ಸಾಫರ್‌ಜಾದೆ ಇರಾನಿ ಕವಯತ್ರಿ. ನೆಟ್ಟಲ್ಲಿ ಜಾಲಾಡುವಾಗ ಸಿಕ್ಕವಳು. ಈಕೆಯ ಕವಿತೆಗಳನ್ನೋದುವಾಗೆಲ್ಲ, ಮತ್ತೆ ಬಹಳಷ್ಟು ದೇಶಗಳ- ಭಾಷೆಗಳ ಹೆಣ್ಣುಗಳನ್ನೋದುವಾಗೆಲ್ಲ, ಅರೆ! ನಮ್ಮ ಹಾಗೇನೇ… ಇವರೂ ನಮ್ಮಂತೇನೇ… ಅನ್ನಿಸಿ ಸಂಭ್ರಮ ಮತ್ತು ವಿಷಾದ. ಗೆಳೆಯನೊಬ್ಬನಿಗೆ ಈ ಸಾಮ್ಯತೆಯನ್ನು ಹೇಳಿದಾಗ ‘ನಾನ್‌ಸೆನ್ಸ್’ ಅಂದುಬಿಟ್ಟ. ಪರವಾಗಿಲ್ಲ. ಸಾಫರ್‌ಜಾದೆಯನ್ನ ಕನ್ನಡಕ್ಕೆ ತಂದುಕೊಂಡು ಸುಮ್ಮನಿದ್ದೆ. ಅವುಗಳಲ್ಲಿ ಕೆಲವು ಇಲ್ಲಿ ಕಂಡರೂ ಕಾಣಿಸಬಹುದು. ಸಾಮ್ಯತೆ, ನಿಮಗೇ ಗೊತ್ತಾಗುವುದು.
ಮೊದಲ ಮಿಡಿತದ ಜಾಗದಲ್ಲಿ...
ನನ್ನ ಹುಟ್ಟುನೆಲವನ್ನ ನೋಡಿಲ್ಲ.
ಅವಳೆಲ್ಲ ಒಳಗುದಿಗಳ ಸಹಿತ ಅಮ್ಮನ್ನ
ಇರಿಸಲಾಗಿತ್ತಲ್ಲ, ಆ ಮನೆಯನ್ನ.
ಅಲ್ಲಿನ್ನೂ ಜೀವಂತವಿದೆ
ನನ್ನ ಪುಟ್ಟ ಎದೆಯ ಮೊದಲ ಬಡಿತ
ಮೊದಲ ಅಳುವಿನ ಸದ್ದು
ಇಟ್ಟಿಗೆ ಬಿರುಕಲ್ಲಿ ಸಿಲುಕಿಕೊಂಡಿದೆ…
ಅಲ್ಲಿನ್ನೂ ಜೀವಂತವಿದೆ,
ಆ ಬಾಗಿಲಲ್ಲಿ, ಗೋಡೆಗಳಲ್ಲಿ
‘ಹೆಣ್ಣು ಮಗು’ ಅಂದ ಮಖೇಡಿ ದನಿಗೆ
ದುರುಗುಟ್ಟಿದ ಅಪ್ಪ, ಅಜ್ಜನ ದೃಷ್ಟಿ
ತಪ್ಪಿಸಿ
ಅಮ್ಮನ ಕಣ್ಣಿಂದ ಎರಚಿತ್ತಲ್ಲ
ಆ ಅವಮಾನದ ನೋಟ….
~
ನನ್ನ ಹುಟ್ಟೂರಿಗೆ
ಮೊದಲ ಯಾತ್ರೆ ಹೋಗ್ತೇನಲ್ಲ,
ಅಲ್ಲಿನ ಗೋಡೆಗಳ ಮೇಲಿಂದ
ಅಮ್ಮನ ಅವಮಾನಿತ ನೋಟದ ಕಲೆಯನ್ನ
ಒರೆಸಿ ಹಾಕುತ್ತೇನೆ
ಮೊದಲ ಮಿಡಿತದ ಜಾಗದಲ್ಲಿ ನಿಂತು,
ಈ ಕಾಂತಿಯುಕ್ತ ಕೈಗಳಿಗೆ
ಮುಷ್ಟಿಕಟ್ಟುವ ತೆವಲಿಲ್ಲ
ಬಡಿವ, ಕುಟ್ಟುವ ಮೋಹವಿಲ್ಲ
ಅರಚಬೇಡಿ ಸುಮ್ಮನೆ!
ಕೊಲ್ಲುವುದು ನನಗೆ ಹೆಮ್ಮೆಯಲ್ಲ
– ಎಂದೆಲ್ಲ ಜಗತ್ತಿಗೆ ಹೇಳಬೇಕಿದೆ…

Hey CheTs!!
The new look is cool. 🙂
so is the poem.. the travel -travail of the unwanted girl -child!!!!that way times have not changed much
malathi S
Translation has not affected the flow and soul of the poem. Keep up the good work.