2009 ಖುಷಿ, ಬೇಸರ ಮತ್ತು ಗುಟ್ಟು!


ಅಯ್ಯಬ್ಬ! ಮುಗ್ದೇ ಹೋಯ್ತಲ್ಲ ಮತ್ತೊಂದ್ ವರ್ಷ!! ನೆನೆಸ್ಕೊಂಡ್ರೆ ಬೇಜಾರಾಗತ್ತೆ. ಹೀಗೇ ವರ್ಷಾ ವರ್ಷಾ ಶುಭಾಷಯಗಳನ್ನ ಹೇಳ್ಕೊಂಡು ಕಳೆದುಬಿಡ್ಬೇಕಲ್ಲ ಅಂತ. ನಂಗಂತೂ ಸುಮ್ನೇ ಒಂದಿನ ಸತ್ತೋಗ್ಬಿಡಕ್ಕೆ ಬೇಜಾರಪ್ಪ. ಎಷ್ಟೊಂದು ದಿನಗಳಿವೆ ನಮ್ಮ ಕೈಲಿ. ಉಪಯೋಗಿಸ್ಕೊಳೋಕೆ ಬರೋಲ್ವಲ್ಲಾ ಅಂತ…
ಇರಲಿ. ವೇದಾಂತದ ಮೂಡ್ ಇಲ್ಲ. ನಾಳೆ ಚಾರ್ಜ್ ಆಗತ್ತೇಂತ ಇವತ್ತೇ ಕೆಲವರೆಲ್ಲ ವಿಶಸ್ ಕಳಿಸಿದ್ರು. ಆಗ ಗಾಬರಿಯಾಗೋಯ್ತು, ೨೦೦೯ ಮುಗ್ದೇಬಿಡ್ತಲ್ಲ ಅಂತ. ಈ ಹೊತ್ತಲ್ಲಿ ಒಂದ್ ಸಲ ಹಿಂತಿರುಗಿ ನೋಡಿದಾಗ ಕಂಡ ೨೦೦೯ರ ಖುಷಿ, ಬೇಸರ, ಗುಟ್ಟುಗಳು ಇಲ್ಲಿವೆ. ಜತೆಗೆ ಹೊಸ ವರ್ಷಕ್ಕೆ ನನ್ನ ಸಿಲ್ಲೀಸಿಲ್ಲಿ ರೆಸಲ್ಯೂಷನ್ಸ್ ಕೂಡಾ!

ಖುಷಿ:
೧. ಮಗು ಜೊತೆ ಕಳೆದ ಪೂರ್ತಿ ಒಂದು ತಿಂಗಳು
೨. ಅಣ್ಣನ ಜತೆ ಜಗಳ ಕಡಿಮೆ ಆಡಿದ್ದು.
     ಅವನು ಕೊಡಿಸಿದ ಹೊಸ ಕಂಪ್ಯೂಟರ್.
೩. ಹೊಸ ಗೆಳೆಯರ ಪರಿಚಯ.
     ಹಳೆ ಗೆಳೆಯ(ರಲ್ಲದಿದವರು)ರಲ್ಲಿ ಕೆಲವರು ಕಳಚಿಕೊಂಡಿದ್ದು.
೪. ೪೩ ಪುಸ್ತಕಗಳ ಓದು.
      ೩೧ ಸಿನೆಮಾಗಳನ್ನು ನೋಡಿದ್ದು (ಬೇರೆ ಬೇರೆ ಭಾಷೆಗಳದ್ದು)
೫. ಹೊಸ ಕೆಲಸ.
     ಜೊತೆಗೇ ದೊರೆತಿರುವ ಬೀಎಮ್‌ಟೀಸಿ ಭಾಗ್ಯ!
೬. ಬ್ಲಾಗಲ್ಲಿ ಕಿತ್ತಾಟವಿಲ್ಲದ್ದು
೭. ಸುಮಾರು ಐದು ವರ್ಷಗಳ ನಂತರ ತೀರ್ಥಹಳ್ಳೀಲಿ ಖುಷಿಯಾಗಿ ಒಂದು ವಾರ ಇದ್ದು ಬಂದಿದ್ದು.
೮. ಜಾಗೋ ಭಾರತ್ ಯಶಸ್ಸು.

ಬೇಸರ:
೧. ವರ್ಷಾಂತ್ಯದ ಮೂರು ಸಾವುಗಳು- ನನ್ನ ರಾಘು ಮಾವ, ಅಶ್ವತ್ಥ್, ವಿಷ್ಣುವರ್ಧನ್.
೨. ಉತ್ತರ ಕರ್ನಾಟಕದ ನೆರೆ ಹಾವಳಿ.
೩. ಹದಗೆಡುತ್ತಲೇ ಹೋಗುತ್ತಿರುವ ವಿಕೃತ ರಾಜಕಾರಣ.
೪. ಅಂದುಕೊಂಡ ಹಾಗೆ ‘ಸುತ್ತಾಟ’ ಸಾಧ್ಯವಾಗದೆ ಹೋಗಿದ್ದು.
೫. ನನಗೆ ಬರೀಲಿಕ್ಕೆ ಬರೋದಿಲ್ಲ ಅಂತ ಸಾಬೀತಾಗಿದ್ದು. (ಬರೀಲಿಕ್ಕೆ ಬರೋಲ್ಲ ಅನ್ನೋದು ಬೇಜಾರು. ಸಾಬೀತಾಗಿದ್ದು ಖುಷಿ)

ಗುಟ್ಟು:
೧. ಎಂದಿನಂತೆ, ‘ಅವನು’.

ರೆಸಲ್ಯೂಷನ್:
೧. ಪ್ರತಿದಿನ ಅಡುಗೆ
೨. ವಾರಕ್ಕೊಂದು ಪುಸ್ತಕ, ಸಿನೆಮಾ
೩. ಫೋನ್ ಬಳಕೆಯಲ್ಲಿ ಕಡಿತ
೪. ಚಾಕೊಲೇಟ್‌ಗೆ ಟಾಟಾ
೫. ಕುಡಿತ ಬಿಡೋದು (ಕಾಫಿ)
೬. ಸೇವಿಂಗ್ಸ್ (ಈ ಸಲಾನಾದ್ರೂ… ವಿಶ್ ಮಿ ಪ್ಲೀಸ್)
೭. ಮುಂದಿನ ಮುನ್ನೂರರವತ್ತೈದು ದಿನಗಳಲ್ಲಿ ಒಂದಿನಾನಾದ್ರೂ ಸೀರೆ ಉಡೋದು
೮. ಮಾತಾಡೋಕೆ ಕಲಿಯೋದು… (ಇದ್ ಸ್ವಲ್ಪ ಕಷ್ಟ. ದಿನಕ್ಕೊಂದು ‘ಕೆಸ’ದ ಎಲೆ ತಿನ್ನೋ ಪ್ಲ್ಯಾನ್ ಇದೆ!)

ನಿಮಗೆಲ್ರಿಗೂ ಹೊಸ ವರ್ಷಕ್ಕೆ ನನ್ನ ಶುಭಾಶಯ. ನೀವೂ ಹಾರೈಸಿ ನಂಗೆ ಪ್ಲೀಸ್…

ನಲ್ಮೆ,
ಚೇತನಾ ತೀರ್ಥಹಳ್ಳಿ

11 thoughts on “2009 ಖುಷಿ, ಬೇಸರ ಮತ್ತು ಗುಟ್ಟು!

Add yours

  1. ತುಂಬಾ ಚೆನ್ನಾಗಿದೆ ಚೇತನಾರವರೆ ನಿಮ್ಮ ರೆಸೊಲ್ಯೂಶನ್ಸು 🙂
    ಅಂದುಕೊಂಡಿದ್ದೆಲ್ಲಾ ನಿಜವಾಗಲಿ.. ಹೊಸ ವರುಷದ ಹಾರ್ದಿಕ ಶುಭಾಶಯಗಳು.. ಖುಷಿ ಬೇಸರಗಳ, ಸಮರಸದ ಜೀವನ ಸದಾ ಬೆಳಗಲಿ.
    -ದಿವ್ಯಾ

  2. ಓಳ್ಳೇ ರೆಸಲ್ಯೂಷನ್ ಗಳು!

    ಇವತ್ತು ವರ್ಷದ ಕಡೆಯ ದಿನ ಅಲ್ವಾ ಅದಿಕ್ಕೆ ಎಷ್ಟು ಬೇಕೋ ಅಷ್ಟು ಕಂಠಪೂರ್ತಿ ಕುಡಿದು ಬಿಡಿ !………………………..(ಕಾಫಿ)

    ಹೊಸ ವರ್ಷದ ಶುಭಾಶಯಗಳು ನಿಮಗೂ…

  3. ಸೀರೆ ಹೆಸರು ಕೇಳಿದ್ರೆ ಸಾಕು ಬೆಚ್ಚಿ ಬೀಳುವ ಹಾಗೆ ಹಾಗಿದೆ … ಮೊನ್ನೆ ನನ್ನ ಅಮ್ಮ ಮತ್ತು ಅಕ್ಕನ ಕರೆದುಕೊಂಡು ಕಳಮಂದಿರ್ ಗೆ ಹೋಗಿದ್ದೆ ….. ತಾಯಿ ಮಗಳು ಸೇರಿ ಇಡೀ ದಿನ ಸೀರೆ ಆರಿಸಿದ್ದಾರೆ …. ನನಗೋ ಬೆಳಿಗ್ಗೆಯಲ್ಲ ಆಕಳಿಕೆ ಸಂಜೆ ಬರುವಾಗ ಕಣ್ಣಲ್ಲಿ ನೀರು … ನನ್ನ ಒಂದು ವರ್ಷದ ಉಳಿತಾಯ ಒಂದೇ ದಿನದಲ್ಲಿ ಮಟಾಶ್ …….. ಆದರು ನಿಮ್ಮ ಆಸೆ ಈಡೇರಲಿ ಅಂತ ಹಾರೈಸುತ್ತೇನೆ ಹಾಗೆ ಹೊಸ ವರ್ಷದ ಶುಭಾಶಯಗಳು

  4. ಪ್ರಸಾದ್, ಥ್ಯಾಂಕ್ಸ್ 🙂
    ದಿವ್ಯಾ, ನಿಮಗೂ ಥ್ಯಾಂಕ್ಸ್.
    ಯಶೋದಾ, ಹಾರೈಕೆಗೆ ಥ್ಯಾಂಕ್ಸ್.
    ಸಂದೀಪ್, ಮ್… ಕಂಠ ಪೂರ್ತಿ ಕುಡಿದೆ ನಿಜ!!
    ಶೆಟ್ಟರೇ, ನಿಮಗೂನೂ ಹಾರ್ದಿಕ ಶುಭಾಶಯಗಳು
    ಸುಪ್ರೀತ್, ಪತ್ರೊಡೆ ರೆಡಿ, ಬರ್ತೀಯ!? 🙂
    ಶ್ರೀನಿಧಿ, (ಇನಿಶಿಯಲ್ ಇಲ್ದೆ ಗೊಂದಲವಾಗ್ತಿದೆ 😦 ) ಥ್ಯಾಂಕ್ಸ್
    ಶ್ರೀ… ನಿಮಗೂನೂ…
    ಸುಧೇಶ್, ಥ್ಯಾಂಕ್ಯೂ
    ಅವಿನಾಶ್… ಅಯ್ಯೋ ಪಾಪ 😦 ಎಲ್ಲಾ ಬಿಟ್ಟು ಸೀರೆ ಕೊಳ್ಳೋರ ಜೊತೆ ಸಿಗಾಕ್ಕೊಂಡಿದ್ಯಾಕೆ!!? ದೇವ್ರು ಒಳ್ಳೇದ್ ಮಾಡ್ಲಿ!!

    ನಲ್ಮೆ,
    ಚೇ

ನಿಮ್ಮ ಟಿಪ್ಪಣಿ ಬರೆಯಿರಿ

Create a free website or blog at WordPress.com.

Up ↑