ಕಾಳಿದಾಸನ ಮೀನು


ನೀರಲ್ಲಿ ಕಳಚಿತ್ತು ನೆನಪಿನುಂಗುರ

ದೂರ್ವಾಸನ ಶಾಪವಂತೆ

ನಿಜ,

ಕಳೆದ ಕಥೆ ಮಾತ್ರ

ಕಾಳಿದಾಸ ಕರಾಮತ್ತು

ನುಂಗಿತ್ತು ಮೀನು

ಕಥೆ ಬೆಳೆಸಲು

ಅರೆದು ಸೇರಿಸಿದ ಮಸಾಲೆ,

ಕಾವ್ಯ ರುಚಿ

ರಸಿಕರೆದೆ ಹರುಷ

ನಾಟಕದ ಶಾಕುಂತಲೆ

ಕಣ್ಣೀರು ಬೆರೆತ ನದಿ ಸೇರಿ

ಸಾಗರದುಪ್ಪು ಜಾಸ್ತಿ.

ನಿನ್ನ ನೆನಪ ಮೈಮರೆವಲ್ಲಿ

ಯಾರ ಕಡೆಮಾಡಿದೆನೋ

ಉಂಗುರ ಕಳೆದಿದೆ.

ಶಾಪದ ಭಯ

ಕಾಳಿದಾಸನ ಮೀನೂ

ಉಪ್ಪು ಖಾರದಲಿ ಬೆಂದು

ರುಚಿಯಾಗಿದೆ.

ನನ್ನದೇ ಎದೆ ಬಗೆದು

ಪ್ರೇಮದುಂಗುರ ತೋರಲೇ

ವಿಮೋಚನೆಗೆ ?

3 thoughts on “ಕಾಳಿದಾಸನ ಮೀನು

Add yours

  1. ಚೇತನಾ…….
    ನಿಮ್ಮ ಬ್ಲಾಗನ್ನು ಹುಡುಕ್ತ ಹುಡುಕ್ತಾ ಇಷ್ಟು ದಿನ ಆಯಿತು ನೋಡಿ.
    ಕೆಂಡಸಂಪಿಗೆಯಲ್ಲಿ ನಿಮ್ಮ ಕವನಗಳನ್ನು ಓಡಿ ಮೆಚ್ಚಿಕೊಳ್ತಿದ್ದೆ.
    ಸುಂದರ ಕವನ.
    ನಮ್ಮ ಕಡೆ ಒಮ್ಮೆ ಬಂದು ಹೋಗಿ.
    http://pravi-manadaaladinda.blogspot.com

ನಿಮ್ಮ ಟಿಪ್ಪಣಿ ಬರೆಯಿರಿ

Blog at WordPress.com.

Up ↑