ಸ್ವಂತದ್ದು ಇಲ್ಲಿ ಹರಟುವುದಿಲ್ಲ ಅಂದಿದ್ದೆ. ಬೇರೆ ಜಾಗವಿಲ್ಲ. ತೀರದ ಬೇಸರ. ಹೇಳಿಕೊಂಡಾಗಲಷ್ಟೆ ಮನಸು ಹಗುರ.
ವರ್ಷದ ಹಿಂದಿನ ಮಾತು. ತಸ್ಲಿಮಾ ಮಾತುಗಳನ್ನ ಮಹಾಶಯರೊಬ್ಬರು ಹುಡುಗಿ ಹೆಸರಲ್ಲಿ ಅನುವಾದಿಸಿ ಕ.ಪ್ರ.ದಲ್ಲಿ ಪ್ರಕಟಿಸಿದ್ದರು. ಪರಿಣಾಮ- ಬೆಂಕಿ ಬಿದ್ದಿತ್ತು. ಎರಡು ಜೀವ ಹೋಗಿತ್ತು. ನಾನು ಆಗ ಕೆಲಸ ಮಾಡುತ್ತಿದ್ದ ಸಂಸ್ಥೆಗೆ ಕಪ್ಪು ಚುಕ್ಕೆ ಅದು. ಜೊತೆಗೆ ವೈಯಕ್ತಿಕ ನಷ್ಟವೂ. ನನ್ನ ಕೆಲವು ಗೆಳೆಯರು, ಮನಸು- ಹೃದಯಗಳೊಂದೂ ಇಲ್ಲದೆ ಬುದ್ಧಿಯಲ್ಲಷ್ಟೆ ಜೀವಿದುವವರು- ಇಂಥವರೆಲ್ಲ ಅದು ನಾನು ಎಂದು ತೀರ್ಮಾನಿಸಿಬಿಟ್ಟಿದ್ದರು. ಕೆಲವರ ಚುಚ್ಚು ಮಾತು, ಮೆಸೇಜುಗಳು, ಕಮೆಂಟುಗಳು ಮತ್ತಷ್ಟು ಜನರ ಹಾದಿ ತಪ್ಪಿಸಿ ನನ್ನೆದುರು ನಿಲ್ಲಿಸಿದ್ದವು. ಈ ಮಧ್ಯೆ ಒಂದೆರಡು ಬೆದರಿಕೆ ಕರೆಗಳೂ ಬಂದು, ನಾನು ಸಂಪಾದಕರ ಬಳಿ ಓಡಿ ರಕ್ಷಣೆ ಕೊಡಿಸುವಂತೆಯೂ ಕೇಳಬೇಕಾಗಿ ಬಂತು.
ಅದೆಲ್ಲ ಈಗ ನಡೆದ ಹಾಗಿದೆ. ಅಂದಿನ ಕ.ಪ್ರ.ಸಂಪಾದಕರು ಮಹಾವಲಸೆಯಿಂದ ಚೇತರಿಸಿಕೊಂಡು ಪತ್ರಿಕೆ ಕಟ್ಟುತ್ತಿದ್ದ ಅವಧಿಯದು. ಮ್ಯಾಗಜಿನ್‌ನ ಸಂಪೂರ್ಣ ಜವಾಬ್ದಾರಿ ಪುರವಣಿ ಸಂಪಾದಕರ ಮೇಲೆಯೆ ಇತ್ತು. ಅಂದಿನ ಸಂಪಾದಕರು ನಂಬಿ ಕೆಟ್ಟರು. ನಂಬಿದ್ದೇ ನನ್ನ ತಪ್ಪು, ಅದು ನನ್ನ ಬೇಜವಾಬ್ದಾರಿತನ ಅಂತ ಆಮೇಲೆ ಬಹಳ ಬಾರಿ ಬಹಳ ಕಡೆ ಅವಲತ್ತುಕೊಂಡಿದ್ದು ಕೇಳಿದ್ದೇನೆ. ಪುರವಣಿ ಸಂಪಾದಕರು ತಮ್ಮ ಗೆಳೆಯ ಕಳಿಸಿಕೊಟ್ಟ ಲೇಖನವನ್ನು ವಿವೇಚನೆ ಇಲ್ಲದೆ ಪ್ರಕಟಿಸಿಬಿಟ್ಟರು. ಆ ಗೆಳೆಯನಾದರೂ ಮತ್ತೊಂದು ಪತ್ರಿಕೆಯ ಕೆಲಸಗಾರನಾಗಿದ್ದ, ಜವಾಬ್ದಾರಿ ಹುದ್ದೆಯಲ್ಲಿದ್ದ, ಹೊರ ಜಗತ್ತಿಗೆ ಬುದ್ಧಿವಂತನಂತೆ ಪೋಸ್ ಕೊಡುವವನಾಗಿದ್ದ. ಆ ಅವಿವೇಕದ ಲೇಖನವನ್ನು ಒಂದು ಹುಡುಗಿಯ ಹೆಸರಲ್ಲಿ ಪ್ರಕಟಿಸಲಾಯ್ತು. ಕೆಲವರು ಅದು ಪುರವಣಿ ಸಂಪಾದಕರೇ ಎಂದೂ, ಕೆಲವರು ಅವರ ಗೆಳತಿ ಇರಬಹುದೆಂದೂ ಊಹಿಸಿಕೊಂಡರು. ಪುರುಸೊತ್ತಿನಲ್ಲಿದ್ದು, ನನ್ನ ಮೇಲೆ ಏನಾದರೊಂದು ಆಕ್ಷೇಪ ಇಟ್ಟುಕೊಂಡಿದ್ದ ಕೆಲವರ ಬಾಯಿಗೆ ನಾನು ಬಿದ್ದೆ. ಮತ್ತವೇ ಕೋಮುವಾದಿ, ಬಲಪಂಥೀಯ, ಕೇಸರಿ ಮದ್ಯದಂತಹ ಕಿತ್ತೋದ ಡೈಲಾಗುಗಳು, ಕುಹಕಗಳು.
ಅಷ್ಟೆಲ್ಲ ಬೇಸರಪಟ್ಟುಕೊಳ್ಳುವ ಅಗತ್ಯವಿದ್ದಿಲ್ಲ, ಆದರೂ ನೋವಾಗಿಬಿಟ್ಟಿತು. ಆ ಒಂದು ತಿಂಗಳ ನನ್ನ ಒಳಗುದಿ ಹೇಳಿಕೊಳ್ಳಲು ಆಗದಂಥದ್ದು. ಪತ್ರಕರ್ತ ಮಿತ್ರರು ಕೆಲವರು ಈ ಗಾಸಿಪ್ ಅನ್ನು ಮತ್ತಷ್ಟು ವ್ಯಾಪಕಗೊಳಿಸುವಲ್ಲಿ ಸಕ್ರಿಯರಾಗಿದ್ದ ಬಹಳ ಬೇಸರ ಮಾಡಿತ್ತು. ಕೆಲವರಂತೂ ಕಾಲ್ ಮಾಡಿ ಆರೋಪವನ್ನು ನನ್ನ ಮೇಲೆ ಹೇರಿದರು. ಅಷ್ಟು ಶ್ರಮ ತೆಗೆದುಕೊಂಡರು.
ಈಗ, ಈಗ ಏನು? ಐದಾರು ತಿಂಗಳ ಹಿಂದಿನಿಂದಲೇ ಜೆಪಿ ಯ ಹೆಸರು ಬಹಿರಂಗಗೊಂಡು ಹರಿದಾಡುತ್ತಿದೆ. ಈಗಲಂತೂ ಅದು ಅಧಿಕೃತವಾಗಿ ಘೋಷಣೆಯಾಗಿದೆ. ಹೊರಗಿನವರ ಮಾತು ಬಿಡಿ, ಪತ್ರಿಕೋದ್ಯಮದ ಒಳಗಿನವರ ಬಗ್ಗೆ ರೇಜಿಗೆಯಾಗುತ್ತಿದೆ. ಅವತ್ತು ಕರೆ ಮಾಡಿ, mail ಮಾಡಿ ದೂಷಿಸುವ ಕಷ್ಟ ತೆಗೆದುಕೊಂಡ ಯಾರಿಗೂ ಇವತ್ತು sorry ಕೇಳಲು ನೆನಪಾಗುತ್ತಿಲ್ಲ. ಗಾಸಿಪ್ ಮಾಡುವವರ ಹಣೆಬರಹವೆ ಇಷ್ಟಲ್ಲ? ಟೊಳ್ಳು ಜನ. ಮರೆವು ಜಾಸ್ತಿ.
ಸಾಲದ್ದಕ್ಕೆ ಈಗ ಪ್ರಣತಿಯ ಭೂತ ಮೆಟ್ಟಿಕೊಂಡಿದೆ. ಅನವಶ್ಯಕವಾಗಿ ನಾನು ನಾನಲ್ಲ ಅನ್ನುವ ಸಮಜಾಯಿಷಿ ಕೊಟ್ಟುಕೊಳ್ಳಬೇಕಾಗಿದೆ. ಅದು ಕೂಡ ಸುಮ್ಮನೆ ಗಾಸಿಪ್ ಎಂದು ಗೊತ್ತಿದ್ದೇ ಸಾಂಕ್ರಾಮಿಕ ಹರಡುವಿಕೆಯ ವೈರಸ್ ಗಳಾಗುತ್ತಿದ್ದಾರೆ ಸಹಪತ್ರಕರ್ತರು. ಅದನ್ನು ಇಲ್ಲಿಗೇ ನಿಲ್ಲಿಸಿಬಿಟ್ಟರೆ ಒಳ್ಳೆಯದು. ಇಲ್ಲವಾದರೆ, ನನಗೆ ಕೆಟ್ಟದ್ದು.
ಇನ್ನೂ ಹೇಳಬೇಕನಿಸಿದ್ದು-
ಬ್ಲಾಗ್ ಜಗತ್ತಿನ ತುಂಬ ಪತ್ರಿಕೋದ್ಯಮದ ವಾಚ್‌ಡಾಗ್‌ಗಳು ತುಂಬಿಕೊಳ್ಳುತ್ತಿದ್ದಾರೆ. ಕೆಲವರು ಹಿಂದೆಮುಂದೆ ನೋಡದೆ ಸ್ವಾರಸ್ಯಕರ ಗಾಸಿಪ್, ಅರೆಬರೆ ಮಾಹಿತಿ, ತಪ್ಪು ಅರ್ಥ ಕೊಡುವ ಸುದ್ದಿಗಳನ್ನೆಲ್ಲ ಪ್ರಕಟಿಸುತ್ತಿದ್ದಾರೆ. ಕೆಲವರು ಚೆನ್ನಾದ ವಿಶ್ಲೆಷಣೆ ನಡೆಸ್ತಿದ್ದರೂ ನಡುನಡುವೆ ಬಕೆಟ್ ಇಟ್ಟುಕೊಂಡು ಮುನ್ನಡೆಯುತ್ತಿದ್ದಾರೆ. (ಬಕೆಟ್ ಈಗ ಸಖತ್ ಚಾಲ್ತಿಯಲ್ಲಿರುವ ಪದ. ಅದಕ್ಕೆ ಪರ್ಯಾಯ ಸಿಗ್ತಿಲ್ಲ). ಯಾರಿಗೂ ಇದರ ಪರಿಣಾಮದ ಅರಿವು ಇದ್ದ ಹಾಗಿಲ್ಲ. ಪತ್ರಿಕೆ, ವೆಬ್ ಗಳಲ್ಲಿ ಬರುತ್ತಿರುವ ಸುದ್ದಿಗಳಿಂದಾಗಿ ಜರ್ನಲಿಸಮ್ ವಿದ್ಯಾರ್ಥಿಗಳು, ಅದರಲ್ಲೂ ಹೆಣ್ಣುಮಕ್ಕಳು ಇತ್ತ ತಲೆ ಹಾಕಲು ಹೆದರುವಂಥ ಮಾಹೋಲ್ ನಿರ್ಮಾಣವಾಗ್ತಿದೆ. ಇಷ್ಟು ದಿನ ಜನ ರಾಜಕಾರಣ ಅಂದರೆ ಮೂಗು ಮುರೀತಿದ್ದರು, ಇನ್ನು ಖಚಡಾ ಕೆಲಸಕ್ಕೆಲ್ಲ ಇದೇನು ಜರ್ನಲಿಸಮ್ಮಾ ಅಂತ ಕೇಳುವ ಕಾಲವೂ ಬರಬಹುದು. ಹಾಗಂತ ನಾವು ಬೇರೆ ಬೇರೆ ಪತ್ರಿಕೆಯಲ್ಲಿದ್ದೂ ಗೆಳೆತನ ಇಟ್ಟುಕೊಂಡಿರುವ ಹೆಣ್ಣುಮಕ್ಕಳು ಆನ್‌ಲೈನ್ ಚಾಟ್‌ನಲ್ಲಿ ಹತಾಶರಾಗ್ತಿದೇವೆ.
~
ಎಲ್ಲಿಂದ ಎಲ್ಲಿಗೆ ಏನು ಲಿಂಕೋ? ತಮ್ಮಂದಿರಲ್ಲಿ ಒಬ್ಬ, ನನ್ನ ಕ್ಲಾರಿಫಿಕೇಶನ್ ಗಳ ನಂತರವೂ ನನ್ನ ಬಗ್ಗೆ ಅನುಮಾನ ಇರಿಸಿಕೊಂಡಿದ್ದ. ಈಗ ತಾನೆ ಯಾವುದೋ ಬ್ಲಾಗ್ ನೋಡಿ ‘ಸಿಂಧು ನೀವಲ್ಲ ಅಂತ ಖಾತ್ರಿ ಆಯ್ತು’ ಅಂತ ಸರ್ಟಿಫಿಕೇಟ್ ಕೊಟ್ಟ. ಹಾಗಾದರೆ ನಂಬಿಕೆ, ಅಧಿಕೃತತೆಯ ಮಾನದಂಡ ಏನು? ವೈಯಕ್ತಿಕ ವಿಶ್ವಾಸಕ್ಕಿಂತ ಕಂಡು ಕೇಳಿಲ್ಲದ ಮುಖಗಳ ಮಾತೇ ಪ್ರಮಾಣವಾಗುತ್ತದಲ್ಲ, ಯಾಕೆ? ಅವತ್ತು ಗಾಸಿಪ್ ನಂಬಿ ನೋವು ಕೊಟ್ಟವರು ನಂಬಿದ್ದೂ ಇಂಥವೇ ಸಾಕ್ಷಿಗಳನ್ನು. ವ್ಯಕ್ತಿಯನ್ನು ಸ್ವಂತ ಅನ್ನಿಸಿಕೆ, ಅಳತೆಯಿಂದ ತೂಗಿ ನೋಡಲು ಸಾಧ್ಯವೇ ಇಲ್ಲವಾ? ಯಾರನ್ನ ಕೇಳುವುದು?
ಇಷ್ಟಕ್ಕೂ ಇಲ್ಲಿ ಆ ಹುಡುಗ, ಅಗ್ಗದ ಸಾಕ್ಷಿಗಳನ್ನು ನಂಬುವ ಮನಸ್ಥಿತಿಗಳ ಪ್ರತಿನಿಧಿ ಮಾತ್ರ...

Oh..
ಪ್ರೀತಿಯ ಚೇತನಾ,
ಇದು ನಮ್ಮ ಕಾಲದ ವಿಷಾದವನ್ನ ಅಕ್ಷರಗಳಲ್ಲಿ ಬಿಡಿಸಿಡುತ್ತೆ.
ನಮ್ಮ ಎಲ್ಲ ಅಭಿವ್ಯಕ್ತಿಗಳನ್ನೂ ಜಾತಿ,ಲಿಂಗ,ಕೋಮು,ಸಿದ್ಧಾಂತಗಳ ಕನ್ನಡಕ ಧರಿಸಿ ಓದಲಾಗುತ್ತದೆ.
ಇದೆಲ್ಲ ರಾಡಿಗಳು ನಮ್ಮ ನಡುವೆ ಇದೆ ಅಂತ ತುಂಬ ಬೇಸರವಾಗುತ್ತಿದೆ.
ಸಮೂಹ ಮಾಧ್ಯಮಗಳ ಬಗ್ಗೆಗಿನ ದೃಷ್ಟಿಕೋನದ ಬಗ್ಗೆ ನೀವು ಬರೆದಿರುವ ಮಾತು ಎಷ್ಟು ನಿಜವೋ ಅಷ್ಟೇ ತಲ್ಲಣ ಹುಟ್ಟಿಸುವ ನಿಜ ನಿಮ್ಮ ಶಿರೋನಾಮೆಯ ಮೂಲಕ ಹೈಲೈಟ್ ಮಾಡಿರುವ ವಿಷಯ. 😦
ಇದು ಎಲ್ಲ ಕಾಲ,ಸಂಬಂಧಗಳ ವಿಷಯದಲ್ಲೂ ಸತ್ಯ.
ಇದನ್ನೇನು ಬರೆಯುವುದು ಅಂತ ಅದನ್ನ ನಿಟ್ಟುಸಿರಿನಲ್ಲಿ ಹುದುಗಿಸಿಟ್ಟು ಕಾಲಕಾಲಕ್ಕೂ ಕೊರಗದೆ, ಹೊರಹಾಕಿರುವ ನಿಮ್ಮ ಧೈರ್ಯಕ್ಕೆ ಮೆಚ್ಚುತ್ತೇನೆ.
-ಪ್ರೀತಿಯಿಂದ,ಸಿಂಧು
ಚೇತನಾ,
ಮೊದಲ್ನೇದಾಗಿ ನಿನಗೆ ಕಂಗ್ರಾಟ್ಸ್ ಹೇಳ್ಭೇಕು! ಬಹಳ ಹಿಂದೆಯೆ ಬರೀಬೇಕಿದ್ದ ಪೋಸ್ಟು ಇದು, ಈಗಲಾದ್ರು ಬರೆದ್ಯಲ್ಲ!! ನೀನು ಯಾರಿಗು ಸಮಜಾಯಿಷಿ ಕೊಟ್ಟುಕೊಂಡು ತಿರುಗಬೇಕಿಲ್ಲ ಅಂತ ನಾನು ಹೇಳಿದ್ದೆನಾದರು, ಇದನ್ನ ಓದಿದ ಮೇಲೆ, ಇಂತಹ ವಿಷಯಗಳಲ್ಲಿ ಯಾರ ತಪ್ಪಿಗೋ ನೀನು ಸ್ಕೇಪ್‍ಗೋಟ್ ಆಗುವದು ಯಾಕೆ ಅನ್ನಿಸ್ತು. ಸರಿಯಾದ ಕೆಲ್ಸ ಮಾಡಿದೀ. ಇಂತಹ ವಿಚಾರದಲ್ಲಿ ಸುಮ್ಮನಿರುವದು ತಕ್ಕದ್ದಲ್ಲ. ಬಹಳ ಖೇದವಾಯಿತು.
ಪ್ರಣತಿ kathe enu ?
Nice to read this true message. At present day’s Journalism has lost its value. It is killing the democracy in India. Truth is always truth.
Don’t think of the past things, Go ahead. Wish you gud luck for your future
gottilladidre oLLeyadu
aa lines,gottiruvavarige matra…plz ignore it
ಸೂಕ್ಷ್ಮ ಮನಸ್ಸುಳ್ಳವರಿಗೆ ಇಂತಹ ಆರೋಪಗಳು ನಿಜವಾಗಿಯೂ ತುಂಬಾ ಘಾಸಿಯನ್ನುಂಟುಮಾಡುತ್ತವೆ. ಇಡೀ ವ್ಯವಸ್ಥೆಯ ಮೇಲೆ ಹೇವರಿಕೆ ಬಂದುಬಿಡುತ್ತದೆ. ಇತರ ಕ್ಷೇತ್ರಗಳಲ್ಲಿರುವಂತೆ ಮೀಡಿಯಾದಲ್ಲಿಯೂ ಕಾಲೆಳೆಯುವ, ಕಾರಣವಿಲ್ಲದೆ ದ್ವೇಷಿಸುವ, ವಿಕೃತ ಸಂತೋಷಕ್ಕಾಗಿ ಕೆಸರೆರಚುವ ಕ್ರಿಮಿಗಳಿವೆ. ಇವುಗಳನ್ನು ಅಲ್ಲಲ್ಲಿಯೇ ಹೊಸಕಿ ಹಾಕಿ ಮುನ್ನಡೆಯಬೇಕಷ್ಟೆ. ಕೀಪ್ ಗೋಯಿಂಗ್, ಕೀಪ್ ರಾಕಿಂಗ್…
Sindhu, Tina, Thanks much.
Sahana,
thats another story 😦
Sughosh,
Thanks
IGF???
Thank to u too
ಅಕ್ಕರೆಯ ಚೇತನಕ್ಕ ನಾನೊಬ್ಬ ಪತ್ರಿಕೋದ್ಯಮದಲ್ಲಿ ಮಗು (ವಿದ್ಯಾಥಿ೯),ಈಗ ತಾನೇ ಬರಹವೆಂದರೇನು? ಬರಹದಿಂದ ಬದುಕು ಕಟ್ಟುವುದು ಹೇಗೆ ಎನ್ನುವ ಬಗ್ಗೆ ಯೋಚಿಸುತ್ತಿದ್ದೇನೆ…ನೀವು ಮುಂಚೆ ಸಖಿ ಬರೆಯುತ್ತಿದ್ದ ಲೇಖನಗಳು ಮಹಿಳೆಯರಿಗೆ,ಸಾಧನೆಗೆ ಸ್ಪೂತಿ೯ಯಾಗುವ೦ತದ್ದು………ನೀವು ಬರಹದಿಂದ ಬದುಕು ಕಟ್ಟಿದೀರಿ….ಬರಹದ ಮೂಲಕ ಇತರರ ಬಾಳನ್ನು ಕಟ್ಟಿದ್ದಿರಿ… ನಿಮ್ಮ ಬರಹಗಳು ಮತ್ತಷ್ಟು ಬದುಕುಗಳಿಗೆ ‘ಚೇತನ’ವಾಗಲಿ..ಅದರ ಮೂಲಕ ನಮ್ಮಂತಹ ಕಿರಿಯರಿಗೆ ಮಾರ್ಗದರ್ಶನ ಸಿಗಲಿ…
Yash,
margadarshana maduvashTu doDDavaLalla… preeti iruttade…
Best wishes to u
nalme,
akka
thank u akka……
ಪ್ರೀತಿಯ ಚೇತನಕ್ಕ
ಈ ವಿಷಯದ ಬಗ್ಗೆ ನೀವು ಅಗತ್ಯಕಿಂತ ಹೆಚ್ಚು ತಲೆ ಕೆಡಿಸಿಕೊಂದಿದ್ದಿರಿ ಅನ್ಸುತ್ತೆ. ಯಾರೋ ಅನಾಮದೇಯ ಹೆಸರಲ್ಲಿ ಲೇಖನ ಪ್ರಕಟಿಸಿದ ಕನ್ನಡ ಪ್ರಭ ಸ್ಪಷ್ಟೀಕರಣ ಕೊಡಬಹುದಿತ್ತು ಆದರೆ ಕೊಡಲ್ಲಿಲ್ಲ. ಲೇಖನ ಓದಿದ ಕೋಮಿನವರು ಕೋರ್ಟು ಮೆಟ್ಟಿಲೇರಿ ಸ್ಪಷ್ಟೀಕರಣ ಪಡೆಯಬಹುದಿತ್ತು ಆದರೆ ಅವರು ಅದನ್ನು ಬಯಸಲಿಲ್ಲ. ಗಲಬೆ ಮಾಡೋ ಯಾವ ಅಗತ್ಯನು ಆ ಸಂದರ್ಬದಲ್ಲಿ ಇರಲ್ಲಿಲ್ಲ. ಆದರೂ ಗಲಬೆ ನಡೆಯಿತು ಕಾರಣ ಇಷ್ಟೇ. ಗಲಬೆ ಮಾಡಿದವರ ಸಿಟ್ಟು ಬರಿ ಕನ್ನಡ ಪ್ರಭ ದ ಮೇಲೆ ಅಷ್ಟೇ ಅಲ್ಲ ಇನ್ನೊಂದು ಕೋಮಿನ ಮೇಲು ಇತ್ತು. ಅವರರವ ಕೋಪ ವ್ಯಕ್ತ ಪಡಿಸೋಕ್ಕೆ ಕನ್ನಡ ಪ್ರಭ ವೇದಿಕೆ ಕಲ್ಪಿಸಿಕೊಟ್ಟಿತ್ತು ಅಷ್ಟೇ .
ಆದರೆ ಇದರಲ್ಲಿ ನಿಮ್ಮ ಹೆಸರು ನುಸುಳಿದು ವಿಶಾದನಿಯ ………. ಹಾಗೆ ಶಿವಮೊಗ್ಗ ಕ್ಕೆ ಕೋಮು ಗಲಬೆ ಹೊಸತಲ್ಲ ಪ್ರತಿ ಗಣೇಶ ಚತುರ್ಥಿಗು ಗಲಬೆ ಇದ್ದದೆ . ಅಲ್ಲಿನ ಓಂ ಗಣೇಶ ನ ಇನ್ನೊಂದು ಹೆಸರೇ ಗಲಾಟೆ ಗಣಪ ಅಂತ.
ಸತ್ಯ ಯಾವತ್ತಿದ್ದರೂ ಹೊರ ಬರುತ್ತೆ ಎಂಬುದಕ್ಕೇ ಇದೇ ಸಾಕ್ಷಿ. ಜೇಪಿಯಂಥ ಹೇಡಿಗಳು, ಅದನ್ನು ಪ್ರಕಟಿಸಿದವರು, ಈಗ ರಕ್ಷಿಸುತ್ತಿರುವ ……….(edited- am extremely sorry Maanasi) ನನ್ನ ಛೀಮಾರಿ.
ಚೇತ್, ಇಲ್ಲಿ ಮಾತ್ರ ಅಲ್ಲ ಕಣೆ, ಎಲ್ಲ ಕಡೆಗಳಲ್ಲಿ ಅಂದರೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಕೂಡ ಇದೆ ಥರ ಆಗ್ತಾ ಇದೆ ಎಂಬುದು ಸತ್ಯ. ನಾವು ತಪ್ಪೇ ಮಾಡದೆ ಇದ್ದಾಗ ಬಲಿ ಪಶುವಾಗುವುದು, ವಿನಾಕಾರಣ ನಮ್ಮ ಪ್ರಾಮಾಣಿಕತೆಯನ್ನು ಸಾಬೀತು ಪಡಿಸಲೆಂದು ಇನ್ಯಾರೋ ಬಯಸುವುದು ಅಥವಾ ಅಂಥದ್ದೊಂದು ಅನಿವಾರ್ಯತೆಯ ವಾತಾವರಣ ಸೃಷ್ಟಿ ಮಾಡುವುದು, ಇವೆಲ್ಲ ತೀರ ಅಸಹ್ಯ ತರುತ್ತಿದೆ.
ಆದ್ರೆ ಬದುಕಿನ ಬಂಡಿ ನಡೆಯಲೇ ಬೇಕಲ್ಲ… ಕೆಲಸಕ್ಕೆ ಹೋಗದೆ ವಿಧಿಯಿಲ್ಲವಾಗುತ್ತದೆ…
ಸುಮ್ಮನೆ ನಿಟ್ಟುಸಿರಿಟ್ಟು ಕೊರಗುವುದು ಮಾತ್ರ ಮಾಡದೆ
ಎಲ್ಲ ತಲ್ಲಣಗಳನ್ನು ಬಿಚ್ಚಿ ಇಟ್ಟಿದೀಯಲ್ಲ ಖುಷಿಯಾಯ್ತು ಕಣಾ…
ಅಂದಿನಂತೆ ಇಂದೂ…
ನಾನು ಶಮ…
P.S : ಹೆಡ್ಡಿಂಗ್ ಒಂದೇ ಸಾಕು ಸಾವಿರ ಪುಟಗಳಷ್ಟು ಹೇಳುತ್ತದೆ… ತುಂಬಾ ಇಷ್ಟ ಆಯ್ತು…
ವೈಯುಕ್ತಿಕ ದ್ವೇಷ ಕಾರಿದವರು ವಿವೇಕ ಉಳ್ಳವರಲ್ಲ. ಉಗಿದು ಓಡಿ ಹೋದವರು ಸತ್ಯ ತಿಳಿದಾಗ ತಪ್ಪನ್ನ ತಿದ್ದಿಕೊಳ್ಳುವವರಲ್ಲ.
ಆದರೆ, ಈ ಸನ್ನಿವೇಶದಲ್ಲಿ ಸ್ವತಃ ಪತ್ರಕರ್ತೆಯೇ ಬಲಿಪಶುವಾದದ್ದು ದುರಂತಮಯ.
ಗಣೇಶ್. ಕೆ.
“ಸ್ವಂತದ್ದು ಇಲ್ಲಿ ಹರಟುವುದಿಲ್ಲ ಅಂದಿದ್ದೆ. ”
ಅಯ್ಯೋ ಇಲ್ಲಿ ಹೇಳದೆ ಮತ್ತೆ ಎಲ್ಲಿ ಹೇಳ್ತೀರಾ ಮಾರಾಯ್ರೆ ? ಇಲ್ಲಿ ಹೇಳಿದ್ರೆ ಸಾಕು ಎಲ್ಲಾ ಕಡೆ automatic ಆಗಿ ಹೋಗುತ್ತೆ 🙂
ಶುಭವಾಗಲಿ ..
ವಿಷಾದವೆನಿಸಿತು… ಪತ್ರಿಕೋದ್ಯಮದಲ್ಲಿದ್ದ ನನ್ನ ಸ್ನೇಹಿತೆಯರು ಇಂತಹ ಹಲವು ಪ್ರಸಂಗಗಳನ್ನು ಎದುರಿಸಲಾಗದೇ ರಾಜಿನಾಮೆ ಕೊಟ್ಟು ಇಂದು ಉಪನ್ಯಾಸಕ ಮತ್ತಿತ್ತರೆ ಕೆಲಸಗಳಲ್ಲಿ ನಿರತರಾಗಿದ್ದಾರೆ. ಒಂದು ಕಾಲದಲ್ಲಿ ಕರ್ನಾಟಕದ ಪ್ರಮುಖ ಪತ್ರಿಕೆಗಳಲ್ಲಿ ಅವರ ಸುದ್ದಿಕತೆಗಳು ಮುಖ್ಯ ಪುಟಗಳಲ್ಲಿ ಪ್ರಸಾರವಾಗುತ್ತಿದ್ದವು. ಹೊಟ್ಟೆಕಿಚ್ಚಿನ ಅವರ ಸಹುದ್ಯೋಗಿಗಳಿಂದಾಗಿ ನನ್ನ ಸ್ನೇಹಿತೆಯರು ಪತ್ರಿಕೋದ್ಯಮಕ್ಕೆ ರಾಜಿನಾಮೆ ಕೊಡಬೇಕಾಗಿ ಬಂದದ್ದು ನಿಜಕ್ಕೂ ಬೇಜಾರಿನ ವಿಷಯ…. ಇಂದು ಮಹಿಳಾ ಪತ್ರಕರ್ತನ ಸಂಖ್ಯೆ ಕಡಿಮೆಯಾಗಲು ಪುರುಷರೇ ಕಾರಣ
ಬುದ್ಧಿಯಲ್ಲಿ ಜೀವಿಸುವವರು ಸ್ವನ್ತ ಬುದ್ಧಿಯಿನ್ದ ಯೋಚಿಸುವುದನ್ನೂ ರೂಢಿಸಿಕೊಳ್ಳುವುದು ಉತ್ತಮವೆನಿಸುತ್ತದೆ. ಬಱಿಯ ಮಾತಿನ ಪಟಾಕಿಗಳಿನ್ದ ಯಾರ ವ್ಯಕ್ತಿತ್ವಕ್ಕೂ ಕುನ್ದು ತರಲು ಸಾಧ್ಯವಿಲ್ಲ.
ಈ ವಿಷಯದಲ್ಲಿ ಆಗಿನ ಸಂಪಾದಕೀಯ ಮಣ್ಡಳಿ ಯಾಕೆ ತಕ್ಕುದಾದ ನಿರ್ಧಾರ ತೆಗೆದುಕೊಳ್ಳಲಿಲ್ಲವೆನ್ದು ನನ್ನ ಮಿತಿಯಲ್ಲಿ ನಾನು ಯೋಚಿಸುತ್ತಿದ್ದೇನೆ [ಪತ್ರಿಕೋದ್ಯಮದ ಒಳಹೊಱಗು ನನಗೆ ತಿಳಿದಿಲ್ಲ].
ಪ್ರಣತಿಯ ವಿಷಯ ನನಗೆ ತಿಳಿದಿಲ್ಲ. ಆದುದಱಿನ್ದಲೇ ನನಗೆ ಯಾವುದೇ ಸನ್ದೇಹವೂ ಇಲ್ಲ.
Chetana, Same kind of experience I am facing now in IT industry. Frustrated from past 1 month. I can imagine how you felt when you undergone the situation like this. It is good that you are dare enough to write your experience. I appreciate.
Kanthi
ನಿಜ.. ಜನ ಗಾಸಿಪ್ಪುಗಳನ್ನು ನಂಬುವಷ್ಟು ನಿಜ ಸಂಗತಿಗಳನ್ನು ನಂಬೋಲ್ಲವೇ… ಅದೂ ಕೂಡಾ ಪ್ರಸಿದ್ಧ ವ್ಯಕ್ತಿಗಳೇ ಗಾಸಿಪ್ಪು ಹಬ್ಬಿಸಿದರೆ ಅದು ನಿಜಕ್ಕಿಂತ ಹೆಚ್ಚು ನಿಜ ಅನ್ನೋ ತರಹ ಆಗ್ಬಿಡುತ್ತೆ …ಏನ್ಮಾಡೋದು