ಮಾತಾಡೆನೆಂಬ ಮುನಿಸು ಮಂದಿಗೆ…


ನನ್ನ ಮನೆಯ ಗೋಡೆಗಳಿಗೆ
ಕಿವಿಗಳನಿರಿಸಿಲ್ಲ
ಮಾತಾಡಲಿ ಯಾರ ಕೂಡ?

ಮಾತೆಂದರೆ ವಾಕರಿಕೆ ಗೆಳೆಯಾ
ಮುತ್ತೆಂದು ಅರಸುತಿದ್ದ
ನೀ ಜತೆಗಿಲ್ಲದೆ…

ಕಾದು ಕಾಯಿಸುವ
ಜೀವವಿರಲುಕ್ಕಿ
ಸುರಿಯುತಿತ್ತು ಮಾತು,
ಸತ್ತ ದಿನಗಳ
ಹೆಣದ ತಂಪಿಗೆ
ಸೆಟೆದು ಬಿದ್ದಿವೆ ಪದಗಳು.

ಮಾತಾಡೆನೆಂಬ ಮುನಿಸು ಮಂದಿಗೆ,
ದನಿಯನೆಲ್ಲಿಂದ
ಬಗೆದು ತರಲಿ ನಾನು?

3 thoughts on “ಮಾತಾಡೆನೆಂಬ ಮುನಿಸು ಮಂದಿಗೆ…

Add yours

  1. ಸೊಗಸಾಗಿದೆ…

    “ಸತ್ತ ದಿನಗಳ
    ಹೆಣದ ತಂಪಿಗೆ
    ಸೆಟೆದು ಬಿದ್ದಿವೆ ಪದಗಳು.

    ಮಾತಾಡೆನೆಂಬ ಮುನಿಸು ಮಂದಿಗೆ,
    ದನಿಯನೆಲ್ಲಿಂದ
    ಬಗೆದು ತರಲಿ ನಾನು?”

    ಇಷ್ಟವಾಯಿತು….

  2. ನಾಗತಿಹಳ್ಳಿ ಚಂದ್ರಶೇಖರವರು ಐಂದ್ರಿತಾರೇ ಕೆನ್ನೆಗೆ ಬಾರಿಸಿದ್ದಾರಂತೆ, ಅಸಭ್ಯವಾಗಿ ವರ್ತಿಸಿದ್ದಾರಂತೆ. ರಮ್ಯಾಳ ವಿಷಯದಲ್ಲಿ ನೀವು ಸೂಕ್ಷವಾದ ವಿಚಾರಗಳನ್ನು ಬರೆದಂತೆ ಈ ಘಟನೆಯ ಬಗ್ಗೆಯೂ ನಿಮ್ಮಿಂದ ಚಿತ್ರರಂಗದಲ್ಲಿ ಹೆಣ್ಣುಮಕ್ಕಳ ಸ್ಥಿತಿ ಬಗ್ಗೆ ಒಂದು ಒಳ್ಳೆಯ ವಿಶ್ಲೇಷಣೆ ಬರಹ ನಿರೀಕ್ಷಿಸುತ್ತಿದ್ದೇನೆ.ವಂದನೆಗಳು.

ನಿಮ್ಮ ಟಿಪ್ಪಣಿ ಬರೆಯಿರಿ

Blog at WordPress.com.

Up ↑