ಈ ಕೆಲವು ದಿನಗಳಲ್ಲಿ….


ಈ ಕೆಲವು ದಿನಗಳಲ್ಲಿ,
ಬರಾನ್ ನೋಡಿದೆ.
ಪೀರ್ ಭಾಷಾರ ‘ದೇವರು ಮನುಷ್ಯನಾದ ದಿನ ದಿನ’ ಓದ್ತಾ ಇದ್ದೆ. ಸ್ವಲ್ಪ ‘ಸಿಕ್’ ಅನಿಸಿದ್ದು ನಿಜ. ಗೆಳೆಯ ಗುಣಮುಖರಾಗಲಿ ಎಂಬುದು ಹಾರೈಕೆ. ದಮ್ಮಯ್ಯ ಕಾರಣ ಕೆಳಬೇಡಿ ಯಾರೂನು. ಸೌಹಾರ್ದದ ಮಾತಾಡುವ ಜನರ ಕೆಲಸವೇ ಇಷ್ಟು!
ಶಾರದಾ ದೇವಿ ಜೀವನಗಂಗಾ ಓದಿದೆ. ಒಂದು ರೂಪಕ ಬರೆಯುವುದಿತ್ತು. ಹೆಚ್ಚೂಕಡಿಮೆ ಬರೆದೆ.
ದೇಶಕಾಲದ ಚರ್ಚೆ ದಾರಿತಪ್ಪಿದ್ದನ್ನು ನೋಡಿ ಬೇಸರಪಟ್ಟೆ. ಗೆಳೆಯರಿಬ್ಬರು ಏನು ಹೇಳಲು ಹೊರಟಿದ್ದಾರೆಂದೇ ಅರ್ಥ ಮಾಡಿಕೊಳ್ಳದೆ ನಡೆಸಲಾದ ಚರ್ಚೆ ತೀರ ಕಿರಿಕಿರಿ ಮಾಡಿತು.
ಭಾರತ್ ಬಂದ್ ಇತ್ತಲ್ಲ… ಅದೊಂದು ಪ್ರಹಸನವನ್ನೂ ಕಂಡೆ. ನಮ್ಮನೆ ಹತ್ತಿರ ಎರಡು ಬಸ್ಸುಗಳಿಗೆ ಕಲ್ಲು ಬಿದ್ದು ಆಫೀಸಿಗೆ ರಜೆ ಹಾಕಬೇಕಾಗಿಬಂತು. ಮನೆಯಲ್ಲಿ ಕುಳಿತು ಬಂಗಾಲಿ ಸಿನೆಮಾ ‘ನಾಗರಿಕ್’ ನೋಡಿದೆ.
ಯಾರೋ ಆಜಾದನಂತೆ. ಮತ್ತೊಬ್ಬ ಕಾಡೊಳಗಿನ ಕೆಂಪು ಕಟುಕ. ಅವನ ಸಕಾರಣ ಸಾವಿಗೆ ಬಂದ್ ಗೆ ಕರೆಕೊಟ್ಟಿದ್ದು ಅಸಹ್ಯ ತರಿಸಿತು.
ಪೇಪರಲ್ಲಿ ಇಶ್ರತಳ ಫೋಟೋ ನೋಡಿದೆ. ಎಲ್.ಇ.ಟಿ. ಸದಸ್ಯಳಾಗಿದ್ದಳೆನ್ನುವ ಸುದ್ದಿ ಅಚ್ಚರಿಯೇನೂ ತರಿಸಲಿಲ್ಲ. ಮಾನವ ಹಕ್ಕು ಸಂಘಟಕರ ಸುದ್ದಿ ಇಲ್ಲ.
ಮಾತುಮಾತಲ್ಲೆ ಗೆಳೆಯನೊಬ್ಬ ‘ಕೆಲವೊಮ್ಮೆ ತೀವ್ರಗಾಮಿತನ ಬೇಕಾಗ್ತದೆ’ ಅಂದ. ಏನೇನೋ ಪ್ರಶ್ನೆಗಳಿದ್ದವು. ಕೇಳಿ ಉಪಯೋಗವಿಲ್ಲ. ಪ್ರತಿಯೊಬ್ಬರಿಗೂ ತಾವು ನೆಚ್ಚಿಕೊಂಡ ಸಿದ್ಧಾಂತವೇ ಮೇಲು. ಅದರ ಸಾಧನೆ, ಅನುಷ್ಠಾನಕ್ಕೆ ಯಾವ ಹಾದಿ ಹಿಡಿದರೂ ಸಮ್ಮತವೇ. ಜಗತ್ತು ನಿಂತಿರುವುದೇ ಇಂಥ ಹುಸಿ ವಾದಗಳ ಮೇಲಲ್ಲವೆ? ಕೇಳಿದರೆ ಸಿಗುವ ಉತ್ತರ- ಎಲ್ಲವನ್ನೂ ಒಂದೇ ತಕ್ಕಡಿಯಲ್ಲಿಟ್ಟು ಅಳೆಯಲು ಬರೋದಿಲ್ಲ…!
‘ಒಂದೇ ಏಟಿಗೆ ಅನಿಸಿದ್ದನ್ನ ಹೇಳಿಬಿಡ್ತೀರಿ. ಅದಕ್ಕೇ ಶತ್ರುಗಳು ಜಾಸ್ತಿ ನಿಮಗೆ. ಯಾವುದನ್ನೂ ಯೋಚನೆ ಮಾಡಿ ಸಾವಧಾನ ಹೇಳಬೇಕು. ನಿಮ್ಮ ತತ್ ಕ್ಷಣದ ಪ್ರತಿಕ್ರಿಯೆಗೆ ನೀವೇ ಬದ್ಧರಾಗಿರೋಕೆ ಸಾಧ್ಯವಿಲ್ಲ’- ಗೆಳೆಯನೊಬ್ಬನ ಸಲಹೆ. ನನಗೂ ಹೌದನಿಸುತ್ತಿದೆ. ಹೌದಂತ ಯಾಕನಿಸ್ತಿದೆ ಅಂದರೆ, ಆ ಕೂಡಲೆ ಪ್ರತಿಕ್ರಿಯಿಸುವಾಗ ನಾನು ತೀರ ಧಾವಂತದಲ್ಲಿ, ಸರಿಯಾದ ಅರ್ಥ ಹೊಮ್ಮಿಸುವ ಪದಗಳನ್ನೆ ಬಳಸೋದಿಲ್ಲ. ಒಟ್ಟಾರೆ ನಾನು ಏನು ಹೇಳಹೊರಟಿದ್ದೆ ಅನ್ನೋದನ್ನ ಕನ್ವೇ ಮಾಡಲಿಕ್ಕಾಗೋದಿಲ್ಲ
😦
ಇವೆಲ್ಲದರ ನಡುವೆ, ಈ ಕೆಲವು ದಿನಗಳಲ್ಲಿ
ಮನದ ತುಂಬ ಹಸಿರು ಕೆಂಪು.
ಮಳೆಯಿಲ್ಲದಿದ್ದರೂ ಮನಸೊದ್ದೆ, ಬೆಚ್ಚನೆ ತಂಪು!

3 thoughts on “ಈ ಕೆಲವು ದಿನಗಳಲ್ಲಿ….

Add yours

  1. noNO! ನಾವು ಕನ್ನಡಿಗರು ಮುಂದಿನ ತಿಂಗಳಿಂದ ನಿಮ್ಮ ಕಣ್ಣಿಗೆ ಕಾಣಿಸ್ಕೊಂಡೇ ಓಡಾಡಲಿದ್ದೇವೆ. ಆ ಹೊತ್ತಿಗೆ ಕನ್ಸ್‌ಟ್ರಕ್ಶನ್ ಮುಗಿಯುತ್ತಂತೆ 🙂
    ಅಂದ ಹಾಗೆ ನಾನು ‘ವಾರಾನ್ನ’ದವಳಲ್ಲ. ಸದ್ಯಕ್ಕೆ ‘ಸಖಿ’ಯ ಗೆಳತಿ 🙂

ನಿಮ್ಮ ಟಿಪ್ಪಣಿ ಬರೆಯಿರಿ

Create a free website or blog at WordPress.com.

Up ↑