ಕಣ್ಣಿಗೆ ಹೊಸ ನೋಟ ನಿಲುಕಬಹುದಾ?


5 ವರ್ಷದಲ್ಲಿ 6 ಕೆಲಸ ಬದಲಿಸಿದ ಉಜ್ವಲ ಇತಿಹಾಸವುಳ್ಳ ನನ್ನ ಅಕೌಂಟ್‌ಗಳು ಆಯಾ ಆಫೀಸಿಗೆ ತಕ್ಕ ಹಾಗೆ ಬೇರೆಬೇರೆ ಬ್ಯಾಂಕುಗಳಲ್ಲಿವೆ. ಆಫೀಸುಗಳ ಜತೆಗೆ ಆ ಎಲ್ಲ ಬ್ಯಾಂಕುಗಳ ಸಹವಾಸವನ್ನೂ ಬಿಟ್ಟಿರೋದ್ರಿಂದ ಅವೆಲ್ಲದರಲ್ಲೂ ವ್ಯವಹಾರ ನಿಂತು, ಈಗ ನನ್ನ ಮೊಟ್ಟಮೊದಲ ಅಕೌಂಟ್ ಒಂದೇ ಚಾಲ್ತಿಯಲ್ಲಿದೆ. ಕೆಲವದರಲ್ಲಿ ಬಹುಶಃ ಝೀರೋ ಬ್ಯಾಲೆನ್ಸ್ ಇರಬೇಕು. ಗೆಳೆಯರೆಲ್ಲ ಹೆದರಿಸ್ತಾರೆ, ಫೈನ್ ಆಗತ್ತೆ, ಕ್ಲೋಸ್ ಮಾಡಿಸ್ಬಿಡು ಅಂತೆಲ್ಲ… ಆಫೀಸುಗಳಿಗೆ ಎಡತಾಕುವುದನ್ನೊಂದು ಘೋರ ಶಿಕ್ಷೆ ಅಂದುಕೊಂಡಿರುವ ನಾನು ಹಾಗೆಯೇ ಇದ್ಬಿಟ್ಟಿದೀನಿ….

ಈ ನನ್ನ ಪೆದ್ದುತನದ ಅನಾವರಣ ಇಲ್ಯಾಕೆ ಮಾಡ್ತಿದೀನೋ ನಂಗೂ ಗೊತ್ತಿಲ್ಲ. ಬಟ್, ನೆನ್ನೆ ಗೆಳತಿಯೊಬ್ಳು ತಮಾಷೆಗೆ ಹೇಳ್ತಿದ್ಲು,   ನಿನ್ನ ಬ್ಲಾಗನ್ನ ಆಗಾಗ ಅಪ್‌ಡೇಟ್ ಮಾಡ್ತಿರು, ಇಲ್ಲಾಂದ್ರೆ ಬ್ಯಾಂಕ್ ಅಕೌಂಟ್ ಥರ ಕ್ಲೋಸ್ ಆಗ್ಬಿಡತ್ತೆ ಅಂತ… ಅದಕ್ಕೇ, ಅವಳ ಪ್ರೀತಿಯ ಗದರಿಕೆಯಂತೆ ಈ ಅಪ್‌ಡೇಟು ಮತ್ತು ಒಣಪುರಾಣ.

ಜೊತೆಗೆ, ಹೀಗೆ ಬರೀ ನಿನ್ನ ಖುಷಿ, ದುಃಖಗಳನ್ನೇ ಬರ್ಕೊಳೋದೆಂತಕ್ಕೆ? ಎಲ್ನೋಡಿದ್ರೂ ಹಂಗೇನೇ ಇರತ್ತಲ್ಲಾ…. ‘ಒಂದಾ ಬರ್ಯೋದ್ ಬಿಡು, ಇಲ್ಲಾಂದ್ರೆ ಕಣ್ ಬಿಟ್ಟು ಹೊರಗಿಂದೂ ನೋಡು…’ ಅಂತ ಅಶರೀರವಾಣಿ ಆಯ್ತು. ಅದನ್ನ ಭಯಭಕ್ತಿಯಿಂದ ಮನ್ನಿಸಿ, ಹಿಂಗೆ ನನ್ನ ಆತ್ಮದ (ಕಥೆಯ) ಪೀಸ್ ಪೀಸ್‍ಗಳನ್ನ ಸೇರಿಸಿ ಕೌದಿಯಂತೆ ಹೊಲಿಯುವ ಕೆಲಸ ನಿಲ್ಲಿಸಿಬಿಡುವಾ ಅಂತ ಅಂದ್ಕೊಂಡಿದೀನಿ. ವೆಬ್ಬಲ್ಲಿ ಇಷ್ಟು ಫ್ರೀ ಸ್ಪೇಸಿದೆ… ಸರಿಯಾಗಿ ಬಳಸ್ಕೋಬಾರದೇಕೆ ಅಂತ…

ಇಷ್ಟೂ ದಿನ ನನ್ನ ಹರಿಕಥೆಗಳನ್ನೆಲ್ಲ ಪ್ರೀತಿಸಿದ ನಿಮಗೆಲ್ರಿಗೂ ಥ್ಯಾಂಕ್ಸು…   ನನ್ನ ಹೊರಗಿನದನ್ನೂ ನೋಡಬಲ್ಲ ಕಣ್ಣುಗಳು ಸಿಕ್ಕಾಗ, ಕೈಗಳು  ಕೀಬೋರ್ಡ್ ಕುಟ್ಟಲಿ.

ಅಲ್ಲೀವರ್ಗೂ

ನಲ್ಮೆ,

ಚೇತನಾ ತೀರ್ಥಹಳ್ಳಿ

7 thoughts on “ಕಣ್ಣಿಗೆ ಹೊಸ ನೋಟ ನಿಲುಕಬಹುದಾ?

Add yours

  1. ಧನ್ಯವಾದಗಳು ಚೇತನರವರೆ. ಈ ತರಹದ ಒಂದು ಕನ್ನಡದ ವೆಬ್ಸೈಟ್/ಬ್ಲಾಗ್ ಹುಡುಕುತಿದ್ದೆ. ನಿಮ್ಮ ಕವನಗಳನ್ನು ಓದಿ ತುಂಬ ಖುಷಿಯಾಯಿತು. ಇದೆ ರೀತಿ ಅತ್ಯುತ್ತಮ ಕವಿತೆಗಳು ನಿಮ್ಮಿಂದ ಮೂಡಿ ಬರಲಿ ಅಂತ ಹಾರೈಸುತೇನೆ.

    ಕರುಣಾಕರ, ಹೋಬರ್ಟ್, ಆಸ್ಟ್ರೇಲಿಯಾ

ನಿಮ್ಮ ಟಿಪ್ಪಣಿ ಬರೆಯಿರಿ

Create a free website or blog at WordPress.com.

Up ↑