದರೆ ಉಳೀತೇವೆ. ಇಲ್ಲವಾದರೆ ಇಲ್ಲವಷ್ಟೆ. ನಮಗೆ ತಾಲಿಬಾನಿನಂಥ ವಿಕೃತ ಜನರೂ ಬೇಡ. ನಮಗೆ ನಮ್ಮ ಸಂಸ್ಕೃತಿ ಉಳಿಸ್ಕೊಳೋಕೆ ಗೊತ್ತು.
ಈ ಗಂಡಸರು ಧರ್ಮ ರಕ್ಷಣೆಯ ಭಾರ ಹೆಗಲ ಮೇಲೆ ಹೊತ್ತಂತೆ ಯಾಕಾಡ್ತಾರೋ? ತಾವು ಕೂಗುವುದರಿಂದ ಕಿರುಚುವುದರಿಂದ ಧರ್ಮ ಉಳೀತಿದೆ ಅನ್ನುವ ಭ್ರಾಂತಿ ಅವರು ಬಿಡಲಿ ಮೊದಲು. ಯಾಕೆ ಇವರಿಗೆ ಬೇರೆ ಜಾತಿಯ ಹುಡುಗನ್ನ ಮದುವೆಯಾಗುವ ಹುಡುಗೀರೇ ಕಣ್ಣಿಗೆ ಬೀಳೋದು? ಹೋ… ಹುಡುಗ ಹಾಗೆ ಮದ್ವೆಯಾದ್ರೆ ತಮ್ಮ ಜಾತಿಗೊಂದು ಸಂಖ್ಯೆ ಸೇರಿಕೊಳ್ಳತ್ತೆ ಅಂತಲಾ? ಥೂ! ಕೆಟ್ಟ ಲೆಕ್ಕಾಚಾರ ಅಲ್ವ? ಇದು ಹಿಂದೂ ಗಂಡಸರಿಗೆ ಮಾತ್ರ ಹೇಳ್ತಿರೋದಲ್ಲ. ಎಲ್ಲ ಜಾತಿಯಲ್ಲೂ ಇದು ಹೀಗೇ ಆಗತ್ತೆ. ಮುಸ್ಲಿಮ್, ಕ್ರಿಶ್ಚಿಯನ್ ಹೊರತೇನಲ್ಲ.
ಹ್…
ಇಷ್ಟು ಹೇಳಿದ ಮೇಲೆ ಯಾಕೋ ಏನೂ ಹೇಳಲು ಮನಸಾಗ್ತಿಲ್ಲ. ಇದನ್ನ ಓದಿಕೊಂಡು ನಮನಮಗನಿಸಿದ್ದನ್ನ……

yellaroo nimmammana taraha yochane maado kaala baro tanaka.. e jagala e dombi.. ee galaate.. band..ella iddidde… aa kaala baruttoo ilvo 😦 idella purely for political benifit.. thats all
ನಮ್ಮದು ಕೀಟಾಣುಗಳ ಸಮಾಜ… ರೋಗದ ಕುರಿತು ಎಲ್ಲರೂ ಬೊಬ್ಬೆ ಹಾಕ್ತಾರೆ … ರೋಗಾಣುಗಳು ಯಾರ ಕಣ್ಣಿಗೂ ಬೀಳುವುದಿಲ್ಲ … ಇಲ್ಲಿ ನಡೆಯುವ ಎಲ್ಲ ಅನಾಹುತಗಳ ಹಿಂದಿರುವ ಕಾಣದ ಕೈಗಳನ್ನು ಕಂಡು ಹಿಡಿಯಲು ಯಾರೂ ನಿಷ್ಠರಲ್ಲ … “ಬುದ್ಧಿಜೀವಿಗಳು” ಎಂದು ನಾಮ ಪಡಕೊಂಡವರು ಮುಖವಾಡಗಳಲ್ಲಿದ್ದಾರೆ.. ಪರಿಸ್ಥಿತಿಯನ್ನು ಬಿಗಡಾಯಿಸುವಲ್ಲಿ ಇವರ ಪಾತ್ರ ಪಾತಕಿಗಳಿಗಿಂತ ಏನೂ ಕಡಿಮೆಯಿಲ್ಲ.. ಯಾವುದೇ ಸಾಮಾಜಿಕ ಪ್ರಶ್ನೆಯನ್ನು ನ್ಯಾಯೋಚಿತವಾಗಿ ಪರಾಮರ್ಶಿಸಲು ಸಮಾಜದ ಯಾರಿಂದಲೂ ಸಾಧ್ಯವಾಗದೆ ಹೋಗುವುದು ವಿಪರ್ಯಾಸವೇ ಸರಿ… ಸ್ವಘೋಷಿತ ಧರ್ಮಗೋಡೆಗಳ ಆಶ್ರಯ ಪಡೆದವರಿಂದ ಇದನ್ನು ಊಹಿಸಲೂ ಸಾಧ್ಯವಿಲ್ಲ… ಲೇಖನಿ ಹಿಡಿದವರು ಕನ್ನಡಕ ಧರಿಸಿದವರಿಗಿಂತ ಸೂಕ್ಷ್ಮದರ್ಶಿಗಳಾಗಿರಬೇಕು.. ಜನ ಸಾಮಾನ್ಯರಿಂದ ಅಡಗಿ ಹೋದ ಸತ್ಯಾಂಶವನ್ನು ಕಂಡು ಹಿಡಿಯುವಷ್ಟು ಸೂಕ್ಷ್ಮ … ಅದಕ್ಕೆ ಯಥಾರ್ಥವನ್ನು ಹೊರಗೆಡಹುವಷ್ಟು ಗಟ್ಟಿಯಾದ ಹ್ರದಯವೂ ಬೇಕು?
ಅಮ್ಮನಿಗೆ ನನ್ನದೊಂದು ನಮಸ್ಕಾರ ತಿಳಿಸಿ….
ಚೇತನಾ ನೀವು ಪಕ್ಕಾ ಸ್ತ್ರೀ ವಾದಿ ನೋಡ್ರಿ ಈ ಲವ್ ಜಿಹಾದ್ ತಾಲೀಬಾನಿಕರಣದ ಒಂದು ಅಂಗ ಅನ್ಸುತ್ತೆ
ಹೆಂಗಸರಲ್ಲಿ ಹಿಂದು, ಮುಸ್ಲಿಂ ಹೀಗೆ ಭೇದ ಇಲ್ಲ ಶೋಷಿತರು ಕೊನೆಗೆ ಹೆಂಗಸರೇ ಅನಿಸಿಕೊಳ್ಳೋದು ಯಾಕೋ ಗೊತ್ತಿಲ್ಲ
ಮೊನ್ನೆ ಬೆಂಗಳುರಿನಲ್ಲಿ ಚಿತ್ರಾ ಅನ್ನೋ ಹುಡುಗಿ ಕತೆ ಎರಡುದಿನ ವಾಹಿನಿಗಳಲ್ಲಿ ಹರೀತಲ್ಲ ಶಿಕ್ಷಿತ ಹೆಂಗಸು ಸಹ ಶೋಷಿತೆ
ಪಟ್ಟ ಕಟ್ಕೊಳ್ತಿದಾಳಲ್ಲ ಇದೇ ಹಳಹಳಿ
ಹದಿಹರೆಯದ ಜೋಡಿಗಳ ಪ್ರೀತಿಯಂತಹ ವಿಷಯವನ್ನು ಗಲಾಟೆ , ದೋಂಬಿ , ಬಂದ್ , ಭಾಷಣಗಳ ಮೂಲಕ ತಡೆಯಲು ಹೊರಡುವಷ್ಟು ಮೂರ್ಖತನ ಇನ್ನಾವುದೂ ಇಲ್ಲವೇನೊ. ನಿಮ್ಮ ಅಮ್ಮನ ಮಾತುಗಳು ನೂರಕ್ಕೆ ನೂರು ನಿಜ.
umesh desai ಭೂತಕಾಲದಂತೆ ವರ್ತಮಾನದ ಕುರಿತೂ ಏನೇನೂ ಅರಿತವರಲ್ಲ…..!
ಅಮ್ಮಂಗೆ ನಂದೂ ಒಂದು ನಮಸ್ಕಾರ ತಿಳಿಸಿ. ನಂಗೂ ಇಷ್ಟೇ ಹೇಳಲಿಕ್ಕೆ ಗೊತ್ತಾಗ್ತಿರೋದು.
ಪ್ರಿಯ ಚೇತನಾ,
ಯಾಕೆ ಯಾರಿಗೂ ತಮ್ಮ ಸುತ್ತಲಿನ ಸಂಗತಿಗಳನ್ನ ಸರಳವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವೇ ಇಲ್ಲ?!
ಎಲ್ಲದಕ್ಕೂ ಯಾವುದೋ ಸಿದ್ಧಾಂತ ಸುತ್ತಿಸಿ ಮೆರವಣಿಗೆ ಮಾಡುತ್ತಾರೋ ಅರ್ಥವೇ ಆಗೊಲ್ಲ.
ಇದಕ್ಕೆಲ್ಲ ರಾಡಿಗೊಂಡಿರುವ ಮನಸ್ಥಿತಿಯೇ ಕಾರಣ ಅನ್ಸತ್ತೆ.
ಇಂತವರ ನಡುವೆ ಅಮ್ಮನಂತಿರುವವರೂ ಇದ್ದಾರೆ ಅನ್ನೋದೆ ಸಮಾಧಾನ.
ಪ್ರೀತಿಯಿಂದ
ಸಿಂಧು
ಆತ್ಮೀಯ
ಲೇಖನ ಚೆನ್ನಾಗಿದೆ .
ಗ೦ಡಸರು ಕಿರುಚಿಕೊಳ್ತಾ ಇರೋದ್ರಿ೦ದ ಧರ್ಮ ಉಳೀತಿದೆ ಅನ್ನೋ ಭ್ರಾ೦ತೀಲಿ ಇಲ್ಲಮ್ಮ ಆಗ್ತಿರೋ ಅನ್ಯಾಯನ ನೋಡ್ಲಿಕ್ಕಾಗದೆ ಕಿರ್ಚಾಡ್ತಾ ಇದಾರೆ ತು೦ಬಾ ದಿನಗಳ ಮೌನ ಒಡೆದು ಹೊರಗ ಬರ್ತಾ ಇದೆ .ಅವ್ರಿ೦ದ ಧರ್ಮ ಉಳೀತಿದೆಯೋ ಇಲ್ವೋ ನಾನರಿಯೆ
ಆದರೆ ಧರ್ಮಾ೦ತರ ಆಗಿ ತೊ೦ದರೆ ಅನುಭವಿಸೋದನ್ನ ತಪ್ಪಿಸಕ್ಕೆ ಪ್ರಯತ್ನ ಅ೦ತೂ ಮಾಡ್ತಿದಾರೆ. ಆಚರಣೆಗಳೇ ಗೊತ್ತಿಲದೇ ಇರೋ ಧರ್ಮಕ್ಕೆ ಬಲವ೦ತದಿ೦ದ ಹೋಗಿ ನರಕ ಅನುಭವಿಸ್ತ ಇರೋ ಹೆಣ್ಣುಮಕ್ಕಳನ್ನ ನಾನು ಕಣ್ಣಾರೆ ಕ೦ಡಿದೀನಿ ನಿಮ್ಮ ಜಿಲ್ಲೆಯ ಭದ್ರಾವತೀಲಿ (ನಾನೂ ಅಲ್ಲಿಯವನೇ) ಆ ಹುಡುಗಿಯ ಮಾತುಗಳನ್ನ ನನ್ನ ಬ್ಲಾಗಿನಲ್ಲಿ ಅಪ್ಲೋಡ್ ಮಾಡಿದೀನಿ ಒಮ್ಮೆ ಓದಿ
ಪ್ರೀತೀಗೋಸ್ಕರ ಧರ್ಮಾನ ಉಪಯೋಗಿಸಿಕೊಳ್ಳೋದು ತಪ್ಪಲ್ವಾ? ತಮ್ಮ ಜಾತೀಲಿ ಸ೦ಖ್ಯೆ ಕಡಿಮೆ ಆಗುತ್ತೆ ಅ೦ತಲ್ಲ ತಮ್ಮ ಮನೆ ಹುಡುಗಿ ಅಪಾಯಕ್ಕೆ ಸಿಕ್ಕಿಹಾಕಿಕೋಬಾರ್ದೂ ಅ೦ತ.ಗಲಾಟೆ ಮಾಡೋವ್ರೆಲ್ಲಾ ಸ೦ಭಾವಿತರು ಅ೦ತ ನಾ ಹೇಳಲ್ಲ.ಪು೦ಡರೂ ಇದಾರೆ ಆದರೆ ತಪ್ಪು ಮಾಡಿದೋರ ವಿರುದ್ದ ಹೋರಾಡಿದ್ರೆ ತಪ್ಪಲ್ಲ
ಹರೀಶ ಆತ್ರೇಯ
ಈ ಭಜರಂಗದಳದವರು ಪ್ರೀತಿ ಮಾಡೋದಕ್ಕೂ ಬಿಡಲ್ವಾರೀ…. ಅವರೇನು ಮನುಷ್ಯರೇ ಅಲ್ವಾ….
ನಾವ್ಯಾವಾಗಲೂ ಹಾಗೇ! ಪರಿಣಾಮಗಳನ್ನು ಬೈತೇವೆ. ಅದರ ಕಾರಣಗಳ ಬಗ್ಗೆ ಲಕ್ಷ್ಯ ವಹಿಸೋದಿಲ್ಲ. ಭಜರಂಗದಳದವರು ಹಿಂದೂ ಎಂದರೆ ಬೈತೇವೆ, ಆದರೆ ಅವರು ಹಾಗೆ ಆಡಲು ಕಾರಣವೇನು ಎಂಬುದನ್ನು ನೋಡಲು ಹೋಗಲ್ಲ, ಶಿವಸೇನೆಯವರು ಮರಾಠಿ ಎಂದರೆ ಬೈತೇವೆ ಆದರೆ ಅವರು ಹಾಗೆ ಅನ್ನುವಂತೆ ಮಾಡಿದ್ದೇನೆ ಎಂದು ತಿಳಿಯಲಿಕ್ಕೆ ಹೋಗಲ್ಲ.
ನಾವು ಇಲ್ಲಿ ವೈಯಕ್ತಿಕ ಹಂತದಲ್ಲಿ ನಮಗ್ಯಾವ್ದೂ ಬೇಕಾಗಿಲ್ಲ, ಯಾರಾದ್ರೂ ಲವ್ ಮಾಡಿಕೊಳ್ಳಲಿ ಯಾರಾದ್ರೂ ಹಾಳಾಗಿಹೋಗಲಿ ಎಂದು ಸುಮ್ಮನಿದ್ದುಬಿಡಬಹುದು. ಆದರೆ ಅದು ಸಾಮಾಜಿಕ ಮಟ್ಟದ ತೊಂದರೆಯಾದಾಗ ಮಾತಾಡಲೇಬೇಕಾಗುತ್ತದೆ.
ಅಮ್ಮ ಹೇಳಿದ್ದು ನಿಜ. ಅಮ್ಮನ ಕಾಲಕ್ಕೆ ಬೇರೆಬೇರೆ ಧರ್ಮಗಳ ಹುಡುಗ ಹುಡುಗಿ ಪ್ರೀತಿಸಿ ಮದುವೆಯಾಗಿರಬಹುದು. ಯಾರೋ ಒಂದಿಷ್ಟು ಜನ ಮದುವೆಯಾಗಿ ಆರಾಮಾಗಿರಬಹುದು. ಆಗ ಅದು ಗಾಬರಿಪಡುವ ವಿಷಯವೂ ಅಲ್ಲದಿರಬಹುದು. ಆದರೆ ಅಮ್ಮನ ಕಾಲ ಈಗಿಲ್ಲ. ಬಹುತೇಕ ಹೆಣ್ಣುಮಕ್ಕಳು ತೊಂದರೆ ಅನುಭವಿಸಿ ವಾಪಸ್ ಬಂದಿದ್ದಾರೆ, ಅಲ್ಲಿಯೂ ಇರಲಾಗದೇ ಇಲ್ಲಿಯೂ ಇರಲಾಗದೇ ಜೀವನ ಹಾಳುಮಾಡಿಕೊಂಡಿದ್ದಾರೆ. ಈಗಿನ ಕಾಲದಲ್ಲೂ ಹಿಂದೂ ಮುಸ್ಲಿಂ ಮದುವೆಯಾಗೋರು ಆಗ್ತಾ ಇದ್ದಾರೆ. ಅದು ನಿಜವಾದ ಪ್ರೀತಿಪ್ರೇಮದಿಂದ ಅಪ್ಪ ಅಮ್ಮ ಒಪ್ಪಿ ಆದರೆ ತಪ್ಪೇನಿಲ್ಲ. ಆದರೆ ಅದು ಮತಾಂತರದಂತಹ ಕೆಲಸಕ್ಕೇ ನೆಡೆಯುವುದಾದರೆ ಅದನ್ನು ವಿರೋಧಿಸುವುದರಲ್ಲಿ ಅರ್ಥವಿದೆ. ಹುಡುಗಿಯಾಗಲೀ ಹುಡುಗ ಆಗಲಿ ಆವಯಸ್ಸಿನಲ್ಲಿ ಪ್ರೀತಿ ಮಾಡುವಾಗ ಮುಂದಿನ ಜೀವನದ ಬಗ್ಗೆ ಗೊತ್ತಿರೋಲ್ಲ. ಅದು ಹುಚ್ಚುಕುದುರೆ ಮನಸ್ಸು ಆಗ. ದೊಡ್ಡವರು ಸರಿತಪ್ಪು ತಿಳಿಸಿಕೊಟ್ಟು ಲಗಾಮು ಹಾಕಲೇಬೇಕಾಗುತ್ತದೆ. ಇಲ್ಲದಿದ್ದರೆ ನಮ್ಮ ವಿಶಾಲ ಮನೋಧರ್ಮವನ್ನು ನಮ್ಮ ವೀಕ್ ನೆಸ್ಸಾಗಿ ’ಬಳಸಿಕೊಳ್ಳುವವರು’ ಚೆನ್ನಾಗಿಯೇ ಬಳಸಿಕೊಳ್ಳುತ್ತಾರೆ. ಕೆಲವೊಮ್ಮೆ ಅಂತಾರಾಷ್ಟೀಯ ಮಟ್ಟದಲ್ಲೂ ಕೂಡ!
ಈ ಲವ್ ಜಿಹಾದ್ ನಂತಹ ಸೂಕ್ಷ್ಮ ವಿಚಾರಗಳಲ್ಲಿ ಸಂವೇದನಾಶೀಲ ಲೇಖಕಿ ಈ ರೀತಿ ಗಂಡಸುದ್ವೇಷವನ್ನೂ ಸೇರಿಸಿ ಉಡಾಫೆಯಾಗಿ ಬರೆದಿರೋದು ಬೇಸರವಾಯಿತು. ಇದೆಲ್ಲಾ ನಮ್ಮ ಮನೆಗೆ ಬೆಂಕಿ ಬಿದ್ದಾಗಲೇ ನಮಗೆ ತಿಳಿಯೋದು ಅನ್ನಿಸುತ್ತೆ. ಅಲ್ಲಿಯವರೆಗೆ ಹೀಗೆ ವಾದ ಮಾಡಿಕೊಂಡು ಇರಬಹುದು.
“ನಮ್ಮಲ್ಲಿ ಸತ್ವವಿದ್ದರೆ ಉಳೀತೇವೆ. ಇಲ್ಲವಾದರೆ ಇಲ್ಲವಷ್ಟೆ” ಇದು ನನ್ನ ಅಭಿಪ್ರಾಯ ಕೂಡಾ.
ಯಾವುದೇ ಒಂದು ಸಂಸ್ಕೃತಿ ,ಜನಾಂಗ ,ಆಚಾರ ,ಭಾಷೆ ಶಕ್ತಿಶಾಲಿಯಾಗಿದ್ದಲ್ಲಿ ಅದನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ.ಅದು ದುರ್ಬಲವಾಗಿದ್ದಲ್ಲಿ ಉಳಿಸಲೂ ಯಾರಿಂದಲೂ ಸಾಧ್ಯ ಇಲ್ಲ.
ಹಿಂದೂ ಧರ್ಮ ಸಹಸ್ರಾರು ವರ್ಷಗಳಿಂದ ಉಳಿದುಕೊಂಡು ಬಂದಿದ್ರೆ ಅದು ಅದರ ಶಕ್ತಿಯೇ ವಿನಃ ಯಾವನೇ ಒಬ್ಬವ್ಯಕ್ತಿ ಅಥವಾ ಸಂಘಟನೆಯಿಂದ ಅಲ್ಲ.
@ಸಂದೀಪ ಕಾಮತರೇ,
ಅದು ದುರ್ಬಲವಾಗದಂತೆ ನೋಡಿಕೊಳ್ಳಬೇಕಾದವರು ನಾವೇ ಅಲ್ವಾ? ಸಂಸ್ಕೃತಿ ,ಜನಾಂಗ ,ಆಚಾರ ,ಭಾಷೆ ಅನ್ನುವುದೆಲ್ಲಾ ಯಾವುದೋ ದೇವಲೋಕದ entityಗಳಲ್ಲ. ನಮ್ಮಲ್ಲೆ ಇರುವುದು ಅದು. ನಾವು ಕಾಪಾಡಿಕೊಂಡರಷ್ಟೆ ಅವು ಉಳಿಯುತ್ತವೆ. ಅದನ್ನು ಶಕ್ತಿಶಾಲಿಯಾಗಿ ಇರಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲೆಯೇ ಇರೋದು. ಇಲ್ಲವಾದರೆ ಅದನ್ನು ದುರ್ಬಲವಾಗುವಂತೆ ಮಾಡಿ ಲಾಭ ತೆಗೆದುಕೊಳ್ಳುವವರು ಮಾಡಿಕೊಳ್ಳುತ್ತಾರೆ. ಸತ್ವವಿದ್ದರೆ ಉಳಿಯುತ್ತವೆ ಅಂತ passing statement ಕೊಟ್ಟು ಕೈತೊಳೆದುಕೊಂಡು ಬಿಡೋದಲ್ಲ.
ಎಲ್ರಿಗೂ ಥ್ಯಾಂಕ್ಸ್.
ಈ ಕಥೆ ಮುಂದುವರಿದಿದೆ. ಹುಡುಗಿ ಕೈಲಿ ಹುಡುಗನ ಜತೆ ಇರೋಕೆ ಇಷ್ಟ ಇಲ್ಲಾಂತ ಬರೆಸ್ಕೊಂಡು ಊರಿಗೆ ತಂದುಬಿಡಲಾಗಿದೆ. ಟೀವಿಯಲ್ಲಿ ಇಬ್ಬರೂ ನಗುನಗುತ್ತ ನಿಖಾ ಆಗಿದ್ದು ತೋರಿಸಲಾಗಿತ್ತು. ಇನ್ನು ಈ ಹುಡುಗಿಯನ್ನು ಏನು ಮಾಡ್ತಾರೋ? ಆಕೆಯ ಜೀವನ ಮುಂದೆ ಹೇಗೋ? ಪ್ರೀತಿಯನ್ನ ಬೇರ್ಪಡಿಸಿದ ಗಾಯ ಎದೆಯಲ್ಲಿ ಅದ್ಯಾವ ಥರ ಹುಣ್ಣಾಗಬೇಕಿದೆಯೋ? ಯಾವ ದರಿಹೋಕ ಸ್ವಜಾತೀಯನಿಗೆ ಅವಳನ್ನ ಕೊಟ್ಟು ಕೃತಾರ್ಥರಾಗ್ತಾರೋ? ಅವನೇನು ಬಾಳಿಸ್ತಾನೋ…
ಆ ಹುಡುಗಿ ಬಾಳು ಹಾಳಾಗದಿದ್ರೆ ಸಾಕು. ಹುಡುಗನದೂ…
ಆನಂದರೇ,
ಗಂಡಸುದ್ವೇಷವನ್ನ ವಾಪಸ್ ತೊಗೊಳ್ಳಿ. ಅವರನ್ನೆಲ್ಲ ದ್ವೇಷಿಸಿ ನಾನ್ಯಾವ ನರಕಕ್ಕೆ ಹೋಗ್ಲಿ?
ಅಂದಹಾಗೆ, ಹೆಣ್ಣುಮಕ್ಕಳು ಸ್ವಜಾತಿಯಲ್ಲಿ ಮದುವೆಯಾದಾಗಲೂ ‘ಸಾಕಷ್ಟು ಅನುಭವಿಸಿ ವಾಪಸು ಬಂದಿದರೆ, ಬರ್ತಿದಾರೆ, ಬರ್ತಿರುತ್ತಾರೆ’. ಬಹುಶಃ ಲೆಕ್ಕ ಹಾಕಿ ಸರಾಸರಿ ತೆಗೆದರೆ ಸ್ವಜಾತಿ ಮದುವೆ ವೈಫಲ್ಯದಿಂಡ ವಾಪಸು ಬಂದವರೆ ಜಾಸ್ತಿ ಇರಬಹುದೇನೋ ನೋಡಿ.
ಯಾವ ಜಾತಿಯಲ್ಲಾದರೂ ಅಷ್ಟೆ. ಅಕಸ್ಮಾತ್ ಹುಡುಗ ಹಿಂದೂ-ಹುಡುಗಿ ಮುಸ್ಲಿಮ್ ಆಗಿದ್ದಾಗಲೂ ಹುಡುಗಿ ಕಡೆಯಿಂದ ಗಲಾಟೆಯಗಿದ್ದರೆ ಆಗಲೂ ಇದೇ ರೀತಿಯ ಬರಹ ಬರೆಯುತ್ತಿದ್ದೆ. ಅಷ್ಟರ ಮಟ್ಟಿಗೆ ನನ್ನ ಸಂವೇದನೆ ನಿಷ್ಪಕ್ಷಪಾತವಾಗಿದೆ.
‘ಮತಾಂತರದಂತಹ ಕೆಲಸಕ್ಕೇ ನಡೆಯುವುದಾದರೆ ವಿರೋಧಿಸುವುದರಲ್ಲಿ ಅರ್ಥವಿದೆ’- ಖಂಡಿತ ಇದೆ. ಯಾರು ಇಲ್ಲ ಅಂದೋರು? ಆದರೆ, ನಾನು ಬರೆದ ಲೇಖನ ಸರಿಯಾಗಿ ಓದಿಕೊಳ್ಳಿ. ಹುಡುಗನ ತಂದೆತಾಯಿ ಮದುವೆ ತಪ್ಪಿಸಲು ನಡೆಸಿದ ಪ್ರಯತ್ನ ವಿಫಲವಾಗಿದ್ದು ಹುಡುಗಿ ಕಡೆಯವರ ಉದಾಸೀನದಿಂದಲೇ. ಅಲ್ಲೀವರೆಗೂ ತೆಪ್ಪಗಿದ್ದು, ಆಮೇಲೆ ‘ಲವ್ ಜಿಹಾದ್’ ಅಂತ ವೀರಾವೇಶ ಮಾಡೋದರಲ್ಲಿ ಅರ್ಥವಿದೆಯಾ? ಹುಡುಗನ ವಯಸ್ಸಾದ ಅಪ್ಪನನ್ನ ಜೈಲಲ್ಲಿ ವಿಚಾರಿಸಿಕೊಂಡಿದ್ದಕ್ಕೆ ಅರ್ಥವಿದೆಯಾ? ನಾಲ್ಕು ವರ್ಷಗಳಿಂದ ನಡೆಯುತ್ತಿದ್ದ ಪ್ರೇಮ ತೀರ್ಥಳ್ಳಿಯಂಥ ಊರಲ್ಲಿ ಯಾರಿಗೂ ತಿಳಿದಿರಲಿಲ್ಲ ಅಂದರೆ ಯಾರು ನಂಬುತ್ತಾರೆ? ಹಗಾದರೆ ಆತನು 4 ವರ್ಷದ ಮುಂಚೆಯೇ ಲವ್ ಜಿಹಾದಿಯಾಗಿದ್ದನಾ!? ವಾದಸರಣಿ ಕೆಟ್ಟದಾಗಿದೆ. ನಿಜಕ್ಕೂ.
ಅಂದಹಾಗೆ, ನಾನು ಭಯೋತ್ಪಾದಕರನ್ನು ವಹಿಸಿಕೊಳ್ತಿಲ್ಲ. ಅವರು ತಮ್ಮ ಹೀನ ಕೆಲಸಗಳಿಗೆ ಯಾವ ದಾರಿಯನ್ನಾದರೂ ಹಿಡಿಯಬಲ್ಲರು ಅನ್ನೋ ಅರಿವು ನನಗಿದೆ. ಇಲ್ಲಿ, ವಿಷಯ, ಸನ್ನಿವೇಶ ಮತ್ತದರ ದುರುಪಯೋಗಪಡಿಸ್ಕೊಂಡು ಬೇಳೆ ಬೇಯಿಸ್ಕೊಳ್ತಿರುವವರ ರಾಜಕೀಯದ ಬಗ್ಗೆ ಮಾತಾಡಿದ್ದೇನೆ ಅನ್ನೋದನ್ನ ಗಮನಿಸಿ.
ಮತ್ತೆ ಹೇಳುವ ಮತು,
ನಮ್ಮ ಹಿಂದೂ ಸಂಸ್ಕೃತಿಯನ್ನ ಉಳಿಸಿಕೊಡಲು ಯಾರ ಭುಜಬಲವೂ ನಮಗೆ ಬೇಕಿಲ್ಲ. ಯಾವ ತಳಹದಿಯ ಮೇಲೆ ಧರ್ಮ, ಸಂಸ್ಕ್ರ‍್ತಿ ಉಳಿದು ಬಂದಿದೆಯೋ ಅದರ ಮೇಲೆಯೇ ಉಳಿದು ಮುಂದುವರೆಯುತ್ತೆ. ಧರ್ಮ ಉಳಿಸುವ ನೆವದಲ್ಲಿ ತಾಲಿಬಾನಿಗಳಂತಾಡುವುದನ್ನು ಕಮ್ಡು ಸುಮ್ಮನಿರಲಾಗದು. ಹಿಂದೂ ತಾಲಿಬಾನ್ ಬೆಳವಣಿಗೆಯನ್ನು ನಾವು ಸಹಿಸುವುದೂ ಇಲ್ಲ, ಅಂತಹ ಹುಚ್ಚಾಟಕ್ಕೆ ಅವಕಾಶ ಕೊಡೋದೂ ಇಲ್ಲ, ತಿಳಿದಿರಲಿ…
~ ಚೇತನಾ
If an girl of your family married an muslim boy.. & she converted into muslim.. can you sustain it….?
ನಿಮ್ಮ ಕಾಳಜಿ ಅರ್ಥವಾಗುತ್ತದೆ. ಆದರೆ ತಮ್ಮ ಜಾತಿಯಲ್ಲೇ ಮದುವೆಯಾದ ಹೆಣ್ಣುಮಕ್ಕಳೂ ಕೂಡ ಕಷ್ಟ ಅನುಭವಿಸುತ್ತಿದ್ದಾರೆ ಆದ್ದರಿಂದ ಬೇರೆ ಧರ್ಮದವರನ್ನೂ ಮದುವೆಯಾಗಿ ತೊಂದರೆ ಅನುಭವಿಸಿದರೆ ಅದು ಅವರ ಹಣೆಬರಹ ಎಂದು ನೀವು ಹೇಳುತ್ತಿದ್ದೀರ ಅನ್ನುವುದಾದರೆ ಹೆಣ್ಣಿನ ಜೀವನದ ಬಗ್ಗೆ ನಿಮ್ಮ ಕಾಳಜಿ ಏನು ಇದ್ದ ಹಾಗಾಯಿತು? ತೀರ್ಥಹಳ್ಳಿಯಲ್ಲಿ ಆದ ಪ್ರಕರಣದ ಬಗ್ಗೆ ಸಂಶಯಗಳಿರಬಹುದು, ಆದರೆ ಬೇರೆ ಕಡೆಗಳಲ್ಲಿ ನೆಡೆದಿದ್ದನ್ನು, ನೆಡೆಯುತ್ತಿರುವುದನ್ನು ಇಲ್ಲವೇ ಇಲ್ಲ ಎನ್ನುವ ವಾದಸರಣಿ ಕೆಟ್ಟದ್ದಲ್ಲವೆ? ತೀರ್ಥಳ್ಳಿಯ ಘಟನೆ ವಿರೋಧಿಸಲು ಹೊರಟು ನೀವು ಲವ್ ಜಿಹಾದ್ ಇಲ್ಲವೆ ಇಲ್ಲ, ಯಾರು ಎಲ್ಲಿ ಹೇಗೆ ಮದುವೆಯಾಗಿ ತೊಂದರೆ ಅನುಭವಿಸಿದರೂ ನಮಗೆ ಸಂಬಂಧಿಸಿದ್ದಲ್ಲ ಅನ್ನುತ್ತಿರುವುದು ಸರಿಯಲ್ಲ. ಭಜರಂಜದಳವನ್ನು ಅಥವಾ ಇನ್ಯಾರನ್ನೋ ವಿರೋಧಿಸುವಾಗ ನಮ್ಮ ವಿರೋಧ ಬೇರೆ ಸಮಾಜದ್ರೋಹಿಗಳಿಗೆ, ದೇಶದ್ರೋಹಿಗಳಿಗೆ ಪೂರಕವಾಗಿರುವಂತಾಗಬಾರದಲ್ಲ. ಹಿಂದೂ ಧರ್ಮದಂತಹ ಒಂದು ಧರ್ಮವನ್ನು ಭುಜಬಲದಿಂದ ದುರ್ಬಲ ಮಾಡಲು ಸಾಧ್ಯವಾಗದೇ ಇರುವುದರಿಂದ ಹೀಗೆ ಸಾಮಾಜಿಕ, ಸಾಂಸ್ಕೃತಿಕ ದಾರಿಗಳಿಂದ ದುರ್ಬಲ ಮಾಡುತ್ತಾರೆ ಎಂದು ತಿಳಿದುಕೊಳ್ಳಿ. ಈ ಬಗ್ಗೆ ಇವತ್ತಿನ (ಡಿಸೆಂಬರ ೧೧) ವಿಜಯಕರ್ನಾಟಕದ ವಾಚಕರ ವಾಣಿಯಲ್ಲೊಂದು ಪತ್ರ ಪ್ರಕಟವಾಗಿದೆ ನೋಡಿ. ವಂದನೆಗಳು.
nodi, bereyavara bagge blog bariyodu tumba easy… Anand matte Avinash helida haage namm maneli ee tara nediddre naavu bloglli publish madtiva?
lovege mattu love jihadge iro differencena chetana tilidukolludo uttama.
love madoke avra jaathili hudgirillava? namma hindu hudgire aagbeka????????
ಹಿಂದೂ ಧರ್ಮದ ಬಗ್ಗೆ ಮಾತಾಡಿದರೆ ನಾವು ಮೂಲಭೂತವಾದಿಗಳು , ಕೋಮುವಾದಿಗಳು ಅನ್ನಿಸಿಕೊಳುತ್ತಿವೆ …. ಹಾಗೆ ಮುಸ್ಲಿಂ ಧರ್ಮದ ಬಗ್ಗೆ ಮಾತಾಡಿದರೆ ಜಾತ್ಯತಿತರು ಅನ್ನಿಸಿಕೊಳ್ಳುತಿವೆ.
ಮತ್ತು ನಕ್ಸಲರ ಪರವಾಗಿ ಮಾತಾಡಿದರೆ ಬುದ್ದಿಜೀವಿ ಎನ್ನಿಕೊಳ್ಳುತಿವೆ…. ಅಷ್ಟೇ …. ನಮ್ಮದು ಒಂದು ನಪುಂಸಕ ಸಮಾಜ
ಲವ್ ಜಿಹಾದ್ ಕಥೆ ಹಾಗಿರಲಿ ಚೇತನರವರೆ .. ಈ ಮುಸ್ಲಿಂ ಹುಡುಗರಿಗೆ ಹಿಂದೂ ಹುಡುಗಿಯರೇ ಬೇಕೇನ್ರಿ ರೇಪ್ ಮಾಡೋಕೆ ? ಹಿಂದೂ ಹುಡುಗೀರೆ ಬೇಕ ಮೂರೋ ನಾಲ್ಕೋ ಜನ ಸೇರಿ ಅತ್ಯಾಚಾರ ಮಾಡೋಕೆ ?
ಹೋಗ್ಲಿ ಬಿಡಿ ಅವ್ನು ಅವಳನ್ನ ಮದುವೆಯಗ್ತಾನೆ ಅವಳು ಸಹನಾ ಹೋಗಿ ಸೋಹಾನ ಆಗ್ತಾಳೆ ..ನಾಳೆ ಅವನು ಹುಟ್ಟಿಸೋ ಮಕ್ಕಳೆಲ್ಲ ಮುಸ್ಲೀಮೆ ..ಅದರ ನಂತರ ಅವ್ನು ಅವಳಿಗೆ ಮೂರು ಸಾರಿ ತಲ್ಲಾಕ್ ಎಂದು ಮುಂದೆ ನಡೆದರೆ ಆಕೆಯ ಗತಿ ಏನು ನೀವೇ ಯೋಚನೆ ಮಾಡಿ …..
ನಿಮಗೆ ನಾನು ಒಂದಲ್ಲ ಸಾವಿರ ಸಾವಿರ ಪ್ರಕರಣದ ಮಾಹಿತಿ ಕೊಡ ಬಲ್ಲೆ .. ಮುಸ್ಲಿಂ ಗೆಳೆತನ ಮಾಡಿದ ತಪ್ಪಿಗೆ ಇಂದು ಜೀವಂತ ಶವದಂತೆ ಕೊರಗುವ ಸಹೋದರಿಯರಿದ್ದಾರಲ್ಲ ? ಅವರ ಕಣ್ಣೀರ ಕಥೆಗಳು ಬೇಕ ನಿಮಗೆ ?
ಪ್ರೀತಿ ಮಾಡ್ಲಿ ಬಿಡ್ರಿ ಯಾರ್ ಬೇಡ ಅಂತಾರೆ ? ಆದ್ರೆ ಅವ್ರು ಪ್ರೀತಿ ಮಾಡಬೇಕಲ್ಲ ? ಮತಾಂತರದ ದುರುದ್ದೆಶವನ್ನ ಹೇಗಾದರೂ ಪ್ರೀತಿ ಎಂದು ಸಾರಲಿ ಹೇಳಿ?… ಕೇವಲ ಜನ ಸಂಕ್ಯಾ ಬಹುಳ್ಯತೆಯನ್ನ ಸಾದಿಸುವ ಗುರಿಯ , ಅಮಾಯಕರ ಸಮಾದಿಯ ಮೇಲೆ ತಮ್ಮ ಸಾಮ್ರಾಜ್ಯ ಕಟ್ಟುವ ದುರುದ್ದೇಶ ಕಣ್ರೀ ಅದು ….
Akka.. Preethige dharmada hangillavadare mathanthara madodyake? Burkhada bandhana Swathantryana? Love Jihad’ge olagada aneka yuvathiyaru thamma thappige pashchatthapa padutthiddare. Hindu hudugaru andre komuvadigalu emba maathannu idakke jodisodu sarina? Sushma avara lekhana nodi.
http://manassinamaatu-manasasarovara.blogspot.in/2009/10/blog-post_17.html
This Love Jihad is a Social Evil similar to Terrorism.. This Poor writer Chethana is in big confusion.. We have to Kill this Love Jihad.. Somebody said ಈ ಭಜರಂಗದಳದವರು ಪ್ರೀತಿ ಮಾಡೋದಕ್ಕೂ ಬಿಡಲ್ವಾರೀ…. ಅವರೇನು ಮನುಷ್ಯರೇ ಅಲ್ವಾ….Ri suma do you know the feeling of that girl’s family if it happens to your family will you support this Love Jihad.. Am not against the love between A Hindu Girl & Musilm boy.. am talking about converting Hindu girl to Islamic religion in the name of Love. I know your greedy nature Ms.Suma this matter is belongs to other family that is why you are commenting like this.. if it happens to your sister or your daughter or any of your family member then you will come realise.. Shame on you Suma & Chethana.. This is worst Article i read ever.. Jai NAMO