ನೆನ್ನೆ-ಮೊನ್ನೆ ಕೇಳಿಪಟ್ಟೆ, ಸಂಸತ್ತಲ್ಲಿ ‘ಯೂಥ್ ಐಕಾನ್’ ಅಂತ ಸರ್ವಪಕ್ಷಗಳ ಸಮಾನ ಸಮ್ಮತಿಯಿಂದ ವಿವೇಕಾನಂದರ ಹೆಸರನ್ನ ಅಂಗೀಕಾರ ಮಾಡಲಾಯ್ತು ಅಂತ. ಸಖತ್ ಖುಷಿ ಆಯ್ತು. ಸಧ್ಯ! ವಿವೇಕಾನಮ್ದರನ್ನ ಯಾವುದೋ ಪಕ್ಷದ, ಜಾತಿಯ ಐಕಾನ್ ಆಗಿ ಸೀಮಿತಗೊಳಿಸ್ಲಿಲ್ವಲ್ಲ ಅಂತ. ವಿವೇಕಾನಂದರಂಥವರನ್ನು ಇಂವ ನಮ್ಮವ ಅನ್ನೋರೇ ಎಲ್ರೂ. ಅವರ ವ್ಯಕ್ತಿತ್ವ ಅಂಥದ್ದು. ಬಟ್ ಇತ್ತೀಚೆಗೆ ಬಿಜೆಪಿ-ಎಬಿವಿಪಿ ಅವರನ್ನ ಹೈಜಾಕ್ ಮಾಡಿಬಿಟ್ಟಿತ್ತು. ಯಾರಾದ್ರೂ ಸರಿಯೇ. ಈ ವಿಶ್ವಮಾನವನ ಚಿಂತನೆಗಳು ಹರಡೋದಷ್ಟೆ ಇಂಪಾರ್ಟೆಂಟು ಅನ್ನೋದೇನೋ ಸರಿ. ಅವರು ಮಾಡಿದ್ದು ಒಳ್ಳೆ ಕೆಲಸಾನೇ. ಬಟ್, ಉಳ್ದವ್ರು ‘ಅಯ್ಯೋ, ವಿವೇಕಾನಂದ ಕೇಸರಿ ಪಡೆಯವ್ರು’ ಅಂದ್ಕೊಂಡು ದೂರವುಳಿದುಬಿಟ್ರೆ ಅಂತ ನನ್ನ ಚಿಂತೆಯಾಗಿತ್ತು. ಈಗ್ಲೂ ಕೆಲವು ಗೆಳೆಯರು- ಸ್ವಾಮೀಜಿಯನ್ನ ಓದಿಕೊಂಡಿಲ್ಲದೆ ಬರೀ ಪೂರ್ವಾಗ್ರಹವಿಟ್ಕೊಂಡಿರೋರು ಅವರ ಬಗ್ಗೆ ಸುಮ್ನೆ ಕಮೆಂಟ್ ಮಾಡ್ತಾರೆ.
ವ್ಯಕ್ತಿಯೊಬ್ಬನನ್ನ ಸುಮ್ಮನೆ ನಮ್ಮ ನಡುವೆ ಇರಲಿಕ್ಕೆ ಬಿಡದೆ ಅವನನ್ನ ದೇವರಾಗಿಸಿದಾಗ್ಲೇ ಹೀಗೆಲ್ಲ ಆಗೋದು. ಆತ ದೇವತೆಯಾಗದೆ ಹೋದರೆ ಕೆಲವ್ರಿಗೆ ಶ್ರದ್ಧೆ ಉಂಟಾಗೋಲ್ಲ. ಮತ್ತೆ ಕೆಲವರಿಗೆ ಆತನ ದೇವಪಟ್ಟವೇ ಶ್ರದ್ಧೆಗೆ ಅಡ್ಡಗಾಲಾಗಿ ನಿಲ್ಲತ್ತೆ. ಕೈಗೆಟುಕದವರಿಂದ ನಮಗೇನು ಅನ್ನುವ ಭಾವ ಹಾಗೆ ಮಾಡಿಸತ್ತೆ. ಖುದ್ದು ಸ್ವಾಮೀಜೀನೇ ಹೇಳಿದ್ರು, ವ್ಯಕ್ತಿಗಳನ್ನ ಮಂದಿರದಲ್ಲಿ ಕೂಡಿಡೋದಲ್ಲ, ಅವರ ವಿಚಾರಗಳನ್ನ ಬೀದಿಗೆ ತರಬೇಕು, ಮನೆಮನೆಗೆ ಹಂಚ್ಬೇಕು ಅಂತ. ನಾವಿಲ್ಲಿ ಖುಷಿ ಬಂದಕಡೆಯೆಲ್ಲ ಕೈಕಟ್ಕೊಂಡು ನಿಂತ ಸ್ವಾಮೀಜಿ ಸ್ಟ್ಯಾಚು ಅನಾವರಣ ಮಾಡಿಸ್ತೇವೆ ವಿನಾ ಅವರ ನೈಜ ಚಿಂತನೆಗಳ ತಂಟೆಗೇ ಹೋಗೋದಿಲ್ಲ.
ಬೇಜಾರಿನ ವಿಷಯ ಅಂದ್ರೆ, ತುಂಬಾ ಜನ ವಿವೇಕಾನಂದ ಅಂದ್ರೆ ಯಾರೋ ಒಬ್ಬ ದೇವ-ದಿಂಡರ ಸನ್ಯಾಸಿ ಅಂದ್ಕೊಂಡಿರೋದು. ಗೆಳೆಯರೊಬ್ಬರು ಹೇಳೋ ಹಾಗೆ ಅಧ್ಯಾತ್ಮದ ಅಫೀಮು ಹಂಚಿದವರು ಅಂತಾನೂ. ಮತ್ತೊಬ್ಬ ಗೆಳೆಯ ಬರೆದಿರೋ ಹಾಗೆ ‘ಹುಚ್ಚ ಗುರುವಿನ ಒಬ್ಬ ಶಿಷ್ಯ’. ಮತ್ತೆ ಕೆಲವರ ಪಾಲಿಗೆ ಹಿಂದುತ್ವದ ಸಂಕೇತ ಮಾತ್ರ.
ನೇತಾಜಿ, ಜಗದೀಶ್ಚಂದ್ರ ಬೋಸ್, ಅರಬಿಂದೋ, ತಿಲಕ್, ಗಾಂಧಿ, ನಿವೇದಿತಾ, ರವೀಂದ್ರನಾಥ ಠಾಕೂರ್, ಖೇತ್ರಿ ಮಹರಾಜರಿಂದ ಹಿಡಿದು ಬೇರೆಬೇರೆ ರಂಗಗಳ ದಿಗ್ಗಜರನ್ನು ಪ್ರಭಾವಿಸಿದ ವ್ಯಕ್ತಿಯೊಬ್ಬನ ಅಸ್ತಿತ್ವವನ್ನ ಹೀಗೆ ಸಂಕುಚಿತಗೊಳಿಸ್ತಾ, ನಮನಮಗೆ ಬೇಕಾದಂತೆ ತಿರುಚುತ್ತ ಹೋಗ್ತಿರುವ ನಮಗೆ ಖಂಡಿತ ನಾಚಿಕೆ ಇಲ್ಲ. (ಅಕ್ಷರಶಃ).
ನಮ್ಮ ಕುವೆಂಪು, ಜೀಎಸ್ಸೆಸ್, ನರಸಿಂಹಯ್ಯ ಇತ್ಯಾದಿ ಘನವಂತ ವ್ಯಕ್ತಿಗಳೂ ವಿವೇಕಾನಂದರಿಂದ ಪ್ರಭಾವಿತರೇ. ಅದರಲ್ಲೂ ಕುವೆಂಪು…. ಬಿಡಿ. ಹೇಳಿ ಮುಗಿಯದು.
ನೆನ್ನೆಯಿಂದ ನನ್ನ ಆರ್ಕುಟ್ ಸ್ಟೇಟಸ್ಸಿನಲ್ಲಿ ‘ಯುವದಿನ- ಜನವರಿ ೧೨’ ಅಂತ ಇದೆ. ಒಬ್ಬರು ಆನ್‌ಲೈನಿಗರು ಹಣಕಿ, ‘ಅದೇನು?’ ಅಂದರು. ಹೇಳಿದೆ. ‘ನೀವು ವಿವೇಕಾನಂದರ ಜಯಂತಿ ಎಲ್ಲ ಸೆಲೆಬ್ರೇಟ್ ಮಾಡ್ತೀರಾ?’ ಅಂತ ಕೇಳೀದರು. ಹೂಂ ಅಂದಿದ್ದಕ್ಕೆ, ‘ವಿಚಿತ್ರವಾಗಿದೀರಿ ಕಣ್ರೀ ನೀವು!’ ಅನ್ನಬೇಕಾ ಪುಣ್ಯಾತ್ಮ!?
ಇದೇ ವಿವೇಕಾನಂದ ನಮ್ಮವರಲ್ಲದೆ ಹೋಗಿದ್ದರೆ, ಆಗ ಅವರ ಜನ್ಮದಿನವನ್ನ ಸೆಲೆಬ್ರೇಟ್ ಮಾಡಿದ್ದರೆ ಖುಷಿಯಾಗುತ್ತೇನೋ ಬಹುಶಃ ಅವರಂಥ ಜನಕ್ಕೆ?
ನನ್ನ ಮಟ್ಟಿಗೆ ಹೇಳೋದಾದ್ರೆ, ನನ್ ಲೈಫಿನ ಪ್ರತಿ ಹೆಜ್ಜೆ ಅವರ ಚಿಂತನೆಗಳಿಂದ ಕಟ್ಟಿಕೊಂಡಿದ್ದು. ಅಲ್ಲಿ ಫೆಮಿನಿಸಮ್ ಇದೆ, ಸೆಕ್ಯುಲರಿಸಮ್ ಇದೆ, ಹ್ಯುಮಾನಿಟಿಯ ಪಾಠವಿದೆ, ಅಧ್ಯಾತ್ಮ… ಹೌದು, ಇದ್ದೇ ಇದೆ. ಬದುಕನ್ನ ಚೆಂದಗೊಳಿಸ್ಕೊಳ್ಳೋದು ಹೇಗೆ ಅನ್ನೋದು ಅಲ್ಲಿ ಸ್ಪಷ್ಟವಾಗಿದೆ. ಅಲ್ಲಿ ನನ್ನ ಎಲ್ಲ ಸಮಸ್ಯೆಗೂ ಉತ್ತರವಿದೆ.
‘ಇನ್ನೊಂದು ಶತಮಾನ ಕಾಲ ನಿಮ್ಮೆಲ್ಲ ದೇವ-ದೇವಿಯರನ್ನ ಸಮುದ್ರಕ್ಕೆಸೆಯಿರಿ… ದೇಶಕ್ಕೆ ಸಮರ್ಪಿಸ್ಕೊಳ್ಳಿ’ ಅನ್ನುವಂಥ ಕರೆ ಕೊಟ್ಟ, ‘ಯಾರು ಮ್ಲೇಚ್ಚ-ಅಸ್ಪೃಶ್ಯ ಎಂದೆಲ್ಲ ಭೇದ ಮಾಡ್ತಾರೋ ಅವರು ಮಾನವ ಜಾತಿಗೆ ಸೇರಿದವರಾಗಿ ಉಳಿಯೋದಿಲ್ಲ’ ಅಂದ, ‘ಭಗವದ್ಗೀತೆ ಪಕ್ಕಕ್ಕಿಟ್ಟು ಫುಟ್ಬಾಲ್ ಆಡಿ, ದೇಹ ಗಟ್ಟಿ ಮಾಡ್ಕೊಳಿ ಮೊದ್ಲು’ ಎಂದು ಗುಡುಗಿದ, ‘ಕಿಟಕಿ ಮುಚ್ಚಿ ಧ್ಯಾನ ಮಾಡೋದರ ಬದಲು, ಬಾಗಿಲು ತೆರೆದು ಹೊರಬನ್ನಿ, ಅಗತ್ಯದಲ್ಲಿರುವವರ ಸೇವೆ ಮಾಡೋದೇ ನಿಜವಾದ ಧರ್ಮ’ ಅಂದ, ‘ಹೆಣ್ಣುಮಕ್ಕಳು ಕ್ರಿಯಾಶೀಲರಾಗದ ಹೊರತು ಭಾರತ ಉದ್ಧಾರವಾಗೋದೇ ಇಲ್ಲ’ ಅಂದು ಗಂಡಸರ ಕಿವಿಹಿಂಡಿದ….
ಉಫ್… ನನ್ನ ವೀರೇಶ, ನರೇನ್, ಬಿಲೆ, ವೀರೇಶಾನಂದ, ವಿವೇಕಾನಂದ… ನನ್ನ ಐಕಾನ್.
ನಿಮಗೆಲ್ರಿಗೂ ಯುವದಿನದ ಶುಭಾಶಯ.
(* ಗೊತ್ತಿಲ್ಲದವರಿಗೆ- ಜನವರಿ 12 ವಿವೇಕಾನಂದರ ಜನ್ಮ ದಿನಾಂಕ. ಇದನ್ನ ಯುವ ದಿನ ಅಂತ ಆಚರಿಸುವ ರೂಢಿಯಿದೆ)
ನಲ್ಮೆ,
ಚೇತನಾ ತೀರ್ಥಹಳ್ಳಿ


ವಿವೇಕ ಹೊಂದುವುದರಲ್ಲೇ ಆನಂದವಿದೆ ಅಲ್ವ ? ಸ್ವಾಮಿ ವಿವೇಕಾನಂದ ಚಿಂತನೆಗಳು, ವಿಚಾರಧಾರೆಗಳ ಬಗ್ಗೆ ತಿಳಿದುಕೊಳ್ಳುವ ವ್ಯವಧಾನ ಇಂದು ಹಳದಿ ಕನ್ನಡಕ ಹಾಕಿಕೊಂಡಿರೋ ಮಂದಿಗೆ ಇರೋದಿಲ್ಲ ಎಂಬುದೇನೋ ಸರಿ. ಆದರೆ ಏನೂ ಗೊತಿಲ್ಲದ ಮುಗ್ಧ ಮಕ್ಕಳಿಗಾದರೂ ವಿವೇಕಾನಂದ ಹೇಳಿದ ‘ಸ್ವಾಭಿಮಾನಿ’ ಬದುಕಿನ ಮಾತುಗಳನ್ನು ತಿಳಿಸಲು ನಮ್ಮ ಅಧ್ಯಾಪಕ ವರ್ಗ ಪ್ರಯತ್ನಿಸಬಹುದಲ್ಲವೇ?
(ಪುತ್ತೂರಿನ ವಿವೇಕಾನಂದ ಶಾಲೆಯ ಪುಟ್ಟ ಮಕ್ಕಳಿಗೆ ವಿವೇಕಾನಂದ ವೇಷ ಹಾಕುವ ಸ್ಪರ್ಧೆ ಇಟ್ಟಿದ್ದಾರಂತೆ – ಹೀಗೆ ಸಣ್ಣ ಮಕ್ಕಳ ಜೊತೆಗೆ ಅವರಿಗೆ ವೇಷ ಹಾಕುವ ಅವರ ಅಪ್ಪ-ಅಮ್ಮಂದಿರಿಗೂ ವಿವೇಕಾನಂದ ನೆನಪು ಆದಂತಾಯ್ತಲ್ಲ?) ಯುವ ದಿನವಾಗಿ ರಾಜಕಾರಣಿಯೊಬ್ಬರ ಹುಟ್ಟಿದ ದಿನವನ್ನು ನಮ್ಮ ದೇಶದ ಹಳೇ ರಾಜಕೀಯ ಪಕ್ಷ ಆಚರಿಸುತ್ತದೆ. ಅದಕ್ಕೆ ವಿವೇಕಾನಂದ ಯಾರೆಂದು ಗೊತ್ತೋ ಇಲ್ಲವೋ? ಇನ್ನೊಂದು ರಾಜಕೀಯ ಪಕ್ಷ ಧಾರ್ಮಿಕ ಸೆಂಟಿಮೆಂಟ್ ಜೊತೆ ಆಟ ಆಡುತ್ತೆ.
ಇವರಿಗೆ ಏಳಿ, ಎದ್ದೇಳಿ..! ಹೇಳಲು ನಾವು ಮಾತ್ರ ಸಾಕಾಗಲ್ಲ
ಕರ್ನಾಟಕ ಸರ್ಕಾರ ವಿವೇಕಾನಂದರ ಹೆಸರಿನಲ್ಲಿ ಭಯೋತ್ಪಾದನೆಯ ವಿರುದ್ದ ಯುವ ಜನೆತೆಗೆ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದಾಗ ಬೊಬ್ಬೆ ಹೊದೆದ್ದಿದ್ದು ಕಾಂಗ್ರೆಸ್ಸಿಗರು …ಕ್ಯಾಂಪಸ್ ಕೇಸರೀಕರಣ ಗೊಳಿಸುವ ಪ್ರಯತ್ನ ಎಂದು ಜರಿದ್ದಿದ್ದರು. ಭಯೋತ್ಪಾದನೆಗೂ , ಮುಸ್ಲಿಮರಿಗೂ , ವಿವೇಕಾನಂದರಿಗೂ , ಹಿಂದುತ್ವ ಕ್ಕೂ ಲಿಂಕ್ ನೀಡಿ ಛಿ ತೂ ಅನ್ನಿಸಿಕೊಂಡರು ….. ವಿವೇಕಾನಂದರಂತಹ ಮಹಾನ್ ವ್ಯಕ್ತಿಯನ್ನು ರಾಜಕೀಯಕ್ಕಾಗಿ ಬಳಸಿಕೊಂಡಿದ್ದು ತುಂಬಾ ಬೇಸರವಾಗಿತ್ತು . ಇನ್ನಾದರೂ ಅವರನ್ನ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾದ ಅಗತ್ಯ ಯುವ ಜನತೆಗಿದೆ
ನಿಮಗೂ ಯುವದಿನದ ಶುಭಾಶಯಗಳು.
ಸೋ.. ಫುಟ್ ಬಾಲ್ ಆಡೋಕೆ ಯಾವತ್ತಿಂದ ಶುರು ಮಾಡ್ತಾ ಇದ್ದೀರಾ? 🙂
ಅಂದಹಾಗಿ ಬಿಜೆಪಿ-ಎಬಿವಿಪಿ ಅವರನ್ನ ಹೈಜಾಕ್ ಮಾಡಿರಲಿಲ್ಲ. ಹೈಜಾಕ್ ಮಾಡಿದ್ದಾರೆ ಎಂಬಂತೆ ಬಿಂಬಿಸಿದ್ದು, ಅವರನ್ನು ಬಿ.ಜೆ.ಪಿ.ಗೆ ಲಿಂಕ್ ಮಾಡಿದ್ದು ಕಾಂಗ್ರೆಸ್ಸಿಗರು ಮತ್ತು ನಿಮ್ಮಂತಹ ’ಬುದ್ದಿಜೀವಿ’ಗಳು ಮಾತ್ರ !
ನಮಸ್ಕಾರ.
ಸ್ವಾಮೀಜಿಯವರ ಜನ್ಮದಿನದ ಬಗೆಗಿನ ಈ ಪೋಸ್ಟ್ ತುಂಬಾ ಇಷ್ಟವಾಯಿತು! ಅಷ್ಟೇ ಅಲ್ಲ, ನಾವಿಬ್ರೂ ಹೆಚ್ಚೂ-ಕಡಿಮೆ ಒಂದೇ ರೀತಿ ಶುರು ಮಾಡಿದ್ದು ಆಶ್ಚರ್ಯ ಕೂಡಾ ಆಯ್ತು! 🙂
ಆನಂದ ರವರ ಕಮೆಂಟ್ನಲ್ಲಿ ಉಲ್ಲೇಖ ಮಾಡಿರುವ ‘ಬುದ್ದಿಜೀವಿ’ ಅಂದರೆ ಯಾರು …….?
ನನ್ನ ಪ್ರಕರ ವಿವೇಕಾನಂದರು ಕೊಚ್ಚೆಯಲ್ಲಿನ ಕಮಲವಿದ್ದಂತೆ. ಈ ದೇಶದ ಜಾತಿ ವ್ಯವಸ್ಥೆಯಂತಹ ಕೊಚ್ಚೆಯಲ್ಲಿಯೂ ಕೂಡ ಕಮಲದಂತೆ ಅರಳಿನಿಂತವರು. ಕೊಚ್ಚೆಯಲ್ಲಿದ್ದು ಅದರ ಸೊಂಕಿನಿಂದ ದೂರ ನಿಂತವರು. ಯಾರು ಕೂಡ ಅನವರನ್ನ ಹೈಜಾಕ್ ಮಾಡಲು ಸಾದ್ಯವಿಲ್ಲ. ಅವರ ಫೋಟೊ ಪಕ್ಕ ನಿಂತು ಫೊಟೊ ತೆಗೆಸಿಕೊಂಡಾಕ್ಷಣ ಅಥವ ಅವರ ಬಗ್ಗೆ ಭವಚಿತ್ರದೊಂದಿಗೆ ಊರೂರ ಸುತ್ತಿ ಭಾಷಣ ಬಿಗಿದ ಮಾತ್ರಕ್ಕೆ ವಿವೇಕಾನಂದರ ಅನುಯಾಯಿಗಳಾಗುವುದಿಲ್ಲ. ಹಾಗೆ ಜನರನ್ನು ಯಾರೂ ಕೂಡ ಮೂರ್ಖರನ್ನಾಗಿಸಲು ಸಾದ್ಯವಿಲ್ಲ. ಊರ ಬಾಯಿಗೆ ನಾವು ಅಂಜುವ ಅಗತ್ಯವೂ ಇಲ್ಲ. ನಮಗೆ ಮುಖ್ಯವಾಗಬೇಕಾಗಿರೊದು ಅವರ ಚೈತನ್ಯ. ಎ.ಬಿ.ವಿ.ಪಿ ಯವರೆ ಆಗಲಿ ಯಾವ ಮಾರ್ಕ್ಸವಾದಿಯೇ ಆಗಲಿ ವಿವೇಕಾನಂದರನ್ನು ಬಳಸಿಕೊಳ್ಳುತ್ತೇನೆ ಎಂದು ಯೊಚಿಸುತ್ತಾರೆಂದರೆ ಅದು ಅಹಂಕಾರವಲ್ಲದೆ ಬೇರೆನೂ ಅಲ್ಲ. ಇವರೆಲ್ಲ ಒಂದು ಐಡೆಂಟಿಟಿ ಕಾರಣದಿಂದ ಹೀಗೆ ಮಾಡುತ್ತಾರೆ ಮತ್ತು ಇದೆಲ್ಲ ಅವರ ತಂತ್ರ ಎನ್ನುವುದಷ್ಟೆ ನನ್ನ ನಂಬಿಕೆ. ವಿವೇಕಾನಂದರು ವಿವೇಕದ ದೀಪ ಹಚ್ಚುತ್ತಾರೆಯೇ ಹೊರತು ದ್ವೇಶವನ್ನಲ್ಲ. ಹಾಗಾಗಿ ಭಯ ಪಡುವ ಅವಶ್ಯಕತೆ ಇಲ್ಲ. ಹಾಗೆ ಪ್ರತಿಯೊಬ್ಬರಲ್ಲು ವಿವೇಕಕ್ಕೆ ಜಾಗವಿದೆ.
ಹಲೋ ಚೇತನಾರವರೆ,
“ವ್ಯಕ್ತಿಯೊಬ್ಬನನ್ನ ಸುಮ್ಮನೆ ನಮ್ಮ ನಡುವೆ ಇರಲಿಕ್ಕೆ ಬಿಡದೆ ಅವನನ್ನ ದೇವರಾಗಿಸಿದಾಗ್ಲೇ ಹೀಗೆಲ್ಲ ಆಗೋದು. ಆತ ದೇವತೆಯಾಗದೆ ಹೋದರೆ ಕೆಲವ್ರಿಗೆ ಶ್ರದ್ಧೆ ಉಂಟಾಗೋಲ್ಲ. ಮತ್ತೆ ಕೆಲವರಿಗೆ ಆತನ ದೇವಪಟ್ಟವೇ ಶ್ರದ್ಧೆಗೆ ಅಡ್ಡಗಾಲಾಗಿ ನಿಲ್ಲತ್ತೆ.” – ಖಂಡಿತ ಹೌದು..
ಮತ್ತೊಂದು ಮಾತು, ನೀವು ಇಲ್ಲಿ ಹಾಕಿರೊ ವಿವೇಕಾನಂದರ ಚಿತ್ರ, ಬಹಳ ಅಪರೂಪದ್ದು ಅಂತ ನನ್ನ ಅನಿಸಿಕೆ. ನಿಜವಾಗ್ಲೂ ಬಹಳ ಮುದ್ದಾಗಿ ಕಾಣ್ತಾರೆ ಸ್ವಾಮೀಜಿ ಅದ್ರಲ್ಲಿ..
chennagide lekhana…vimrshe maduvstu doddavanalla…odi kushi paduva pamara…swamy anda kudale….komuvadigalu….kesari yavaru annuttare. narendra kuda idakke horatagralilla… ig a yuva icon madidakke abhinandane helalee beku
chennagide ….nimma Bhaavane sari