ಪಾರಿಜಾತದ ಮರ


ನಿಜಘಮದ ಕೇದಗೆ- ಮತ್ತೊಂದು ಎಸಳು ‘ಐರಾವತಿ’ಯಲ್ಲಿ

ಮೆಹಂದಿ ನನಗೆ ತುಂಬಾ ಇಷ್ಟ. ಕಪ್ಪು ಚುಕ್ಕಿಚುಕ್ಕಿ ಇರುವ ಎಲೆಗಳನ್ನ ಆಯ್ದು ಕೊಯ್ದು, ಒರಳಲ್ಲಿ ರುಬ್ಬಿ ಕೈಗೆಲ್ಲ ದಪ್ಪಗೆ ಮೆತ್ತಿಕೊಳ್ತಿದ್ದೆವು ಚಿಕ್ಕವರಿದ್ದಾಗ.
`ಮೆಹೆಂದಿ ಗಿಡ ಮನೆ ಬಿಡಿಸತ್ತೆ..’ ಯಾರೋ ಹೇಳಿದ್ದರು. ನಿಂಬೆ ಗಿಡ ನೆಟ್ಟಾಗಲೂ ಹಾಗೇ ಹೇಳಿದ್ದರಿಂದ ತಲೆಕೆಡಿಸ್ಕೊಳ್ಳಲಿಲ್ಲ.

~

ನನ್ನ ಮುದ್ದು ಹೂಗಳ ಘಮ ಮೀರಿಸುವ ಹಾಗೆ ಪಕ್ಕದ ಟೆರೇಸಿಂದ ಸಿಗರೇಟು ಹೊಗೆ. ಹಿಂದಿಯಿಂದ ಕಡ ತಂದ ವಿಲನ್ನಿನಂತಿದ್ದ ಆ ಮನುಷ್ಯ. ನಮ್ಮ ರೂಮ್ ಕಿಟಕಿ ಹೊಕ್ಕುವ ಹಾಗೆ ದಮ್ಮೆಳೆದು ಬಿಡುತ್ತಿದ್ದ. ಅದೆಷ್ಟು ರಗಳೆ! ಇವನ ತುಟಿಯಲ್ಲಿ ಯಾವತ್ತೂ ಬೆಚ್ಚನೆ ಹೊಗೆಯದೊಂದು ತುಣುಕು. ಅದೆಷ್ಟು ಚಂದ! ಯಾವತ್ತೂ ಹಾಗೇನೆ. ಇಷ್ಟದವರ ಬಗ್ಗೆ ದೂರು ತರುವುದು ಎಲ್ಲಿಂದ?

~

ಅವಳ ಹೊಟ್ತೆಮಗು ಸತ್ತು, ಅಜ್ಜನೂ ಸತ್ತು, ಅಜ್ಜಿ ಮುದುಕಿಯಾಗಿ, ನನ್ನಮ್ಮನ ಎಲ್ಲ ಒಳ್ಳೆತನಗಳ ನಡುವೆಯೂ ಸಣ್ಣಬುದ್ಧಿಗಳನ್ನ ತೋರಿಸುತ್ತ ಇರುವಾಗ ಅತ್ತೆ ಮೂಲೆಮೂಲೆ ನಿಲ್ಲುವುದು ಬಹಳ ಸಾರ್ತಿ ಕಣ್ಣೀರು ತರಿಸ್ತಿತ್ತು. ಅವಳು ಹೆಚ್ಚೂ ಕಡಿಮೆ ನಮ್ಮನೆಯ ಕಸಮುಸುರೆಯವಳೇ ಆಗ್ಬಿಟ್ಟಿದ್ದಳಲ್ಲ? ಅಷ್ಟಾದರೂ ಅಜ್ಜಿ, ಮಾವನ ಅಪ್ಪ ಸತ್ತಾಗ, ಅವನ ಆ ಹೆಂಡತಿ ಹೆತ್ತಾಗಲೆಲ್ಲ ಅತ್ತೆಯನ್ನ ಮೈಲಿಗೆ ಕೂರಿಸಿ, ತಲೆ ಎರೆದುಕೊಳ್ಳಬೇಕಂತ ತಾಕೀತು ಮಾಡ್ತಿದ್ದಳು.

~

ತಾರೆಯರ ನಡುವೆ ರೋಹಿಣಿ, ಹೆಂಡತಿಯರನ್ನ ಬದಿಗಿಕ್ಕುವ ರಾಧೆ… ಸಮಾಧಾನ ಮಾಡಿಕೊಳ್ಳಲಿಕ್ಕೆ ಎಷ್ಟೆಲ್ಲ ಕಥೆಗಳ ನೆನಪು!

ಇಷ್ಟಕ್ಕೂ, ತಪ್ಪು ಅವನದೇನಲ್ಲ.
ನಮ್ಮ ಕಾಂಪೌಂಡಿಗೆ ಆತುಕೊಂಡು, `ಪಾರಿಜಾತ’ದ ಮರವಿದೆ.

ಹಿಂದುಮುಂದಿನದು ಇಲ್ಲಿದೆ….

ನಿಮ್ಮ ಟಿಪ್ಪಣಿ ಬರೆಯಿರಿ

Blog at WordPress.com.

Up ↑